ಮಧ್ಯಪ್ರದೇಶ ವಿಧಾನಸಭೆ ಸೀಟು ಹಂಚಿಕೆ ವಿಚಾರ: ಕಾಂಗ್ರೆಸ್​​ ವಿರುದ್ಧ ಅಖಿಲೇಶ್​ ಯಾದವ್ ಕಿಡಿ

ಕಾಂಗ್ರೆಸ್​​ ಪಕ್ಷವು ತಮಗೆ ಮೋಸ ಮಾಡಿ, ಬಿಜೆಪಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದೆ ಎಂದು ಆರೋಪಿಸಿದ ಬೆನ್ನಲ್ಲೇ ಇದೀಗ ಮತ್ತೆ ಕಾಂಗ್ರೆಸ್​ ವಿರುದ್ಧ ಕಿಡಿಕಾರಿರುವ ಉತ್ತರ ಪ್ರದೇಶ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್​ ಯಾದವ್, ಕಾಂಗ್ರೆಸ್​​​ ಸ್ಥಾನಗಳನ್ನು ನೀಡಲು ಬಯಸದಿದ್ದರೆ, ಅದನ್ನು ಮೊದಲೇ ಹೇಳಬೇಕಿತ್ತು. ಕಾಂಗ್ರೆಸ್ ಹೀಗೆಯೇ ನಡೆದುಕೊಂಡರೆ ಇವರನ್ನು ಯಾರು ನಂಬುತ್ತಾರೆ ಎಂದಿದ್ದಾರೆ.

ಮಧ್ಯಪ್ರದೇಶ ವಿಧಾನಸಭೆ ಸೀಟು ಹಂಚಿಕೆ ವಿಚಾರ: ಕಾಂಗ್ರೆಸ್​​ ವಿರುದ್ಧ ಅಖಿಲೇಶ್​ ಯಾದವ್ ಕಿಡಿ
ಎಸ್​​ಪಿ ಅಧ್ಯಕ್ಷ ಅಖಿಲೇಶ್​ ಯಾದವ್
Follow us
ಗಂಗಾಧರ​ ಬ. ಸಾಬೋಜಿ
|

Updated on:Oct 20, 2023 | 10:38 PM

ನವದೆಹಲಿ, ಅಕ್ಟೋಬರ್​​​ 20: ಉತ್ತರ ಪ್ರದೇಶ ಸಮಾಜವಾದಿ ಪಕ್ಷದ (Samajwadi Party) ಅಧ್ಯಕ್ಷ ಅಖಿಲೇಶ್​ ಯಾದವ್​ ಅವರು ಕಾಂಗ್ರೆಸ್​​ ಪಕ್ಷವು ತಮಗೆ ಮೋಸ ಮಾಡಿ, ಬಿಜೆಪಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದೆ ಎಂದು ಆರೋಪಿಸಿದ ಬೆನ್ನಲ್ಲೇ ಇದೀಗ ಮತ್ತೆ ಕಾಂಗ್ರೆಸ್​ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್​​​ ಸ್ಥಾನಗಳನ್ನು ನೀಡಲು ಬಯಸದಿದ್ದರೆ, ಅದನ್ನು ಮೊದಲೇ ಹೇಳಬೇಕಿತ್ತು. ಕಾಂಗ್ರೆಸ್ ಹೀಗೆಯೇ ನಡೆದುಕೊಂಡರೆ ಇವರನ್ನು ಯಾರು ನಂಬುತ್ತಾರೆ ಎಂದು ವಾಗ್ದಾಳಿ ಮಾಡಿದ್ದಾರೆ.

ಈ ಕುರಿತಾಗಿ ಮಾಧ್ಯದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ವಿರುದ್ಧ ಗೊಂದಲವನ್ನು ಮನಸ್ಸಿನಲ್ಲಿಟ್ಟುಕೊಂಡು ಹೋರಾಡಿದರೆ ನಾವು ಯಶಸ್ವಿಯಾಗುವುದಿಲ್ಲ. ಇಂದು ಸಮಾಜವಾದಿ ಪಕ್ಷ ತನ್ನದೇ ಆದ ಸಂಘಟನೆಯನ್ನು ಹೊಂದಿರುವ ಸ್ಥಾನಗಳಲ್ಲಿ ಮಾತ್ರ ಸ್ಪರ್ಧಿಸುತ್ತಿದೆ. ಮಧ್ಯಪ್ರದೇಶ, ಇಂಡಿಯಾ ಮೈತ್ರಿ ರಾಷ್ಟ್ರೀಯ ಮಟ್ಟದಲ್ಲಿ (ಸಂಸದೀಯ) ಚುನಾವಣೆ ಎಂದು ನನಗೆ ತಿಳಿದಿದೆ ಎಂದು ಹೇಳಿದ್ದಾರೆ.

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ನಡುವಿನ ಮೈತ್ರಿ ಮಾತುಕತೆ ಸ್ಥಗಿತವಾಗಿದ್ದು, ಇದು 2024 ರಲ್ಲಿ ಉತ್ತರ ಪ್ರದೇಶದಲ್ಲಿ ‘ಇಂಡಿಯಾ’ ಮೈತ್ರಿ ಯೋಜನೆಗಳ ಮೇಲೆ ಪರಿಣಾಮ ಬೀರಬಹುದು. ತಮ್ಮ ಪಕ್ಷವು ಎಲ್ಲಾ 80 ಸ್ಥಾನಗಳಲ್ಲಿ ಬಿಜೆಪಿ ವಿರುದ್ಧ ಕಣಕ್ಕಿಳಿಯಲಿದೆ ಎಂದು ಅಖಿಲೇಶ್​ ಯಾದವ್ ತಿಳಿಸಿದ್ದರು.

ಇದನ್ನೂ ಓದಿ: ಕಾಂಗ್ರೆಸ್-ಸಮಾಜವಾದಿ ಪಕ್ಷ ನಡುವಿನ ಭಿನ್ನಾಭಿಪ್ರಾಯ; ಇಂಡಿಯಾ ಮೈತ್ರಿಕೂಟದ ಮೇಲೆ ಪರಿಣಾಮ?

ಮಧ್ಯಪ್ರದೇಶದಲ್ಲಿ ಸಮಾಜವಾದಿ ಪಕ್ಷ ಈಗಾಗಲೇ ಒಂಬತ್ತು ಅಭ್ಯರ್ಥಿಗಳನ್ನು ಘೋಷಿಸಿದ್ದು, ಅಂತಿಮವಾಗಿ ರಾಜ್ಯದಲ್ಲಿ 35-40 ಅಭ್ಯರ್ಥಿಗಳನ್ನು ಕಣಕ್ಕಿಳಿಸಬಹುದು ಎಂದು ಪಕ್ಷದ ಮೂಲಗಳು ತಿಳಿಸಿವೆ. “ಇಂಡಿಯಾ ಮೈತ್ರಿ ರಾಷ್ಟ್ರಮಟ್ಟದಲ್ಲಿ ಅಥವಾ ರಾಜ್ಯ ಮಟ್ಟದಲ್ಲಿದೆಯೇ ಎಂಬುದನ್ನು ಕಾಂಗ್ರೆಸ್ ಸ್ಪಷ್ಟಪಡಿಸಬೇಕಿದೆ.

ರಾಜ್ಯ ಮಟ್ಟದಲ್ಲಿ ಇಲ್ಲದಿದ್ದರೆ, ಭವಿಷ್ಯದಲ್ಲಿ ಇತರ ರಾಜ್ಯಗಳ ಮಟ್ಟದಲ್ಲಿಯೂ ಇರುವುದಿಲ್ಲ. 2024 ರಲ್ಲಿ ಯುಪಿಯಲ್ಲಿ ಸೀಟು ಹಂಚಿಕೆ ಒಪ್ಪಂದದ ನಕಲಿ ಮಾಧ್ಯಮ ವರದಿಗಳನ್ನು ನಾನು ಕೇಳುತ್ತಿದ್ದೇನೆ. ಯುಪಿಯಲ್ಲಿ ಎಲ್ಲಾ 80 ಸ್ಥಾನಗಳಲ್ಲಿ ಬಿಜೆಪಿಯನ್ನು ಸೋಲಿಸಲು ಸಮಾಜವಾದಿ ಪಕ್ಷ ಸಂಪೂರ್ಣ ಜವಾಬ್ದಾರಿಯೊಂದಿಗೆ ಕಾರ್ಯತಂತ್ರವನ್ನು ಸಿದ್ಧಪಡಿಸುತ್ತಿದೆ ಎಂದು ನಾನು ಹೇಳಲು ಬಯಸುತ್ತೇನೆ ಎಂದು ಯಾದವ್ ಹೇಳಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:37 pm, Fri, 20 October 23