ಗ್ರಾಹಕರೊಬ್ಬರು ಅಮೆಜಾನ್ನಿಂದ ಹೆಡ್ಫೋನ್ ಆರ್ಡರ್ ಮಾಡಿದ್ದರು ಆದರೆ ಬಾಕ್ಸ್ನಲ್ಲಿ ಬಂದಿದ್ದು ಮಾತ್ರ ಟೂತ್ಪೇಸ್ಟ್. ವ್ಯಕ್ತಿಯೊಬ್ಬರು ಅಮೆಜಾನ್ನಿಂದ 19,990ರೂ. ಬೆಲೆಯ ಸೋನಿ ವೈರ್ಲೆಸ್ ಹೆಡ್ಫೋನ್ ಅನ್ನು ಆರ್ಡರ್ ಮಾಡಿದ್ದರು, ಆದರೆ ಅದರ ಬದಲು ಬಾಕ್ಸ್ನಲ್ಲಿ ಟೂಥ್ಪೇಸ್ಟ್ ಬಂದಿತ್ತು.
ಯಶ್ ಓಜಾ ಎಂಬ ಗ್ರಾಹಕರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಅಮೆಜಾನ್ ಪ್ಯಾಕ್ ಅನ್ನು ಅನ್ಬಾಕ್ಸ್ ಮಾಡುತ್ತಿರುವುದನ್ನು ಕಾಣಬಹುದು.
ನಿಮ್ಮ ಆರ್ಡರ್ಗೆ ತಪ್ಪಾದ ವಸ್ತುವನ್ನು ತಲುಪಿಸಿದ್ದಕ್ಕೆ ಕ್ಷಮೆಯಾಚಿಸುತ್ತೇವೆ, ದಯವಿಟ್ಟು ನಿಮ್ಮ ಡಿಎಂ ಸೆಟ್ಟಿಂಗ್ನ್ನು ನವೀಕರಿಸಿ ಮತ್ತು ಡಿಎಂ ಮೂಲಕ ನಮ್ಮನ್ನು ಸಂಪರ್ಕಿಸಿ ಎಂದು ಹೇಳಿದ್ದಾರೆ.
ಮತ್ತಷ್ಟು ಓದಿ: Viral: ಅಮೇಝಾನ್ ಕ್ಯಾಶ್ಬ್ಯಾಕ್ ಆಫರ್; ಮಾರಾಟಗಾರರ ಒಳಸುಳಿಗಳ ಬಗ್ಗೆ ನೆಟ್ಮಂದಿ ಚರ್ಚೆ
ಇದೇ ರೀತಿ ವ್ಯಕ್ತಿಯೊಬ್ಬರು ಅಮೆಜಾನ್ನಿಂದ 90 ಸಾವಿರ ರೂ. ಮೌಲ್ಯದ ಕ್ಯಾಮೆರಾ ಲೆನ್ಸ್ ಆರ್ಡರ್ ಮಾಡಿದ್ದರೆ ಅದರ ಬದಲಾಗಿ ಅವರಿಗೆ ಯಾವುದೇ ಗಿಡದ ಬೀಜವನ್ನು ಕಳುಹಿಸಲಾಗಿತ್ತು. ಈ ರೀತಿಯ ಘಟನೆಗಳು ಪದೇ ಪದೇ ನಡೆಯುತ್ತಿರುವುದರಿಂದ ಇ ಕಾಮರ್ಸ್ ಮೇಲಿನ ನಂಬಿಕೆ ಕಡಿಮೆಯಾಗುತ್ತಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:53 pm, Mon, 11 December 23