AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಂದ್ರಯಾನ-3 ಯಶಸ್ಸಿನ ನಂತರ ಇಸ್ರೋದ ಮುಂದಿನ ಯೋಜನೆಗಳೇನು ? ಇಲ್ಲಿದೆ ಮಾಹಿತಿ

ಚಂದ್ರಯಾನ-3 ಮೂಲಕ ಮೊದಲ ಪ್ರಯತ್ನದಲ್ಲೇ ಚಂದ್ರನ ದಕ್ಷಿಣ ಧ್ರುವದ ಮೇಲೆ ಕಾಲಿಟ್ಟ ಜಗತ್ತಿನ ಏಕೈಕ ರಾಷ್ಟ್ರ ಭಾರತ. ಇಸ್ರೋ ವಿಜ್ಞಾನಿಗಳ ಅವಿರತ ಪರಿಶ್ರಮದಿಂದ ಈ ಯಶಸ್ಸು ಸಾಧ್ಯವಾಯಿತು. ಈ ಸಾಧನೆ ನಂತರ ಇಸ್ರೋ ಮುಂದಿನ ಯೋಜನೆಗಳನ್ನು ರೂಪಿಸಿದ್ದು ಅದಕ್ಕೆ ಸಜ್ಜಾಗುತ್ತಿದೆ. ಆ ಯೋಜನೆಗಳು ಯಾವವು ಇಲ್ಲಿದೆ ಮಾಹಿತಿ...

ಚಂದ್ರಯಾನ-3 ಯಶಸ್ಸಿನ ನಂತರ ಇಸ್ರೋದ ಮುಂದಿನ ಯೋಜನೆಗಳೇನು ? ಇಲ್ಲಿದೆ ಮಾಹಿತಿ
ಇಸ್ರೋ
Follow us
ವಿವೇಕ ಬಿರಾದಾರ
|

Updated on: Aug 26, 2023 | 7:39 AM

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಬ್ಯಾಹಾಕಾಶಕ್ಕೆ ಸಂಬಧಿಸಿದಂತೆ ಅನೇಕ ಮೈಲಿಗಳನ್ನು ಸಾಧಿಸಿದೆ. ಮಂಗಳಯಾನ, ಚಂದ್ರಯಾನ 1, 2 ಮತ್ತು 3ಯಲ್ಲಿ ಯಶಸ್ವಿ ಕಂಡಿರುವುದು ವಿಶ್ವದ ದೊಡ್ಡಣ್ಣ ಅಮೆಕರಿಕವನ್ನೂ ಕೂಡ ನಿಬ್ಬೆರಗಾಗಿಸಿದೆ. ರಷ್ಯಾ, ಚೀನಾ ಮತ್ತು ಅಮೆರಿಕ ದೇಶಗಳಿಗೆ ಸಾಧ್ಯವಾಗದೇ ಇರುವುದನ್ನು ಭಾರತ ಸಾಧಿಸಿ ತೋರಿಸಿದೆ. ಚಂದ್ರಯಾನ-3 (Chandrayaana-3) ಮೂಲಕ ಮೊದಲ ಪ್ರಯತ್ನದಲ್ಲೇ ಚಂದ್ರನ ದಕ್ಷಿಣ ಧ್ರುವದ ಮೇಲೆ ಕಾಲಿಟ್ಟ ಜಗತ್ತಿನ ಏಕೈಕ ರಾಷ್ಟ್ರ ಭಾರತ. ಇಸ್ರೋ ಹೀಗೆ ತನ್ನ ಮಹತ್ತರವಾದ ಸಾಧನೆಗಳ ಮೂಲಕ ನಾಸಾವನ್ನು ಬೆರೆಗಾಗಿಸಿದ್ದು, ವಿಜ್ಞಾನಿಗಳ ಸಾಧನೆಗೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಈ ಸಮಯದಲ್ಲಿ ಇಸ್ರೋದ ಮುಂದಿನ ಸಾಧನೆಗಳ ಬಗ್ಗೆಯೂ ತಿಳಿಯುವುದು ಅವಶ್ಯಕವಾಗಿದೆ

ಇಸ್ರೋದ ಮುಂದಿನ ಯೋಜನೆಗಳು

ಸೂರ್ಯಯಾನ (ಆದಿತ್ಯ ಎಲ್​​-1)

ಚಂದ್ರನ ಬಳಿಕ ಮೊದಲ ಬಾರಿ ಸೂರ್ಯನ ಅಧ್ಯಯನಕ್ಕೆ ಇಸ್ರೋ ಮುಂದಾಗಿದೆ. “ಆದಿತ್ಯ ಎಲ್-1” ಸೂರ್ಯಯಾನಕ್ಕೆ ಸಜ್ಜಾಗುತ್ತಿದೆ. ಇಸ್ರೋ ತನ್ನ ಆದಿತ್ಯ ಎಲ್ 1 ಕರೋನಾಗ್ರಫಿ ಉಪಗ್ರಹವನ್ನು ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV) ರಾಕೆಟ್​ನಲ್ಲಿ ಆಗಸ್ಟ್ ಅಂತ್ಯದ ವೇಳೆಗೆ ಕಳುಹಿಸಲಿದೆ ಎಂದು ತಿಳಿದುಬಂದಿದೆ. ಈ ಮೂಲಕ ಅದು ಸೌರ ವಾತಾವರಣವನ್ನು ಅಧ್ಯಯನ ಮಾಡಲು ಮುಂದಾಗಲಿದೆ.

ಆಗಸ್ಟ್ ಅಂತ್ಯದಲ್ಲಿ ಕೈಗೊಳ್ಳಲಿರುವ ಮುಂದಿನ ಅಂತರ್ ಗ್ರಹ ಮಿಷನ್ ಆದಿತ್ಯ ಎಲ್ 1 ಸೌರ ವೀಕ್ಷಣಾಲಯಕ್ಕೆ ಟ್ರ್ಯಾಕಿಂಗ್ ಬೆಂಬಲವನ್ನು ನೀಡುವುದಾಗಿ ಯುರೋಪಿಯನ್ ಸ್ಪೇಸ್ ಏಜೆನ್ಸಿ (ಇಎಸ್ಎ) ಹೇಳಿದೆ. ಬಾಹ್ಯಾಕಾಶ ನೌಕೆಯನ್ನು ಆರಂಭದಲ್ಲಿ ಕಡಿಮೆ ಭೂಮಿಯ ಕಕ್ಷೆಯಲ್ಲಿ ಇರಿಸಲಾಗುತ್ತದೆ ಮತ್ತು ನಂತರ ಆನ್‌ಬೋರ್ಡ್ ಪ್ರೊಪಲ್ಷನ್ ಬಳಸಿ L1 ಕಡೆಗೆ ಉಡಾವಣೆ ಮಾಡಲಾಗುತ್ತದೆ. ಉಪಗ್ರಹ ಇಲ್ಲಿಂದ ಸೂರ್ಯನ ಮೇಲೆ ನಿಗಾ ವಹಿಸಲಿದೆ. L1, ಸುತ್ತ ಹಾಲೋ ಕಕ್ಷೆಯಲ್ಲಿರುವುದರಿಂದ ಯಾವುದೇ ನಿಗೂಢ ಅಥವಾ ಗ್ರಹಣಗಳಿಲ್ಲದೆ ಸೂರ್ಯನ ನಿರಂತರ ವೀಕ್ಷಣೆಯನ್ನು ಮಾಡಬಹುದಾಗಿದೆ. ಈ ಮೂಲಕ 2023ರ ವರ್ಷ ಇಸ್ರೋ ಪಾಲಿಗೆ ಅಂತರ್ ಗ್ರಹ ಕಾರ್ಯಾಚರಣೆಯ ವರ್ಷವಾಗಲಿದೆ.

ಇದನ್ನೂ ಓದಿ: ಅನ್ಯಗ್ರಹ ಜೀವಿಗಳ ಕುರಿತು ಅಧ್ಯಯನ ನಡೆಸಲಿದೆ ಚಂದ್ರಯಾನ-3

ಮಂಗಳಯಾನ-2

2014ರಲ್ಲಿ ಮಂಗಳ ಗ್ರಹದ ಕಕ್ಷೆಗೆ ಆರ್ಬಿಟರ್ ಕಳುಹಿಸಿದ್ದ ಇಸ್ರೋದಿಂದ ಮತ್ತೆ ಮಂಗಳಯಾನ-2 ನಡೆಸಲಿದೆ. ಈ ಬಾರಿ ಮಂಗಳನ ನೆಲದಲ್ಲಿ ನೌಕೆ ಇಳಿಸಲು ಯೋಜನೆ ರೂಪಿಸಿದೆ. ಇಸ್ರೋ ಅತಿ ಕಡಿಮೆ ವೆಚ್ಚ 450 ಕೋಟಿ ರೂ. ನಲ್ಲಿ ಮಾರ್ಸ್ ಆರ್ಬಿಟರ್ ಮಿಷನ್ ಅನ್ನು ತಯಾರಿಸಿ 2013 ನವೆಂಬರ್​ 5 ರಂದು ಶ್ರೀಹರಿಕೋಟದಿಂದ ಉಡಾವಣೆ ಮಾಡಿತ್ತು. 2014 ಸೆಪ್ಟೆಂಬರ್ 24ರಂದು ಉಪಗ್ರಹ ಮಂಗಳ ಕಕ್ಷೆಗೆ ಸೇರಿತ್ತು.

ಬಾಹ್ಯಾಕಾಶಕ್ಕೆ ಗಗನಯಾತ್ರಿ

ಇನ್ನು ಇಸ್ರೋ ಬಾಹ್ಯಾಕಾಶಕ್ಕೆ ಗಗನಯಾತ್ರಿಗಳನ್ನು ಕರೆದೊಯ್ಯಲು ಸಜ್ಜಾಗುತ್ತಿದೆ. ಮುಂದಿನ ವರ್ಷ ಏಪ್ರಿಲ್‌ನಲ್ಲಿ ಈ ಕನಸು ಸಾಕಾರವಾಗಲಿದೆ. ವಿವಿಧ ತರಬೇತಿಗಳು ನಡೆಯುತ್ತಿವೆ. ಮೊದಲ ಮಾನವರಹಿತ ಹಾರಾಟ ಪರೀಕ್ಷೆಯು ಆಗಸ್ಟ್‌ನಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ. ಗಗನಯಾನ್ ಯೋಜನೆಯು ಭಾರತದ ಮಾನವ ಬಾಹ್ಯಾಕಾಶ ಯಾನದ ಸಾಮರ್ಥ್ಯವನ್ನು ಪ್ರದರ್ಶಿಸುವ ಗುರಿಯಾಗಿದೆ. ಮೂರು ಸದಸ್ಯರ ಸಿಬ್ಬಂದಿಯನ್ನು ಕಳುಹಿಸಲಾಗುತ್ತದೆ. ಮಾನವ ಸಹಿತ ಯಾನದ ವೇಳೆ ಗಗನಯಾನಿಗಳು ಸುರಕ್ಷಿತವಾಗಿ ಭೂಮಿಗೆ ಮರಳಲು ಪ್ಯಾರಾಚೂಟ್ ವ್ಯವಸ್ಥೆಯನ್ನು ಮಾಡಲಾಗಿದೆ.

2025ಕ್ಕೆ ಮತ್ತೆ ಚಂದ್ರಯಾನ

ಚಂದ್ರನಲ್ಲಿನ ನೀರಿನ ಅಂಶದ ಬಗ್ಗೆ ಸಂಶೋಧನೆ ನಡೆಸಲು ಜಪಾನ್‌ ಜತೆಗೂಡಿ ಮತ್ತೊಂದು ಚಂದ್ರಯಾನವನ್ನು ಇಸ್ರೋ ಕೈಗೊಳ್ಳಲಿದೆ. ಇದು 2025ಕ್ಕೆ ನಡೆವ ಸಾಧ್ಯತೆ ಇದೆ.

ಶುಕ್ರಯಾನಕ್ಕೂ ಯೋಜನೆ

ಶುಕ್ರಗ್ರಹದ ಕೌತುಕಗಳನ್ನು ಭೇದಿಸಲು ಆರ್ಬಿಟರ್ ಕಳುಹಿಸುವ ಯೋಜನೆಯೊಂದನ್ನು ಇಸ್ರೋ ಹೊಂದಿದೆ. ಆದರೆ ಅದಕ್ಕೆ ಅಂತಿಮ ದಿನಾಂಕ ಇನ್ನೂ ನಿಗದಿಯಾಗಿಲ್ಲ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಥೂ...ಛೀ..ಬೆಂಗಳೂರಿನಲ್ಲಿ ಬೆತ್ತಲೆಯಾಗಿ ಓಡಾಡಿದ ಯುವತಿ, ವಿಡಿಯೋ ವೈರಲ್
ಥೂ...ಛೀ..ಬೆಂಗಳೂರಿನಲ್ಲಿ ಬೆತ್ತಲೆಯಾಗಿ ಓಡಾಡಿದ ಯುವತಿ, ವಿಡಿಯೋ ವೈರಲ್
ಕನ್ನಡದ ಬಗ್ಗೆ ಸೋನು ನಿಗಮ್ ವಿವಾದಾತ್ಮಕ ಹೇಳಿಕೆ; ಗಾಯಕನ ವಿರುದ್ಧ ಎಫ್​ಐಆರ್
ಕನ್ನಡದ ಬಗ್ಗೆ ಸೋನು ನಿಗಮ್ ವಿವಾದಾತ್ಮಕ ಹೇಳಿಕೆ; ಗಾಯಕನ ವಿರುದ್ಧ ಎಫ್​ಐಆರ್
ಪಿಒಕೆಯಲ್ಲಿ ಸ್ಥಳೀಯರಿಗೆ ಪಾಕ್ ಸೇನೆಯಿಂದ ಶಸ್ತ್ರಾಸ್ತ್ರ ತರಬೇತಿ
ಪಿಒಕೆಯಲ್ಲಿ ಸ್ಥಳೀಯರಿಗೆ ಪಾಕ್ ಸೇನೆಯಿಂದ ಶಸ್ತ್ರಾಸ್ತ್ರ ತರಬೇತಿ
ನನ್ನ ಪತಿ ಮತ್ತು ಯತ್ನಾಳ್ ನಡುವಿನ ಜಗಳ ಅವರವರ ವೈಯಕ್ತಿಕ ವಿಚಾರ: ವೀಣಾ
ನನ್ನ ಪತಿ ಮತ್ತು ಯತ್ನಾಳ್ ನಡುವಿನ ಜಗಳ ಅವರವರ ವೈಯಕ್ತಿಕ ವಿಚಾರ: ವೀಣಾ
ಅರ್ ವಿ ರೋಡ್-ಬೊಮ್ಮಸಂದ್ರ ಪ್ರಯಾಣ ಸಮಯ ಅರ್ಧದಷ್ಟು ಕಡಿಮೆ!
ಅರ್ ವಿ ರೋಡ್-ಬೊಮ್ಮಸಂದ್ರ ಪ್ರಯಾಣ ಸಮಯ ಅರ್ಧದಷ್ಟು ಕಡಿಮೆ!
ನೀವು ಸುಮ್ಮನಿದ್ದರೆ ಅದೇ ದೊಡ್ಡ ಸೇವೆ: ಜಮೀರ್​ಗೆ ಜೋಶಿ ಟಾಂಗ್
ನೀವು ಸುಮ್ಮನಿದ್ದರೆ ಅದೇ ದೊಡ್ಡ ಸೇವೆ: ಜಮೀರ್​ಗೆ ಜೋಶಿ ಟಾಂಗ್
ಮಾಹಿತಿ ಕೊಡದೆ ಕ್ಷೇತ್ರಕ್ಕೆ ಬರ್ತೀರಿ: ಸಚಿವರಿಗೆ ಕೈ ಕಾರ್ಯಕರ್ತ ಕ್ಲಾಸ್​​!
ಮಾಹಿತಿ ಕೊಡದೆ ಕ್ಷೇತ್ರಕ್ಕೆ ಬರ್ತೀರಿ: ಸಚಿವರಿಗೆ ಕೈ ಕಾರ್ಯಕರ್ತ ಕ್ಲಾಸ್​​!
ಭಾರತದಿಂದ ಯುದ್ಧದ ಭೀತಿ; ಪಾಕಿಸ್ತಾನದಿಂದ ಕ್ಷಿಪಣಿ ಪರೀಕ್ಷೆ ಯಶಸ್ವಿ
ಭಾರತದಿಂದ ಯುದ್ಧದ ಭೀತಿ; ಪಾಕಿಸ್ತಾನದಿಂದ ಕ್ಷಿಪಣಿ ಪರೀಕ್ಷೆ ಯಶಸ್ವಿ
ತಮ್ಮ ಭಾಷಣದಲ್ಲಿ ಸಿದ್ದರಾಮಯ್ಯರನ್ನು ಎಡೆಬಿಡದೆ ಹೊಗಳಿದ ವಿಶ್ವನಾಥ್
ತಮ್ಮ ಭಾಷಣದಲ್ಲಿ ಸಿದ್ದರಾಮಯ್ಯರನ್ನು ಎಡೆಬಿಡದೆ ಹೊಗಳಿದ ವಿಶ್ವನಾಥ್
ಸೋನು ನಿಗಂ ಮೇಲೆ ನಿಷೇಧ ಹೇರಿ: ರೂಪೇಶ್ ರಾಜಣ್ಣ ಒತ್ತಾಯ
ಸೋನು ನಿಗಂ ಮೇಲೆ ನಿಷೇಧ ಹೇರಿ: ರೂಪೇಶ್ ರಾಜಣ್ಣ ಒತ್ತಾಯ