ರಾಜಕೀಯದಲ್ಲಿ ಶಾಶ್ವತ ಶತ್ರು ಅಥವಾ ಮಿತ್ರರಿರುವುದಿಲ್ಲ: ಅಜಿತ್ ಪವಾರ್

ರಾಜಕೀಯದಲ್ಲಿ ಶಾಶ್ವತ ಶತ್ರು ಅಥವಾ ಮಿತ್ರರಿರುವುದಿಲ್ಲ, ಹಾಗಾಗಿ ಜನರ ಸಮಸ್ಯೆಗಳನ್ನು ಪರಿಹರಿಸಲು ಬಿಜೆಪಿ ಮತ್ತು ಶಿವಸೇನೆಯ ಶಿಂಧೆ ಬಣದ ಮೈತ್ರಿಗೆ ಸೇರ್ಪಡೆಗೊಂಡಿದ್ದೇನೆ ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿದ್ದಾರೆ. ಜನರ ಸಮಸ್ಯೆಗಳನ್ನು ಆಲಿಸಲು ಮಹಾಯುತಿಗೆ ಸೇರಿದ್ದೇನೆ, ಎಲ್ಲಾ ಜಾತಿ ಮತ್ತು ಧರ್ಮದ ಜನರನ್ನು ರಕ್ಷಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು.

ರಾಜಕೀಯದಲ್ಲಿ ಶಾಶ್ವತ ಶತ್ರು ಅಥವಾ ಮಿತ್ರರಿರುವುದಿಲ್ಲ: ಅಜಿತ್ ಪವಾರ್
ಅಜಿತ್ ಪವಾರ್

Updated on: Aug 28, 2023 | 8:07 AM

ಮುಂಬೈ, ಆಗಸ್ಟ್ 28: ರಾಜಕೀಯದಲ್ಲಿ ಶಾಶ್ವತ ಶತ್ರು ಅಥವಾ ಮಿತ್ರರಿರುವುದಿಲ್ಲ, ಹಾಗಾಗಿ ಜನರ ಸಮಸ್ಯೆಗಳನ್ನು ಪರಿಹರಿಸಲು ಬಿಜೆಪಿ ಮತ್ತು ಶಿವಸೇನೆಯ ಶಿಂಧೆ ಬಣದ ಮೈತ್ರಿಗೆ ಸೇರ್ಪಡೆಗೊಂಡಿದ್ದೇನೆ ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar)ಹೇಳಿದ್ದಾರೆ.
ಜನರ ಸಮಸ್ಯೆಗಳನ್ನು ಆಲಿಸಲು ಮಹಾಯುತಿಗೆ ಸೇರಿದ್ದೇನೆ, ಎಲ್ಲಾ ಜಾತಿ ಮತ್ತು ಧರ್ಮದ ಜನರನ್ನು ರಕ್ಷಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು.

ಬೀಡು ಅಜಿತ್ ಪವಾರ್ ಬೆಂಬಲಿಗ ಧನಂಜಯ್ ಮುಂಡೆ ಅವರ ತವರು ಕ್ಷೇತ್ರವಾಗಿದೆ. ಎನ್‌ಸಿಪಿಯಲ್ಲಿ ಬಂಡಾಯವೆದ್ದ ಸಂದರ್ಭದಲ್ಲಿ ಧನಂಜಯ್ ಮುಂಡೆ ಅಜಿತ್ ಪವಾರ್ ಅವರನ್ನು ಬೆಂಬಲಿಸಿದ್ದರು ಮತ್ತು ಅವರನ್ನು ಮಹಾರಾಷ್ಟ್ರ ಸರ್ಕಾರದಲ್ಲಿ ಕೃಷಿ ಸಚಿವರನ್ನಾಗಿ ಮಾಡಲಾಗಿದೆ. ರಾಷ್ಟ್ರೀಯವಾದಿ ಕಾಂಗ್ರೆಸ್ ಮುಖ್ಯಸ್ಥ ಶರದ್ ಪವಾರ್ ಕೂಡ ಕೆಲವು ದಿನಗಳ ಹಿಂದೆ ಬೀಡಿನಲ್ಲಿ ರ್ಯಾಲಿ ನಡೆಸಿದ್ದರು.

ಈರುಳ್ಳಿ ಬೆಲೆ ಹೆಚ್ಚಾದಾಗ ಅನೇಕರು ಕರೆ ಮಾಡಿದರು, ಪ್ರತಿಪಕ್ಷಗಳು ಯಾವಾಗಲೂ ತಪ್ಪು ಮಾಹಿತಿ ನೀಡುತ್ತವೆ. ನಾನು ಧನಂಜಯ್ ಮುಂಡೆ (ಮಹಾರಾಷ್ಟ್ರ ಕೃಷಿ ಸಚಿವ) ಅವರನ್ನು ದೆಹಲಿಗೆ ಹೋಗುವಂತೆ ಕೇಳಿದೆ. ಧನಂಜಯ್ ದೆಹಲಿಗೆ ಹೋಗಿ ಸಹಾಯವನ್ನು ಕೋರಿದರು. ತಕ್ಷಣವೇ ಅಮಿತ್ ಶಾ 2 ಲಕ್ಷ ಮೆಟ್ರಿಕ್ ಟನ್​ನಷ್ಟು ಈರುಳ್ಳಿಯನ್ನು ಖರೀದಿ ಮಾಡಿ ಜನರಿಗೆ 24 ರೂ.ಗೆ ತಲುಪುವಂತೆ ಮಾಡಿದರು.

ಮತ್ತಷ್ಟು ಓದಿ: ಮಹಾರಾಷ್ಟ್ರ ರೈತರಿಂದ ಹೆಚ್ಚುವರಿಯಾಗಿ 2 ಲಕ್ಷ ಟನ್ ಈರುಳ್ಳಿ ಖರೀದಿಸಲಿರುವ ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಿಸಿದ ಶಿಂಧೆ

ಜುಲೈ 2 ರಂದು ಏಕನಾಥ್ ಶಿಂಧೆ ನೇತೃತ್ವದ ಸರ್ಕಾರಕ್ಕೆ ಅಜಿತ್ ಪವಾರ್ ಸೇರಿದ್ದು , ಎಲ್ಲರನ್ನೂ ಅಚ್ಚರಿಗೊಳಿಸಿತ್ತು. ಅದೇ ದಿನ ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅಜಿತ್ ಪವಾರ್ ಅವರ ಈ ನಡೆಯನ್ನು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ವಿರುದ್ಧದ ಬಂಡಾಯವೆಂದು ಪರಿಗಣಿಸಲಾಗಿದೆ.

ಜುಲೈ 5 ರಂದು ಶರದ್ ಪವಾರ್ ಮತ್ತು ಅಜಿತ್ ಪವಾರ್ ಪಕ್ಷದ ಮುಖಂಡರೊಂದಿಗೆ ಪ್ರತ್ಯೇಕ ಸಭೆ ನಡೆಸಿ ತಮ್ಮ ಶಕ್ತಿ ಪ್ರದರ್ಶನ ನಡೆಸಿದ್ದು, ಇಲ್ಲೂ ಅಜಿತ್ ಪವಾರ್ ಮೇಲುಗೈ ಸಾಧಿಸಿದ್ದರು. ಅವರೊಂದಿಗೆ ಹೆಚ್ಚಿನ ಎನ್‌ಸಿಪಿ ಶಾಸಕರು ಕಾಣಿಸಿಕೊಂಡಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ