Maharashtra Politics: ಜನರು ಈ ಆಟವನ್ನು ಸಹಿಸುವುದಿಲ್ಲ: ಶಿಂದೆ ಸರ್ಕಾರ ಸೇರಿದ ಅಜಿತ್ ಪವಾರ್ ವಿರುದ್ಧ ಗುಡುಗಿದ ಸಂಜಯ್ ರಾವತ್

|

Updated on: Jul 02, 2023 | 3:45 PM

ಮಹಾರಾಷ್ಟ್ರ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ, ಎನ್​ಸಿಪಿಯಿಂದ ಬಂಡಾಯವೆದ್ದು ಅಜಿತ್ ಪವಾರ್(Ajit Pawar) ಏಕನಾಥ್ ಶಿಂದೆ ಸರ್ಕಾರವನ್ನು ಸೇರಿದ್ದಾರೆ.

Maharashtra Politics: ಜನರು ಈ ಆಟವನ್ನು ಸಹಿಸುವುದಿಲ್ಲ: ಶಿಂದೆ ಸರ್ಕಾರ ಸೇರಿದ ಅಜಿತ್ ಪವಾರ್ ವಿರುದ್ಧ ಗುಡುಗಿದ ಸಂಜಯ್ ರಾವತ್
ಸಂಜಯ್ ರಾವತ್
Image Credit source: Hindustan Times
Follow us on

ಮಹಾರಾಷ್ಟ್ರ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ, ಎನ್​ಸಿಪಿಯಿಂದ ಬಂಡಾಯವೆದ್ದು ಅಜಿತ್ ಪವಾರ್(Ajit Pawar) ಏಕನಾಥ್ ಶಿಂದೆ ಸರ್ಕಾರವನ್ನು ಸೇರಿದ್ದಾರೆ. ಹಾಗೆಯೇ ಉಪ ಮುಖ್ಯಮಂತ್ರಿವಾಗಿ ಪ್ರಮಾಣವಚನವನ್ನೂ ಸ್ವೀಕರಿಸಿದ್ದಾರೆ. ಉದ್ಧವ್ ಬಣದ ಶಿವಸೇನೆ ನಾಯಕ ಸಂಜಯ್ ರಾವತ್ ಕೂಡ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಜನರು ಈ ಆಟವನ್ನು ಹೆಚ್ಚು ದಿನ ಸಹಿಸುವುದಿಲ್ಲ, ಶರದ್ ಪವಾರ್ ಅವರೊಂದಿಗೆ ಮಾತನಾಡಿದ್ದೇನೆ, ಅವರು ಬಲಿಷ್ಠರಿದ್ದಾರೆ ಜತೆ ಜನರ ಬೆಂಬಲವೂ ಅವರ ಮೇಲಿದೆ. ಉದ್ಧವ್ ಠಾಕ್ರೆ ಅವರೊಂದಿಗೆ ಮತ್ತೆ ಎಲ್ಲವನ್ನೂ ಪುನರ್ ನಿರ್ಮಿಸುತ್ತಾರೆ ಎಂದಿದ್ದಾರೆ.

ಮತ್ತಷ್ಟು ಓದಿ: Maharashtra Politics: ಮಹಾರಾಷ್ಟ್ರ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ: ಶಿಂದೆ ಸರ್ಕಾರ ಸೇರಲಿದ್ದಾರೆ ಅಜಿತ್ ಪವರ್: 29 ಶಾಸಕರ ಬೆಂಬಲ

ಪವಾರ್ ಬಂಡಾಯದ ನಂತರ ಎನ್‌ಸಿಪಿಯಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಬಗ್ಗೆ ಶಿವಸೇನಾ (ಯುಬಿಟಿ) ನಾಯಕಿ ಪ್ರಿಯಾಂಕಾ ಚತುರ್ವೇದಿ ಕೂಡ ಪ್ರತಿಕ್ರಿಯಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಶಾಸಕರಲ್ಲಿ ಭ್ರಷ್ಟರೂ ಇದ್ದಾರೆ ಎಂದಿದ್ದಾರೆ.

ಅಜಿತ್ ಪವಾರ್ ಅವರು ಏಕನಾಥ್ ಶಿಂದೆ ನೇತೃತ್ವದ ಮಹಾರಾಷ್ಟ್ರ ಸರ್ಕಾರಕ್ಕೆ ಉಪಮುಖ್ಯಮಂತ್ರಿಯಾಗಿ ಸೇರ್ಪಡೆಗೊಂಡರು. ಅವರು ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಅವರೊಂದಿಗೆ ಅಧಿಕಾರ ಹಂಚಿಕೊಂಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ