My India My Life Goals: ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ, ಜನತೆಗೆ ಪ್ರಧಾನಿ ಮೋದಿ ಸಂದೇಶ
ವಿಶ್ವ ಪರಿಸರ ದಿನದ ಸಂದರ್ಭದಲ್ಲಿ, ಭಾರತ ಸರ್ಕಾರವು ಪರಿಸರ ಸಂರಕ್ಷಣೆಗಾಗಿ ವಿಶೇಷ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಪಿಎಂ ಮೋದಿ ಈ ಅಭಿಯಾನವನ್ನು ನವದೆಹಲಿಯಿಂದ ಪ್ರಾರಂಭಿಸಿದ್ದಾರೆ. ಇದರಲ್ಲಿ ಟಿವಿ9 ಸಂಸ್ಥೆ ಸಹ ಪಾಲುದಾರನಾಗಿದೆ.
ವಿಶ್ವ ಪರಿಸರ ದಿನಾಚರಣೆಯ ಸಂದರ್ಭದಲ್ಲಿ, ಟಿವಿ 9 ಕೇಂದ್ರ ಸರ್ಕಾರದ ವಿಶೇಷ ಕಾರ್ಯಕ್ರಮ ‘ಮೈ ಇಂಡಿಯಾ ಮೈ ಲೈಫ್ ಗೋಲ್ಸ್’ (My India My Life Goals) ನಲ್ಲಿ ಭಾಗವಹಿಸುತ್ತಿದೆ. ಪರಿಸರ ಹಸಿರಾಗಿಡುವ ಮೂಲಕ ಮಾತ್ರ ಜನರು ಸಂತೋಷವಾಗಿರಲು ಸಾಧ್ಯ ಎಂದು ನಮಗೆ ತಿಳಿದಿದೆ. ಈ ನಿಟ್ಟಿನಲ್ಲಿ, ಪ್ರತಿವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಇದು ಒಂದು ದಿನಕ್ಕೆ ಸಿಮೀತವಾಗಿರದೇ ವರ್ಷದ ಪ್ರತಿ ದಿನವೂ ಆ ಭಾವನೆ ನಮ್ಮಲ್ಲಿರಬೇಕು ಎನ್ನುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.
ಈ ಆಂದೋಲನವು 1973 ರಿಂದ ನಡೆಯುತ್ತಿದೆ. ಈ ವರ್ಷ 50 ನೇ ವರ್ಷದ ಪರಿಸರ ದಿನವನ್ನು ಆಚರಿಸಲಾಗುತ್ತಿದೆ. ಜೊತೆಗೆ ಪರಿಸರ ದಿನಾಚರಣೆಯನ್ನು ಗಮನದಲ್ಲಿಟ್ಟುಕೊಂಡು ಭಾರತದ ಘೋಷವಾಕ್ಯವೆಂದರೆ ಪರಿಸರಕ್ಕಾಗಿ ಜೀವನಶೈಲಿಯ ಆಂದೋಲನ ಮತ್ತು ಜೀವನ. ಪರಿಸರದ ಹಿತದೃಷ್ಟಿಯಿಂದ ಈ ಆಂದೋಲನದೊಂದಿಗೆ ಭಾಗವಹಿಸಲು ಟಿವಿ9 ಹೆಮ್ಮೆಪಡುತ್ತದೆ.
ಇದನ್ನೂ ಓದಿ: My India My Life Goals: ಪರಿಸರವನ್ನು ಉಳಿಸುವಲ್ಲಿ ಟಿವಿ9ನ ಪಾತ್ರ ದೊಡ್ಡದು ಎಂದು ಶ್ಲಾಘಿಸಿದ ಸಚಿವ ಭೂಪೇಂದ್ರ ಯಾದವ್
ಆ ಸಮಯದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ದೆಹಲಿಯ ವಿಜ್ಞಾನ ಭವನದಲ್ಲಿ ವಿಶೇಷ ಅಭಿಯಾನವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಪರಿಸರ ಸಂರಕ್ಷಣೆಯ ಬಗ್ಗೆ ಸಂದೇಶ ನೀಡುವುದರ ಜೊತೆಗೆ ಏಕ ಬಳಕೆಯ ಪ್ಲಾಸ್ಟಿಕ್ ಅನ್ನು ನಿಷೇಧಿಸಲು ಮತ್ತು ಪರಿಸರವನ್ನು ರಕ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳಲು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ನೆನಪಿಸಿದರು.
ಜೊತೆಗೆ ಭಾರತವು ಈ ವರ್ಷ ‘ಮೈ ಇಂಡಿಯಾ ಮೈ ಲೈಫ್ ಗೋಲ್ಸ್’ ಎಂಬ ಪರಿಸರ ಚಳವಳಿಯನ್ನು ಪ್ರಾರಂಭಿಸಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಭಾಗವಾಗಿ ಮಾಡಿದ ಈ ಆಂದೋಲನವು ಪರಿಸರವು ನಮ್ಮ ಜೀವನಶೈಲಿಯ ಒಂದು ಭಾಗವಾಗಿ ಪ್ರತಿನಿಧಿಸುತ್ತದೆ. ದೇಶದ ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಅವರನ್ನು ಪರಿಸರ ಸಂರಕ್ಷಣೆಯ ಭಾಗವಾಗಿಸುವುದು ಈ ಆಂದೋಲನದ ಉದ್ದೇಶವಾಗಿದೆ ಎಂದಿದ್ದಾರೆ.
ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:43 pm, Tue, 27 June 23