ಮುಂಬೈ: ಶಿವಸೇನೆ ಜತೆ ಕಾಂಗ್ರೆಸ್ ಮೈತ್ರಿ ಮಹಾರಾಷ್ಟ್ರಕ್ಕೆ ಮಾತ್ರ ಸೀಮಿತ ಎಂದು ಕಾಂಗ್ರೆಸ್ನ ಹಿರಿಯ ನೇತಾರ ಅಶೋಕ್ ಚವಾಣ್ ಭಾನುವಾರ ಹೇಳಿದ್ದಾರೆ. ಶಿವಸೇನೆಯು ಯುಪಿಎ ಮೈತ್ರಿಕೂಟದ ಭಾಗವಾಗಬೇಕಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆಯೊಂದಿಗಿನ ನಮ್ಮ ಮೈತ್ರಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮ (ಸಿಎಂಪಿ) ಆಧಾರದಲ್ಲಿದ್ದು, ಇದು ಮಹಾರಾಷ್ಟ್ರಕಷ್ಟೇ ಸೀಮಿತ ಎಂದಿದ್ದಾರೆ ಚವಾಣ್.
ಕೇಂದ್ರ ಸರ್ಕಾರದ ಸರ್ವಾಧಿಕಾರಿ ನಿಲುವು ವಿರುದ್ಧ ವಿರೋಧ ಪಕ್ಷಗಳು ಒಗ್ಗಟ್ಟಾಗಬೇಕು ಎಂದು ಶಿವಸೇನಾ ಸಂಸದ ಸಂಜಯ್ ರಾವುತ್ ಕರೆ ನೀಡಿದ ಬೆನ್ನಲ್ಲೇ ಚವಾಣ್ ಈ ಹೇಳಿಕೆ ನೀಡಿದ್ದಾರೆ. ಹಲವಾರು ಪಕ್ಷಗಳ ಒಕ್ಕೂಟ ಯುಪಿಎಯ ನೇತೃತ್ವ ವಹಿಸಿದ ಸೋನಿಯಾ ಗಾಂಧಿಯನ್ನು ರಾವುತ್ ಶ್ಲಾಘಿಸಿದ್ದರು.
ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಯುಪಿಎ ನೇತೃತ್ವ ವಹಿಸಲಿದ್ದಾರೆಯೇ ಎಂಬ ಪ್ರಶ್ನೆಗೆ ಈ ದೇಶದಲ್ಲಿ ನಾಯಕರ ಅಭಾವವಿಲ್ಲ ಎಂದು ಉತ್ತರಿಸಿದ ಅವರು ಜನರ ಬೆಂಬಲ ತುಂಬಾ ಮುಖ್ಯ. ಸೋನಿಯಾ ಗಾಂಧಿಯವರ ಹೊರತಾಗಿ ಎಲ್ಲ ವಿಭಾಗದ ಜನರಿಂದಲೂ ಬೆಂಬಲ ಸಿಗುವ ವ್ಯಕ್ತಿ ಶರದ್ ಪವಾರ್ ಎಂದಿದ್ದಾರೆ.
ಆದಾಗ್ಯೂ, ಯುಪಿಎ ನೇತೃತ್ವದ ಬಗ್ಗೆ ಉದ್ದವ್ ಠಾಕ್ರೆ ನೇತೃತ್ವದ ಪಕ್ಷ ಹೇಳಿಕೆ ನೀಡುವುದು ಸರಿಯಲ್ಲ. ಯುಪಿಎ ಅಧ್ಯಕ್ಷ ಸ್ಥಾನಕ್ಕೇರಲಿದ್ದಾರೆ ಎಂಬ ವದಂತಿಯನ್ನು ಸ್ವತಃ ಶರದ್ ಪವಾರ್ ಅವರೇ ಅಲ್ಲಗೆಳೆದಿದ್ದಾರೆ. ಹಾಗಾಗಿ ಈ ಚರ್ಚೆ ಅಗತ್ಯವಿಲ್ಲ ಎಂದು ಚವಾಣ್ ಹೇಳಿದ್ದಾರೆ.
ಚಳವಳಿ ಚರ್ಚೆ ತಡೆಯಲೆಂದೇ ಚಳಿಗಾಲದ ಅಧಿವೇಶನ ರದ್ದು: ಶಿವಸೇನಾ ನಾಯಕ ಸಂಜಯ್ ರಾವುತ್ ಟೀಕೆ