Viral: ಅಮೇಝಾನ್ ಕ್ಯಾಶ್ಬ್ಯಾಕ್ ಆಫರ್; ಮಾರಾಟಗಾರರ ಒಳಸುಳಿಗಳ ಬಗ್ಗೆ ನೆಟ್ಮಂದಿ ಚರ್ಚೆ
Online Shipping: ಆನ್ಲೈನ್ ಗಿಫ್ಟ್, ವೋಚರ್, ಕ್ಯಾಶ್ಬ್ಯಾಕ್ ಆಫರ್ಗಳ ಹುಚ್ಚಿಗೆ ಬಿದ್ದವರು ಕೆಲ ವಿಷಯಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಇದೀಗ ರೆಡ್ಡಿಟ್ನಲ್ಲಿ ನೋಟಿನ ಮಾದರಿಯ ಕ್ಯಾಶ್ಬ್ಯಾಕ್ ವೋಚರ್ ಒಂದನ್ನು ಒಬ್ಬರು ಪೋಸ್ಟ್ ಮಾಡಿ ನಿಮಗೂ ಇಂಥದ್ದು ಆರ್ಡರ್ ಜೊತೆ ಬಂದಿದೆಯೇ ಎಂದು ಪ್ರಶ್ನಿಸಿದ್ದಾರೆ. ನೆಟ್ಟಿಗರನೇಕರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
Gift: ಹಬ್ಬಗಳು ಹತ್ತಿರ ಬರುತ್ತಿದ್ದಂತೆ ಆನ್ಲೈನ್ ಶಾಪಿಂಗ್ ಪ್ಲ್ಯಾಟ್ಫಾರ್ಮ್ಗಳು ಭರಾಟೆಯಿಂದ ಕ್ಯಾಶ್ಬ್ಯಾಕ್ ಆಫರ್ (Cashback Offer), ಗಿಫ್ಟ್ ವೋಚರ್, ಡಿಸ್ಕೌಂಟ್ ಎಂಬ ಗಾಳ ಬೀಸಿ ಗ್ರಾಹಕ ಜಾಲವನ್ನು ಭದ್ರಪಡಿಸಿಕೊಳ್ಳಲು ನೋಡುತ್ತಿರುತ್ತದೆ. ಇದೀಗ ರೂ. 25 ನೋಟೊಂದನ್ನು ರೆಡ್ಡಿಟ್ ಖಾತೆದಾರರು 2 ಗಂಟೆಗಳ ಹಿಂದೆ ಪೋಸ್ಟ್ ಮಾಡಿದ್ದಾರೆ. ಅಮೇಝಾನ್ನಲ್ಲಿ ಮಾಡಿದ ಆರ್ಡರ್ ಜೊತೆ ನನಗಿಂದು ಇದು ಸಿಕ್ಕಿದೆ. ನಿಮಗೇನಾದರೂ ಸಿಕ್ಕಿದೆಯೇ ಎಂದು ಕೇಳಿದ್ದಾರೆ. ನೋಟಿನ ಮಾದರಿಯ ಇಂಥ ಕ್ಯಾಶ್ಬ್ಯಾಕ್ ವೋಚರ್ಗಳು ನಮಗೂ ಸಿಕ್ಕಿವೆ ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ. ಅನೇಕರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದೇ ಹೆಚ್ಚು. ಆದರೂ ಕೆಲವರು ಗಂಭೀರವಾಗಿ ಆಫರ್ಗಳ ಒಳಸುಳಿಗಳ ಬಗ್ಗೆ ಚರ್ಚಿಸಿದ್ದಾರೆ.
ಇದನ್ನೂ ಓದಿ : Viral: ಫ್ಲೋರಿಡಾ; 5 ಜನರಿಂದ 17 ಅಡಿ ಹೆಬ್ಬಾವಿನ ರಕ್ಷಣೆ, ಫೋಟೋ ವೈರಲ್
150ಕ್ಕಿಂತಲೂ ಹೆಚ್ಚು ಜನರು ಈ ಪೋಸ್ಟ್ಗೆ ವೋಟ್ ಮಾಡಿದ್ದಾರೆ. ಸುಮಾರು 30 ಜನರು ಪ್ರತಿಕ್ರಿಯಿಸಿದ್ದಾರೆ. ಗಾಂಧೀಜಿಯವರ ಶಕ್ತಿ ನಿಮ್ಮೊಂದಿಗಿರಲಿ! ಎಂದಿದ್ದಾರೆ ಒಬ್ಬರು. ನನಗೂ ಇಂಥ ವೋಚರ್ ಸಿಕ್ಕಿದೆ ಎಂದಿದ್ದಾರೆ ಇನ್ನೊಬ್ಬರು. ಆದರೆ ಆ 25 ರೂಪಾಯಿ ಕ್ಯಾಶ್ಬ್ಯಾಕ್ ಪಡೆಯುವುದು ಹೇಗೆ ಎನ್ನುವುದೇ ನನಗೆ ಪ್ರಶ್ನೆಯಾಗಿದೆ ಎಂದಿದ್ದಾರೆ ಮತ್ತೊಬ್ಬರು. ನಾನು ಇಂಥ ಎರಡು ಕೂಪನ್ಗಳನ್ನು ಎರಡು ಪ್ರತ್ಯೇಕ ಆರ್ಡರ್ಗಳಲ್ಲಿ ಪಡೆದುಕೊಂಡಿದ್ದೇನೆ ಎಂದು ಇನ್ನೂ ಒಬ್ಬರು.
ಇಲ್ಲಿದೆ ಆ ಕ್ಯಾಶ್ಬ್ಯಾಕ್ ವೋಚರ್
ಈ ವೋಚರ್ ನನಗೂ ಸಿಕ್ಕಿದೆ. ಈ ಬಗ್ಗೆ ವಿಚಾರಿಸಿದಾಗ ಕ್ಯಾಶ್ಬ್ಯಾಕ್ ಪಡೆಯಬಹುದು ಎಂದರು. ಅದನ್ನು ಪಡೆಯಲು ನಾನು ಖರೀದಿಸಿದ ವಸ್ತುಗಳಿಗೆ 5 ಸ್ಟಾರ್ ಗಳನ್ನು ಮತ್ತು ರಿವ್ಯೂವನ್ನು ಹಾಕಬೇಕು. ಅದರ ಸ್ಕ್ರೀನ್ ಶಾಟ್ ಕಳಿಸಿದಾಗ ಯುಪಿಐ ಐಡಿ ಕೇಳುತ್ತಾರೆ. ನಾನು ಖರೀದಿಸಿದ ವಸ್ತುವಿನ ಗುಣಮಟ್ಟ ಚೆನ್ನಾಗಿತ್ತು. ಹಾಗಾಗಿ ಸಂಜೆ ಸ್ನ್ಯಾಕ್ಸ್ ತಿನ್ನಲು ನಾನು ಕ್ಯಾಶ್ಬ್ಯಾಕ್ ಪಡೆದುಕೊಂಡಿದ್ದೇನೆ ಎಂದಿದ್ದಾರೆ ಒಬ್ಬರು.
ಇದನ್ನೂ ಓದಿ : Viral: ಫ್ಲೋರಿಡಾ; 5 ಜನರಿಂದ 17 ಅಡಿ ಹೆಬ್ಬಾವಿನ ರಕ್ಷಣೆ, ಫೋಟೋ ವೈರಲ್
ಓಹೋ ಇದು ಶ್ರೀಮಂತರಾಗುವ ಸಮಯ ಎಂದಿದ್ದಾರೆ ಇನ್ನೊಬ್ಬರು. ಇದರಲ್ಲಿ ಮೋಸವಾಗುವ ಸಾಧ್ಯತೆ ಇದೆ. ಇದೆಲ್ಲವೂ ರಿವ್ಯೂಗಾಗಿ. ನಕಲಿ ಉತ್ಪನ್ನಗಳಿಗೆ ಒಳ್ಳೆಯ ಉತ್ಪನ್ನ ಬರೆದು ಇತರರು ಮೋಸಹೋಗುವಂತೆ ಮಾಡಬೇಡಿ ಎಂದಿದ್ದಾರೆ ಅನೇಕರು. ಹೀಗೆ ರಿವ್ಯೂ ಪಡೆದುಕೊಳ್ಳುವುದು ಅಪರಾಧ. ಗ್ರಾಹಕರ ವೇದಿಕೆಯಲ್ಲಿ ದೂರು ಕೊಡುತ್ತೇನೆ ಎಂದು ನಾನು ಅಮೇಝಾನ್ಗೆ ಬೆದರಿಸಿದೆ. ಆಗ ಅಮೇಝಾನ್ನವರು ಇದಕ್ಕೆ ನಾವು ಜವಾಬ್ದಾರರಲ್ಲಿ, ಹೀಗೆಲ್ಲ ಮಾಡಬೇಡಿ ಎಂದು ವಿನಂತಿಸಿಕೊಂಡರು. ನಂತರ ನನಗೆ ಪರಿಹಾರಾರ್ಥವಾಗಿ ಹಣ ಕೊಟ್ಟರು ಎಂದಿದ್ದಾರೆ ಮತ್ತೊಬ್ಬರು. ಹೀಗೆ ಅನೇಕರು ತಮ್ಮ ತಮ್ಮ ಅನುಭವಗಳನ್ನು ಈ ಪೋಸ್ಟ್ನಡಿ ಹಂಚಿಕೊಂಡಿದ್ದಾರೆ.
ಈ ಕುರಿತು ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ