ಹಾವು ಕಚ್ಚಿ ಮೃತಪಟ್ಟ ವ್ಯಕ್ತಿಯ ಚಿತೆಗೆ ಅದೇ ಹಾವನ್ನು ಹಾಕಿ ಕೊಂದ ಜನ
ವ್ಯಕ್ತಿಯೊಬ್ಬರು ವಿಷಕಾರಿ ಹಾವು ಕಚ್ಚಿ ಸಾವನ್ನಪ್ಪಿದ್ದರು, ಸ್ಥಳೀಯರು ಅದೇ ಹಾವನ್ನು ಹಿಡಿದು ವ್ಯಕ್ತಿಯ ಚಿತೆಗೆ ಹಾಕಿ ಹತ್ಯೆ ಮಾಡಿರುವ ಘಟನೆ ಛತ್ತೀಸ್ಗಢದ ಕೊರ್ಬಾ ಜಿಲ್ಲೆಯಲ್ಲಿ ನಡೆದಿದೆ. ಕೆಲವು ಸ್ಥಳೀಯರು ಹಾವು ಬೇರೆಯವರಿಗೆ ಹಾನಿ ಮಾಡಬಹುದೆಂಬ ಭಯದಿಂದ ಅದನ್ನು ಚಿತೆಯ ಮೇಲೆ ಎಸೆದು ಸುಟ್ಟು ಹಾಕಿದ್ದಾರೆ.
ವ್ಯಕ್ತಿಯೊಬ್ಬರು ವಿಷಕಾರಿ ಹಾವು ಕಚ್ಚಿ ಸಾವನ್ನಪ್ಪಿದ್ದರು, ಸ್ಥಳೀಯರು ಅದೇ ಹಾವನ್ನು ಹಿಡಿದು ವ್ಯಕ್ತಿಯ ಚಿತೆಗೆ ಹಾಕಿ ಹತ್ಯೆ ಮಾಡಿರುವ ಘಟನೆ ಛತ್ತೀಸ್ಗಢದ ಕೊರ್ಬಾ ಜಿಲ್ಲೆಯಲ್ಲಿ ನಡೆದಿದೆ. ಕೆಲವು ಸ್ಥಳೀಯರು ಹಾವು ಬೇರೆಯವರಿಗೆ ಹಾನಿ ಮಾಡಬಹುದೆಂಬ ಭಯದಿಂದ ಅದನ್ನು ಚಿತೆಯ ಮೇಲೆ ಎಸೆದು ಸುಟ್ಟು ಹಾಕಿದ್ದಾರೆ.
ಈ ಸರೀಸೃಪಗಳು ಮತ್ತು ಹಾವು ಕಡಿತದ ಬಗ್ಗೆ ಜನರಿಗೆ ತಿಳಿವಳಿಕೆ ನೀಡುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಕೆಲವು ವ್ಯಕ್ತಿಗಳು ಹಗ್ಗವನ್ನು ಬಳಸಿ ಹಾವನ್ನು ಎಳೆಯುತ್ತಿರುವುದನ್ನು ತೋರಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಶನಿವಾರ ರಾತ್ರಿ ಬೈಗಾಮಾರ್ ಗ್ರಾಮದ ತನ್ನ ಮನೆಯ ಕೋಣೆಯಲ್ಲಿ ಹಾಸಿಗೆಯನ್ನು ಜೋಡಿಸುತ್ತಿದ್ದಾಗ ದಿಗೇಶ್ವರ ಎಂಬುವವರಿಗೆ ಹಾವು ಕಡಿದಿದೆ. ಈ ಬಗ್ಗೆ ರಥಿಯಾ ಅವರ ಕುಟುಂಬಕ್ಕೆ ಮಾಹಿತಿ ನೀಡಿದ ನಂತರ ಅವರನ್ನು ಕೊರ್ಬಾದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರು ಚಿಕಿತ್ಸೆ ನೀಡುವ ಸಮಯದಲ್ಲಿ ಭಾನುವಾರ ಬೆಳಗ್ಗೆ ಸಾವನ್ನಪ್ಪಿದ್ದಾರೆ.
ಮತ್ತಷ್ಟು ಓದಿ: ಹಾವು ಕಡಿತ ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿಲ್ಲ ಸಾಕಾಗುವಷ್ಟು ಔಷಧಿ: ಸಾವನ್ನಪ್ಪುವವರ ಸಂಖ್ಯೆ ಏರಿಕೆ
ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ನಂತರ ಗ್ರಾಮಸ್ಥರು ಹಾವನ್ನು ಹಿಡಿದು ಮುಚ್ಚಿದ ಬುಟ್ಟಿಯೊಳಗೆ ಇಡುವಲ್ಲಿ ಯಶಸ್ವಿಯಾದರು. ಬಳಿಕ ಕೋಲಿಗೆ ನೇತು ಹಾಕಿದ ಹಗ್ಗದಿಂದ ಹಾವನ್ನು ಕಟ್ಟಿ ಹಾಕಿದ್ದಾರೆ.
ಅಂತ್ಯಕ್ರಿಯೆಗೆ ರಥಿಯಾ ಮನೆಯಿಂದ ದೇಹವನ್ನು ಸ್ಮಶಾನಕ್ಕೆ ಕೊಂಡೊಯ್ಯುವಾಗ, ಗ್ರಾಮಸ್ಥರು ಹಾವನ್ನು ಸ್ಥಳಕ್ಕೆ ತೆಗೆದುಕೊಂಡು ಹೋಗಿದ್ದರು. ನಂತರ, ಅಂತ್ಯಕ್ರಿಯೆಯ ಚಿತೆಗೆ ಹಾವನ್ನು ಹಾಕಿ ಜೀವಂತವಾಗಿ ಸುಟ್ಟುಹಾಕಿದರು. ವಿಷಕಾರಿ ಹಾವು ಬೇರೊಬ್ಬರನ್ನು ಕಚ್ಚಬಹುದೆಂಬ ಭಯದಿಂದ ಅದನ್ನು ಚಿತೆಗೆ ಸುಟ್ಟು ಹಾಕಿದ್ದೇವೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ