Viral: ಫ್ಲೋರಿಡಾ; 5 ಜನರಿಂದ 17 ಅಡಿ ಹೆಬ್ಬಾವಿನ ರಕ್ಷಣೆ, ಫೋಟೋ ವೈರಲ್

Python: ಫ್ಲೋರಿಡಾದಲ್ಲಿ ದೈತ್ಯಗಾತ್ರದ ಹೆಬ್ಬಾವನ್ನು ಈ ಐದು ಜನರು ರಕ್ಷಿಸಿದ್ದಾರೆ. 90 ಕಿ. ಗ್ರಾಂ ಭಾರದ ಈ ಹಾವನ್ನು ರಕ್ಷಿಸುವುದು ಅಷ್ಟು ಸುಲಭದ್ದಾಗಿರಲಿಲ್ಲ ಎಂದಿದ್ದಾರೆ ಇವರು. ಇದನ್ನು ಬಂಧಿಸುವಾಗ ನಿಮಗೆ ತೊಂದರೆಯಾಗಿಲ್ಲವೆ? ಕಚ್ಚುವುದು ಅಥವಾ ಸುತ್ತಿಕೊಳ್ಳುವುದನ್ನು ಮಾಡಿಲ್ಲವೆ? ಎಷ್ಟು ಗಂಟೆಗಳ ಕಾರ್ಯಾಚರಣೆ ಇದು ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

Viral: ಫ್ಲೋರಿಡಾ; 5 ಜನರಿಂದ 17 ಅಡಿ ಹೆಬ್ಬಾವಿನ ರಕ್ಷಣೆ, ಫೋಟೋ ವೈರಲ್
17 ಅಡಿ ಉದ್ದ ಹೆಬ್ಬಾವನ್ನು ರಕ್ಷಿಸಿದಾಗ
Follow us
ಶ್ರೀದೇವಿ ಕಳಸದ
|

Updated on: Nov 11, 2023 | 12:20 PM

Florida: ವಿಷಕಾರಿ ಮತ್ತು ನಿಗೂಢ ಜೀವಿಗಳಾದ ಹಾವುಗಳನ್ನು ಕಂಡು ಅನೇಕರು ಭಯ ಬೀಳುತ್ತಾರೆ. ಹಾಗಾಗಿ ತಮ್ಮ ರಕ್ಷಣೆಗೆ ಅವುಗಳನ್ನು ಕೊಲ್ಲಲು ಮುಂದಾಗುತ್ತಾರೆ. ಆದರೆ ಅವುಗಳನ್ನು ರಕ್ಷಿಸುವ ಕೆಲಸಕ್ಕೆ ಕೆಲವೇ ಕೆಲವರು ಮುಂದಾಗುತ್ತಾರೆ. ಅದರಲ್ಲೂ ಮಾರುದ್ದ ಹಾವನ್ನು ಪಳಗಿಸಿ ಹಿಡಿಯುವವರು ಸಅಕಷ್ಟು ಜನರು ನಮ್ಮ ನಡುವೆ ಇದ್ದಾರೆ ಆದರೆ ದೊಡ್ಡ ದೊಡ್ಡ ಹೆಬ್ಬಾವುಗಳನ್ನು? ಇದೀಗ ಫ್ಲೋರಿಡಾದಲ್ಲಿ 5 ಪುರುಷರು 17 ಅಡಿ ಹೆಬ್ಬಾವನ್ನು ರಕ್ಷಿಸಿದ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಫ್ಲೋರಿಡಾದ ಬಿಗ್​ ಸೈಪ್ರೆಸ್ ನ್ಯಾಷನಲ್ ಪ್ರಿಸರ್ವ್​ನಲ್ಲಿ (Florida’s Big Cypress National Preserve) ಈ ಕಾರ್ಯಾಚರಣೆ ಮಾಡಲಾಗಿದೆ.

ಇದನ್ನೂ ಓದಿ : Viral Brain Teaser: ವಾರಾಂತ್ಯದ ಮಂಕನ್ನು ಓಡಿಸಲು ಇಲ್ಲಿದೆ ಮೋಜಿನ ಗಣಿತ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಹೆಬ್ಬಾವು ಬೇಟೆಗಾರರ ​​ಗುಂಪೊಂದು 17 ಅಡಿ ಉದ್ದದ ಮತ್ತು 90 ಕಿಲೋಗ್ರಾಂಗಳಷ್ಟು ತೂಕವಿರುವ ಹೆಬ್ಬಾವನ್ನು ಸೆರೆಹಿಡಿದಿದೆ. ನೆಟ್ಟಿಗರು ಈ ಫೋಟೋಗಳನ್ನು ನೋಡಿ ಇವರ ಧೈರ್ಯವನ್ನು ಕೊಂಡಾಡುತ್ತಿದ್ದಾರೆ. ನಿಜಕ್ಕೂ ಈ ಫೋಟೋಗಳು ಬೆಚ್ಚಿಬೀಳಿಸುತ್ತಿವೆ ಎಂದೂ ಹೇಳುತ್ತಿದ್ದಾರೆ.

17 ಅಡಿ ಉದ್ದದ ಹೆಬ್ಬಾವು ರಕ್ಷಣೆ

View this post on Instagram

A post shared by Mike Elfenbein (@mike_2lf)

ಹಾವು ರಕ್ಷಕ ಮೈಕ್ ಎಲ್ಫೆನ್‌ಬೀನ್ ಮತ್ತು ಅವರ 17 ವರ್ಷದ ಅವರ ಮಗ ಕೋಲ್ ಹಾವುಗಳ ಸಂರಕ್ಷಣೆಗಾಗಿ ಹಾವುಗಳನ್ನು ಹುಡುಕುತ್ತಿದ್ದಾಗ ಈ ಹೆಬ್ಬಾವು ಸಿಕ್ಕಿದೆ. ನಂತರ ಬೇಟೆಗಾರರಾದ ಟ್ರೇ ಬಾರ್ಬರ್, ಕಾರ್ಟರ್ ಗ್ಯಾವ್ಲಾಕ್ ಮತ್ತು ಹೋಲ್ಡನ್ ಹಂಟರ್ ಸಹಾಯದಿಂದ ಈ ದೈತ್ಯ ಹೆಬ್ಬಾವನ್ನು ಹಿಡಿಸಿದ್ದಾರೆ. ನಾವು ಪರಸ್ಪರ ಅಪರಿಚಿತರಾಗಿದ್ದೆವು. ಆದರೆ ಈ ಹಾವನ್ನು ಒಟ್ಟಾಗಿ ಸೆರೆಹಿಡಿಯಬೇಕು ಎನ್ನುವುದು ನಮ್ಮ ನಿರ್ಧಾರವಾಗಿತ್ತು. ಮೊದಲು ಗಾವ್ಲಾಕ್  ಇದರ ಬಾಲವನ್ನು ಹಿಡಿದ. ನಂತರ ಗಾವ್ಲಾಕ್ ಮತ್ತು ಕೋಲ್ ಅದರ ತಲೆಯನ್ನು ಗಟ್ಟಿಯಾಗಿ ಹಿಡಿದರು. 17 ಅಡಿ ಉದ್ದದ ಈ ಹೆಬ್ಬಾವನ್ನು ನಿಯಂತ್ರಿಸುವುದು ದೊಡ್ಡ ಹರಸಾಹಸವೇ ಆಗಿತ್ತು.’ ಎಂದಿದ್ದಾರೆ   ಎಂದಿದ್ದಾರೆ ಎಲ್ಫೆನ್​ಬೀನ್​.

ಇದನ್ನೂ ಓದಿ : Viral Video: ದೀಪಾವಳಿ ಬೋನಸ್​; ತಮಿಳುನಾಡಿನ ಟೀ ಎಸ್ಟೇಟ್​ ಉದ್ಯೋಗಿಗಳಿಗೆ ರಾಯಲ್ ಎನ್​ಫೀಲ್ಡ್​

ಅಬ್ಬಾ ಇದನ್ನು ಬಂಧಿಸುವಾಗ ನಿಮಗೆ ಅದು ತೊಂದರೆ ಮಾಡಲಿಲ್ಲವೇ? ಕಚ್ಚುವುದು, ಸುತ್ತಿಕೊಳ್ಳುವುದು ಇತ್ಯಾದಿ ಎಂದಿದ್ದಾರೆ ಅನೇಕರು. ಸದ್ಯ ನಿಮಗೇನು ಆಗಿಲ್ಲವಲ್ಲ ಎಂದು ಕಾಳಜಿ ವ್ಯಕ್ತಪಡಿಸಿದ್ದಾರೆ ಕೆಲವರು.

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು