AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Success Story: ಹೋಟೆಲ್​ನಲ್ಲಿ ವೈಟರ್ ಆಗಿದ್ದ ಜಯಗಣೇಶ್ ಐಎಎಸ್ ಅಧಿಕಾರಿಯಾದ ಕತೆಯಿದು

ಜಯಗಣೇಶ್ ಐಎಎಸ್ ಪರೀಕ್ಷೆಗೆ ತಯಾರಿ ನಡೆಸಿದಾಗ ಆರ್ಥಿಕ ಕೊರತೆ ಎದುರಿಸಬೇಕಾಯಿತು. ಅವರು ತಮ್ಮ ಖರ್ಚು-ವೆಚ್ಚಕ್ಕಾಗಿ ಪೂರಕವಾಗಿ ಹೋಟೆಲ್‌ನಲ್ಲಿ ವೈಟರ್ ಆಗಿ ಕೆಲಸ ಮಾಡಿದರು. ಹೋಟೆಲ್‌ನಲ್ಲಿ ಮಾಣಿಯಾಗಿ ಕೆಲಸ ಮಾಡಿದ ನಂತರ ಅವರು ಪರೀಕ್ಷೆಗೆ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗಿತ್ತು.

Success Story: ಹೋಟೆಲ್​ನಲ್ಲಿ ವೈಟರ್ ಆಗಿದ್ದ ಜಯಗಣೇಶ್ ಐಎಎಸ್ ಅಧಿಕಾರಿಯಾದ ಕತೆಯಿದು
ಜಯಗಣೇಶ್Image Credit source: iStock
Follow us
ಸುಷ್ಮಾ ಚಕ್ರೆ
|

Updated on: Nov 08, 2023 | 10:58 AM

ಕೆಲವರನ್ನು ಅವಕಾಶಗಳೇ ಹುಡುಕಿಕೊಂಡು ಬರುತ್ತವೆ. ಇನ್ನು ಕೆಲವರು ಅವಕಾಶಗಳನ್ನು ಹುಡುಕಿಕೊಂಡು ಹೋದರೂ ಅದು ಕೈಗೆಟುಕುವುದಿಲ್ಲ. ಆದರೆ, ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುವವರಿಗೆ ಮತ್ತು ಅವಕಾಶವನ್ನು ಗಿಟ್ಟಿಸಿಕೊಳ್ಳುತ್ತೇನೆಂಬ ಹಠ ತೊಡುವವರಿಗೆ ಯಶಸ್ಸು ಸಿಕ್ಕೇ ಸಿಗುತ್ತದೆ. ಇದಕ್ಕೆ ಹೋಟೆಲ್​ನಲ್ಲಿ ವೈಟರ್ ಆಗಿ ಕೆಲಸ ಮಾಡುತ್ತಿದ್ದ ಜಯಗಣೇಶ್ ಅವರೇ ಸಾಕ್ಷಿ. ಈ ಜಯಗಣೇಶ್ ಈಗ ಐಎಎಸ್​ ಅಧಿಕಾರಿ ಎಂದರೆ ನಿಮಗೆ ಆಶ್ಚರ್ಯವಾಗದಿರಲು ಸಾಧ್ಯವೇ ಇಲ್ಲ.

ಕಾರ್ಖಾನೆಯ ಕೆಲಸಗಾರನ ಮಗನಾದ ಜಯಗಣೇಶ್ ತಮಿಳುನಾಡಿನ ವೆಲ್ಲೂರು ಜಿಲ್ಲೆಯ ವಿನ್ವಮಂಗಲಂನ ಹಳ್ಳಿಯಲ್ಲಿ ಜನಿಸಿದ ಜಯಗಣೇಶ್ ಅವರ ಮನೆಯಲ್ಲಿ ತೀವ್ರ ಬಡತನವಿತ್ತು. ಹಣಕಾಸಿನ ಸಮಸ್ಯೆಯಿಂದ ಶಿಕ್ಷಣ ಪಡೆಯುವುದೇ ಕಷ್ಟವಾಗಿತ್ತು. ಆದರೆ, ಜಯಗಣೇಶ್ ಅವರಿಗೆ ಐಎಎಸ್​ ಅಧಿಕಾರಿಯಾಗಬೇಕೆಂಬ ಆಸೆಯಿತ್ತು. ಜಯಗಣೇಶ್ ಐಎಎಸ್ ಅಧಿಕಾರಿಯಾಗುವ ಕನಸನ್ನು ನನಸಾಗಿಸಲು ಹಲವು ಸಂಕಷ್ಟಗಳನ್ನು ಎದುರಿಸಿದರು.

ಇದನ್ನೂ ಓದಿ: Success Story: ದಿನಕ್ಕೆ 10 ರೂ. ದುಡಿಯುತ್ತಿದ್ದ ದಿನಗೂಲಿ ನೌಕರ ಈಗ ಐಎಎಸ್​ ಅಧಿಕಾರಿ!

ಹಳ್ಳಿಯ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ನಂತರ ಜಯಗಣೇಶ್ ತನ್ನ ಪಾಲಿಟೆಕ್ನಿಕ್ ಶಿಕ್ಷಣವನ್ನು ಮುಗಿಸಿದರು. ಬಳಿಕ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದರು. ಆದರೆ, ಡಿಪ್ಲೊಮಾ ಮತ್ತು ಇಂಜಿನಿಯರಿಂಗ್ ಪದವಿ ಪಡೆದರೂ ಉದ್ಯೋಗ ಸಿಗಲಿಲ್ಲ. ಹೀಗಾಗಿ, ಜೀವನೋಪಾಯಕ್ಕಾಗಿ ಅವರು ಚಿತ್ರ ಮಂದಿರದಲ್ಲಿ ಬಿಲ್ಲಿಂಗ್ ಕ್ಲರ್ಕ್ ಆಗಿ ಕೆಲಸ ಮಾಡಿದರು. ಆಗ ಪ್ರತಿ ತಿಂಗಳು 2,500 ರೂ. ಪಡೆಯುವ ಬೇರರ್ ಆಗಿ ಕೆಲಸ ಮಾಡಿದರು. ಆದರೆ, ಐಎಎಸ್ ಅಧಿಕಾರಿಯಾಗಬೇಕೆಂಬ ಅವರ ಕನಸು ಇನ್ನೂ ಕರಗಿರಲಿಲ್ಲ. ಹೀಗಾಗಿ, ಸ್ವಲ್ಪ ಸಮಯದ ನಂತರ ಅವರು ಆ ಕೆಲಸವನ್ನು ಬಿಟ್ಟರು.

ಜಯಗಣೇಶ್ ಐಎಎಸ್ ಪರೀಕ್ಷೆಗೆ ತಯಾರಿ ನಡೆಸಿದಾಗ ಆರ್ಥಿಕ ಕೊರತೆ ಎದುರಿಸಬೇಕಾಯಿತು. ಅವರು ತಮ್ಮ ಖರ್ಚು-ವೆಚ್ಚಕ್ಕಾಗಿ ಪೂರಕವಾಗಿ ಹೋಟೆಲ್‌ನಲ್ಲಿ ವೈಟರ್ ಆಗಿ ಕೆಲಸ ಮಾಡಿದರು. ಹೋಟೆಲ್‌ನಲ್ಲಿ ಮಾಣಿಯಾಗಿ ಕೆಲಸ ಮಾಡಿದ ನಂತರ ಅವರು ಪರೀಕ್ಷೆಗೆ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗಿತ್ತು. ಅವರು ತಡರಾತ್ರಿಯವರೆಗೆ ಓದುತ್ತಿದ್ದರು. ಅವರ ತಯಾರಿಯು ಸಾಕಾಗದ ಕಾರಣದಿಂದ ಜಯಗಣೇಶ್‌ ಯುಪಿಎಸ್‌ಸಿ ಪರೀಕ್ಷೆಯಲ್ಲಿ 6 ಪ್ರಯತ್ನಗಳಲ್ಲಿ ಯಶಸ್ಸು ಕಾಣಲಿಲ್ಲ.

ಇದನ್ನೂ ಓದಿ: Success Story: ಮನಸಿದ್ದರೆ ಮಾರ್ಗ; ರಿಕ್ಷಾ ಚಾಲಕನ ಮಗ ಈಗ ಹಿರಿಯ ಐಎಎಸ್​ ಅಧಿಕಾರಿ

ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಮಾಡಿದ 6 ಪ್ರಯತ್ನಗಳು ವಿಫಲವಾದ ನಂತರ, ಜಯಗಣೇಶ್ ಅವರಿಗೆ ಇಂಟೆಲಿಜೆನ್ಸ್ ಬ್ಯೂರೋದಲ್ಲಿ ಉತ್ತಮ ಕೆಲಸ ಸಿಕ್ಕಿದ್ದರಿಂದ 7ನೇ ಬಾರಿ ಯುಪಿಎಸ್​ಸಿ ಪರೀಕ್ಷೆ ಬರೆಯಬೇಕೇ? ಬೇಡವೇ? ಎಂಬ ಗೊಂದಲದಲ್ಲಿದ್ದರು. ಆದರೆ, ಕೊನೆಗೂ ಅವರು ಕೊನೆಯದಾಗಿ ಒಂದು ಬಾರಿ ಯುಪಿಎಸ್​ಸಿ ಪರೀಕ್ಷೆ ಬರೆಯಲು ನಿರ್ಧರಿಸಿದರು. ಅವರು ತಮ್ಮ 7ನೇ ಪ್ರಯತ್ನದಲ್ಲಿ 156ನೇ ರ್ಯಾಂಕ್ ಗಳಿಸಿ ಯುಪಿಎಸ್​ಸಿ ಪರೀಕ್ಷೆಯಲ್ಲಿ ಪಾಸ್ ಆದರು. ಅವರೀಗ ಐಎಎಸ್ ಅಧಿಕಾರಿಯಾಗಿದ್ದು, ತಮ್ಮ ಕನಸನ್ನು ನನಸು ಮಾಡಿಕೊಂಡ ಖುಷಿಯಲ್ಲಿದ್ದಾರೆ. ಹಾಗೇ, ಅನೇಕರಿಗೆ ಮಾದರಿಯಾಗಿದ್ದಾರೆ.

ಇನ್ನಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಸಿಂಹರಾಶಿಗೆ ಗುರುಬಲ ಶುರು; ಅದೃಷ್ಟ ಕೂಡಿ ಬರಲಿದೆ!
ಸಿಂಹರಾಶಿಗೆ ಗುರುಬಲ ಶುರು; ಅದೃಷ್ಟ ಕೂಡಿ ಬರಲಿದೆ!
ಕಳೆದ ಚುನಾವಣೆಯಲ್ಲಿ ರೆಡ್ಡಿಗೆ ಸಹಾಯ ಮಾಡಿದ ಮಾತು ಸುಳ್ಳು: ಸಿದ್ದರಾಮಯ್ಯ
ಕಳೆದ ಚುನಾವಣೆಯಲ್ಲಿ ರೆಡ್ಡಿಗೆ ಸಹಾಯ ಮಾಡಿದ ಮಾತು ಸುಳ್ಳು: ಸಿದ್ದರಾಮಯ್ಯ
12ನೇಮನೆಯಲ್ಲಿ ಗುರು ಸಂಚಾರ;ಕಟಕ ರಾಶಿಯವರು ತಿಳಿದುಕೊಳ್ಳಲೇಬೇಕಾದ ವಿಷಯಗಳಿವು
12ನೇಮನೆಯಲ್ಲಿ ಗುರು ಸಂಚಾರ;ಕಟಕ ರಾಶಿಯವರು ತಿಳಿದುಕೊಳ್ಳಲೇಬೇಕಾದ ವಿಷಯಗಳಿವು
ಮಿಥುನ ರಾಶಿಗೆ ಈ ವರ್ಷ ಗುರುಬಲ ಇರಲ್ಲ!
ಮಿಥುನ ರಾಶಿಗೆ ಈ ವರ್ಷ ಗುರುಬಲ ಇರಲ್ಲ!
ಗುರು ಸಂಚಾರದಿಂದ ವೃಷಭ ರಾಶಿಯ ಲಕ್​​​ ಬದಲಾಗಲಿದೆಯೇ?
ಗುರು ಸಂಚಾರದಿಂದ ವೃಷಭ ರಾಶಿಯ ಲಕ್​​​ ಬದಲಾಗಲಿದೆಯೇ?
ಸರ್ಕಾರದ ಸಾಧನಾ ಸಮಾವೇಶ ನನಗೆ ಸಂಬಂಧಿಸಿದ ವಿಷಯವಲ್ಲ: ಯಡಿಯೂರಪ್ಪ
ಸರ್ಕಾರದ ಸಾಧನಾ ಸಮಾವೇಶ ನನಗೆ ಸಂಬಂಧಿಸಿದ ವಿಷಯವಲ್ಲ: ಯಡಿಯೂರಪ್ಪ
ಗೃಹಲಕ್ಷ್ಮಿ ಹಣ ವರ್ಗಾವಣೆ ಯಾವಾಗ? ಸಿಎಂ ಸಿದ್ದರಾಮಯ್ಯ ಹೇಳಿದ್ದೇನು ನೋಡಿ
ಗೃಹಲಕ್ಷ್ಮಿ ಹಣ ವರ್ಗಾವಣೆ ಯಾವಾಗ? ಸಿಎಂ ಸಿದ್ದರಾಮಯ್ಯ ಹೇಳಿದ್ದೇನು ನೋಡಿ
ಮಿಥುನ ರಾಶಿಗೆ ಗುರು ಸಂಚಾರ; ಮೇಷ ರಾಶಿಯ ಮೇಲೆ ಪ್ರಭಾವ ಹೇಗಿರಲಿದೆ?
ಮಿಥುನ ರಾಶಿಗೆ ಗುರು ಸಂಚಾರ; ಮೇಷ ರಾಶಿಯ ಮೇಲೆ ಪ್ರಭಾವ ಹೇಗಿರಲಿದೆ?