ಸೋಪೋರ್: ನಿಷೇಧಿತ ಉಗ್ರ ಸಂಘಟನೆ ಅಲ್ ಬದ್ರ್ ನೆಲೆಯ (Al-Badr Outfit) ಮೇಲೆ ಭದ್ರತಾ ಪಡೆಗಳು ದಾಳಿ ನಡೆಸಿದ್ದು, ಈ ಸಂಘಟನೆಯ ನಾಲ್ವರು ಭಯೋತ್ಪಾದಕರು (Terrorists) ಮತ್ತು ಅವರ ಮೂವರು ಸಹಾಯಕರನ್ನು ಬಂಧಿಸಿವೆ. ಈ ಬಗ್ಗೆ ಸೋಪೋರ್ ಪೊಲೀಸರು ಮಾಹಿತಿ ನೀಡಿದ್ದಾರೆ. ಸೋಪೋರ್ನ(Sopore) ವಿವಿಧ ಪ್ರದೇಶಗಳಲ್ಲಿರುವ ಸೇನಾ ನೆಲೆಗಳ ಮೇಲೆ ದಾಳಿ ನಡೆಸಲು ಈ ಅಲ್ ಬದ್ರ್ ಉಗ್ರರು ಯೋಜನೆ ರೂಪಿಸಿದ್ದರು. ಈ ಬಗ್ಗೆ ಖಚಿತ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ದಾಳಿ ನಡೆಸಲಾಯಿತು. ನಾಲ್ವರು ಉಗ್ರರು ಮತ್ತು ಅವರ ಮೂವರು ಸಹಾಯಕರನ್ನು ಬಂಧಿಸಲಾಗಿದ್ದು, ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಒಂದು ಯುದ್ಧದಲ್ಲಿ ಬಳಸಬಹುದಾದ ಶಸ್ತ್ರಾಸ್ತ್ರಗಳೂ ಈ ಉಗ್ರರ ಘಟಕದಲ್ಲಿ ಸಿಕ್ಕಿವೆ. ಇವರೆಲ್ಲರೂ ಕೂಡ ಪಾಕಿಸ್ತಾನ ಮೂಲದ ಉಗ್ರರ ಮಾರ್ಗದರ್ಶನದಂತೆ ಕೆಲಸ ಮಾಡುತ್ತಿದ್ದರು ಎಂಬುದು ಮೊದಲ ಹಂತದ ತನಿಖೆಯಲ್ಲೇ ಸ್ಪಷ್ಟವಾಗಿದೆ ಎಂದು ಉತ್ತರ ಕಾಶ್ಮೀರದ ಡಿಐಜಿ ಉದಯ್ ಭಾಸ್ಕರ್ ತಿಳಿಸಿದ್ದಾರೆ. ಬರೀ ಶಸ್ತ್ರಾಸ್ತ್ರಗಳಷ್ಟೇ ಅಲ್ಲ, ಅಪಾರ ಮೊತ್ತದ ನಗದು ಕೂಡ ಸಿಕ್ಕಿದ್ದಾಗಿ ಅವರು ಮಾಹಿತಿ ನೀಡಿದ್ದಾರೆ.
J&K | Police busted a terror module of proscribed terror outfit Al badr by arresting 7 accused persons incl 4 terrorists. Proscribed terror outfit Al-Badr was planning to carry out attacks on security forces in Sopore at several places, Sopore Police said in an official statement pic.twitter.com/JzHI71wesf
— ANI (@ANI) February 12, 2022
ಬಂಧಿತ ಉಗ್ರರನ್ನು ವಿಚಾರಣೆಗೆ ಒಳಪಡಿಸಿದಾಗ, ಸದ್ಯ ತಾವು ಪಾಕಿಸ್ತಾನದ ಯೂಸುಫ್ ಬಾಲೌಸಿ ಮತ್ತು ಖುರ್ಶೀದ್ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತಿದ್ದುದನ್ನು ಒಪ್ಪಿಕೊಂಡಿದ್ದಾರೆ. ಸೋಪೋರ್ನಲ್ಲಿ ಭಯೋತ್ಪಾದನೆಯನ್ನು ಪುನಃ ಪ್ರಾರಂಭಿಸುವ ಕೆಲಸ ಮಾಡುತ್ತಿದ್ದೆವು. ಹೀಗಾಗಿ ಇಲ್ಲಿನ ಯುವಕರನ್ನು ಉಗ್ರ ಸಂಘಟನೆಗಳಿಗೆ ನೇಮಕ ಮಾಡಿಕೊಳ್ಳುತ್ತಿದ್ದೆವು. ಅಗತ್ಯ ಇರುವವರಿಗೆ ವಾಹನ, ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದ್ದೆವು ಎಂಬ ವಿಚಾರಗಳನ್ನು ಬಾಯ್ಬಿಟ್ಟಿದ್ದಾರೆ ಎಂದೂ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ ಬೇಕಾದಷ್ಟು ಅಧಿಕಾರ ಅನುಭವಿಸಿದ್ದಾರೆ, ಇನ್ನೂ ಯಾಕೆ ಅದರ ಲಾಲಸೆಯೋ? ಸಚಿವ ವಿ ಸೋಮಣ್ಣ