ಮಹಾರಾಷ್ಟ್ರದಲ್ಲಿ ಕಂದಕಕ್ಕೆ ಉರುಳಿದ ಬಸ್, ನಾಲ್ವರು ಸಾವು, 40ಕ್ಕೂ ಅಧಿಕ ಮಂದಿಗೆ ಗಾಯ
ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ಬಸ್ ಒಂದು 60-70 ಅಡಿ ಆಳದ ಕಂದಕಕ್ಕೆ ಬಿದ್ದ ಪರಿಣಾಮ ನಾಲ್ವರು ಸಾವನ್ನಪ್ಪಿ, 40ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಸುಮಾರು 50-55 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ದುರಂತ ಸಂಭವಿಸಿದೆ.
ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ಬಸ್ 60-70 ಅಡಿ ಆಳದ ಕಂದಕಕ್ಕೆ ಬಿದ್ದ ಪರಿಣಾಮ ನಾಲ್ವರು ಸಾವನ್ನಪ್ಪಿ, 40ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಸುಮಾರು 50-55 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ದುರಂತ ಸಂಭವಿಸಿದೆ.
ಸ್ಥಳೀಯ ನಿವಾಸಿಗಳು, ಚಿಕಲ್ದಾರ ಪೊಲೀಸರ ನೆರವಿನೊಂದಿಗೆ ತಕ್ಷಣ ಗಾಯಾಳುಗಳನ್ನು ಅಮರಾವತಿ ಆಸ್ಪತ್ರೆಗೆ ಕಳುಹಿಸಲಾಯಿತು. ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯು ತ್ವರಿತಗತಿಯಲ್ಲಿ ಸಾಗಿದೆ, ಆದರೆ ಗಂಭೀರ ಗಾಯಾಳುಗಳ ಸಂಖ್ಯೆ ಹೆಚ್ಚಿದ್ದು ಕಳವಳವನ್ನುಂಟುಮಾಡಿದೆ.
ಅಪಘಾತದ ಕಾರಣಕ್ಕಾಗಿ ತನಿಖೆ ಮುಂದುವರೆದಿದ್ದು, ಅಪಘಾತದ ಸ್ಥಳದಲ್ಲಿ ತುರ್ತು ತಂಡಗಳು ಪ್ರಯತ್ನಗಳನ್ನು ಮುಂದುವರೆಸಿವೆ.
ಅಮರಾವತಿ ಸಮೀಪದ ಮೆಲ್ಘಾಟ್ ಪ್ರದೇಶದಲ್ಲಿ ಅಪಘಾತಗಳು ಸಂಭವಿಸಿವೆ. ಈ ವರ್ಷದ ಮಾರ್ಚ್ ತಿಂಗಳಲ್ಲಿ ಅಮರಾವತಿಯಿಂದ ಮೆಲ್ಘಾಟ್ ಮೂಲಕ ಮಧ್ಯಪ್ರದೇಶಕ್ಕೆ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ರೈಲು ಅಪಘಾತಕ್ಕೀಡಾಗಿತ್ತು.
#Amravati, #Maharashtra: 3 people were killed and 50 injured, some of them seriously, in a private bus accident near Semadoh in Amravati district.
— Tumhara Bhai Hai (@Tumharabhaihai) September 23, 2024
ಪರತ್ವಾಡ ಸೆಮದೋಹ್ ಘಟಾಂಗ್ ರಸ್ತೆಯಲ್ಲಿ ತಿರುವುಗಳಿರುವ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ಹಳ್ಳಕ್ಕೆ ಬಿದ್ದಿದೆ. ಅಪಘಾತದ ವೇಳೆ ಬಸ್‌ನಲ್ಲಿ ಸುಮಾರು 40 ಮಂದಿ ಪ್ರಯಾಣಿಕರಿದ್ದರು. ಮಾಹಿತಿ ಪಡೆದ ಪೊಲೀಸರು ಮತ್ತು ಸ್ಥಳೀಯ ಆಡಳಿತ ಸ್ಥಳಕ್ಕಾಗಮಿಸಿ ಗಾಯಾಳುಗಳನ್ನು ಬಸ್‌ನಿಂದ ಹೊರಕ್ಕೆ ಕರೆದೊಯ್ದರು. ಈ ಅಪಘಾತದಲ್ಲಿ ಸುಮಾರು 25 ಪ್ರಯಾಣಿಕರು ಗಾಯಗೊಂಡಿದ್ದಾರೆ.
Accident: ರಾಜ್ಯದ ಹಲವೆಡೆ ಭೀಕರ ಅಪಘಾತ; ಪ್ರತ್ಯೇಕ ಘಟನೆಗಳಲ್ಲಿ 6 ಜನರ ಸಾವು
ಓರ್ವ ಅಪ್ರಾಪ್ತ ಹಾಗೂ ಇಬ್ಬರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಹಿಳೆಯರನ್ನು 65 ವರ್ಷದ ಇಂದು ಸಮಾಧಾನ್ ಗಂಟ್ರೆ ಮತ್ತು 30 ವರ್ಷದ ಲಲಿತಾ ಚಿಮೋಟೆ ಎಂದು ಗುರುತಿಸಲಾಗಿದೆ. ಇದಲ್ಲದೇ ಈ ವರ್ಷದ ಜುಲೈ ತಿಂಗಳಲ್ಲಿ ಅಮರಾವತಿ ಬಳಿಯ ಮೆಲ್ಘಾಟ್ ಹೈ ಪಾಯಿಂಟ್ ಬಳಿ ಖಾಸಗಿ ಟ್ರಾವೆಲ್ಸ್ ಬಸ್ ಅಪಘಾತಕ್ಕೀಡಾಗಿತ್ತು.
ಸಾತ್ಪುರ ವ್ಯಾಪ್ತಿಯ ಮೆಲ್ಘಾಟ್‌ನ ಖಟ್ಕಲಿ ಬಳಿ ಬಸ್ ಹಳ್ಳಕ್ಕೆ ಬಿದ್ದಿತ್ತು. ಈ ವೇಳೆ ಬಸ್ಸಿನಲ್ಲಿದ್ದ 22 ಪ್ರಯಾಣಿಕರು ಗಾಯಗೊಂಡಿದ್ದು, ಈ ಪೈಕಿ ಮೂವರು ಪ್ರಯಾಣಿಕರ ಸ್ಥಿತಿ ಗಂಭೀರವಾಗಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ