ದೆಹಲಿ ಸೆಪ್ಟೆಂಬರ್ 12: ಪ್ರತಿದಿನ ಕಚೇರಿಯಲ್ಲಿ ಕೆಲಸ ಮುಗಿಸಿದ ನಂತರ ಮೂರು ಕಿಲೋಮೀಟರ್ ಓಟದೊಂದಿಗೆ ಆರಂಭವಾದ ಅಜ್ಮೇರ್ನ ಈ ಯುವತಿಯ ಈ ಪ್ರಯಾಣವು 87 ದಿನಗಳಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ 4,000 ಕಿಮೀ ಸೇರಿದಂತೆ ಐದು ಗಿನ್ನಿಸ್ ದಾಖಲೆಗಳ (Guinness World records) ನಂತರವೂ ಮುಂದುವರಿದಿದೆ. ಅಜ್ಮೇರ್ನಲ್ಲಿ (Ajmer) ಜನಿಸಿದ ಸೂಫಿಯಾ ಸೂಫಿಗೆ (Sufiya Sufi), ಓಟವು ಕೇವಲ ದಾಖಲೆಗಳನ್ನು ಮುರಿಯುವುದು ಮಾತ್ರವಲ್ಲ. ತನ್ನ ಹೆಗಲ ಮೇಲಿರುವ ಎಲ್ಲಾ ಹೊರೆಗಳನ್ನು ಇಳಿಸಲು, ದೇಶವನ್ನು ನೋಡಲು, ಅಪರಿಚಿತರೊಂದಿಗೆ ಸಂಪರ್ಕಗಳನ್ನು ಕಂಡುಕೊಳ್ಳಲು ಮತ್ತು 9-ಗಂಟೆಗಳ ಪಾಳಿಯಿಂದ “ಮುಕ್ತ” ವಾಗಿರಲು ಇರುವ ವಿಧಾನ. ಈ ಓಟದ ಮೂಲಕ ಸೂಫಿ ತನ್ನನ್ನು ತಾನೇ ಅರಿತುಕೊಳ್ಳುವುದು, ತನ್ನ ದೇಹದ ಮಿತಿಗಳನ್ನು ತಿಳಿದುಕೊಳ್ಳುವುದು ಮತ್ತು ಸವಾಲುಗಳನ್ನೂ ಎದುರಿಸುವುದನ್ನು ಕಲಿತಿದ್ದಾರೆ.
ನಾನು ದೆಹಲಿಯ ಐಜಿಐ ವಿಮಾನ ನಿಲ್ದಾಣದಲ್ಲಿ ಬ್ಯಾಗೇಜ್ ನಿರ್ವಹಣೆ ಅಧಿಕಾರಿಯಾಗಿ ಒಂದು ದಶಕದ ಕಾಲ ಕೆಲಸ ಮಾಡಿದ್ದೇನೆ. ವಿಮಾನಯಾನ ಉದ್ಯಮಕ್ಕೆ ಸೇರುವುದು ಯಾವಾಗಲೂ ಕನಸಾಗಿದ್ದರೂ, ರೊಬೊಟಿಕ್ ವೇಳಾಪಟ್ಟಿ ನನ್ನ ಆರೋಗ್ಯವನ್ನು ಹಾಳುಮಾಡುತ್ತಿದೆ. ಇದು ನನಗೆ ‘ಹೊರಗೆ’ ಇರಲು ಯಾವುದೇ ಅವಕಾಶವನ್ನು ನೀಡುತ್ತಿಲ್ಲ ಎಂದು ನಾನು ಅರಿತುಕೊಂಡೆ. ನಿಧಾನವಾಗಿ, ನಾನು ಮ್ಯಾರಥಾನ್‌ಗಳಲ್ಲಿ ಭಾಗವಹಿಸಲು ಪ್ರಾರಂಭಿಸಿದೆ. ಅಂತಿಮವಾಗಿ ವೃತ್ತಿಪರ ಓಟದ ತರಬೇತುದಾರನನ್ನು ನೇಮಿಸಿಕೊಂಡೆ. ಆ ಸಮಯದಲ್ಲಿ, ಟಾರ್ಮ್ಯಾಕ್ ನನ್ನ ಉತ್ತಮ ಸ್ನೇಹಿತ ಎಂದು ನನಗೆ ತಿಳಿದಿತ್ತು ಎಂದು ಐಎಎನ್ಎಸ್ ಸುದ್ದಿಸಂಸ್ಥೆ ಜತೆ ಮಾತನಾಡಿದ 37ರ ಹರೆಯದ ಸೂಫಿ ಹೇಳಿದ್ದಾರೆ.
ಮನಾಲಿ-ಲೇಹ್ ಸರ್ಕ್ಯೂಟ್ ಅನ್ನು ಕೇವಲ 97 ಗಂಟೆಗಳಲ್ಲಿ ಓಡಿದ ನಂತರ ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿ ವಿಶ್ವದ ಅತ್ಯಂತ ವೇಗದ ಓಟಗಾರ್ತಿಯಾದೆ. ಇದು ತಾನು ಎದುರಿಸಿದ ದೊಡ್ಡ ಸವಾಲುಗಳಲ್ಲಿ ಒಂದಾಗಿತ್ತು. ಅದನ್ನು 100 ಗಂಟೆಗಳ ಒಳಗೆ ಮುಗಿಸಲು ನಾನು ಎರಡು ಬಾರಿ ಪಾಲ್ಗೊಂಡೆ ಅಂತಾರೆ ಅವರು. ನಾನು ಜುಲೈನಲ್ಲಿ ಮೊದಲ ಬಾರಿಗೆ ಪ್ರಯತ್ನಿಸಿದಾಗ, ಕೆಲವು ವೈದ್ಯಕೀಯ ಸಮಸ್ಯೆಗಳಿಂದಾಗಿ ಇದು 113 ಗಂಟೆಗಳನ್ನು ತೆಗೆದುಕೊಂಡಿತು. ಆದಾಗ್ಯೂ, ನನ್ನ ದೇಹವು ಈಗಾಗಲೇ ಒಗ್ಗಿಕೊಂಡಿರುವುದನ್ನು ಪರಿಗಣಿಸಿ, ನಾನು 10 ದಿನಗಳ ನಂತರ ಮತ್ತೆ ಪ್ರಯತ್ನಿಸಿದೆ. ಅದರಲ್ಲಿ ನಾನು ಯಶಸ್ವಿಯಾದೆ ಅಂತಾರೆ ಸೂಫಿ.
ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಸಾಹಸ ಕ್ರೀಡೆಯಾಗಿ ಪರಿಗಣಿಸಿಲ್ಲ ಎಂದು ಒಪ್ಪಿಕೊಳ್ಳುವ ಸೂಫಿ, ಇದೀಗ ಅಧಿಕೃತವಾಗಿ ತನ್ನ ಹೆಸರಿಗೆ ‘ರನ್ನರ್’ ಎಂದು ಸೇರಿಸಿದ್ದಾರೆ. ಇದನ್ನು ಗುರುತಿಸಲು ದೊಡ್ಡ ಹೋರಾಟವಾಗಿದೆ ಎಂದು ಅವರು ಹೇಳಿದ್ದಾರೆ. ಕೇಂದ್ರ ಅಥವಾ ರಾಜ್ಯ ಸರ್ಕಾರಗಳಿಂದ ಯಾವುದೇ ಬೆಂಬಲವಿಲ್ಲದೆ ಸೈಕ್ಲಿಸ್ಟ್ ಆಗಿರುವ ತನ್ನ ಸಂಗಾತಿಯೇ ಒಂದು ದೊಡ್ಡ ಪ್ರೇರಣೆ ಎಂದು ಹೇಳುವ ಸೂಫಿ,”ಒಬ್ಬರು ನಿರಂತರವಾಗಿ ಓಡುತ್ತಾ ಇರುವುದಾದರೆ ಬದುಕಿಗೆ ಹಣವು ಅನಿವಾರ್ಯವಾಗಿದೆ. ಇಲ್ಲಿಯವರೆಗೆ, ನಾವು ಕ್ರೌಡ್‌ಫಂಡಿಂಗ್‌ನೊಂದಿಗೆ ನಿರ್ವಹಿಸುತ್ತಿದ್ದೇವೆ. ಇದು ಹೊಸ ಕ್ರೀಡೆಯಾಗಿದೆ. ಇದು ಗುರುತಿಸಲು ಸಾಕಷ್ಟು ಹೋರಾಟವಾಗಿದೆ. ನನಗೆ ಇನ್ನೂ ಸರ್ಕಾರದಿಂದ ಬೆಂಬಲ ಸಿಕ್ಕಿಲ್ಲ. ಆದರೆ ನಾವು ಸರ್ಕಾರದಿಂದ ಅಲ್ಟ್ರಾ ರನ್ನಿಂಗ್ ಮಾನ್ಯತೆ ಪಡೆಯಲು ಪ್ರಯತ್ನಿಸುತ್ತಿದ್ದೇವೆ ಮತ್ತು ನಾವು ಖಾಸಗಿ ಕಂಪನಿಗಳಿಂದ ಪ್ರಾಯೋಜಕತ್ವವನ್ನು ಪಡೆದಿದ್ದೇವೆ ಅಂತಾರೆ.
ಇದನ್ನೂ ಓದಿ: ನೂತನ ಸಂಸತ್ ಕಟ್ಟಡದಲ್ಲಿ ವಿಶೇಷ ಅಧಿವೇಶನ, ಸಿಬ್ಬಂದಿ ಸಮವಸ್ತ್ರದಲ್ಲಿ ಕೂಡ ಬದಲಾವಣೆ
ಪ್ರತಿಯೊಬ್ಬರೂ ವಿಭಿನ್ನವಾದ ಸವಾಲನ್ನು ಎದುರಿಸಿದ್ದೇನೆ. ಹವಾಮಾನದ ಬದಲಾವಣೆ ಆರೋಗ್ಯದ ಪರಿಣಾಮ ಬೀರುತ್ತದೆ. ಪ್ರತಿ ಬಾರಿಯೂ ಹೊಸ ಸವಾಲುಗಳು ಇದ್ದೇ ಇರುತ್ತವೆ, ಒಟ್ಟಿನಲ್ಲಿ ಹೇಳಬೇಕಾದರೆ ಅದೊಂಥರಾ ವಿಶಿಷ್ಟ ಖುಷಿ.
ಈಗ ಎರಡನೇ ಬಾರಿಗೆ ಕತಾರ್‌ನಾದ್ಯಂತ ಓಡಲು ಸಿದ್ಧವಾಗಿದ್ದಾರೆ ಸೂಫಿ. 2025 ರಲ್ಲಿ ಈಕೆ ‘ರನ್ ಅರೌಂಡ್ ದಿ ಗ್ಲೋಬ್’ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ.ಅಲ್ಲಿ ಅವರು 680 ದಿನಗಳಲ್ಲಿ 30,000 ಕಿಮೀ ಓಡುತ್ತಾರೆ. ಈ ಸವಾಲನ್ನು ಸ್ವೀಕರಿಸಿದ ಮೊದಲ ಮಹಿಳಾ ಓಟಗಾರ್ತಿಯಾಗಿದ್ದಾರೆ. ಇದಕ್ಕಾಗಿ ನಾನು ಸಿದ್ಧತೆ ನಡೆಸುತ್ತಿದ್ದೇನೆ ಎಂದು ಈ ಅಥ್ಲೀಟ್ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ