Rajasthan Accident: ರಾಜಸ್ಥಾನದಲ್ಲಿ ಎರಡು ಲಾರಿಗಳ ಮಧ್ಯೆ ಮುಖಾಮುಖಿ ಡಿಕ್ಕಿ: ಗಂಟೆಗಳ ಕಾಲ ಬಾನೆಟ್‌ನಲ್ಲಿ ಸಿಲುಕಿದ್ದ ಚಾಲಕನ ರಕ್ಷಣೆ
ರಾಜಸ್ಥಾನದಲ್ಲಿ ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಗಂಟೆಗಳ ಕಾಲ ಬಾನೆಟ್‌ನಲ್ಲಿ ಸಿಲುಕಿದ್ದ ಚಾಲಕನನ್ನು ರಕ್ಷಿಸಲಾಗಿದೆ.
ರಾಜಸ್ಥಾನದಲ್ಲಿ ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಗಂಟೆಗಳ ಕಾಲ ಬಾನೆಟ್‌ನಲ್ಲಿ ಸಿಲುಕಿದ್ದ ಚಾಲಕನನ್ನು ರಕ್ಷಿಸಲಾಗಿದೆ. ಚಾಲಕನನ್ನು ಪಂಜಾಬ್ ನಿವಾಸಿ ಬಲ್ರಾಜ್ ಸಿಂಗ್ ಎಂದು ಗುರುತಿಸಲಾಗಿದ್ದು, ಗಂಟೆಗಳ ಪ್ರಯತ್ನದ ನಂತರ ಆತನನ್ನು ರಕ್ಷಿಸಲಾಯಿತು, ಆದರೆ ಘಟನೆಯಲ್ಲಿ ಅವರ ಎರಡೂ ಕಾಲುಗಳು ಮುರಿದಿವೆ ಎನ್ನಲಾಗಿದೆ. ಜೋಧ್‌ಪುರ-ಅಂಬಾಲಾ ಹೆದ್ದಾರಿಯ ಫತೇಪುರ್-ಸಲಾಸರ್ ರಸ್ತೆಯ ಬಳಿ ಈ ಅಪಘಾತ ಸಂಭವಿಸಿದ್ದು, ಬಲರಾಜ್ ಸಿಂಗ್ ಬಾನೆಟ್‌ನಲ್ಲಿ ಸಿಲುಕಿಕೊಂಡಿದ್ದರು.
ಡಿಕ್ಕಿಯಲ್ಲಿ ಎರಡೂ ಟ್ರಕ್‌ಗಳ ಚಾಲಕ ಮತ್ತು ಕ್ಲೀನರ್ ಸೇರಿದಂತೆ ಇತರ ಮೂವರಿಗೆ ತೀವ್ರ ಗಾಯಗಳಾಗಿವೆ. ಇತರ ಗಾಯಾಳುಗಳನ್ನು ಜೋಧಪುರದ ಕೈಲಾಶ್ (18), ಮಂಕಚಂದ್ (40) ಮತ್ತು ಬಲರಾಜ್ ಸಿಂಗ್ (25) ಎಂದು ಗುರುತಿಸಲಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮತ್ತಷ್ಟು ಓದಿ: Bengaluru-Mysore Expressway: ಅಪಘಾತಕ್ಕೆ ಕಾರಣಗಳ ಕುರಿತು ಎನ್ಹೆಚ್ಎಐಗೆ ವರದಿ ಸಲ್ಲಿಸಿದ 2 ಜಿಲ್ಲಾಡಳಿತ
ಅಪಘಾತದ ನಂತರ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತ್ತು, ಪೊಲೀಸರು ಮಧ್ಯಪ್ರವೇಶಿಸಿ ವಾಹನ ಸಂಚಾರವನ್ನು ಸುಗಮಗೊಳಿಸಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ