Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರ್ಟೂನ್ ಚಟಕ್ಕೆ ಬಿದ್ದಿದ್ದ ಬಾಲಕ ಅನುಮಾನಾಸ್ಪದ ಸಾವು

ಡಿಂಪಲ್ ಸೂರ್ಯ ಕಾರ್ಟೂನ್‌ಗಳನ್ನು ಇಷ್ಟಪಡುತ್ತಿದ್ದ. ಆತ ಹೆಚ್ಚಾಗಿ ಟಿವಿ ಮತ್ತು ಸೆಲ್ ಫೋನ್‌ನಲ್ಲಿ ಕಾರ್ಟೂನ್ ನೋಡುತ್ತಿದ್ದ. ಈಗಲೂ ಅಷ್ಟೇ ಆಟವಾಡುತ್ತಲೇ ಪ್ರಾಣ ಕಳೆದುಕೊಂಡಿದ್ದಾನೆ ಎನ್ನುತ್ತಾರೆ ಕುಟುಂಬಸ್ಥರು. ಕಾರ್ಟೂನ್ ಹೆಚ್ಚಾಗಿ ನೋಡುತ್ತಿದ್ದ ಸೂರ್ಯ, ಹಿಂದೆ ಒಮ್ಮೆ ಮಂಚಕ್ಕೆ ಹಗ್ಗ ಸುತ್ತಿ ಕೊರಳಿಗೆ ಕಟ್ಟಿಕೊಳ್ಳಲು ಯತ್ನಿಸಿದ್ದ ಎನ್ನುತ್ತಾರೆ ತಂದೆ ಶ್ರೀನಿವಾಸ ರಾವ್.

ಕಾರ್ಟೂನ್ ಚಟಕ್ಕೆ ಬಿದ್ದಿದ್ದ ಬಾಲಕ ಅನುಮಾನಾಸ್ಪದ ಸಾವು
ಕಾರ್ಟೂನ್ ಚಟಕ್ಕೆ ಬಿದ್ದಿದ್ದ ಬಾಲಕ ಅನುಮಾನಾಸ್ಪದ ಸಾವು
Follow us
ಸಾಧು ಶ್ರೀನಾಥ್​
|

Updated on: Sep 12, 2023 | 1:45 PM

ಆ ಹುಡುಗನಿಗೆ (boy) ಕಾರ್ಟೂನ್ ನೋಡುವುದು ಬಲು ಖುಷಿ. ಟಿವಿ ಆನ್ ಮಾಡಿದಾಗಲೆಲ್ಲ ಕಾರ್ಟೂನ್ ಚಾನೆಲ್ ಗೆ ಅಂಟಿಕೊಂಡಿರುತ್ತಿದ್ದ. ಸೆಲ್ ಫೋನ್ ಕೊಟ್ಟರೆ ಅದರಲ್ಲೂ ಕಾರ್ಟೂನ್ ನೋಡುತ್ತಿದ್ದ. ಆ ಕಾರ್ಟೂನ್ (cartoon) ಗಳಲ್ಲಿ ಇದ್ದಂತೆ ನಟಿಸಿ, ಆಡುತ್ತಿದ್ದ. ಹಿಂದೆ ಒಮ್ಮೆ ಮಂಚಕ್ಕೆ ಹಗ್ಗ ಕಟ್ಟಿ, ಉರುಳು ಹಾಕಿಕೊಳ್ಳಲು ಪ್ರಯತ್ನಿಸಿದ್ದ. ಮೇಲಾಗಿ ಸಾವಿನ ಆಟ ಆಡುತ್ತೇನೆ ಎಂದು ತಾಯಿಗೆ ಹೇಳಿ ಎಚ್ಚರಿಸಿದ್ದ. ಇದರಿಂದ ಆತಂಕಗೊಂಡ ತಾಯಿ ಹಲವು ಬಾರಿ ಛೀಮಾರಿ ಹಾಕಿ, ಬುದ್ಧಿವಾದ ಹೇಳಿದ್ದಾಳೆ. ಆದರೆ.. ಮುಂದೇನಾಯ್ತು.. ಆ ಹುಡುಗ ಕೊನೆಗೂ ಕುಣಿಕೆಗೆ ಕೊರಳೊಡ್ಡಿ ಪ್ರಾಣ ಕಳೆದುಕೊಂಡುಬಿಟ್ಟಿದ್ದಾನೆ. ಮನೆ ಮುಂದೆ ಹಗ್ಗದಿಂದ ನೇತಾಡುತ್ತಿದ್ದ ಮಗನನ್ನು ನೋಡಿ ತಾಯಿ ಕಣ್ಣೀರು ಹಾಕಿದ್ದಾರೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ ಫಲಕಾರಿಯಾಗಲಿಲ್ಲ. ವಿಶಾಖಪಟ್ಟಣದಲ್ಲಿ (Visakhapatnam) ನಡೆದ ಈ ದುರಂತ ಕುಟುಂಬಸ್ಥರನ್ನು ತೀವ್ರ ದುಃಖದಲ್ಲಿ ಮುಳುಗಿಸಿದೆ. ಅಕ್ಕಪಕ್ಕದವರಲ್ಲಿ ಕಣ್ಣೀರು ತರಿಸಿದೆ.

ಕೈಲಾಸಪುರಂನ ಕಸ್ತೂರಿ ನಗರದಲ್ಲಿ ಈ ಅಚಾನಕ್​ ದುರಂತ ನಡೆದಿದೆ. ಎಲೆಕ್ಟ್ರಿಷಿಯನ್ ಆಗಿರುವ ಪೈಡಾ ಶ್ರೀನಿವಾಸ ರಾವ್ ಅವರು ಪತ್ನಿ ಲಕ್ಷ್ಮಿ ಮತ್ತು ಎಂಟು ವರ್ಷದ ಬಾಲಕ ಡಿಂಪಲ್ ಸೂರ್ಯ ಅವರೊಂದಿಗೆ ವಾಸಿಸುತ್ತಿದ್ದಾರೆ. ಎಂಟು ವರ್ಷದ ಆ ಬಾಲಕ… ಆಟವಾಡುತ್ತಿದ್ದಾಗ ಕೊರಳಿಗೆ ಹಗ್ಗ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾನೆ. ಡಿಂಪಲ್ ಸೂರ್ಯ ಖಾಸಗಿ ಶಾಲೆಯಲ್ಲಿ ಮೂರನೇ ತರಗತಿ ಓದುತ್ತಿದ್ದಾನೆ. ಕಿಟಕಿಯ ಮೇಲಿದ್ದ ವಿದ್ಯುತ್ ಪೈಪ್​ ಮೇಲೆ ಹಾಕಿದ್ದ ಹಗ್ಗ ಬಾಲಕನ ಕುತ್ತಿಗೆಗೆ ಬಿಗಿದಿರುವುದು ಕಂಡು ಬಂದಿದೆ.

ಅನುಮಾನಾಸ್ಪದ ಸಾವು…

ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಶವಾಗಾರಕ್ಕೆ ರವಾನಿಸಿದ್ದಾರೆ. ತನಿಖೆ ಪ್ರಾರಂಭವಾಗಿದೆ. ಸೋಮವಾರ ಸಂಜೆ ಶಾಲೆಯಿಂದ ಬಂದ ಬಳಿಕ.. ಸ್ಕೂಲ್ ಬ್ಯಾಗ್ ಅನ್ನು ಮನೆಯಲ್ಲಿಟ್ಟು.. ವರಾಂಡದಲ್ಲಿ ಆಟವಾಡುತ್ತಿದ್ದ. ತಾಯಿ ಲಿವಿಂಗ್ ರೂಮಿನೊಳಗೆ ಟಿವಿ ನೋಡುತ್ತಿದ್ದರು. ತಂದೆ ಶ್ರೀನಿವಾಸ ರಾವ್ ಮನೆಯಲ್ಲಿ ಇರಲಿಲ್ಲ. ಆದರೆ ಮನೆ ಮುಂದೆ ಹೋಗುತ್ತಿದ್ದ ಮಹಿಳೆಯೊಬ್ಬರು ಜೋರಾಗಿ ಕಿರುಚಿದ್ದಾರೆ. ಒಳಗಿನಿಂದ ಬಂದ ತಾಯಿ ಶ್ರೀಲಕ್ಷ್ಮಿ, ಮಗ ಮೆಟ್ಟಿಲು ಪಕ್ಕದಲ್ಲಿ ನೇಣು ಬಿಗಿದುಕೊಂಡಿರುವುದನ್ನು ಕಂಡು ಆತಂಕಗೊಂಡಿದ್ದಾರೆ. ಸಾವರಿಸಿಕೊಂಡು ಸೀರೆಯನ್ನು ಚಾಕುವಿನಿಂದ ಕತ್ತರಿಸಿ ಹುಡುಗನನ್ನು ಕೆಳಗೆ ಇಳಿಸಿದ್ದಾರೆ. ಕೂಡಲೇ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಯಾವುದೇ ಪ್ರಯೋಜನವಾಗಿಲ್ಲ. ವಿದ್ಯುತ್ ಪೈಪ್ ಕುಣಿಕೆಯಾಗಿ ಬಾಲಕನ ಕತ್ತು ಹಿಸುಕಿ ಡಿಂಪಲ್ ಸೂರ್ಯ ಪ್ರಾಣ ಕಳೆದುಕೊಂಡಿರಬಹುದು ಎಂದು ಶಂಕಿಸಲಾಗಿದೆ.

ಹಿಂದೆಯೂ ಒಮ್ಮೆ ಹೀಗೆಯೇ ಪ್ರಯತ್ನಿಸಿದ್ದ ಬಾಲಕ

ಡಿಂಪಲ್ ಸೂರ್ಯ ಕಾರ್ಟೂನ್‌ಗಳನ್ನು ಇಷ್ಟಪಡುತ್ತಿದ್ದ. ಆತ ಹೆಚ್ಚಾಗಿ ಟಿವಿ ಮತ್ತು ಸೆಲ್ ಫೋನ್‌ನಲ್ಲಿ ಕಾರ್ಟೂನ್ ನೋಡುತ್ತಿದ್ದ. ಈಗಲೂ ಅಷ್ಟೇ ಆಟವಾಡುತ್ತಲೇ ಪ್ರಾಣ ಕಳೆದುಕೊಂಡಿದ್ದಾನೆ ಎನ್ನುತ್ತಾರೆ ಕುಟುಂಬಸ್ಥರು. ಕಾರ್ಟೂನ್ ಹೆಚ್ಚಾಗಿ ನೋಡುತ್ತಿದ್ದ ಸೂರ್ಯ, ಹಿಂದೆ ಒಮ್ಮೆ ಮಂಚಕ್ಕೆ ಹಗ್ಗ ಸುತ್ತಿ ಕೊರಳಿಗೆ ಕಟ್ಟಿಕೊಳ್ಳಲು ಯತ್ನಿಸಿದ್ದ ಎನ್ನುತ್ತಾರೆ ತಂದೆ ಶ್ರೀನಿವಾಸ ರಾವ್. ಸಾವಿನ ಆಟ ಆಡುತ್ತಿರುವುದಾಗಿ ಆಗಾಗ ಹೇಳುತ್ತಿದ್ದ. ತಾಯಿ ಆಗೆಲ್ಲಾ ಅವನ ಕಿವಿಹಿಂಡಿದ್ದರು ಎಂದು ಸಂಬಂಧಿಕರು ಹೇಳುತ್ತಾರೆ.

ಡಿಂಪಲ್ ಸೂರ್ಯ ಸಾವಿನಿಂದ ಕಸ್ತೂರಿ ನಗರದಲ್ಲಿ ದುಃಖ ಮಡುಗಟ್ಟಿದೆ. ತಂದೆ ಎಲೆಕ್ಟ್ರಿಷಿಯನ್. ಒಬ್ಬನೇ ಮಗನ ಸಾವಿನಿಂದ ಕುಟುಂಬ ತತ್ತರಿಸಿದೆ. ಸದ್ಯ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಮರಣೋತ್ತರ ಪರೀಕ್ಷೆ ಮುಗಿದ ನಂತರ ಸಿಕ್ಕ ಸಾಕ್ಷ್ಯಗಳನ್ನು ಕಲೆಹಾಕಿ ಡಿಂಪಲ್ ಸೂರ್ಯ ಸಾವಿನ ಬಗ್ಗೆ ಪೊಲೀಸರು ಒಂದು ತೀರ್ಮಾನಕ್ಕೆ ಬರುವ ಸಾಧ್ಯತೆ ಇದೆ. ಅದೇನೇ ಇರಲಿ.. ಸದಾ ಕಣ್ಣಮುಂದೆ ಆಟವಾಡುತ್ತಿದ್ದ ಡಿಂಪಲ್ ಸೂರ್ಯ ಇದ್ದಕ್ಕಿದ್ದಂತೆ ದೂರವಾಗಿರುವುದು ಕುಟುಂಬವನ್ನು ಹತಾಶೆಯ ಲೋಕಕ್ಕೆ ತಳ್ಳಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ