ಭಾರತದಲ್ಲಿ ವಾಸಿಸುವ ಎಲ್ಲಾ ಜನರು ಹಿಂದೂಗಳು, ಅವರೆಲ್ಲರ ಡಿಎನ್ಎ ಒಂದೇ: ದತ್ತಾತ್ರೇಯ ಹೊಸಬಾಳೆ

ವಿದೇಶಕ್ಕೆ ಭೇಟಿ ನೀಡಿದವರನ್ನು ಸಹ ನಾವು ಹೊರಗಿಡಲು ಸಾಧ್ಯವಿಲ್ಲ. ಅವರು ಬಲವಂತವಾಗಿ ಅಥವಾ ಯಾವುದೇ ಕಾರಣಕ್ಕಾಗಿ ಗೋಮಾಂಸ ಸೇವಿಸಿರಬಹುದು. ಅವರು ತಮ್ಮ ಧರ್ಮಕ್ಕೆ ಮರಳಬಹುದು ಎಂದು ಹೊಸಬಾಳೆ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.

ಭಾರತದಲ್ಲಿ ವಾಸಿಸುವ ಎಲ್ಲಾ ಜನರು ಹಿಂದೂಗಳು, ಅವರೆಲ್ಲರ ಡಿಎನ್ಎ ಒಂದೇ: ದತ್ತಾತ್ರೇಯ ಹೊಸಬಾಳೆ
ದತ್ತಾತ್ರೇಯ ಹೊಸಬಾಳೆ
Follow us
ರಶ್ಮಿ ಕಲ್ಲಕಟ್ಟ
|

Updated on:Feb 02, 2023 | 9:26 PM

ಕೆಲವು ಹಿಂದೂಗಳು ಬಲವಂತವಾಗಿ ಗೋಮಾಂಸ (Beef) ತಿಂದಿರಬಹುದು. ಆದರೆ ಅವರು ಹಿಂದೂಗಳಲ್ಲ(Hindu) ಎಂದು ಅರ್ಥವಲ್ಲ, ಅವರನ್ನು ದೂರವಿರಿಸಲು ಸಾಧ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ (Dattatreya Hosabale) ಹೇಳಿದ್ದಾರೆ. ಭಾರತದಲ್ಲಿ ವಾಸಿಸುವ ಎಲ್ಲಾ ಜನರು ಹಿಂದೂಗಳು ಏಕೆಂದರೆ ಅವರ ಪೂರ್ವಜರು ಹಿಂದೂಗಳು. ಅವರ ಆರಾಧನೆಯ ವಿಧಾನಗಳು ವಿಭಿನ್ನವಾಗಿರಬಹುದು, ಆದರೆ ಅವರೆಲ್ಲರೂ ಒಂದೇ ಡಿಎನ್ಎಯನ್ನು ಹೊಂದಿದ್ದಾರೆ. ತನ್ನನ್ನು ತಾನು ಹಿಂದೂ ಎಂದು ಪರಿಗಣಿಸುವವನು ಹಿಂದೂ, ಅವರನ್ನು  ಹಿಂದೂಗಳು ಎಂದು ಕರೆಯುವವರು ಕೂಡಾ ಹಿಂದೂಗಳು ಎಂದು ಅವರು ಹೇಳಿದ್ದಾರೆ.  ಜೈಪುರದ ಬಿರ್ಲಾ ಸಭಾಂಗಣದಲ್ಲಿ ಏಕತಂ ಮಾನವದರ್ಶನ ಅನುಸಂಧಾನ ಏವಂ ವಿಕಾಸ್ ಪ್ರತಿಷ್ಠಾನ ಆಯೋಜಿಸಿದ್ದ ‘ರಾಷ್ಟ್ರೀಯ ಸ್ವಯಂಸೇವಕ ಸಂಘ: ನಿನ್ನೆ, ಇಂದು ಮತ್ತು ನಾಳೆ’ ಕುರಿತು ಹೊಸಬಾಳೆ ಮಾತನಾಡುತ್ತಿದ್ದರು.

ಭಾರತದಲ್ಲಿನ 600 ಕ್ಕೂ ಹೆಚ್ಚು ಬುಡಕಟ್ಟುಗಳು ಭಾರತೀಯ ವಿರೋಧಿ ಅಂಶಗಳ ಪ್ರಚೋದನೆಯನ್ನು ಅನುಸರಿಸಿ ಧರ್ಮದಿಂದ ಭಿನ್ನವಾಗಿವೆ. ಸಂತ ಗೋಳ್ವಾಲ್ಕರ್ ಅವರು ಹಿಂದೂಗಳು, ಮತ್ತು ಅವರಿಗಾಗಿ ಬಾಗಿಲು ಯಾವಾಗಲೂ ತೆರೆದಿರುತ್ತದೆ ಎಂದು ಹೇಳಿದರು. ನಾವು “ವಸುಧೈವ ಕುಟುಂಬಕಂ” ತತ್ವಶಾಸ್ತ್ರದ ಮೇಲೆ ಕೆಲಸ ಮಾಡುತ್ತೇವೆ. ವಿದೇಶಕ್ಕೆ ಭೇಟಿ ನೀಡಿದವರನ್ನು ಸಹ ನಾವು ಹೊರಗಿಡಲು ಸಾಧ್ಯವಿಲ್ಲ. ಅವರು ಬಲವಂತವಾಗಿ ಅಥವಾ ಯಾವುದೇ ಕಾರಣಕ್ಕಾಗಿ ಗೋಮಾಂಸ ಸೇವಿಸಿರಬಹುದು. ಅವರು ತಮ್ಮ ಧರ್ಮಕ್ಕೆ ಮರಳಬಹುದು ಎಂದು ಹೊಸಬಾಳೆ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.

ಆರ್‌ಎಸ್‌ಎಸ್ ಸಂಸ್ಥಾಪಕ ಡಾ.ಹೆಡ್ಗೆವಾರ್, ಧರ್ಮ ಆಧರಿಸಿ ಜನರನ್ನು ಪ್ರತ್ಯೇಕಿಸಲು ಮತ್ತು ಯಾರು ಹಿಂದೂ ಅಥವಾ ಅಲ್ಲ ಎಂದು ವಿವರಿಸಲು ಹೋಗಲಿಲ್ಲ.ಅವರು ಭಾರತವನ್ನು ಹಿಂದೂ ರಾಷ್ಟ್ರವೆಂದು ಅವರು ನಂಬಿದ್ದರು. ಏಕೆಂದರೆ ಅದನ್ನು ನಿರ್ಮಿಸಿದವರು ಹಿಂದೂಗಳು. ಭಾರತವನ್ನು ತಮ್ಮ ಪಿತೃಭೂಮಿ ಮತ್ತು ಕೆಲಸದ ಭೂಮಿ ಎಂದು ಪರಿಗಣಿಸುವವರು ಹಿಂದೂಗಳು.

ಆರ್​​ಎಸ್ಎಸ್ ಯಾವುದೇ ರಾಜಕೀಯ ಒಲವು ಇಲ್ಲದೆ ರಾಷ್ಟ್ರದ ಹಿತಾಸಕ್ತಿಗಾಗಿ ಕೆಲಸ ಮಾಡುತ್ತದೆ. ಈ ಸಂಘಟನೆ ಬಲಪಂಥೀಯವೂ ಅಲ್ಲ, ಎಡಪಂಥೀಯವೂ ಅಲ್ಲ. ಇದು ದೇಶದಲ್ಲಿ ಪ್ರಜಾಪ್ರಭುತ್ವವನ್ನು ಸ್ಥಾಪಿಸುವಲ್ಲಿ ಪಾತ್ರವನ್ನು ವಹಿಸಿದ್ದು ಭಾರತದ ಎಲ್ಲಾ ಧರ್ಮಗಳು ಮತ್ತು ಪಂಗಡಗಳನ್ನು ಒಂದಾಗಿ ಪರಿಗಣಿಸುತ್ತದೆ ಎಂದಿದ್ದಾರೆ ಹೊಸಬಾಳೆ.

ಎಲ್ಲರ ಸಾಮೂಹಿಕ ಪ್ರಯತ್ನದಿಂದ ಮಾತ್ರ ಭಾರತವು ವಿಶ್ವ ಗುರುವಾಗುವ ಮೂಲಕ ಜಗತ್ತನ್ನು ಮುನ್ನಡೆಸಬಹುದು ಎಂಬ ಅಂಶವನ್ನು ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ಒತ್ತಿ ಹೇಳಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:12 pm, Thu, 2 February 23

ಮುಡಾ ಪ್ರಕರಣದಲ್ಲಿ ಲೋಕಾಯುಕ್ತವೇ ಅಪರಾಧಿ ಸ್ಥಾನದಲ್ಲಿದೆ: ಸ್ನೇಹಮಯಿ ಕೃಷ್ಣ
ಮುಡಾ ಪ್ರಕರಣದಲ್ಲಿ ಲೋಕಾಯುಕ್ತವೇ ಅಪರಾಧಿ ಸ್ಥಾನದಲ್ಲಿದೆ: ಸ್ನೇಹಮಯಿ ಕೃಷ್ಣ
ಮಹಾರಾಜನಾಗಿ ದರ್ಪ ತೋರಿದ್ರು; ಉಳಿದವರ ಉಪವಾಸ ಕೆಡವಿ ತಾನು ಊಟ ಮಾಡಿದ ಮಂಜು
ಮಹಾರಾಜನಾಗಿ ದರ್ಪ ತೋರಿದ್ರು; ಉಳಿದವರ ಉಪವಾಸ ಕೆಡವಿ ತಾನು ಊಟ ಮಾಡಿದ ಮಂಜು
ಕಾರ್ತಿಕ ಮಾಸದ ಕೊನೆ ಸೋಮವಾರ ಶಿವನ ಆರಾಧನೆ ಹೇಗೆ ಮಾಡುವುದು? ತಿಳಿಯಿರಿ
ಕಾರ್ತಿಕ ಮಾಸದ ಕೊನೆ ಸೋಮವಾರ ಶಿವನ ಆರಾಧನೆ ಹೇಗೆ ಮಾಡುವುದು? ತಿಳಿಯಿರಿ
Daily Horoscope: ಕಾರ್ತಿಕ ಮಾಸದ ಕೊನೆ ಸೋಮವಾರ ದಿನ ಭವಿಷ್ಯ ತಿಳಿಯಿರಿ
Daily Horoscope: ಕಾರ್ತಿಕ ಮಾಸದ ಕೊನೆ ಸೋಮವಾರ ದಿನ ಭವಿಷ್ಯ ತಿಳಿಯಿರಿ
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ