Viral: ಟಿಂಡರ್​; ಹುಡುಗರು ಯಾಕಿಷ್ಟು ಹತಾಶೆಗೊಳಗಾಗುತ್ತಿದ್ದಾರೆ? ಯುವತಿಯ ಪ್ರಶ್ನೆ

Dating Application: ಡೇಟಿಂಗ್​ ಆ್ಯಪ್​ಗಳಿಗೆ ಮೊರೆ ಹೋಗುವ ಅನೇಕರು ತಮ್ಮ ಅಭಿಪ್ರಾಯಗಳನ್ನು ಆನ್​ಲೈನ್​ನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಯುವತಿಯೊಬ್ಬಳು ತನಗಾದ ಅನುಭವವನ್ನು ಹೇಳಿಕೊಂಡಿದ್ದಾಳೆ. ಪರಿಚಯವಾದ ಎರಡೇ ದಿನಕ್ಕೇ ತನ್ನೊಂದಿಗೆ ಲೈಂಗಿಕ ಸಂಬಂಧವನ್ನು ಆ ಹುಡುಗ ಬಯಸುತ್ತಿದ್ದಾನೆ. ಏನಾಗಿದೆ ಈ ಹುಡುಗರಿಗೆಲ್ಲ, ಯಾಕೆ ಇಷ್ಟೊಂದು ಹತಾಶೆಗೆ ಒಳಗಾಗುತ್ತಿದ್ದಾರೆ ಎಂದು ಕೇಳಿದ್ದಾಳೆ.

Viral: ಟಿಂಡರ್​; ಹುಡುಗರು ಯಾಕಿಷ್ಟು ಹತಾಶೆಗೊಳಗಾಗುತ್ತಿದ್ದಾರೆ? ಯುವತಿಯ ಪ್ರಶ್ನೆ
ಪ್ರಾತಿನಿಧಿಕ ಚಿತ್ರ
Follow us
ಶ್ರೀದೇವಿ ಕಳಸದ
|

Updated on: Nov 11, 2023 | 4:00 PM

Tinder: ‘ನಾನು 23 ವರ್ಷದ ಯುವತಿ. ಟಿಂಡರ್ ಡೇಟಿಂಗ್ ಆ್ಯಾಪ್​ (Dating App) ನಲ್ಲಿ ಇತ್ತೀಚೆಗೆ ವ್ಯಕ್ತಿಯೊಂದಿಗೆ ಮ್ಯಾಚ್ ಮಾಡಿಕೊಂಡೆ. ಆರಂಭದಲ್ಲಿ ಆ ವ್ಯಕ್ತಿ ತುಂಬಾ ಮಹಾನ್​ ಎಂಬಂತೆ ವರ್ತಿಸುತ್ತಿದ್ದ. ಆದರೆ ನಾನೇ ತಪ್ಪು ತಿಳಿದುಕೊಂಡಿದ್ದೆ. ಅವನೊಂದಿಗೆ ಮಾತನಾಡಲು ಆರಂಭಿಸಿದ ಎರಡು ದಿನಗಳೊಳಗೆ, ನಾವು ಲೈಂಗಿಕತೆಯಲ್ಲಿ ತೊಡಗಿಕೊಳ್ಳಬಹುದೆ? ಎಂದು ಕೇಳಿದ. ಈ ಕುರಿತು ತನ್ನ ಕಲ್ಪನೆಗಳನ್ನು ಹೇಳಿಕೊಳ್ಳಲಾರಂಭಿಸಿದ- ಅಯ್ಯೋ ದೇವರೇ! ಏನಾಗಿದೆ ಹುಡುಗರಿಗೆ? ಆರೋಗ್ಯಕರ ಸಂಬಂಧಕ್ಕೆ ಲೈಂಗಿಕತೆಯೂ ಬಹುಮುಖ್ಯ ಪಾತ್ರ ವಹಿಸುತ್ತದೆ ಎನ್ನುವುದು ನನಗೆ ಗೊತ್ತು. ಆದರೆ ಪರಿಚಯವಾದ ತಕ್ಷಣವೇ ಅದರತ್ತ ನುಗ್ಗುವುದು ಸರಿಯಾದುದಲ್ಲ. ಒಟ್ಟಾರೆಯಾಗಿ ಡೇಟಿಂಗ್​ಗಾಗಿ ನನಗೆ ಯೋಗ್ಯ ವ್ಯಕ್ತಿ ಸಿಗಲಾರನೇ? ಗಂಡಸರು ಗಂಡಸರೇ’

ಇದನ್ನೂ ಓದಿ : Viral: ಹಾಂಗ್​ಕಾಂಗ್​; ಸ್ನೇಕ್​ ಪಿಝಾ ತಿನ್ನಲು ಯಾರಿಗೆಲ್ಲ ಧೈರ್ಯವಿದೆ?

ರೆಡ್ಡಿಟ್​ನಲ್ಲಿ ಯುವತಿಯೊಬ್ಬರು ಟಿಂಡರ್​ ಅನುಭವವನ್ನು ಹಂಚಿಕೊಂಡಿದ್ದಾರೆ. ನೂರಾರು ಜನರು ಈ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅವನು ಸತ್ಯವನ್ನೇ ಹೇಳಿದ್ದಾನೆ, ಮುಕ್ಕಾಲು ಪಾಲು ಹುಡುಗರು ಹೀಗೆಯೇ ಇರುತ್ತಾರೆ. ಆನ್​ಲೈನ್​ ಡೇಟಿಂಗ್​ ಆ್ಯಪ್​ನಲ್ಲಿ ಇದಕ್ಕಿಂತ ಹೆಚ್ಚಿನದೇನು ನಿರೀಕ್ಷಿಸಲು ಸಾಧ್ಯ? ಯೋಗ್ಯ ಹುಡುಗರು ನಿಮಗೆ ಆನ್​ಲೈನ್​ನಲ್ಲಿ ಸಿಗಲಾರರು ಎಂದಿದ್ದಾರೆ ಕೆಲವರು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಯುವತಿಯ ರೆಡ್ಡಿಟ್ ಪೋಸ್ಟ್​ ಇಲ್ಲಿದೆ

ಅವರು ವಾಸ್ತವವನ್ನು ಹೇಳಿದ್ದಾರೆ, ನೀವು 5.7 ಅಡಿಗಿಂತ ಎತ್ತರವಾಗಿದ್ದೀರಾ? ಎಂದಿದ್ದಾರೆ ಒಬ್ಬರು. ಮುಂಬರುವ ದಿನಗಳಲ್ಲಿ ಆನ್​ಲೈನ್​ ಡೇಟಿಂಗ್​ ಮೂಲಕ ನಿಮಗೆ ಉತ್ತಮ ವ್ಯಕ್ತಿ ಸಿಗಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ ಇನ್ನೊಬ್ಬರು. ನೇರವಾಗಿ ಲೈಂಗಿಕತೆಯ ಬಗ್ಗೆ ಪ್ರಸ್ತಾಪಿಸುವವರು ಅದರಲ್ಲಿ ಅವರು ಕುಶಲತೆ ಹೊಂದಿದ್ದಾರೆ ಎಂದರ್ಥ ಎಂದಿದ್ದಾರೆ ಮತ್ತೊಬ್ಬರು. ಯೋಗ್ಯವ್ಯಕ್ತಿಗಳು ನೀರಸವಾಗಿರುತ್ತಾರೆ ಎಂದಿದ್ದಾರೆ ಮಗದೊಬ್ಬರು.

ಇದನ್ನೂ ಓದಿ : Viral Video: ಹಣೆಯ ಮೇಲೆ ಇನಿಯನ ಹೆಸರಿನ ಹಚ್ಚೆ; ಇದು ಅಸಲಿಯೋ ನಕಲಿಯೋ ಎಂದ ನೆಟ್​ಮಂದಿ

ಸುಂದರವಾದ ಗಂಡಸರು ಸಾಮಾನ್ಯವಾಗಿ ಲೈಂಗಿಕತೆಯ ಕಡೆಗೆ ಹೆಚ್ಚು ಗಮನ ಕೊಡುತ್ತಾರೆ ಎಂದಿದ್ದಾರೆ ಒಬ್ಬರು. ಇದನ್ನು ತಪ್ಪು ಎಂದು ನೀವು ಹೇಗೆ ಹೇಳುತ್ತೀರಿ? ಎಂದು ನನಗೆ ಅರ್ಥವಾಗುತ್ತಿಲ್ಲ ಎಂದಿದ್ದಾರೆ ಇನ್ನೊಬ್ಬರು. ಎಷ್ಟೋ ಹುಡುಗಿಯರು ಎರಡು ದಿನಗಳಲ್ಲಿ ನನ್ನೊಂದಿಗೆ ತಮ್ಮ ಭ್ರಮೆಗಳ ಬಗ್ಗೆ ಮಾತನಾಡಲು ಆರಂಭಿಸುತ್ತಾರೆ.  ನನಗಿದು ಅಸಹಜ ಎನ್ನಿಸುವುದಿಲ್ಲ. ಬಹುಶಃ ನೀವು ಟಿಂಡರ್​ಗೆ ಹೊಸಬರು ಎನ್ನಿಸುತ್ತದೆ ಎಂದಿದ್ದಾರೆ ಮತ್ತೊಬ್ಬರು.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು