9ನೇ ವಯಸ್ಸಿನಲ್ಲೇ ಗೌರವ ಡಾಕ್ಟರೇಟ್ ಪಡೆದ ಧವನಿ ಸಾಮಾನ್ಯದವಳಲ್ಲ!
ಈ ಪುಟಾಣಿ ಬಾಲಕಿ ಧವನಿ 224 ವಿಧಾನಸಭಾ ಕ್ಷೇತ್ರಗಳ ಹೆಸರು, ಧೃತರಾಷ್ಟ್ರನ 101 ಮಕ್ಕಳ ಹೆಸರು, ಶ್ರೀರಾಮಚಂದ್ರನ ವಂಶವೃಕ್ಷ, 51 ಕೆಮಿಕಲ್ ಫಾರ್ಮುಲಾ, ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಅವರ 62 ಬಿರುದುಗಳು, ಪುರಾತನ ಕಾಲದಲ್ಲಿದ್ದ 64 ವಿದ್ಯೆಗಳು ಸೇರಿದಂತೆ ಹಲವು ವಿಷಯಗಳನ್ನು 1 ನಿಮಿಷದಲ್ಲಿ ಹೇಳುತ್ತಾಳೆ.
1 ನಿಮಿಷ ಹೇಗೆ ಕಳೆದುಹೋಗುತ್ತದೆ ಎಂಬುದೇ ನಮಗೆ ಗೊತ್ತಾಗುವುದಿಲ್ಲ. ಆದರೆ, ಈ ಬಾಲಕಿ 1 ನಿಮಿಷದಲ್ಲಿ ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳ ಹೆಸರು ಹೇಳುತ್ತಾಳೆ, 101 ಕೌರವರ ಹೆಸರು ಹೇಳುತ್ತಾಳೆ ಎಂದರೆ ಅಚ್ಚರಿಯಾಗದಿರಲು ಸಾಧ್ಯವೇ ಇಲ್ಲ. ಬೆಂಗಳೂರಿನ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಬಾಲಕಿ ಈಗ ಡಾಕ್ಟರ್ ಧವನಿ. ಈ ಬಾಲಕಿಗೆ 9ನೇ ವಯಸ್ಸಿಗೆ ಗೌರವ ಡಾಕ್ಟರೇಟ್ ಕೂಡ ಬಂದಿದೆ. ಸಣ್ಣ ವಯಸ್ಸಿನಲ್ಲೇ ವಿಶ್ವ ದಾಖಲೆಯನ್ನು ಕೂಡ ಮಾಡಿದ್ದಾಳೆ. ಮೂಲತಃ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನವಳಾದ ಈ ಹುಡುಗಿಯ ನೆನಪಿನ ಶಕ್ತಿ ಅಂತಿಂಥದ್ದಲ್ಲ.
ಈ ಪುಟಾಣಿ ಬಾಲಕಿ ಧವನಿ 224 ವಿಧಾನಸಭಾ ಕ್ಷೇತ್ರಗಳ ಹೆಸರು, ಧೃತರಾಷ್ಟ್ರನ 101 ಮಕ್ಕಳ ಹೆಸರು, ಶ್ರೀರಾಮಚಂದ್ರನ ವಂಶವೃಕ್ಷ, 51 ಕೆಮಿಕಲ್ ಫಾರ್ಮುಲಾ, ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಅವರ 62 ಬಿರುದುಗಳು, ಪುರಾತನ ಕಾಲದಲ್ಲಿದ್ದ 64 ವಿದ್ಯೆಗಳು ಸೇರಿದಂತೆ ಹಲವು ವಿಷಯಗಳನ್ನು 1 ನಿಮಿಷದಲ್ಲಿ ಹೇಳುತ್ತಾಳೆ. ಇಷ್ಟು ಚಿಕ್ಕ ವಯಸ್ಸಿನಲ್ಲೇ 150ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದಿರುವ ಧವನಿ 350ಕ್ಕೂ ಹೆಚ್ಚು ವೇದಿಕೆಗಳಲ್ಲಿ ತಮ್ಮ ಪ್ರತಿಭೆಯ ಪ್ರದರ್ಶನ ಮಾಡಿದ್ದಾಳೆ. ಈಕೆಯ ಪ್ರತಿಭೆಯನ್ನು ಗುರುತಿಸಿ ತಮಿಳುನಾಡು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಕೂಡ ಸಿಕ್ಕಿದೆ.
ಇದನ್ನೂ ಓದಿ: Success Story: ಹೋಟೆಲ್ನಲ್ಲಿ ವೈಟರ್ ಆಗಿದ್ದ ಜಯಗಣೇಶ್ ಐಎಎಸ್ ಅಧಿಕಾರಿಯಾದ ಕತೆಯಿದು
ಡಾಕ್ಟರ್ ಧವನಿ ಕರ್ನಾಟಕದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಕಿತ್ತೂರು ರಾಣಿ ಚೆನ್ನಮ್ಮನ ಪ್ರತಿಮೆಯನ್ನೂ ಪಡೆದಿದ್ದಾಳೆ. ಕರ್ನಾಟಕ ಸರ್ಕಾರದಿಂದ ಕೆಳದಿ ಚೆನ್ನಮ್ಮ ಪ್ರಶಸ್ತಿಯೂ ಲಭಿಸಿದೆ. ಸೂಪರ್ ಅಚೀವರ್, ವಿಶ್ವ ದಾಖಲೆ, ರಾಷ್ಟ್ರೀಯ ಮಟ್ಟದ ದಾಖಲೆಯನ್ನೂ ಮಾಡಿರುವ ಈ ಬಾಲಕಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾಳೆ.
ಈ ಬಾಲಕಿಯ ತಾಯಿ ರೇಖಾ ಗರ್ಭಿಣಿಯಾಗಿದ್ದಾಗಿನಿಂದಲೇ ಹಲವು ವಿಷಯಗಳ ಬಗ್ಗೆ ದಿನವೂ ಹೇಳುತ್ತಾ ಇದ್ದರು. ಗರ್ಭದಲ್ಲಿರುವಾಗಲೇ ಮಗಳಿಗೆ ತಮಗೆ ಇಷ್ಟವಾಗಿದ್ದನ್ನು ಕಲಿಸುವ ಪ್ರಯತ್ನ ಮಾಡಿದ್ದರು. ಧವನಿಗೆ 6 ತಿಂಗಳಿದ್ದಾಗಲೇ ಆಕೆ ಅಮ್ಮನ ಪ್ರಶ್ನೆಗಳಿಗೆ ಉತ್ತರ ನೀಡಲು ಪ್ರಯತ್ನಿಸುತ್ತಿದ್ದಳು. ಅಮ್ಮ ಹೇಳಿಕೊಟ್ಟ ಶ್ಲೋಕಗಳನ್ನು ತನ್ನ ತೊದಲು ಮಾತಿನಿಂದ ಹೇಳುತ್ತಿದ್ದಳು. ತೀವ್ರ ಬಡತನದ ಕುಟುಂಬದಲ್ಲಿ ಹುಟ್ಟಿದ ಧವನಿ ಯಾವುದೇ ಮೊಬೈಲ್, ಟಿವಿಯ ಆಕರ್ಷಣೆಗೂ ಒಳಗಾಗದೆ ಬಾಲ್ಯದಿಂದಲೇ ಸಾಮಾನ್ಯ ಜ್ಞಾನದ ವಿಷಯಗಳನ್ನು ಕಲಿಯತೊಡಗಿದಳು. 2 ವರ್ಷವಿರುವಾಗಲೇ ವೇದಿಕೆ ಹತ್ತಿ ಶ್ಲೋಕಗಳನ್ನು ಹೇಳುತ್ತಿದ್ದಳು.
ಇದನ್ನೂ ಓದಿ: Success Story: ದಿನಕ್ಕೆ 10 ರೂ. ದುಡಿಯುತ್ತಿದ್ದ ದಿನಗೂಲಿ ನೌಕರ ಈಗ ಐಎಎಸ್ ಅಧಿಕಾರಿ!
ಖಾಸಗಿ ಶಾಲೆಯಲ್ಲಿ ಓದಿಸಲು ಹಣವಿಲ್ಲದ ಕಾರಣ ಸರ್ಕಾರಿ ಶಾಲೆಯಲ್ಲೇ ಓದುತ್ತಿರುವ ಧವನಿ ಸರ್ಕಾರಿ ಶಾಲೆಯಲ್ಲೇ ಓದಿ ದೊಡ್ಡ ಸಾಧನೆ ಮಾಡುತ್ತೇನೆ ಎಂದು ತನ್ನ ತಾಯಿಗೆ ಮಾತು ಕೊಟ್ಟಿದ್ದಾಳೆ. ಸಾಧನೆ ಮಾಡಲು ಶಿಕ್ಷಣ ಬಹಳ ಮುಖ್ಯ ಎಂಬುದನ್ನು ಧವನಿಯ ತಾಯಿ ರೇಖಾ ಆಕೆಗೆ ಹೇಳಿಕೊಟ್ಟಿದ್ದಾರೆ. ಹೀಗಾಗಿ, ಓದಿನತ್ತ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳುತ್ತಿರುವ ಧವನಿಗೆ ಹೊಸತನ್ನು ಕಲಿಯುವುದೆಂದರೆ ಬಹಳ ಇಷ್ಟ. ಅಂದಹಾಗೆ, ಧವನಿ ಎಂದರೆ ಅದೃಷ್ಟ ದೇವತೆ ಎಂದು ಅರ್ಥವಂತೆ. ತಾನು ತನ್ನ ಮನೆಗೆ ಮಾತ್ರವಲ್ಲದೆ ಇಡೀ ದೇಶಕ್ಕೇ ಅದೃಷ್ಟ ತರುವಂತಾಗಬೇಕೆಂಬುದು ಈ ಬಾಲಕಿಯ ಆಸೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ