ಹೈದರಾಬಾದ್ ನಲ್ಲಿ ಭಾರೀ ಕಳ್ಳತನ ನಡೆದಿದೆ. ಆದಾಯ ತೆರಿಗೆ ಇಲಾಖೆಯ ನಿವೃತ್ತ ಕಮಿಷನರ್ ಸ್ಯಾಮ್ಯುಯೆಲ್ ಅವರ ಮನೆಯಲ್ಲಿ ಇದು ನಡೆದಿದ್ದು ಸಂಚಲನ ಮೂಡಿಸಿದೆ. ಈ ಪ್ರಕರಣದಲ್ಲಿ ಇನ್ನೊಂದು ಟ್ವಿಸ್ಟ್ ಇದೆ. ಈ ಕಳ್ಳತನದ ಹಿಂದೆ ಪೊಲೀಸ್ ಅಧಿಕಾರಿಯ (PSI) ಕೈವಾಡವಿದೆ ಎಂದು ಸ್ವತಃ ಕಳ್ಳ ಹೇಳಿದ್ದಾನೆ. ಈ ಘಟನೆಯ ಸಂಪೂರ್ಣ ವಿವರ ಈ ಕೆಳಗಿನಂತಿದೆ.
ಜಮೀನು ಖರೀದಿಸುವುದಾಗಿ ಹೇಳಿದ್ದ ನಿವೃತ್ತ ಕಮಿಷನರ್ ಸ್ಯಾಮ್ಯುಯೆಲ್ ಗೆ ಸುರೇಂದರ್ ಎಂಬ ವ್ಯಕ್ತಿ ಪರಿಚಯವಾಗಿತ್ತು. ಹಾಗಾಗಿ ಸುರೇಂದರ್ ಆಗಾಗ್ಗೆ ಸ್ಯಾಮ್ಯುಯೆಲ್ ಗೆ ಮನೆಗೆ ಬರುತ್ತಿದ್ದರು. ಇತ್ತೀಚೆಗೆ ಮನೆಗೆ ಬಂದಿದ್ದ ಸುರೇಂದರ್ ಟಿಫಿನ್ ಹಾಗೂ ಎಳೆನೀರು ತಂದಿದ್ದ. ಆದರೆ ಆ ತೆಂಗಿನಕಾಯಿಯ ನೀರಿಗೆ ಔಷಧ ಬೆರೆಸಿದ್ದ. ತೆಂಗಿನಕಾಯಿ ನೀರು ಕುಡಿದ ತಕ್ಷಣ ಸ್ಯಾಮುಯೆಲ್ ಪ್ರಜ್ಞೆ ತಪ್ಪಿಬಿದ್ದಿದ್ದಾರೆ. ಸುರೇಂದರ್ ಇದೇ ಅವಕಾಶ ಬಳಸಿಕೊಂಡು ಮನೆಯಲ್ಲಿ ಕಳ್ಳತನ ಮಾಡಿದ್ದಾನೆ. 5 ಲಕ್ಷ ನಗದು ಹಾಗೂ 30 ತೊಲೆ ಚಿನ್ನಾಭರಣ ದೋಚಿ (Robbery), ಅಲ್ಲಿಂದ ಓಡಿ ಹೋಗಿದ್ದಾನೆ.
ಸ್ವಲ್ಪ ಸಮಯದ ನಂತರ ಪ್ರಜ್ಞೆ ಬಂದ ಸ್ಯಾಮ್ಯುಯೆಲ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನನ್ವಯ ಮುಶಿರಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಸುರೇಂದ್ರನನ್ನು ಬಂಧಿಸಿದ್ದಾರೆ. ಆತನನ್ನು ವಿಚಾರಣೆಗೆ ಒಳಪಡಿಸಿದಾಗ ರೋಚಕ ಸಂಗತಿಗಳನ್ನು ಬಹಿರಂಗಪಡಿಸಿದ್ದಾನೆ. ಇವರ ಹಿಂದೆ ಪೊಲೀಸ್ ಎಸ್ಸೆಐ ಕೈವಾಡವಿದೆ ಎಂದು ಬಹಿರಂಗಪಡಿಸಿದ್ದಾನೆ ಆರೋಪಿ ಸುರೇಂದರ್. ಆರೋಪಿ ನೀಡಿದ ಮಾಹಿತಿಯನ್ನು ಅನುಸರಿಸಿ ಪೊಲೀಸರು (Hyderabad Police) ತನಿಖೆ ಆರಂಭಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:17 pm, Tue, 27 June 23