ಚಂದ್ರಯಾನ-3 ಮತ್ತೊಂದು ದೊಡ್ಡ ಅಪ್​ಡೇಟ್, ಚಂದ್ರನ ತಾಪಮಾನ ಪರೀಕ್ಷಾ ವರದಿ ಕಳುಹಿಸಿದ ರೋವರ್

Chandrayaan-3: ಚಂದ್ರಯಾನ 3 ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದ ಬೆನ್ನಲ್ಲೇ ಕಾರ್ಯಾರಂಭಿಸಿದೆ. ಚಂದ್ರನ ಮೇಲೆ ಅಧ್ಯಯನ ಪ್ರಾರಂಭಿಸಿರುವ ಪ್ರಗ್ಯಾನ್ ರೋವರ್​ ಬಗ್ಗೆ ಕ್ಷಣಕ್ಷಣದ ಮಾಹಿತಿ ನೀಡುತ್ತಿರುವ ಇಸ್ರೋ, ಇದೀಗ ಮತ್ತೊಂದು ದೊಡ್ಡ ಅಪ್​ಡೇಟ್ ನೀಡಿದ್ದು, ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದ ನಾಲ್ಕೇ ದಿನಕ್ಕೆ ಇದೀಗ ಹಲವು ಮಾಹಿತಿಗಳು ಇಸ್ರೋ ವಿಜ್ಞಾನಿಗಳ ಕೈಸೇರಿದೆ.

ಚಂದ್ರಯಾನ-3 ಮತ್ತೊಂದು ದೊಡ್ಡ ಅಪ್​ಡೇಟ್, ಚಂದ್ರನ ತಾಪಮಾನ ಪರೀಕ್ಷಾ ವರದಿ ಕಳುಹಿಸಿದ ರೋವರ್
ಗ್ರಾಫ್​ ಸಮೇತ ವರದಿ ಬಿಡುಗಡೆ ಮಾಡಿರುವ ಇಸ್ರೋ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Aug 27, 2023 | 6:12 PM

ಬೆಂಗಳೂರು, (ಆಗಸ್ಟ್ 27): ಬರೋಬ್ಬರಿ 3 ಲಕ್ಷದ 84 ಸಾವಿರದ 400 ಕೀಲೋ ಮೀಟರ್ ದೂರದಲ್ಲಿರುವ ಚಂದ್ರನ ಮೇಲೆ ಪ್ರಗ್ಯಾನ್ ರೋವರ್ (Pragyan rover) ಅಧ್ಯಯನ ಚುರುಕುಗೊಂಡಿದೆ. ಚಂದ್ರನ(Moon) ಮೇಲೆ ಅಧ್ಯಯನ ಪ್ರಾರಂಭಿಸಿರುವ ಪ್ರಗ್ಯಾನ್ ರೋವರ್​ ಬಗ್ಗೆ ಕ್ಷಣಕ್ಷಣದ ಮಾಹಿತಿ ನೀಡುತ್ತಿರುವ ಇಸ್ರೋ (ISRO), ಇದೀಗ ಮತ್ತೊಂದು ದೊಡ್ಡ ಅಪ್​ಡೇಟ್ ನೀಡಿದೆ. ಈ ಬಾರಿ ಪ್ರಗ್ಯಾನ್ ರೋವರ್, ಚಂದ್ರನ ತಾಪಮಾನದ ವರದಿ ಕಳುಹಿಸಿದೆ. 50 ಸೆಲ್ಸಿಯಸ್​ನಿಂದ 10 ಸೆಲ್ಸಿಯಸ್​ವರೆಗೆ ಹಗಲಿನ ತಾಪಮಾನ ಇದೆ ಎಂದು ಪ್ರಗ್ಯಾನ್ ರೋವರ್ ವರದಿ ಕಳುಹಿಸಿಕೊಟ್ಟಿದ್ದು, ಇದನ್ನು ಇಸ್ರೋ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಚಂದ್ರನ ಮೇಲಿರುವ ತಾಪಮಾನದ ಮಾಹಿತಿ ಬಹಿರಂಗಗೊಂಡಿದೆ.

ಮೈನಸ್ 10 ಡಿಗ್ರಿ ಸೆಲ್ಸಿಯಸ್​ನಿಂದ 60 ಡಿಗ್ರಿವರೆಗೆ ತಾಪಮಾನ ಇದೆ ಎಂದು ರೋವರ್​ ಮಾಹಿತಿ ನೀಡಿದ್ದು, ಅದನ್ನು ಇಸ್ರೋ ಗ್ರಾಫ್ ಸಮೇತ ವಿವರಿಸಿದೆ.  ಈ ಬಗ್ಗೆ ಟ್ವೀಟ್ ಮೂಲಕ ಹಂಚಿಕೊಂಡಿರುವ ಇಸ್ರೋ, ಚಂದ್ರನ ದಕ್ಷಿಣ ಧೃವದಲ್ಲಿ ಪ್ರಗ್ಯಾನ್ ರೋವರ್ ಸಂಚರಿಸುತ್ತಿದ್ದು, ಇದೀಗ ಸೆನ್ಸಾರ್​​ಗಳ ಮೂಲಕ ಚಂದ್ರನ ತಾಪಮಾನ ಪರೀಕ್ಷೆ ಮಾಡಿದೆ. 10 ಸೆನ್ಸಾರ್ಸ್​ಗಳು ಚಂದ್ರನ 10 ಸೆ.ಮೀ ಆಳಕ್ಕೆ ಇಳಿದಿವೆ ಎಂದು ಇಸ್ರೋ ತಿಳಿಸಿದೆ.

ಇದನ್ನೂ ಓದಿ: ಚಂದ್ರಯಾನ-3 ಯಶಸ್ಸಿನ ನಂತರ ಇಸ್ರೋದ ಮುಂದಿನ ಯೋಜನೆಗಳೇನು ? ಇಲ್ಲಿದೆ ಮಾಹಿತಿ

ಇಸ್ರೋ ಚಂದ್ರನ ಮೇಲಿರುವ ChaSTE ಪ್ಲೇಲೋಡ್ ವಿಕ್ರಮ್ ಲ್ಯಾಂಡರ್ ಸಹಾಯದಿಂದ ಚಂದ್ರನ ಮೇಲಿನ ತಾಪಮಾನ ಎಷ್ಟಿದೆ? ಇದು ಯಾವ ರೀತಿ ಬದಲಾಗುತ್ತಿದೆ ಎಂಬುದರ ಮಾಹಿತಿಯನ್ನು ಇಸ್ರೋ ಗ್ರಾಫ್​ ಮೂಲಕ ವಿವರಿಸಿದೆ. ಅಲದೇ ಅಹಮದಾಬಾದ್​ನ ಭೌತಿಕ ಅನುಸಂಧಾನ ಪ್ರಯೋಗಾಲಯದ ಸಹಯೋಗದೊಂದಿಗೆ ಬಾಹ್ಯಾಕಾಶ ಭೌತಶಾಸ್ತ್ರ ಪ್ರಯೋಗಾಲಯ, ವಿಕ್ರಮ್ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದಲ್ಲಿ ಅಧ್ಯಯನ ನಡೆಸಲಾಗುತ್ತಿದೆ ಎಂದು ಇಸ್ರೋ ಮಾಹಿತ ಹಂಚಿಕೊಂಡಿದೆ.

ಪ್ರಜ್ಞಾನ್ ರೋವರ್ ಶಿವಶಕ್ತಿ ಪಾಯಿಂಟ್ ಸುತ್ತ ಸುತ್ತಿತ್ತಿದೆ. ಚಂದ್ರನ ದಕ್ಷಿಣ ಧ್ರುವದ ರಹಸ್ಯಗಳನ್ನ ಅನ್ವೇಷಣೆ ಮಾಡ್ತಿದೆ ಎಂದು ಇಸ್ರೋ ಮಾಹಿತಿ ನೀಡಿತ್ತು, ಇನ್ನು ವಿಕ್ರಮ ಲ್ಯಾಂಡರ್‌ನಿಂದ ಪ್ರಜ್ಞಾನ್ ರೋವರ್ ಕೆಳಗಿಳಿದು 8 ಮೀಟರ್ ಚಲಿಸುವ ವಿಡಿಯೋವನ್ನು ಮೊನ್ನೆಯಷ್ಟೇ ಇಸ್ರೋ ಬಿಡುಗಡೆ ಮಾಡಿತ್ತು. ಈ ವಿಡಿಯೋ ಸಾಕಷ್ಟು ಸಂಚಲನಕ್ಕೆ ಕಾರಣವಾಗಿತ್ತು. ಅಲ್ಲದೇ ಶಿವಶಕ್ತಿ ಪಾಯಿಂಟ್‌ನಲ್ಲಿ ಪ್ರಜ್ಞಾನ್ ರೋವರ್ 12 ಮೀಟರ್‌ನಷ್ಟು ದೂರ ಚಲಿಸಿ ಬಲಕ್ಕೆ ತಿರುಗಿ ನಿಲ್ಲುವ ವಿಡಿಯೋವನ್ನು ಇಸ್ರೋ ರಿಲೀಸ್ ಮಾಡಿತ್ತು. ಪ್ರತಿ ಹೆಜ್ಜೆಯಲ್ಲೂ ಇಸ್ರೋ ಲೋಗೋ, ಅಶೋಕ ಲಾಂಚನ ಗೋಚರಿಸಿತ್ತು. ಇದೀಗ ಎಲ್ಐಬಿಎಸ್ ಪೇಲೋಡ್ ಲ್ಯಾಂಡರ್ ಇಳಿದಿರುವ ಸ್ಥಳದ ಆಸುಪಾಸಿನಲ್ಲಿರುವ ಚಂದ್ರನ ಮಣ್ಣು ಹಾಗೂ ಬಂಡೆಗಲ್ಲುಗಳ ಭೌತಿಕ ಸಂಯೋಜನೆಗಳ ಅಧ್ಯಯನ ನಡೆಸಿದೆ.

ಒಟ್ಟಿನಲ್ಲಿ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದ ನಾಲ್ಕೇ ದಿನಕ್ಕೆ ಇದೀಗ ಹಲವು ಮಾಹಿತಿಗಳು ಬರುತ್ತಿದ್ದು, ಇದೀಗ ಇಸ್ರೋ ವಿಜ್ಞಾನಿಗಳು ಅವುಗಳ ಅಧ್ಯಯನ ಆರಂಭಿಸಿದ್ದಾರೆ.

Published On - 4:17 pm, Sun, 27 August 23