Viral Video: ಸ್ಟ್ರೆಚ್ ಮಾರ್ಕ್‌ಗಳಿಗೆ ತಲೆಕೆಡಿಸಿಕೊಳ್ಳದೇ ಅದನ್ನೇ ಸ್ಪೂರ್ತಿಯಾಗಿಟ್ಟುಕೊಂಡು ಅದ್ಭುತ ಚಿತ್ರಗಳನ್ನು ಬಿಡಿಸಿದ ಕಲಾಗಾರ್ತಿ
ಇಲ್ಲೊಬ್ಬರು ಅದ್ಭುತ ಕಲಾಗಾರ್ತಿ ತನ್ನ ಗರ್ಭಾಧಾರಣೆಯಿಂದಾದ ಸ್ಟ್ರೆಚ್ ಮಾರ್ಕ್‌ಗಳ ಬಗ್ಗೆ ತಲೆಕೆಡಿಸಿಕೊಳ್ಳದೇ ಅದನ್ನೇ ಸ್ಪೂರ್ತಿಯಾಗಿಟ್ಟುಕೊಂಡು ಅದ್ಭುತ ಚಿತ್ರಗಳನ್ನು ಬಿಡಿಸಿದ್ದಾರೆ. ಈ ಮೂಲಕ ಸಾಕಷ್ಟು ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಸ್ಟ್ರೆಚ್ ಮಾರ್ಕ್‌ನಿಂದ ಮೂಡಿಬಂದ ಅದ್ಭುತ ಕಲೆಗಳ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದ್ದು, ಸಾಕಷ್ಟು ನೆಟ್ಟಿಗರಿಂದ ಶ್ಲಾಘನೆ ವ್ಯಕ್ತವಾಗಿದೆ.
ತೂಕ ಕಳೆದುಕೊಂಡಾಗ ಅಥವಾ ಗರ್ಭಾವಸ್ಥೆಯಲ್ಲಿ ಸ್ಟ್ರೆಚ್ ಮಾರ್ಕ್‌ಗಳು ಕಂಡುಬರುವುದು ಸಾಮಾನ್ಯ. ಆದರೆ ತೂಕ ಕಳೆದುಕೊಂಡ ಖುಷಿಗಿಂತ ಸ್ಟ್ರೆಚ್ ಮಾರ್ಕ್‌ಗಳನ್ನು ಕಂಡು ಬೇಸರಗೊಳ್ಳುವವರೂ ಇದ್ದಾರೆ. ಯಾಕೆಂದರೆ ಈ ಮಾರ್ಕ್‌ಗಳು ನಿಮ್ಮ ಸೌಂದರ್ಯವನ್ನು ಹಾಳು ಮಾಡುವುದರ ಜೊತೆಗೆ ಮುಜುಗರಕ್ಕೀಡು ಮಾಡುತ್ತದೆ ಎಂಬುದೇ ದೊಡ್ಡ ಸಮಸ್ಯೆ. ಆದರೆ ಇಲ್ಲೊಬ್ಬರು ಅದ್ಭುತ ಕಲಾಗಾರ್ತಿ ತನ್ನ ಗರ್ಭಾಧಾರಣೆಯಿಂದಾದ ಸ್ಟ್ರೆಚ್ ಮಾರ್ಕ್‌ಗಳ ಬಗ್ಗೆ ತಲೆಕೆಡಿಸಿಕೊಳ್ಳದೇ ಅದನ್ನೇ ಸ್ಪೂರ್ತಿಯಾಗಿಟ್ಟುಕೊಂಡು ಅದ್ಭುತ ಚಿತ್ರಗಳನ್ನು ಬಿಡಿಸಿದ್ದಾರೆ. ಈ ಮೂಲಕ ಸಾಕಷ್ಟು ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಸ್ಟ್ರೆಚ್ ಮಾರ್ಕ್‌ನಿಂದ ಮೂಡಿಬಂದ ಅದ್ಭುತ ಕಲೆಗಳ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದ್ದು, ಸಾಕಷ್ಟು ನೆಟ್ಟಿಗರಿಂದ ಶ್ಲಾಘನೆ ವ್ಯಕ್ತವಾಗಿದೆ.
ಈ ವೀಡಿಯೊವನ್ನು ಸಾರಾ-ಎಲೈನ್ ಫ್ರಿಚ್ ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ನೆವೆಂಬರ್ 2ರಂದು ಪೋಸ್ಟ್ ಮಾಡಿರುವ ಈ ವಿಡಿಯೋ ಇದೀಗಾಗಲೇ 349,933 ಲೈಕುಗಳನ್ನು ಪಡೆದುಕೊಂಡಿದೆ. ಗರ್ಭಾವಸ್ಥೆಯಲ್ಲಿ ಸ್ಟ್ರೆಚ್ ಮಾರ್ಕ್‌ಗಳನ್ನು ಕಂಡಾಗ ಮೊದಮೊದಲು ನೋವುಂಟಾಗಿದ್ದು ಹೌದು, ಆದರೆ ಕಾಲನಂತರದಲ್ಲಿ ಆ ಮಾರ್ಕ್‌ಗಳನ್ನೇ ಮಾದರಿಯಾಗಿಟ್ಟುಕೊಂಡು ಹೊಸ ಹೊಸ ಚಿತ್ರಗಳನ್ನು ಬಿಡಿಸಲು ಪ್ರಾರಂಭಿಸಿದೆ ಹಾಗೂ ಸ್ಟ್ರೆಚ್ ಮಾರ್ಕ್‌ಗಳ ಜೀವನದ ಒಂದು ಭಾಗ ಒಪ್ಪಿಕೊಂಡೆ. ಯಾವುದೇ ಮುಜುಗರಪಡಬೇಕಾಗಿಲ್ಲ ಎಂದು ಸಾರಾ ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ವಿಡಿಯೋ ಇಲ್ಲಿದೆ ನೋಡಿ:
View this post on Instagram
ಇದನ್ನೂ ಓದಿ: ಟಿಂಡರ್; ಹುಡುಗರು ಯಾಕಿಷ್ಟು ಹತಾಶೆಗೊಳಗಾಗುತ್ತಿದ್ದಾರೆ? ಯುವತಿಯ ಪ್ರಶ್ನೆ
ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಸಾಕಷ್ಟು ನೆಟ್ಟಿಗರಿಂದ ಶ್ಲಾಘನೆ ವ್ಯಕ್ತವಾಗಿದೆ. “ಇದು ಅದ್ಭುತವಾಗಿದೆ! ನಾನು ವರ್ಷಗಳಿಂದ ಸ್ಟ್ರೆಚ್ ಮಾರ್ಕ್‌ಗಳಿಂದಾಗಿ ಬಟ್ಟೆಗಳನ್ನು ಧರಿಸುವಾಗ ಮುಜುಗರಪಡುತ್ತಿದ್ದೇನೆ. ಆದರೆ ಈ ವಿಡಿಯೋ ಉತ್ತಮ ಭಾವನೆ ಮೂಡಿಸುತ್ತದೆ” ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. “ಸುಂದರವಾಗಿ ಮೂಡಿಬಂದಿದೆ, ಅದ್ಭುತ ಕಲೆ. ನೀವು ಸಾಕಷ್ಟು ಮಹಿಳೆಯರಿಗೆ ಮಾದರಿಯಾಗಿದ್ದೀರಿ” ಎಂದು ,ಮತ್ತೊಬ್ಬರು ಬರೆದುಕೊಂಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 12:24 pm, Sun, 12 November 23