ಸುಪ್ರೀಮ್ ಕೋರ್ಟ್​ನಲ್ಲಿರುವ ಪೆಂಡಿಂಗ್ ಪ್ರಕರಣಗಳ ಹೊರೆ ತಗ್ಗಿಸಲು ಪ್ರತಿದಿನ ಹತ್ತತ್ತು ವೈವಾಹಿಕ ಕಲಹ ಮತ್ತು ಜಾಮೀನು ಮನವಿಗಳ ವಿಚಾರಣೆಗೆ ತೀರ್ಮಾನ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 18, 2022 | 6:31 PM

ವಿಚಾರಣೆಗೆ ಶೆಡ್ಯೂಲ್ ಅಗಿರುವ ಪೂರಕ ಪಟ್ಟಿಗೆ ಕೊನೆ ಕ್ಷಣಗಳಲ್ಲಿ ಸೇರಿಸಲಾಗುವ ಪ್ರಕರಣಗಳ ಸಂಖ್ಯೆಯಲ್ಲಿ ಸಹ ಕಡಿತಗೊಳಿಸಲಾಗುವುದು ಅಂತ ಮುಖ್ಯ ನ್ಯಾಯಾಧೀಶರು ಹೇಳಿದರು. ಹಾಗೆ ಮಾಡಿದಾಗಲೇ ನ್ಯಾಯಾಧೀಶರು ತಡರಾತ್ರಿಯವರೆಗೆ ವಿಚಾರಣೆ ನಡೆಸುವುದು ತಪ್ಪುತ್ತದೆ ಎಂದು ಅವರು ಹೇಳಿದರು.

ಸುಪ್ರೀಮ್ ಕೋರ್ಟ್​ನಲ್ಲಿರುವ ಪೆಂಡಿಂಗ್ ಪ್ರಕರಣಗಳ ಹೊರೆ ತಗ್ಗಿಸಲು ಪ್ರತಿದಿನ ಹತ್ತತ್ತು ವೈವಾಹಿಕ ಕಲಹ ಮತ್ತು ಜಾಮೀನು ಮನವಿಗಳ ವಿಚಾರಣೆಗೆ ತೀರ್ಮಾನ
ಸುಪ್ರೀಂಕೋರ್ಟ್
Follow us on

ನವದೆಹಲಿ: ಸುಪ್ರೀಮ್ ಕೋರ್ಟ್ ನಲ್ಲಿ (The Supreme Court) ಇತ್ಯರ್ಥಗೊಳ್ಳದ ಪ್ರಕರಣಗಳ ಸಂಖ್ಯೆಯನ್ನು ತಗ್ಗಿಸುವ ನಿಟ್ಟಿನಲ್ಲಿ, ಸರ್ವೋಚ್ಛ ನ್ಯಾಯಾಲಯದ ಪ್ರತಿಯೊಂದು ಪೀಠವು ಪ್ರತಿದಿನ 10 ವೈವಾಹಿಕ ಕಲಹ ಮತ್ತು ಅಷ್ಟೇ ಸಂಖ್ಯೆಯ ಜಾಮೀನು ಅರ್ಜಿಗಳ ವಿಚಾರಣೆ ನಡೆಸಬೇಕೆಂಬ ತೀರ್ಮಾನಕ್ಕೆ ಬರಲಾಗಿದೆ. ಶುಕ್ರವಾರ ಬೆಳಗ್ಗೆ ದಿನದ ಕೋರ್ಟ್ ಕಲಾಪಗಳು (court proceedings) ಆರಂಭಿಸುವಾಗ ಮುಖ್ಯ ನ್ಯಾಯಾಧೀಶ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ (Justice DY Chandrachud) ಅವರು ಸಮಗ್ರ ಕೋರ್ಟಿನ ನಿರ್ಣಯವನ್ನು ಪ್ರಕಟಿಸಿದರು. ಜಾಮೀನು ಅರ್ಜಿಗಳು ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿರುವುದರಿಂದ ಅವುಗಳಿಗೆ ಪ್ರಾಶಸ್ತ್ಯ ನೀಡಲಾಗುವುದು ಎಂದು ನ್ಯಾಯಮೂರ್ತಿಗಳು ಹೇಳಿದರು.

ಶುಕ್ರವಾರ ಬೆಳಿಗ್ಗೆ ನಡೆದ ಸಮಗ್ರ ಕೋರ್ಟ್ ಸಭೆಯಲ್ಲಿ, ‘ಸುಪ್ರೀಮ್ ಕೋರ್ಟ್ ನಲ್ಲಿರುವ ಪೆಂಡಿಂಗ್ ಇರುವ ಸಾವಿರಾರು ಪ್ರಕರಣಗಳ ಹೊರೆ ಕಡಿಮೆ ಮಾಡಲು ಎಲ್ಲ 13 ಪೀಠಗಳು ವೈವಾಹಿಕ ಕಲಹಗಳಿಗೆ ಸಂಬಂಧಿಸಿದ ಹತ್ತು ಮನವಿ ಮತ್ತು ಜಾಮೀನು ಕೋರಿ ದಾಖಲಾಗಿರುವ ಮನವಿಗಳ ಪೈಕಿ ಹತ್ತು ಮನವಿಗಳ ವಿಚಾರಣೆ ನಡೆಸುವ ತೀರ್ಮಾನಕ್ಕೆ ಬರಲಾಗಿದೆ,’ ಎಂದು ನ್ಯಾಯಮರ್ತಿಗಳು ಹೇಳಿದರು. ‘ಪ್ರತಿದಿನ ಹತ್ತತ್ತು ವೈವಾಹಿಕ ಕಲಹ ಮತ್ತು ಜಾಮೀನು ಅರ್ಜಿಗಳ ವಿಚಾರಣೆ ನಡೆಸಿದ ನಂತರ ನಿಗದಿತ ಕೇಸುಗಳನ್ನು ಕೈಗೆತ್ತಿಕೊಳ್ಳಲಾಗುವುದು’ ಎಂದು ಹೇಳಿದ ಅವರು, ‘ಜಾಮೀನು ಅರ್ಜಿಗಳು ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿರುವುದರಿಂದ ಅವುಗಳಿಗೆ ಆದ್ಯತೆ ನೀಡಲಾಗುವುದು,’ ಎಂದರು.

ವಿಚಾರಣೆಗೆ ಶೆಡ್ಯೂಲ್ ಅಗಿರುವ ಪೂರಕ ಪಟ್ಟಿಗೆ ಕೊನೆ ಕ್ಷಣಗಳಲ್ಲಿ ಸೇರಿಸಲಾಗುವ ಪ್ರಕರಣಗಳ ಸಂಖ್ಯೆಯಲ್ಲಿ ಸಹ ಕಡಿತಗೊಳಿಸಲಾಗುವುದು ಅಂತ ಮುಖ್ಯ ನ್ಯಾಯಾಧೀಶರು ಹೇಳಿದರು. ಹಾಗೆ ಮಾಡಿದಾಗಲೇ ನ್ಯಾಯಾಧೀಶರು ತಡರಾತ್ರಿಯವರೆಗೆ ವಿಚಾರಣೆ ನಡೆಸುವುದು ತಪ್ಪುತ್ತದೆ ಎಂದು ಅವರು ಹೇಳಿದರು.

‘ರಾತ್ರಿ 12 ಗಂಟೆ ಮತ್ತು ಬೆಳಗಿನ ಜಾವದವರಗೆ ವಿಚಾರಣೆಯನ್ನು ಮುಂದುವರೆಸುವ ಅನಿವಾರ್ಯತೆ ತಲೆದೋರರುತ್ತಿರುವದರಿಂದ ಹೆಚ್ಚುವರಿ ಪ್ರಕರಣಗಳ ವಿಚಾರಣೆಗಳ ನಿರ್ವಹಣೆ ಬೇಡ ಎಂದು ಎಲ್ಲ ಪೀಠಗಳ ನ್ಯಾಯಾಧೀಶರು ನನಗೆ ಮನವಿ ಮಾಡಿದರು. ಹಾಗಾಗೇ, ನಾನು ಸಪ್ಲಿಮೆಂಟರಿ ಬೋರ್ಡನ್ನು ತಗ್ಗಿಸುವ ಪ್ರಯತ್ನ ಮಾಡುತ್ತಿದ್ದೇನೆ,’ ಎಂದು ಮುಖ್ಯ ನ್ಯಾಯಾಧೀಶರು ಹೇಳಿದ್ದಾರೆ.

ನ್ಯಾಯಮೂರ್ತಿ ಚಂದ್ರಚೂಡ್ ಅವರಿಗಿಂತ ಮೊದಲು ಭಾರತದ ಮುಖ್ಯ ನ್ಯಾಯಾಧೀಶರಾಗಿದ್ದ ನ್ಯಾಯಮೂರ್ತಿ ಯುಯು ಲಲಿತ್ ಅವರು ಪೆಂಡಿಂಗ್ ಕೇಸುಗಳ ಹೊರೆಯನ್ನು ತಗ್ಗಿಸಲು ಹೊಸ ಲಿಸ್ಟಿಂಗ್ ಪದ್ಧತಿಯನ್ನು ಜಾರಿಗೊಳಿಸಿದ್ದರು. ಅದರಿಂದಾಗಿಯೇ ಆ 74-ದಿನಗಳ ಅವಧಿಯಲ್ಲಿ 10,000 ಕೇಸುಗಳ ಶೀಘ್ರ ವಿಲೇವಾರಿ ಸಾಧ್ಯವಾಗಿತ್ತು.

ಮತ್ತಷ್ಟು ದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ