G20 ಸಿದ್ಧತೆ ನಡುವೆ ಕೋಮು ಗಲಭೆ‌ ಆತಂಕ: ಹರಿಯಾಣದ ನುಹ್‌ನಲ್ಲಿ ಮತ್ತೆ ಸೆಕ್ಷನ್ 144 ಜಾರಿ

ನುಹ್‌ನಲ್ಲಿ ನಾಳೆ ಜಲಾಭಿಷೇಕ ಯಾತ್ರೆ ಕೈಗೊಳ್ಳಲು ವಿಹೆಚ್ ಪಿ ನಿರ್ಧರಿಸಿದೆ‌. ಆದರೆ ವಿಹೆಚ್ ಪಿ ಮೆರವಣಿಗೆಗೆ ಹರಿಯಾಣ ಸರ್ಕಾರ ತಡೆಯೊಡ್ಡಿದೆ. ಯಾತ್ರೆಗೆ ಅನುಮತಿ ನೀಡಲೇಬೇಕು ಎಂದು ಹಿಂದೂಪರ ಸಂಘಟನೆಗಳು ಹಠ ಹಿಡಿದಿವೆ. ಸೆಕ್ಷನ್ 144 ವಿಧಿಸಲಾಗಿದೆ.

G20 ಸಿದ್ಧತೆ ನಡುವೆ ಕೋಮು ಗಲಭೆ‌ ಆತಂಕ: ಹರಿಯಾಣದ ನುಹ್‌ನಲ್ಲಿ ಮತ್ತೆ ಸೆಕ್ಷನ್ 144 ಜಾರಿ
ಸೆಕ್ಷನ್ 144 ಜಾರಿ
Follow us
ಹರೀಶ್ ಜಿ.ಆರ್​. ನವದೆಹಲಿ
| Updated By: ಗಂಗಾಧರ​ ಬ. ಸಾಬೋಜಿ

Updated on: Aug 27, 2023 | 9:58 PM

ದೆಹಲಿ, ಆಗಸ್ಟ್​ 27: ಆಗಸ್ಟ್ ತಿಂಗಳ ಆರಂಭದಲ್ಲಿ ಹಿಂಸಾಚಾರದಿಂದ ದೇಶಾದ್ಯಂತ ಸುದ್ದಿಯಾಗಿದ್ದ ಹರಿಯಾಣದ (Haryana) ನುಹ್ ಮತ್ತೆ ಸುದ್ದಿಗೆ ಬಂದಿದೆ. ನುಹ್​ನಲ್ಲಿ ನಡೆದ ಹಿಂಸಾಚಾರ ವಿರೋಧಿಸಿ ಹಿಂದೂಪರ ಸಂಘಟನೆಗಳು ಮೆರವಣಿಗೆ ನಡೆಸಲು ಸಿದ್ಧತೆ ನಡೆಸಿವೆ. ನುಹ್‌ನಲ್ಲಿ ನಾಳೆ ಜಲಾಭಿಷೇಕ ಯಾತ್ರೆ ಕೈಗೊಳ್ಳಲು ವಿಹೆಚ್ ಪಿ ನಿರ್ಧರಿಸಿದೆ‌. ಆದರೆ ವಿಹೆಚ್ ಪಿ ಮೆರವಣಿಗೆಗೆ ಹರಿಯಾಣ ಸರ್ಕಾರ ತಡೆಯೊಡ್ಡಿದೆ. ಯಾತ್ರೆಗೆ ಅನುಮತಿ ನೀಡಲೇಬೇಕು ಎಂದು ಹಿಂದೂಪರ ಸಂಘಟನೆಗಳು ಹಠ ಹಿಡಿದಿವೆ. ನಾಳೆ ನುಹ್​ಗೆ ಹೆಚ್ಚು ಜನರು ಸೇರಬೇಕು ಎಂದು ಹಿಂದೂ ಸಂಘಟನೆಗಳು ಮನವಿ ಮಾಡಿವೆ.

ಆಗಸ್ಟ್ ಆರಂಭದಲ್ಲಿ ನೂಹ್‌ನಲ್ಲಿ ಸಂಭವಿಸಿದ ಹಿಂಸಾಚಾರ ಘಟನೆಯನ್ನು ಗಮನದಲ್ಲಿಟ್ಟುಕೊಂಡು, ಗಲಭೆ ಪೀಡಿತ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಸರ್ಕಾರದ ಕರ್ತವ್ಯವಾಗಿದೆ ಹಾಗಾಗಿ ಮೆರವಣಿಗೆಗೆ ಅವಕಾಶ ನೀಡಲು ಆಗದು ಕೇವಲ ದೇವಸ್ಥಾನಗಳಿಗೆ ಹೋಗಿ ಪೂಜೆ ಸಲ್ಲಿಸಲಿ ಎಂದು ಸಿಎಂ ಮನೋಹರ್ ಲಾಲ್ ಕಟ್ಟರ್ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಚಂದ್ರಯಾನ-3 ಮತ್ತೊಂದು ದೊಡ್ಡ ಅಪ್​ಡೇಟ್, ಚಂದ್ರನ ತಾಪಮಾನ ಪರೀಕ್ಷಾ ವರದಿ ಕಳುಹಿಸಿದ ರೋವರ್

ಕೋಮು‌ಸಂಘರ್ಷಕ್ಕೆ ಕಾರಣವಾಗುವ ಹೇಳಿಕೆಗಳು ಹಾಗೂ ಪೋಸ್ಟ್ ಗಳ ಮೇಲೆ‌ ಪೋಲೀಸರು ಕಣ್ಣಿಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳ ಪ್ಲಾಟ್‌ಫಾರ್ಮ್‌ಗಳ ಮೇಲ್ವಿಚಾರಣೆಯನ್ನು ಪೊಲೀಸರು ಮಾಡುತ್ತಿದ್ದಾರೆ. ದ್ವೇಷದ ಭಾಷಣಗಳ ಮೂಲಕ ಶಾಂತಿ ಕದಡಲು ಪ್ರಯತ್ನಿಸುವ ಜನರ ಮೇಲೂ ಪೊಲೀಸರು ಕಣ್ಣಿಟ್ಟಿದ್ದಾರೆ.

ನಾಳೆ ಹರಿಯಾಣದ ಪ್ರತಿ ಬ್ಲಾಕ್‌ನಲ್ಲಿರುವ ಶಿವನ ದೇವಸ್ಥಾನದಲ್ಲಿ ಬೆಳಗ್ಗೆ 11 ಗಂಟೆಗೆ ಸಾಮೂಹಿಕ ಜಲಾಭಿಷೇಕ ಕಾರ್ಯಕ್ರಮ ನಡೆಯಲಿದೆ. ಹೀಗಾಗಿ ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿದ್ದು ಇಂದು ಮತ್ತೆ ನುಹ್‌ನಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ, ಸೆಕ್ಷನ್ 144 ವಿಧಿಸಲಾಗಿದೆ.

ಇದನ್ನೂ ಓದಿ: ಭಾರತದ ಜೊತೆ ಗಟ್ಟಿಸ್ನೇಹ ಹೊಂದಿದವರಿಗೆ ಉಜ್ವಲ ಆರ್ಥಿಕತೆ: ಜಿ20 ದೇಶಗಳಿಗೆ ಪ್ರಧಾನಿ ನರೇಂದ್ರ ಮೋದಿ ಸಂದೇಶ

ದೆಹಲಿಯಲ್ಲಿ ಸೆಪ್ಟಂಬರ್ ಎರಡನೇ ವಾರದಲ್ಲಿ ಐತಿಹಾಸಿಕ ಜಿ20 ಸಮಾವೇಶ ನಡೆಯಲಿದೆ. ಹೀಗಾಗಿ ದೆಹಲಿಗೆ ಹೊಂದಿಕೊಂಡಿರುವ ಹರಿಯಾಣದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ತೀವ್ರ ಕಟ್ಟೆಚ್ಚರವಹಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.