ನೂತನ ಸಂಸತ್ ಕಟ್ಟಡದಲ್ಲಿ ವಿಶೇಷ ಅಧಿವೇಶನ, ಸಿಬ್ಬಂದಿ ಸಮವಸ್ತ್ರದಲ್ಲಿ ಕೂಡ ಬದಲಾವಣೆ
ನೂತನ ಸಂಸತ್ ಭವನದಲ್ಲಿ ಸೆಪ್ಟೆಂಬರ್ 18ರಿಂದ ವಿಶೇಷ ಅಧಿವೇಶನ ಆರಂಭವಾಗಲಿದ್ದು ಸಿಬ್ಬಂದಿಯ ಸಮವಸ್ತ್ರದಲ್ಲಿ ಬದಲಾವಣೆ ಮಾಡಲಾಗಿದೆ. ಮಾರ್ಷಲ್ಗಳಿಗೆ ಕುರ್ತಾ, ಭದ್ರತಾ ಅಧಿಕಾರಿಗಳಿಗೆ ಹೊಸ ಸಮವಸ್ತ್ರ, ಮಹಿಳಾ ಉದ್ಯೋಗಿಗಳಿಗೆ ಹೊಸ ವಿನ್ಯಾಸದ ಸೀರೆಯನ್ನು ಸಮವಸ್ತ್ರವಾಗಿಸಲಾಗುತ್ತಿದೆ. ಮೂಲಗಳ ಪ್ರಕಾರ, ಸೆಪ್ಟೆಂಬರ್ 19 ರಂದು ಗಣೇಶ ಚತುರ್ಥಿಯ ದಿನದಂದು ಪೂಜೆ ಮಾಡಿ ಹಳೆಯ ಸಂಸತ್ ಭವನದಿಂದ ಹೊಸ ಸಂಸತ್ ಭವನಕ್ಕೆ ಪ್ರವೇಶ ಮಾಡಲಾಗುತ್ತದೆ.

ಸೆಪ್ಟೆಂಬರ್ 18ರಂದು ಮೊದಲ ದಿನ ಹಳೆ ಸಂಸತ್ ಭವನದಲ್ಲಿಯೇ ಸಭೆ ನಡೆಯಲಿದೆ. ಈ ದಿನ, ಹಳೆಯ ಸಂಸತ್ ಭವನ ನಿರ್ಮಾಣದಿಂದ ಇಲ್ಲಿಯವರೆಗಿನ ನೆನಪುಗಳನ್ನು ಚರ್ಚಿಸಲಾಗುವುದು.
ಪೂಜೆಯ ನಂತರ, ಹೊಸ ಸಂಸತ್ತಿನ ಕಟ್ಟಡಕ್ಕೆ ಪ್ರವೇಶ ಮಾಡಲಾಗುವುದು ಮತ್ತು ಉಭಯ ಸದನಗಳ ಜಂಟಿ ಸಭೆಯನ್ನು ಸಹ ನಡೆಸಬಹುದು. ಮೂಲಗಳ ಪ್ರಕಾರ, ಸಂಸತ್ ಭವನದ ನೌಕರರಿಗೆ ಹೊಸ ಸಮವಸ್ತ್ರವನ್ನು ವಿನ್ಯಾಸಗೊಳಿಸಲಾಗಿದೆ. ಇದನ್ನು NIFT ವಿನ್ಯಾಸಗೊಳಿಸಿದೆ. ಸಂಸತ್ತಿನ ಈ ಅಧಿವೇಶನದಲ್ಲಿ ಸರ್ಕಾರ ಒಂದು ರಾಷ್ಟ್ರ, ಒಂದು ಚುನಾವಣೆ ಎಂಬ ಮಸೂದೆಯನ್ನು ತರಬಹುದು.
ಸಂಸತ್ತಿನ ವಿಶೇಷ ಅಧಿವೇಶನ ಕರೆದಿದ್ದಕ್ಕಾಗಿ ಪ್ರತಿಪಕ್ಷಗಳು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದವು. ಈ ಕುರಿತು ಸೋನಿಯಾ ಗಾಂಧಿ ಪತ್ರ ಬರೆದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಸಾಮಾನ್ಯ ವಿಧಾನದಂತೆ ಸಂಸತ್ತಿನ ವಿಶೇಷ ಅಧಿವೇಶನ ಕರೆಯಲಾಗಿದೆ ಎಂದು ಹೇಳಿದ್ದರು.
ಮತ್ತಷ್ಟು ಓದಿ: Parliament Special Session: ಸೆಪ್ಟೆಂಬರ್ 18 ರಿಂದ 22ರವರೆಗೆ ಸಂಸತ್ ವಿಶೇಷ ಅಧಿವೇಶನ
ಮಾರ್ಷಲ್ಗಳು ಸಾಭಾಧ್ಯಕ್ಷರ ಆಸನದ ಬಳಿ ನಿಂತು ದೈನಂದಿನ ಕೆಲಸದಲ್ಲಿ ಅವರಿಗೆ ಸಹಾಯ ಮಾಡುತ್ತಾರೆ. ಮಾರ್ಷಲ್ಗಳು ಸಫಾರಿ ಸೂಟ್ನ ಬದಲಿಗೆ ಕೆನೆ ಬಣ್ಣದ ಕುರ್ತಾ ಪೈಜಾಮವನ್ನು ಧರಿಸುತ್ತಾರೆ. ಅವರ ತಲೆಯ ಮೇಲೆ ಟರ್ಬನ್ ಬದಲಿಗೆ ಮಣಿಪುರಿ ಟೋಪಿ ಇರಲಿದೆ.
ಐದು ಇಲಾಖೆಗಳ ಅಧಿಕಾರಿಗಳು ತಿಳಿ ನೀಲಿ ಬಣ್ಣದ ಸೂಟ್ ಬದಲಿಗೆ ಕಮಲದ ಚಿತ್ರವಿರುವ ಬಟ್ಟೆ ಧರಿಸಲಿದ್ದಾರೆ. ಕೆನೆ ಬಣ್ಣದ ಜಾಕೆಟ್ ತಿಳಿ ಬಿಳಿ ಬಣ್ಣದ ಪ್ಯಾಂಟ್ ಧರಿಸಲಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ