AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2019ರಿಂದ 21 ಬಾರಿ ಪ್ರಧಾನಿ ಮೋದಿ ವಿದೇಶ ಪ್ರಯಾಣ, ಖರ್ಚು ₹22 ಕೋಟಿ: ಕೇಂದ್ರ ಸರ್ಕಾರ

ರಾಷ್ಟ್ರಪತಿ ಎಂಟು ವಿದೇಶ ಪ್ರವಾಸಗಳನ್ನು ಕೈಗೊಂಡಿದ್ದರೆ, ಪ್ರಧಾನಿ 2019 ರಿಂದ 21 ಪ್ರವಾಸಗಳನ್ನು ಕೈಗೊಂಡಿದ್ದಾರೆ. ಈ ಅವಧಿಯಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು 86 ವಿದೇಶ ಪ್ರವಾಸಗಳನ್ನು ಕೈಗೊಂಡಿದ್ದಾರೆ.

2019ರಿಂದ 21 ಬಾರಿ ಪ್ರಧಾನಿ ಮೋದಿ ವಿದೇಶ ಪ್ರಯಾಣ, ಖರ್ಚು ₹22 ಕೋಟಿ: ಕೇಂದ್ರ ಸರ್ಕಾರ
ನರೇಂದ್ರ ಮೋದಿ
ರಶ್ಮಿ ಕಲ್ಲಕಟ್ಟ
|

Updated on: Feb 02, 2023 | 7:42 PM

Share

ದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) 2019 ರಿಂದ 21 ವಿದೇಶ ಪ್ರವಾಸಗಳನ್ನು ಮಾಡಿದ್ದು ಈ ಭೇಟಿಗಳಿಗಾಗಿ ₹ 22.76 ಕೋಟಿಗೂ ಹೆಚ್ಚು ಖರ್ಚು ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಗುರುವಾರ ರಾಜ್ಯಸಭೆಗೆ (Rajya Sabha) ತಿಳಿಸಿದೆ. ರಾಷ್ಟ್ರಪತಿಗಳು ಎಂಟು ವಿದೇಶ ಪ್ರವಾಸಗಳನ್ನು ಕೈಗೊಂಡಿದ್ದಾರೆ. 2019 ರಿಂದ ಈ ಪ್ರವಾಸಗಳಿಗಾಗಿ ₹ 6.24 ಕೋಟಿಗೂ ಹೆಚ್ಚು ಮೊತ್ತವನ್ನು ಖರ್ಚು ಮಾಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ರಾಷ್ಟ್ರಪತಿಗಳ ಭೇಟಿಗಾಗಿ ₹ 6,24,31,424, ಪ್ರಧಾನ ಮಂತ್ರಿಗಳ ಭೇಟಿಗಾಗಿ ₹ 22,76,76,934 ಮತ್ತು ವಿದೇಶಾಂಗ ಸಚಿವರ ಭೇಟಿಗಾಗಿ ₹ 20,87,01,475 ಮೊತ್ತವನ್ನು 2019 ರಿಂದ ಸರ್ಕಾರ ಭರಿಸಿದೆ ಎಂದು ಸಚಿವರು ಹೇಳಿದ್ದಾರೆ.

ರಾಷ್ಟ್ರಪತಿ ಎಂಟು ವಿದೇಶ ಪ್ರವಾಸಗಳನ್ನು ಕೈಗೊಂಡಿದ್ದರೆ, ಪ್ರಧಾನಿ 2019 ರಿಂದ 21 ಪ್ರವಾಸಗಳನ್ನು ಕೈಗೊಂಡಿದ್ದಾರೆ. ಈ ಅವಧಿಯಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು 86 ವಿದೇಶ ಪ್ರವಾಸಗಳನ್ನು ಕೈಗೊಂಡಿದ್ದಾರೆ.

ಇದನ್ನೂ ಓದಿ: ಜೀವನದ ಜತೆಗಿತ್ತು, ಈಗ ಅದಾನಿ ಜತೆಗಿದೆ; ಎಲ್ಐಸಿಯ ಘೋಷಣೆಯನ್ನು ಬದಲಿಸುವ ಸಮಯ ಬಂದಿದೆ: ಕಾಂಗ್ರೆಸ್

2019 ರಿಂದ ಪ್ರಧಾನಿ ಜಪಾನ್‌ಗೆ ಮೂರು ಬಾರಿ ಮತ್ತು ಯುಎಸ್, ಯುಎಇಗೆ ಎರಡು ಬಾರಿ ಭೇಟಿ ನೀಡಿದ್ದಾರೆ.

ರಾಷ್ಟ್ರಪತಿಗಳ ಎಂಟು ಪ್ರವಾಸಗಳಲ್ಲಿ ಏಳನ್ನು ರಾಮ್ ನಾಥ್ ಕೋವಿಂದ್ ಅವರು ಮಾಡಿದ್ದು, ಈಗಿನ ರಾಷ್ಟ್ರಪತಿ ದ್ರೌಪದಿ ಮುರ್ಮು ಕಳೆದ ಸೆಪ್ಟೆಂಬರ್‌ನಲ್ಲಿ ಯುಕೆಗೆ ಭೇಟಿ ನೀಡಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ