ಸಲ್ಲಿಸಿದ ದಾಖಲೆಯೇ ನಕಲಿ; ಎನ್​​ಟಿಎ ವಿರುದ್ಧ ದೂರು ನೀಡಿದ್ದ ನೀಟ್ ಆಕಾಂಕ್ಷಿಯ ಅರ್ಜಿ ವಜಾಗೊಳಿಸಿದ ಅಲಹಾಬಾದ್ ಹೈಕೋರ್ಟ್

|

Updated on: Jun 19, 2024 | 6:03 PM

ಅದೇನೇ ಇರಲಿ, ಅರ್ಜಿದಾರರು ನಕಲಿ ಮತ್ತು ಕಾಲ್ಪನಿಕ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಿರುವುದು ನಿಜವಾಗಿಯೂ ವಿಷಾದನೀಯವಾಗಿದೆ. ಆದ್ದರಿಂದ, ಅರ್ಜಿದಾರರ ವಿರುದ್ಧ ಕಟ್ಟುನಿಟ್ಟಾಗಿ ಕಾನೂನಿಗೆ ಅನುಸಾರವಾಗಿ ಯಾವುದೇ ಕಾನೂನು ಕ್ರಮ ಕೈಗೊಳ್ಳಲು ಈ ನ್ಯಾಯಾಲಯವು ಸಕ್ಷಮ ಪ್ರಾಧಿಕಾರ / ಅಧಿಕಾರಿಗಳನ್ನು ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಸಲ್ಲಿಸಿದ ದಾಖಲೆಯೇ ನಕಲಿ; ಎನ್​​ಟಿಎ ವಿರುದ್ಧ ದೂರು ನೀಡಿದ್ದ ನೀಟ್ ಆಕಾಂಕ್ಷಿಯ ಅರ್ಜಿ ವಜಾಗೊಳಿಸಿದ ಅಲಹಾಬಾದ್ ಹೈಕೋರ್ಟ್
ನೀಟ್ ಪ್ರತಿಭಟನೆ
Follow us on

ದೆಹಲಿ ಜೂನ್ 19: ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ(NTA) ತನ್ನ ಫಲಿತಾಂಶವನ್ನು ಪ್ರಕಟಿಸಲು ವಿಫಲವಾಗಿದೆ. ನನ್ನ OMR ಉತ್ತರ ಪತ್ರಿಕೆ ಹರಿದಿದೆ ಎಂದು ಆರೋಪಿಸಿ ನೀಟ್ (NEET) ಆಕಾಂಕ್ಷಿಯೊಬ್ಬರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ (Allahabad High Court) ಮಂಗಳವಾರ ವಜಾಗೊಳಿಸಿದೆ. ಅರ್ಜಿದಾರರಾದ ಆಯುಷಿ ಪಟೇಲ್ ಅವರು ನಕಲಿ ದಾಖಲೆಗಳನ್ನು ಸಲ್ಲಿಸಿರುವುದು ಬೆಳಕಿಗೆ ಬಂದಿದ್ದರಿಂದ ಹೈಕೋರ್ಟ್‌ನ ಲಕ್ನೋ ಪೀಠವು ಪರಿಸ್ಥಿತಿಯನ್ನು “ನಿಜವಾಗಿಯೂ ವಿಷಾದನೀಯ ಸ್ಥಿತಿ” ಎಂದು ಹೇಳಿದೆ.

ತನ್ನ ಒಎಂಆರ್ ಶೀಟ್ ಹರಿದಿರುವ ಕಾರಣ ತನ್ನ ಫಲಿತಾಂಶವನ್ನು ಪ್ರಕಟಿಸುವುದಿಲ್ಲ ಎಂದು ಎನ್‌ಟಿಎಯಿಂದ ಸಂವಹನ ಸ್ವೀಕರಿಸಿರುವುದಾಗಿ ಪಟೇಲ್ ಹೇಳಿಕೊಂಡಿದ್ದರು. ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ವಿಡಿಯೊದಲ್ಲಿ ಈ ಆರೋಪಗಳನ್ನು ಪುನರಾವರ್ತಿಸಿದರು. ನೀಟ್ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳ ನಡುವೆಯೇ ಪಟೇಲ್ ಅವರ ಆರೋಪ ಕೋಲಾಹಲವನ್ನು ಉಂಟುಮಾಡಿತ್ತು.

ಅರ್ಜಿದಾರರು ತಮ್ಮ OMR ಶೀಟ್ ಅನ್ನು ವ್ಯಕ್ತಿಗಳಿಂದಲೇ ಮೌಲ್ಯಮಾಪನ ಮಾಡಬೇಕೆಂದು ಒತ್ತಾಯಿಸಿದ್ದು ಎನ್​​ಟಿಎ ವಿರುದ್ಧ ಕ್ರಮವನ್ನು ಕೋರಿದ್ದರು.

ಜೂನ್ 12 ರಂದು, ನ್ಯಾಯಮೂರ್ತಿ ರಾಜೇಶ್ ಸಿಂಗ್ ಅವರ ರಜಾಕಾಲದ ಪೀಠವು ವಿದ್ಯಾರ್ಥಿಯ ಮೂಲ ದಾಖಲೆಗಳನ್ನು ನೀಡುವಂತೆ ಎನ್​​ಟಿಎಗೆ ಕೇಳಿದೆ. ಆದೇಶಕ್ಕೆ ಅನುಸಾರವಾಗಿ, ಎನ್‌ಟಿಎಯ ಉಪ ನಿರ್ದೇಶಕ ಸಂದೀಪ್ ಶರ್ಮಾ ಅವರು ಅಫಿಡವಿಟ್‌ನೊಂದಿಗೆ ವಿದ್ಯಾರ್ಥಿಯ ಮೂಲ ದಾಖಲೆಗಳನ್ನು ಹಾಜರುಪಡಿಸಿದರು.

ನ್ಯಾಯಾಲಯಕ್ಕೆ ಸಲ್ಲಿಸಿದ ದೂರುಗಳಿಗಾಗಿ ಅರ್ಜಿದಾರರ ವಿರುದ್ಧ ಸಂಭಾವ್ಯ ಕಾನೂನು ಕ್ರಮಗಳ ಬಗ್ಗೆ ಎನ್​​ಟಿಎ ಸುಳಿವು ನೀಡಿದೆ.
ವಿದ್ಯಾರ್ಥಿಯು ನಕಲಿ ದಾಖಲೆಗಳ ಆಧಾರದ ಮೇಲೆ ಅರ್ಜಿ ಸಲ್ಲಿಸಿರುವುದನ್ನು ನ್ಯಾಯಾಲಯವು ಕಂಡುಹಿಡಿದ ನಂತರ, ಈ ವಿಷಯದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಲು ಎನ್‌ಟಿಎ ಮುಕ್ತವಾಗಿದೆ ಎಂದು ಹೇಳಿದೆ.

ಇದನ್ನೂ ಓದಿ: Reasi Terror Attack: ರಿಯಾಸಿಯಲ್ಲಿ ಉಗ್ರರ ದಾಳಿ; ಜಮ್ಮು ಕಾಶ್ಮೀರದ ಪೊಲೀಸರಿಂದ ಮೊದಲ ಆರೋಪಿಯ ಬಂಧನ

“ಅದೇನೇ ಇರಲಿ, ಅರ್ಜಿದಾರರು ನಕಲಿ ಮತ್ತು ಕಾಲ್ಪನಿಕ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಿರುವುದು ನಿಜವಾಗಿಯೂ ವಿಷಾದನೀಯವಾಗಿದೆ. ಆದ್ದರಿಂದ, ಅರ್ಜಿದಾರರ ವಿರುದ್ಧ ಕಟ್ಟುನಿಟ್ಟಾಗಿ ಕಾನೂನಿಗೆ ಅನುಸಾರವಾಗಿ ಯಾವುದೇ ಕಾನೂನು ಕ್ರಮ ಕೈಗೊಳ್ಳಲು ಈ ನ್ಯಾಯಾಲಯವು ಸಕ್ಷಮ ಪ್ರಾಧಿಕಾರ / ಅಧಿಕಾರಿಗಳನ್ನು ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಆಕೆಯ ಉತ್ತರ ಪತ್ರಿಕೆ ಇನ್ನೂ ಹಾಗೇ ಇದೆ. ಅಭ್ಯರ್ಥಿಯ ಭಾಗದಲ್ಲಿ ನಕಲಿ ಪ್ರಕರಣವಾಗಿದೆ. ಆಕೆ ಹೇಳಿರುವುದಕ್ಕಿಂತ ಮಾರ್ಕ್ಸ್ ಕಡಿಮೆಯೇ ಇದೆ ಎಂದು ಎನ್ ಟಿಎ ಜೂನ್ 12ರಂದು ಹೇಳಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ