ಅವಕಾಶ ಸಿಕ್ಕರೆ ಕೇಂದ್ರ ಸರ್ಕಾರ ನನ್ನನ್ನು ಬಂಧಿಸಬಹುದು : ಸಿಎಂ ಭೂಪೇಶ್ ಬಘೇಲ್

ಅವಕಾಶ ಸಿಕ್ಕರೇ ಕೇಂದ್ರ ಸರ್ಕಾರ ನನ್ನನ್ನು ಬಂಧಿಸಬಹುದು ಎಂದು ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಹೇಳಿದ್ದಾರೆ. ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಕೇಂದ್ರಕ್ಕೆ ನನ್ನ ಬಂಧಿಸಲು ಯಾವುದೇ ಅವಕಾಶಗಳು ಸಿಗುತ್ತಿಲ್ಲ ಎಂದು ಹೇಳಿದ್ದಾರೆ.

ಅವಕಾಶ ಸಿಕ್ಕರೆ ಕೇಂದ್ರ ಸರ್ಕಾರ ನನ್ನನ್ನು ಬಂಧಿಸಬಹುದು : ಸಿಎಂ ಭೂಪೇಶ್ ಬಘೇಲ್
CM Bhupesh Baghel
Follow us
ಅಕ್ಷಯ್​ ಪಲ್ಲಮಜಲು​​
|

Updated on: Oct 21, 2023 | 10:43 AM

ರಾಯ್ಪುರ್, ಅ.21: ಅವಕಾಶ ಸಿಕ್ಕರೇ ಕೇಂದ್ರ ಸರ್ಕಾರ ನನ್ನನ್ನು ಬಂಧಿಸಬಹುದು ಎಂದು ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್  ಹೇಳಿದ್ದಾರೆ. ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಕೇಂದ್ರಕ್ಕೆ ನನ್ನ ಬಂಧಿಸಲು ಯಾವುದೇ ಅವಕಾಶಗಳು ಸಿಗುತ್ತಿಲ್ಲ. ಇಲ್ಲದಿದ್ದರೆ, ಇಷ್ಟೊತ್ತಿಗೆ ನನ್ನನ್ನು ಬಂಧಿಸುತ್ತಿದ್ದರು. ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕೇಂದ್ರೀಯ ಸಂಸ್ಥೆಯು ಅಧಿಕಾರಿಗಳನ್ನು ಹಿಡಿದಿಟ್ಟುಕೊಂಡು, ತನ್ನ ವಿರೋಧಿಗಳ ಮೇಲೆ ದಾಳಿ ಮಾಡಿಸುತ್ತಿದ್ದಾರೆ. ನಿಮ್ಮನ್ನು ಇಡಿ ಬಂಧಿಸುತ್ತದೆ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಭೂಪೇಶ್ ಬಘೇಲ್ ಅವರು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಇಡಿ ಮೂಲಕ ರಾಜಕೀಯ ಷಡ್ಯಂತ್ರ ಮಾಡುತ್ತಿದೆ. ಷಡ್ಯಂತ್ರದ ಭಾಗವಾಗಿಯೇ ಇಂದು ಅನೇಕ ಕಡೆ ದಾಳಿ ಮಾಡುತ್ತಿದೆ ಎಂದು ಹೇಳಿದ್ದಾರೆ.

ನಮ್ಮ ರಾಜ್ಯದಲ್ಲಿ ಸಾರ್ವಜನಿಕ ಯಾವುದೇ ಕಾರ್ಯಕ್ರಮ ಅಥವಾ ಯೋಜನೆಗಳನ್ನು ಬಿಜೆಪಿ ನೀಡಿಲ್ಲ. ಹಾಗಾಗಿ ರಾಜ್ಯದಲ್ಲಿ ಇಂತಹ ಕೆಲಸ ಮಾಡುವ ಮೂಲಕ ರಾಜ್ಯದ ಮಾನಹಾನಿ ಮಾಡುತ್ತಿದ್ದಾರೆ ಎಂದು ಹೇಳಿದರು. ಈಗಾಗಲೇ ರಾಜ್ಯದಲ್ಲಿ ಯಾವುದೇ ಬದಲಾವಣೆಯನ್ನು ತಂದಿಲ್ಲ. ಜತೆಗೆ ರಾಜ್ಯದಲ್ಲಿ ಯಾವುದೇ ಗೆಲುವಿನ ಹಾದಿ ಇಲ್ಲ ಎಂಬುದು ಅವರಿಗೆ ತಿಳಿದಿದೆ. ಈ ಕಾರಣಕ್ಕೆ ಜನರ ಲಾಭ ಪಡೆಯಲು ಹೀಗೆ ಮಾಡುತ್ತಿದ್ದಾರೆ. ಇದರ ಜತೆಗೆ 15 ವರ್ಷದಲ್ಲಿ ಬಿಜೆಪಿ ಜನಪರ ಕೆಲಸಗಳನ್ನು ಮಾಡಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: 64 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ, ರಾಜನಂದಗಾಂವ್‌ನಿಂದ ರಮಣ್ ಸಿಂಗ್ ಮತ್ತೆ ಸ್ಪರ್ಧೆ

ನಮ್ಮ ಸರ್ಕಾರ ಒಳ್ಳೆಯ ಕೆಲಸಗಳನ್ನು ಮಾಡಿದೆ. ಇಲ್ಲಿಯವರೆಗೆ ಬಿಜೆಪಿಗೆ ನಮ್ಮ ಸರ್ಕಾರ ಕೊರತೆಯ ಬಗ್ಗೆ ಸಾಬೀತು ಪಡಿಸಲು ಸಾಧ್ಯವಾಗಿಲ್ಲ. ಇನ್ನು ನವೆಂಬರ್ 1 ರಿಂದ ಪ್ರಾರಂಭವಾಗಲಿರುವ ಭತ್ತ ಖರೀದಿ ಅಭಿಯಾನದ ಮೇಲೆ ಪರಿಣಾಮ ಬೀರುವ ಕ್ರಮವಾಗಿ (ಶುಕ್ರವಾರ) ಅಕ್ಕಿ ಗಿರಣಿಗಾರರ ಮೇಲೆ ಕೇಂದ್ರೀಯ ಸಂಸ್ಥೆ ದಾಳಿ ಮಾಡಿದೆ. ಇದು ಸರ್ಕಾರವನ್ನು ದೋಷಿಸಲು ಮಾಡಿರುವ ಕ್ರಮ ಎಂದು ಹೇಳಿದ್ದಾರೆ. ಬಿಜೆಪಿ ಅಧಿಕಾರ ಹಿಡಿಯಲು ಎಷ್ಟು ಕೀಳುಮಟ್ಟಕ್ಕೆ ಹೋಗಿದೆ ಎಂಬುದು ಇದರಲ್ಲಿ ಗೊತ್ತಾಗುತ್ತದೆ. ಇವರಿಗೆ ರೈತರ ಬಗ್ಗೆ ಯೋಚನೆ ಇಲ್ಲ ಎಂದು ಹೇಳಿದ್ದಾರೆ.

ಈಗಾಗಲೇ ಪಂಚರಾಜ್ಯಗಳ ಚುನಾವಣೆ ಘೋಷಣೆಯಾಗಿದ್ದು, ಛತ್ತೀಸ್‌ಗಢದ 20 ಕ್ಷೇತ್ರಗಳಿ ಮೊದಲ ಹಂತದ ಚುನಾವಣೆ ನವೆಂಬರ್​ 7ರಂದು ನಡೆಯಲಿದೆ. ಉಳಿದ 70 ಕ್ಷೇತ್ರಗಳಿಗೆ ನವೆಂಬರ್​​ 17ರಂದು ನಡೆಯಲಿದೆ. ನವೆಂಬರ್ 7 ರಂದು ಮಿಜೋರಾಂ, ನವೆಂಬರ್ 7 ಮತ್ತು ನವೆಂಬರ್ 17 ರಂದು ಛತ್ತೀಸ್‌ಗಢ, ನವೆಂಬರ್ 17ರಂದು ಮಧ್ಯಪ್ರದೇಶ, ನವೆಂಬರ್ 25 ರಂದು ರಾಜಸ್ಥಾನ ಮತ್ತು ನವೆಂಬರ್ 30 ರಂದು ತೆಲಂಗಾಣದಲ್ಲಿ ಚುನಾವಣೆ ನಡೆಯಲಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ