ಗೊಂದಲ ಮುಂದುವರಿದರೆ ಇಂಡಿಯಾ ಮೈತ್ರಿಕೂಟ ಯಶಸ್ವಿಯಾಗಲ್ಲ: ಕಾಂಗ್ರೆಸ್ ವಿರುದ್ಧ ಅಖಿಲೇಶ್ ಯಾದವ್ ಮತ್ತೆ ವಾಗ್ದಾಳಿ

|

Updated on: Oct 21, 2023 | 11:50 AM

ದೇಶಕ್ಕೆ 2024 ರಲ್ಲಿ ದೊಡ್ಡ ಸವಾಲಿದೆ. ಬಿಜೆಪಿ ಒಂದು ದೊಡ್ಡ ಪಕ್ಷವಾಗಿದೆ. ಅದು ಅತ್ಯಂತ ಸಂಘಟಿತವಾಗಿ ಸಜ್ಜಾಗಿದೆ. ಆದ್ದರಿಂದ ಅದನ್ನು ಎದುರಿಸಲು ಇಂಡಿಯಾ ಮೈತ್ರಿಕೂಟದಲ್ಲಿ ಯಾವುದೇ ಗೊಂದಲ ಉಂಟಾಗಬಾರದು. ನೀವು ಗೊಂದಲದಿಂದ ಬಿಜೆಪಿಯನ್ನು ಎದುರಿಸಿದರೆ, ನೀವು ಯಶಸ್ವಿಯಾಗುವುದಿಲ್ಲ ಎಂದು ಅಖಿಲೇಶ್ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗೊಂದಲ ಮುಂದುವರಿದರೆ ಇಂಡಿಯಾ ಮೈತ್ರಿಕೂಟ ಯಶಸ್ವಿಯಾಗಲ್ಲ: ಕಾಂಗ್ರೆಸ್ ವಿರುದ್ಧ ಅಖಿಲೇಶ್ ಯಾದವ್ ಮತ್ತೆ ವಾಗ್ದಾಳಿ
ಅಖಿಲೇಶ್​ ಯಾದವ್​
Follow us on

ನವದೆಹಲಿ, ಅಕ್ಟೋಬರ್​​​ 21: ಮಧ್ಯ ಪ್ರದೇಶ ಚುನಾವಣೆಗೆ ಮೈತ್ರಿ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧ ತೀವ್ರ ಅಸಮಾಧಾನಗೊಂಡಿರುವ ಸಮಾಜವಾದಿ ಪಕ್ಷದ (Samajwadi Party) ಅಧ್ಯಕ್ಷ ಅಖಿಲೇಶ್​ ಯಾದವ್(Akhilesh Yadav) ‘ಕೈ’ ಪಡೆ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ರಾಷ್ಟ್ರವ್ಯಾಪಿ ಜಾತಿ ಆಧಾರಿತ ಜನಗಣತಿಗೆ ಕಾಂಗ್ರೆಸ್ಸಿನ ಬೇಡಿಕೆಯ ಬಗ್ಗೆ ಟೀಕಾ ಪ್ರಹಾರ ನಡೆಸಿದ ಅವರು, ಇದೊಂದು ಪವಾಡ ಎಂದು ಹೇಳಿದ್ದಾರೆ. ದೇಶದ ಅತ್ಯಂತ ಹಳೆಯ ಪಕ್ಷವು ಜಾತಿ ಗಣತಿಯನ್ನು ಬೆಂಬಲಿಸಿರುವುದು ‘ಪವಾಡ’ವೇ ಸರಿ. ಹಿಂದುಳಿದ ಜಾತಿಗಳ ಬೆಂಬಲವಿಲ್ಲದೆ ಯಶಸ್ವಿಯಾಗುವುದು ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿ ಕಾಂಗ್ರೆಸ್ ಜಾತಿ ಗಣತಿಯ ಬೇಡಿಕೆಯನ್ನು ಬೆಂಬಲಿಸಿದೆ ಎಂದು ಅವರು ಟೀಕಿಸಿದ್ದಾರೆ.

ಇದೇ ಕಾಂಗ್ರೆಸ್ ಪಕ್ಷ ಜಾತಿ ಗಣತಿಯ ಅಂಕಿ-ಅಂಶಗಳನ್ನು ನೀಡಿರಲಿಲ್ಲ. ಈಗ ಜಾತಿ ಗಣತಿಯನ್ನು ಬೆಂಬಲಿಸುತ್ತಿದೆ. ಇದೊಂದು ಪವಾಡ. ಏಕೆಂದರೆ ಹಿಂದುಳಿದ ಜಾತಿಗಳ ಬೆಂಬಲವಿಲ್ಲದಿದ್ದರೆ ಅವರು ಯಶಸ್ವಿಯಾಗುವುದಿಲ್ಲ ಎಂಬುದು ಈಗ ಎಲ್ಲರಿಗೂ ತಿಳಿದಿದೆ ಎಂದು ಅಖಿಲೇಶ್ ಭದೋಹಿಯಲ್ಲಿ ಹೇಳಿರುವುದಾಗಿ ‘ಎಎನ್‌ಐ’ ಸುದ್ದಿಸಂಸ್ಥೆ ವರದಿ ಮಾಡಿದೆ.

ಕಾಂಗ್ರೆಸ್​​ನವರಿಗೆ ಈಗ ಹಿಂದುಳಿದ ಜಾತಿಗಳ ಬೆಂಬಲ ಇಲ್ಲದೆ ಯಶಸ್ವಿಯಾಗಲು ಸಾಧ್ಯವಿಲ್ಲ ಎಂಬ ಅರಿವಾಗಿದೆ. ಆದರೆ. ಅವರು ಹುಡುಕುತ್ತಿರುವ ಮತಗಳು ಈಗ ಅವರಿಗೆ ಬೆಂಬಲ ನೀಡುವುದಿಲ್ಲ ಎಂದು ಅಖಿಲೇಶ್ ಹೇಳಿದ್ದಾರೆ.

ಭಾರತೀಯ ಜನತಾ ಪಕ್ಷದ ವಿರುದ್ಧ 28 ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಯು ರಾಷ್ಟ್ರೀಯ ರಾಜಕೀಯಕ್ಕಾಗಿ ರೂಪುಗೊಂಡಿದೆಯೇ ವಿನಃ, ಪ್ರಾದೇಶಿಕ ಚುನಾವಣೆಗಳಿಗಾಗಿ ಅಲ್ಲ ಎಂದು ಕಾಂಗ್ರೆಸ್ ಹೇಳಿದ ಕೆಲವೇ ದಿನಗಳಲ್ಲಿ ಸಮಾಜವಾದಿ ಪಕ್ಷದ ಜತೆ ಒಡಕುಮೂಡಿದೆ. ಮಧ್ಯ ಪ್ರದೇಶ ಚುನಾವಣೆಗೆ ಕಾಂಗ್ರೆಸ್‌ನ 144 ಅಭ್ಯರ್ಥಿಗಳ ಪಟ್ಟಿಯನ್ನು ಸಮಾಜವಾದಿ ಪಕ್ಷವು ವಿರೋಧಿಸಿದ ನಂತರ ಉಭಯ ಪಕ್ಷಗಳ ನಡುವಣ ಅಂತರ ಹೆಚ್ಚಾಗಿದೆ.

ಇದನ್ನೂ ಓದಿ: ಮಧ್ಯಪ್ರದೇಶ ವಿಧಾನಸಭೆ ಸೀಟು ಹಂಚಿಕೆ ವಿಚಾರ: ಕಾಂಗ್ರೆಸ್​​ ವಿರುದ್ಧ ಅಖಿಲೇಶ್​ ಯಾದವ್ ಕಿಡಿ

ಕನಿಷ್ಠ ಆರು ಸ್ಥಾನಗಳನ್ನು ನೀಡುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು. ಆದರೆ ಯಾವುದನ್ನೂ ನೀಡಿಲ್ಲ ಎಂದು ಯಾದವ್ ಇತ್ತೀಚೆಗೆ ಹೇಳಿದ್ದರು.

ಇಂಡಿಯಾ ಮೈತ್ರಿಕೂಟ ಯಶಸ್ವಿಯಾಗದು ಎಂದ ಅಖಿಲೇಶ್

ಈಗಿರುವ ಗೊಂದಲವು ಮುಂದುವರಿದರೆ ಇಂಡಿಯಾ ಮೈತ್ರಿಕೂಟವು ಬಿಜೆಪಿಯನ್ನು ಸೋಲಿಸಲು ಎಂದಿಗೂ ಸಾಧ್ಯವಾಗುವುದಿಲ್ಲ ಎಂದು ಯಾದವ್ ಶುಕ್ರವಾರ ಹೇಳಿದ್ದಾರೆ. ದೇಶಕ್ಕೆ 2024 ರಲ್ಲಿ ದೊಡ್ಡ ಸವಾಲಿದೆ. ಬಿಜೆಪಿ ಒಂದು ದೊಡ್ಡ ಪಕ್ಷವಾಗಿದೆ. ಅದು ಅತ್ಯಂತ ಸಂಘಟಿತವಾಗಿ ಸಜ್ಜಾಗಿದೆ. ಆದ್ದರಿಂದ ಅದನ್ನು ಎದುರಿಸಲು ಇಂಡಿಯಾ ಮೈತ್ರಿಕೂಟದಲ್ಲಿ ಯಾವುದೇ ಗೊಂದಲ ಉಂಟಾಗಬಾರದು. ನೀವು ಗೊಂದಲದಿಂದ ಬಿಜೆಪಿಯನ್ನು ಎದುರಿಸಿದರೆ, ನೀವು ಯಶಸ್ವಿಯಾಗುವುದಿಲ್ಲ ಎಂದು ಅಖಿಲೇಶ್ ಹೇಳಿದ್ದಾರೆ.

ಮಧ್ಯಪ್ರದೇಶದಲ್ಲಿ ನವೆಂಬರ್ 17 ರಂದು ಮತದಾನ ನಡೆಯಲಿದೆ. ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ