Viral Brain Teaser: ವಾರಾಂತ್ಯದ ಮಂಕನ್ನು ಓಡಿಸಲು ಇಲ್ಲಿದೆ ಮೋಜಿನ ಗಣಿತ
Math Problem : ನಿಮ್ಮ ಮೆದುಳನ್ನು ಚುರುಕುಗೊಳಿಸುವ ಮತ್ತೊಂದು ಬ್ರೇನ್ ಟೀಸರ್ ಇಲ್ಲಿದೆ. ಕೆಲವರು ಇದಕ್ಕೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಿದ್ದಾರೆ. ಇನ್ನೂ ಕೆಲವರು ತಮಾಷೆ ಮಾಡಿದ್ದಾರೆ. ಇದನ್ನು ಓದಿ ನೋಡಿ, ನಿಮಗೇನು ಎನ್ನಿಸುತ್ತದೆ ತಿಳಿಸಿ. ಚುರುಕಾದ ನೀವು ಖಂಡಿತ ಇದಕ್ಕೆ ಸರಿಯಾದ ಉತ್ತರ ಕಂಡುಕೊಳ್ಳುತ್ತೀರಿ ಎಂಬ ನಂಬಿಕೆ ನಮಗಿದೆ. ಏನಂತೀರಿ?
Math Puzzle: ವಾರಾಂತ್ಯ ಮೆಲ್ಲನೇ ಆರಂಭವಾಗಿದೆ. ಮುಂದಿನ ಕೆಲಸಗಳಿಗೆ ಹುರುಪು ತುಂಬಲು ನಿಮ್ಮ ಮೆದುಳಿಗೆ ಚೂರು ಗುದ್ದು (Brain Teaser) ಕೊಟ್ಟರೆ ಹೇಗೆ? ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ಮೋಜಿನ ಗಣಿತ ಇಲ್ಲಿದೆ. ನೆಟ್ಟಿಗರೂ ಈ ಬಗ್ಗೆ ಸಾಕಷ್ಟು ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಚುರುಕಾಗಿರುವ ನೀವು ಇದಕ್ಕೆ ಉತ್ತರ ಕಂಡುಕೊಳ್ಳುತ್ತೀರಿ ಎನ್ನುವ ಭರವಸೆ ಇದೆ. ಮಿಶೆಲ್ ಸ್ಟೋಹಿರೋ ಎಂಬುವ X ಖಾತೆದಾರರು ಈ ಪೋಸ್ಟ್ ಹಂಚಿಕೊಂಡಿದ್ದಾರೆ. ಪ್ರಶ್ನೆ ಇಲ್ಲಿದೆ; ಸ್ಯಾಮ್ ಮತ್ತು ಜೆಸ್ಸಿ ಪ್ರತಿ ಒಂದು ಗಂಟೆಗೆ 5 ಕಾರುಗಳನ್ನು ತೊಳೆಯುತ್ತಾರೆ. ದಿನಕ್ಕೆ 7 ಗಂಟೆಗಳ ಕಾಲ ಇವರು ಕೆಲಸ ಮಾಡುತ್ತಾರೆ. ಹಾಗಾದರೆ ಸ್ಯಾಮ್ ಮತ್ತು ಜೆಸ್ಸಿ 2 ದಿನಗಳಲ್ಲಿ ಒಟ್ಟು ಎಷ್ಟು ಕಾರುಗಳನ್ನು ತೊಳೆಯುತ್ತಾರೆ?
ಇದನ್ನೂ ಓದಿ : Viral Video: ದೀಪಾವಳಿ ಬೋನಸ್; ತಮಿಳುನಾಡಿನ ಟೀ ಎಸ್ಟೇಟ್ ಉದ್ಯೋಗಿಗಳಿಗೆ ರಾಯಲ್ ಎನ್ಫೀಲ್ಡ್
ನವೆಂಬರ್ 8ರಂದು ಹಂಚಿಕೊಂಡಿ ಈ ಪೋಸ್ಟ್ ಅನ್ನು ಈತನಕ 93,000 ಜನರು ನೋಡಿದ್ದಾರೆ. 600ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದು ನೂರಾರು ಜನರು ಪ್ರತಿಕ್ರಿಯಿಸಿ ಈ ಒಗಟನ್ನು ಬಿಡಿಸಲು ನೋಡಿದ್ದಾರೆ. ಅನೇಕರು ತಮಾಷೆ ಮಾಡಿದ್ದಾರೆ.
ಇಲ್ಲಿದೆ ಆ ಒಗಟು
Hey #lawtwitter I have questions.
1. Are Sam & Jesse washing 5 cars total each hour or 5 cars per person each hour?
2. Just because Sam & Jesse “can” wash 5 cars each hour, are we to assume they did?
3. Did math get harder since I was in 3rd grade or did law school ruin me? pic.twitter.com/TT4MbslpkG
— Michelle Strowhiro (@strowhiro) November 8, 2023
ಗಣಿತದ ಈ ಒಗಟನ್ನು ಇಂಗ್ಲಿಷ್ ಶಿಕ್ಷಕರಿಗೆ ಪರಿಶೀಲಿಸಲು ಹೇಳಬೇಕಿದೆ ಎಂದು ತಮಾಷೆ ಮಾಡಿದ್ದಾರೆ ಒಬ್ಬರು. ಪ್ರೈಮರಿ ಸ್ಕೂಲಿನಲ್ಲಿ ಗಣಿತ ಬಿಡಿಸುವಾಗ ಕಣ್ಣೀರು ಹಾಕುತ್ತಿದ್ದುದು ಈಗ ನೆನಪಾಗುತ್ತಿದೆ ಎಂದಿದ್ದಾರೆ ಇನ್ನೊಬ್ಬರು. 140 ಅಥವಾ ಅದಕ್ಕಿಂತ ಕಡಿಮೆ ಎಂದಿದ್ದಾರೆ ಮತ್ತೊಬ್ಬರು. ಅಯ್ಯೋ ಈ ನಂಬರ್ಗಳನ್ನು ನೋಡಿದರೆ ನನಗೆ ಹುಚ್ಚು ಹಿಡಿಯುತ್ತದೆ ಎಂದಿದ್ದಾರೆ ಮಗದೊಬ್ಬರು.
ನಿಮಗೆ ಉತ್ತರ ಹೊಳೆಯಿತೆ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 10:20 am, Sat, 11 November 23