AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಂಜಾಬ್​​ನಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕಾಗುತ್ತದೆ: ಸಿಎಂ ಭಗವಂತ್ ಮಾನ್​​ಗೆ ರಾಜ್ಯಪಾಲರ ಎಚ್ಚರಿಕೆ

ಮಾನ್‌ಗೆ ನೀಡಿದ ಇತ್ತೀಚಿನ ಸಂವಹನದಲ್ಲಿ, ರಾಜ್ಯಪಾಲ ಪುರೋಹಿತ್ ಅವರು ನಿಮ್ಮಿಂದ ಯಾವುದೇ ಉತ್ತರ ಸಿಕ್ಕಿಲ್ಲ ಎಂದು ಅಸಮಾಧಾನಗೊಂಡಿರುವುದಾಗಿ ಎಂದು ಸೂಚಿಸಿದ್ದಾರೆ. ಅದೇ ವೇಳೆ ಸಾಂವಿಧಾನಿಕ ಕಾರ್ಯವಿಧಾನದ ವೈಫಲ್ಯ ಕುರಿತು ರಾಷ್ಟ್ರಪತಿಗಳಿಗೆ ವರದಿಯನ್ನು ಕಳುಹಿಸಬಹುದು ಎಂದು ಎಚ್ಚರಿಸಿದರು. ಸಂವಿಧಾನದ 356 ನೇ ವಿಧಿ ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124 ರ ಅಡಿಯಲ್ಲಿ ಈ "ಅಂತಿಮ ನಿರ್ಧಾರ" ತೆಗೆದುಕೊಳ್ಳುವ ಮೊದಲು ಕಾರ್ಯನಿರ್ವಹಿಸುವಂತೆ ಪುರೋಹಿತ್, ಮಾನ್ ಅವರಿಗೆ ಸಲಹೆ ನೀಡಿದ್ದಾರೆ

ಪಂಜಾಬ್​​ನಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕಾಗುತ್ತದೆ: ಸಿಎಂ ಭಗವಂತ್ ಮಾನ್​​ಗೆ ರಾಜ್ಯಪಾಲರ ಎಚ್ಚರಿಕೆ
ಭಗವಂತ್ ಮಾನ್
ರಶ್ಮಿ ಕಲ್ಲಕಟ್ಟ
|

Updated on: Aug 25, 2023 | 8:57 PM

Share

ದೆಹಲಿ ಆಗಸ್ಟ್25:  ಪಂಜಾಬ್ (Punjab) ಮುಖ್ಯಮಂತ್ರಿ ಭಗವಂತ್ ಮಾನ್ (Bhagwant Mann) ಅಧಿಕೃತ ಸಂವಹನಕ್ಕೆ ಪ್ರತಿಕ್ರಿಯಿಸದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಬೇಕಾಗುತ್ತದೆ ಎಂದು ರಾಜ್ಯಪಾಲರು ಎಚ್ಚರಿಸಿದ ನಂತರ ಪಂಜಾಬ್‌ನ ಆಮ್ ಆದ್ಮಿ ಪಕ್ಷ (AAP) ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಘರ್ಷಣೆ ತೀವ್ರಗೊಂಡಿದೆ. ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಬಹುದು, ನನ್ನ ಪತ್ರಗಳಿಗೆ ಉತ್ತರಿಸದಿದ್ದರೆ ಕ್ರಿಮಿನಲ್ ಮೊಕದ್ದಮೆಯನ್ನು ಪ್ರಾರಂಭಿಸಲೂಬಹುದು ಎಂದು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರು ಶುಕ್ರವಾರ ಸಿಎಂಗೆ ಎಚ್ಚರಿಕೆ ನೀಡಿದ್ದಾರೆ. ಸಾಮಾನ್ಯವಾಗಿ ರಾಜ್ಯಪಾಲರು ವರದಿಯನ್ನು ಕಳುಹಿಸಿದ ನಂತರ, 356 ನೇ ವಿಧಿಯ ಮನವಿಯೊಂದಿಗೆ ರಾಜ್ಯವನ್ನು ಕೇಂದ್ರದ ನೇರ ಆಡಳಿತದ ಅಡಿಯಲ್ಲಿ ತರಲಾಗುತ್ತದೆ.

ತಮ್ಮ ಪತ್ರಗಳಲ್ಲಿ, ಪಂಜಾಬ್ ಗವರ್ನರ್ ಗಡಿ ರಾಜ್ಯದಲ್ಲಿ ಮಾದಕವಸ್ತು ಕಳ್ಳಸಾಗಣೆ ಕುರಿತು ಪ್ರಶ್ನೆಗಳನ್ನು ಕೇಳಿದ್ದು, ಇದಕ್ಕೆಸರ್ಕಾರವು ತೆಗೆದುಕೊಂಡ ಕ್ರಮಗಳ ಬಗ್ಗೆ ವಿವರಣೆ ನೀಡುವಂತೆ ಹೇಳಿದ್ದರು. ಮಾದಕ ದ್ರವ್ಯಗಳ ಲಭ್ಯತೆ ಮತ್ತು ಬಳಕೆಯ ಬಗ್ಗೆ ವಿವಿಧ ಏಜೆನ್ಸಿಗಳಿಂದ ವರದಿಗಳನ್ನು ಪಡೆದಿದ್ದೇನೆ. ಅವು ಔಷಧಾಲಯಗಳಲ್ಲಿ ಮತ್ತು ಸರ್ಕಾರಿ ನಿಯಂತ್ರಿತ ಮದ್ಯದಂಗಡಿಗಳಲ್ಲಿ ಹೇಗೆ ಸುಲಭವಾಗಿ ಲಭ್ಯವಿವೆ ಎಂದು ರಾಜ್ಯಪಾಲರು ಕೇಳಿದ್ದಾರೆ.

ಪಂಜಾಬ್‌ನಲ್ಲಿ ಐದು ಜನರಲ್ಲಿ ಒಬ್ಬರು ಮಾದಕ ವ್ಯಸನಿಯಾಗಿದ್ದಾರೆ ಎಂದು ಸಂಸದೀಯ ಸ್ಥಾಯಿ ಸಮಿತಿಯ ಇತ್ತೀಚಿನ ವರದಿಯನ್ನು ರಾಜ್ಯಪಾಲರು ಉಲ್ಲೇಖಿಸಿದ್ದಾರೆ.

ಮಾನ್‌ಗೆ ನೀಡಿದ ಇತ್ತೀಚಿನ ಸಂವಹನದಲ್ಲಿ, ರಾಜ್ಯಪಾಲ ಪುರೋಹಿತ್ ಅವರು ನಿಮ್ಮಿಂದ ಯಾವುದೇ ಉತ್ತರ ಸಿಕ್ಕಿಲ್ಲ ಎಂದು ಅಸಮಾಧಾನಗೊಂಡಿರುವುದಾಗಿ ಎಂದು ಸೂಚಿಸಿದ್ದಾರೆ. ಅದೇ ವೇಳೆ ಸಾಂವಿಧಾನಿಕ ಕಾರ್ಯವಿಧಾನದ ವೈಫಲ್ಯ ಕುರಿತು ರಾಷ್ಟ್ರಪತಿಗಳಿಗೆ ವರದಿಯನ್ನು ಕಳುಹಿಸಬಹುದು ಎಂದು ಎಚ್ಚರಿಸಿದರು. ಸಂವಿಧಾನದ 356 ನೇ ವಿಧಿ ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124 ರ ಅಡಿಯಲ್ಲಿ ಈ “ಅಂತಿಮ ನಿರ್ಧಾರ” ತೆಗೆದುಕೊಳ್ಳುವ ಮೊದಲು ಕಾರ್ಯನಿರ್ವಹಿಸುವಂತೆ ಪುರೋಹಿತ್, ಮಾನ್ ಅವರಿಗೆ ಸಲಹೆ ನೀಡಿದ್ದಾರೆ.

ಸಾಮಾನ್ಯವಾಗಿ ರಾಜ್ಯಪಾಲರು ವರದಿ ಕಳುಹಿಸಿದ ನಂತರ ರಾಜ್ಯವನ್ನು 356ನೇ ವಿಧಿ ಮೂಲಕ ಕೇಂದ್ರದ ನೇರ ಆಡಳಿತಕ್ಕೆ ಒಳಪಡಿಸಲಾಗುತ್ತದೆ. IPC ವಿಭಾಗವು ರಾಷ್ಟ್ರಪತಿ ಅಥವಾ ರಾಜ್ಯಪಾಲರ ಕಾನೂನುಬದ್ಧ ಅಧಿಕಾರವನ್ನು ಚಲಾಯಿಸದಂತೆ ಆಕ್ರಮಣ ಮಾಡುವುದು ಅಥವಾ ತಪ್ಪಾಗಿ ನಿರ್ಬಂಧಿಸುವುದಕ್ಕೆ ಸಂಬಂಧಿಸಿದೆ.

ಸಾಂವಿಧಾನಿಕ ಕಾರ್ಯವಿಧಾನದ ವೈಫಲ್ಯದ ಬಗ್ಗೆ ಆರ್ಟಿಕಲ್ 356 ರ ಅಡಿಯಲ್ಲಿ ಭಾರತದ ರಾಷ್ಟ್ರಪತಿಗಳಿಗೆ ವರದಿಯನ್ನು ಕಳುಹಿಸುವ ಬಗ್ಗೆ ಮತ್ತು ಐಪಿಸಿಯ ಸೆಕ್ಷನ್ 124 ರ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆಯನ್ನು ಪ್ರಾರಂಭಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಮೊದಲು ನಾನು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತೇನೆ, ನನಗೆ ಕಳುಹಿಸಲು ನಾನು ನಿಮ್ಮನ್ನು ಕೇಳುತ್ತೇನೆ. ಮೇಲೆ ಉಲ್ಲೇಖಿಸಿರುವ ನನ್ನ ಪತ್ರಗಳ ಅಡಿಯಲ್ಲಿ ಅಗತ್ಯ ಮಾಹಿತಿಗಳನ್ನು ಕೋರಲಾಗಿದೆ, ಹಾಗೆಯೇ ರಾಜ್ಯದಲ್ಲಿನ ಡ್ರಗ್ಸ್ ಸಮಸ್ಯೆಗೆ ಸಂಬಂಧಿಸಿದಂತೆ ನೀವು ತೆಗೆದುಕೊಂಡ ಕ್ರಮಗಳ ವಿಷಯದಲ್ಲೂ ಸಹ. ಇದು ವಿಫಲವಾದಲ್ಲಿ ಕಾನೂನು ಮತ್ತು ಸಂವಿಧಾನದ ಪ್ರಕಾರ ಕ್ರಮ ಕೈಗೊಳ್ಳುವುದನ್ನು ಬಿಟ್ಟು ನನಗೆ ಬೇರೆ ಆಯ್ಕೆಯಿಲ್ಲ. ಎಂದು ರಾಜ್ಯಪಾಲರು ಪತ್ರದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿಯ ಶೈಕ್ಷಣಿಕ ಅರ್ಹತೆ ಬಗ್ಗೆ ಮಾನನಷ್ಟ ಪ್ರಕರಣ; ಅರವಿಂದ್ ಕೇಜ್ರಿವಾಲ್‌ ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್

ರಾಜ್ಯಪಾಲರ ಎಚ್ಚರಿಕೆಗೆ ಪ್ರತಿಕ್ರಿಯಿಸಿದ ಎಎಪಿ ನಾಯಕ ಮಲ್ವಿಂದರ್ ಸಿಂಗ್ ಕಾಂಗ್ ಅವರು ರಾಜ್ಯಪಾಲರು ಸಜ್ಜನಿಕೆಯನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.

“ಭಾರತದ ಸಂವಿಧಾನವು ಚುನಾಯಿತ ಜನರಿಗೆ ಅಧಿಕಾರ ನೀಡುತ್ತದೆ. ರಾಜ್ಯಪಾಲರ ಇಂತಹ ಬೆದರಿಕೆ ಮತ್ತು ಎಚ್ಚರಿಕೆ, ರಾಷ್ಟ್ರಪತಿ ಆಳ್ವಿಕೆ ಹೇರುವ ಬೆದರಿಕೆ ನೋಡಿದರೆ ಬಿಜೆಪಿಯ ಕಾರ್ಯಸೂಚಿಯು ರಾಜ್ಯಪಾಲರಲ್ಲಿ ಹೇಳಿಸಿದಂತಿದೆ ಎಂದು ಕಾಂಗ್ ಹೇಳಿದ್ದಾರೆ. ರಾಷ್ಟ್ರಪತಿ ಆಳ್ವಿಕೆ ಹೇರಲು ಬಯಸಿದರೆ, ಮಣಿಪುರದಲ್ಲಿ, ಹರ್ಯಾಣದಲ್ಲಿ ಮಾಡಬೇಕು ಎಂದು ನಾನು ರಾಜ್ಯಪಾಲರಿಗೆ ಹೇಳಲು ಬಯಸುತ್ತೇನೆ. ಪಂಜಾಬ್ ಸರ್ಕಾರವು ಸಾಂವಿಧಾನಿಕ ಚೌಕಟ್ಟಿನೊಳಗೆ ಕೆಲಸ ಮಾಡುತ್ತಿದೆ. ರಾಜ್ಯಪಾಲರಿಗೆ ಇರುವ ಏಕೈಕ ಅಜೆಂಡಾ ಎಂದರೆ ಬಿಜೆಪಿಯೇತರ ರಾಜ್ಯ ಸರ್ಕಾರಗಳಲ್ಲಿ ಬಿಜೆಪಿಯ ಅಜೆಂಡಾವನ್ನು ಮುಂದಕ್ಕೆ ಕೊಂಡೊಯ್ಯುವುದು ಎಂದು ಎಎಪಿ ನಾಯಕ ಆರೋಪಿಸಿದ್ದಾರೆ.

ವಿರೋಧ ಪಕ್ಷದ ಆಡಳಿತವಿರುವ ಇತರ ರಾಜ್ಯಗಳಾದ ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಕೂಡ ರಾಜ್ಯ ಸರ್ಕಾರದ ಕಾರ್ಯನಿರ್ವಹಣೆಯಲ್ಲಿ ರಾಜ್ಯಪಾಲರ ಹಸ್ತಕ್ಷೇಪವನ್ನು ಆರೋಪಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಜೈಲಿನಲ್ಲಿ ಇರುವ ಕೈದಿಗೆ ಹಾಡುವ ಅವಕಾಶ ನೀಡಿದ ಕೆ. ಕಲ್ಯಾಣ್
ಜೈಲಿನಲ್ಲಿ ಇರುವ ಕೈದಿಗೆ ಹಾಡುವ ಅವಕಾಶ ನೀಡಿದ ಕೆ. ಕಲ್ಯಾಣ್
ಮಚ್ಚಿನೊಂದಿಗೆ ಆರೋಪಿ ನ್ಯಾಯಾಲಯ ಪ್ರವೇಶಿಸಿದ್ದು ಪೊಲೀಸರ ಕರ್ತವ್ಯಲೋಪ
ಮಚ್ಚಿನೊಂದಿಗೆ ಆರೋಪಿ ನ್ಯಾಯಾಲಯ ಪ್ರವೇಶಿಸಿದ್ದು ಪೊಲೀಸರ ಕರ್ತವ್ಯಲೋಪ
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ಬಲಿಪಡೆದ ಬಿಎಂಟಿಸಿ ಬಸ್
ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ಬಲಿಪಡೆದ ಬಿಎಂಟಿಸಿ ಬಸ್