ರಾಷ್ಟ್ರೀಯ ಸ್ವಯಂ ಸೇವಕ ಸಂಘ(RSS)ನ ಶಾಖೆಯಾದ ಅಖಿಲ ಭಾರತೀಯ ಸಂಸ್ಕೃತ ಪರಿಷತ್ತು ಕೋಲ್ಕತ್ತಾದ ಬ್ರಿಗೇಡ್ ಮೈದಾನಲ್ಲಿ ಭಗವದ್ಗೀತೆ ಪಠಣ ಕಾರ್ಯಕ್ರಮವನ್ನು ಆಯೋಜಿಸಿದೆ. ಮೂಲಗಳ ಪ್ರಕಾರ, ದೇಶದ ರಾಷ್ಟ್ರಪತಿ ದ್ರೌಪದಿ ಮುರ್ಮು, ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನೂ ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತದೆ. ಲೋಕಸಭೆ ಚುನಾವಣೆಗೂ ಮುನ್ನ ಬೃಹತ್ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ.
ಈ ಕಾರ್ಯಕ್ರಮವು ಡಿಸೆಂಬರ್ 24ರಂದು ನಡೆಯಲಿದೆ, ಹಿಂದೂ ಸಂಪ್ರದಾಯ, ಸಾಂಸ್ಕೃತಿಕ ಪ್ರಜ್ಞೆಯನ್ನು ಜಾಗೃತಗೊಳಿಸಲು ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಕಾರ್ಯಕ್ರಮ ಮೂರು ಗಂಟೆಗಳ ಕಾಲ ಇರಲಿದೆ, ಇದರಲ್ಲಿ ಐದು ಅಧ್ಯಾಯಗಳನ್ನು ತಾವು ಓದುವುದಾಗಿ ಅಖಿಲ ಭಾರತೀಯ ಸಂಸ್ಕೃತ ಪರಿಷತ್ತಿನ ಗೌರವ್ ತಿಳಿಸಿದ್ದಾರೆ. ಉತ್ತರ ಹಾಗೂ ಪಶ್ಚಿಮ ಬಂಗಾಳ ಹಾಗೂ ಹೊರಗಡೆಯಿಂದಲೂ ಜನರು ಆಗಮಿಸುತ್ತಿದ್ದಾರೆ, ಡಿಸೆಂಬರ್ 24 ರಂದು ಗೀತಾ ಜಯಂತಿಯಂದು ಈ ಕಾರ್ಯಕ್ರಮ ನಡೆಯಲಿದೆ.
ಮತ್ತಷ್ಟು ಓದಿ: Gita Jayanti 2022: ಧರ್ಮಗ್ರಂಥ ಭಗವದ್ಗೀತಾ ಆವಿರ್ಭವಿಸಿದ ದಿನ, ಗೀತಾಜಯಂತಿ ದಿನಾಂಕ, ಮಹತ್ವ, ಆಚರಣೆ ಇಲ್ಲಿದೆ
ಬ್ರಿಗೇಡ್ ಮೈದಾನವು ಫೋರ್ಟ್ ವಿಲಿಯಂ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ಇಲ್ಲಿ ಯಾವುದೇ ಕಾರ್ಯಕ್ರಮಕ್ಕೆ ಸೇನೆಯ ಅನುಮತಿ ಬೇಕಾಗುತ್ತದೆ.
ಮೂಲಗಳ ಪ್ರಕಾರ ಈಗಾಗಲೇ ಸೇನೆಯಿಂದ ಅನುಮತಿ ಪಡೆಯಲಾಗಿದೆ. ವಿವಿಧ ಮಠ, ಮಂದಿರಗಳಿಗೂ ಆಹ್ವಾನ ನೀಡಲಾಗುತ್ತದೆ.
ಬ್ರಿಗೇಡ್ನಲ್ಲಿ ಗೀತಾ ವಾಚನದ ಕುರಿತು ಸಿಪಿಎಂ ಮುಖಂಡ ಸುಜನ್ ಚಕ್ರವರ್ತಿ ಮಾತನಾಡಿ, ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಮತಾಂಧತೆ ಹಾಗೂ ಕೋಮುವಾದವನ್ನು ತುಂಬಲು ಬಿಜೆಪಿ ಸಿದ್ಧವಾಗಿದೆ. ವರ್ಷಕ್ಕೆ 2 ಕೋಟಿ ರೂ ಉದ್ಯೋಗಗಳ ಭರವಸೆ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದ್ದಾರೆ. ಮತ್ತೊಂದೆಡೆ, ತೃಣಮೂಲ ವಕ್ತಾರ ಕುನಾಲ್ ಘೋಷ್ ಮಾತನಾಡಿ, ಗೀತಾವನ್ನು ರಾಜಕೀಯಕ್ಕೆ ತರಬೇಡಿ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ