ಬಿಕಿನಿ ಧರಿಸಿ ಒದ್ದೆ ಮೈಯಲ್ಲಿ ಈಜುಕೊಳದಿಂದ ಎದ್ದುಬರುತ್ತಿರೋ ವಿಡಿಯೋ ಪೋಸ್ಟ್ ಮಾಡಿದ ಸಂಸದೆ ನುಸ್ರತ್ ಜಹಾನ್ ಗೆ ನೆಟ್ಟಿಗರಿಂದ ತರಾಟೆ!

ಇಂಥ ದೃಶ್ಯ ನೋಡಿದ ಬಳಿಕ ನೆಟ್ಟಿಗರು ಸುಮ್ಮನಿದ್ದಾರೆಯೇ? ‘ಸಂಸದೆಯ ಬೋಲ್ಡ್ ಅವತಾರ’ ಮತ್ತು ಕೆಲ ಕೀಳು ಅಭಿರುಚಿಯ ಕಾಮೆಂಟ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಕಾಮೆಂಟ್ ಗಳಲ್ಲಿ ಅಶ್ಲೀಲತೆಯ ಅಂಶಗಳಿರೋದು ಹೇವರಿಕೆ ಹುಟ್ಟಿಸುತ್ತದೆ.

ಬಿಕಿನಿ ಧರಿಸಿ ಒದ್ದೆ ಮೈಯಲ್ಲಿ ಈಜುಕೊಳದಿಂದ ಎದ್ದುಬರುತ್ತಿರೋ ವಿಡಿಯೋ ಪೋಸ್ಟ್ ಮಾಡಿದ ಸಂಸದೆ ನುಸ್ರತ್ ಜಹಾನ್ ಗೆ ನೆಟ್ಟಿಗರಿಂದ ತರಾಟೆ!
ಸಂಸದೆ ನುಸ್ರತ್ ಜಹಾನ್
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:Nov 10, 2023 | 2:16 PM

ಬೆಂಗಳೂರು: ನುಸ್ರತ್ ಜಹಾನ್ (Nusrat Jahan) ಮತ್ತು ವಿವಾದ ಒಂದೇ ನಾಣ್ಯದ ಎರಡು ಮುಖಗಳು ಅಂದರೆ ಅತಿಶಯೋಕ್ತಿ ಅನಿಸದು. 33-ವರ್ಷ ವಯಸ್ಸಿನ ನುಸ್ರತ್ ಬೆಂಗಾಲಿ ಚಿತ್ರನಟಿಯ (Bengali cine actor) ಜೊತೆಗೆ ಪಶ್ಚಿಮ ಬಂಗಾಳದ ಬಸೀರತ್ ಕ್ಷೇತ್ರದಿಂದ ತೃಣಮೂಲ್ ಕಾಂಗ್ರೆಸ್ ಪಕ್ಷದ ಸಂಸದೆಯೂ (TMC MP) ಹೌದು. ಜನರಿಂದ ಅದರಲ್ಲೂ ವಿಶೇಷವಾಗಿ ನೆಟ್ಟಿಗರಿಂದ ಟೀಕೆಗೊಳಗಾಗೋದು ಅವರಿಗೆ ಹೊಸದೇನಲ್ಲ. ಇನ್ ಸ್ಟಾದಲ್ಲಿ ಅವರು ಇತ್ತಿಚಿಗೆ ಹಾಕಿದ ವಿಡಿಯೋವೊಂದು ವೈರಲ್ ಆಗಿದ್ದು ತೀವ್ರ ಸ್ವರೂಪದ ಟೀಕೆಗೂ ಗುರಿಯಾಗಿದೆ. ಹಳದಿ ಬಿಕಿನಿಯಲ್ಲಿ ಮೈಯೆಲ್ಲ ಒದ್ದೆ ಮಾಡಿಕೊಂಡು ಈಜುಕೊಳವೊಂದರಿಂದ ಅವರು ಎದ್ದು ಬರುತ್ತಿರುವ ವಿಡಿಯೋ ಇದು. ಎದೆ ಭಾಗದಲ್ಲಿ ‘ವಿಕ್ಟರಿ’ ಅಂತ ಹಾಕಿಸಿಕೊಂಡಿರುವ ಹಚ್ಚೆ ಸ್ಪಷ್ಟವಾಗಿ ಕಾಣುತ್ತದೆ.

ಇಂಥ ದೃಶ್ಯ ನೋಡಿದ ಬಳಿಕ ನೆಟ್ಟಿಗರು ಸುಮ್ಮನಿದ್ದಾರೆಯೇ? ‘ಸಂಸದೆಯ ಬೋಲ್ಡ್ ಅವತಾರ’ ಮತ್ತು ಕೆಲ ಕೀಳು ಅಭಿರುಚಿಯ ಕಾಮೆಂಟ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಕಾಮೆಂಟ್ ಗಳಲ್ಲಿ ಅಶ್ಲೀಲತೆಯ ಅಂಶಗಳಿರೋದು ಹೇವರಿಕೆ ಹುಟ್ಟಿಸುತ್ತದೆ.

ಪುಟ್ಟ ಮಗ ಇಶಾನ್ ಅನ್ನು ಭಾರತದಲ್ಲೇ ಬಿಟ್ಟು ನುಸ್ರತ್ ಇತ್ತೀಚಿಗೆ ತಮ್ಮ ಸಂಗಾತಿ ಯಶ್ ದಾಸ್ ಗುಪ್ತಾ ಜೊತೆ ವಿದೇಶವೊಂದಕ್ಕೆ ತೆರಳಿದ್ದರು. ಅಲ್ಲೇ ಅವರು ಸ್ವಿಮ್ಮಿಂಗ್ ಪೂಲ್ ನಿಂದ ನಡೆದು ಬರುವ ದೃಶ್ಯವನ್ನು ಕೆಮೆರಾದಲ್ಲಿ ಸೆರೆಹಿಡಿಯಾಲಾಗಿದೆ. ವಿಡಿಯೋ ಅಪ್ಲೋಡ್ ಮಾಡುವ ಮೊದಲು ನುಸ್ರತ್ ಇದೇ ಉಡುಪಿನಲ್ಲಿದ್ದ ಕೆಲ ಸ್ಟಿಲ್ ಗಳನ್ನು ಪೋಸ್ಟ್ ಮಾಡಿದ್ದರು. ಆಗಲೂ ನೆಟ್ಟಿಗರು ಅವರನ್ನು ತೀವ್ರವಾಗಿ ಟೀಕಿಸಿದ್ದರು. ಅವರ ಕೈಮೇಲಿದ್ದ ಗಾಯಗಳ ಬಗ್ಗೆಯೂ ಕಾಮೆಂಟ್ ಮಾಡಲಾಗಿತ್ತು. ‘ಒಣಗಿದ ಮರದ ಕೊಂಬೆಯಂತಿದೆ’ ಅಂತ ಒಬ್ಬ ಹೇಳಿದ್ದ.

ವಿಡಿಯೋ ಇಲ್ಲಿದೆ ನೋಡಿ

ಮತ್ತೊಬ್ಬ, ‘ನೀವು ಕೇವಲ ಸಿನಿಮಾ ನಟಿಯಾಗಿದ್ದರೆ ಇದನ್ನೆಲ್ಲ ಬರೆಯುತ್ತಿರಲಿಲ್ಲ, ಆದರೆ ನೀವು ಜನರ ಪ್ರತಿನಿಧಿ ಕೂಡ ಆಗಿದ್ದೀರಿ, ಜನ ನಿಮ್ಮನ್ನು ಅನುಕರಿಸುತ್ತಾರೆ ಹಾಗಾಗಿ ಅವರಿಗೆ ಮಾದರಿಯಾಗುವ ಪ್ರಯತ್ನ ಮಾಡಿ,’ ಅಂತ ಬುದ್ಧಿವಾದ ಹೇಳಿದ್ದ!

ಆದರೆ ನುಸ್ರತ್ ಟೀಕೆಗಳಿಗೆ ಹೆದರುವ ಮಣಿಯುವ ಮಹಿಳೆ ಸರ್ವಥಾ ಅಲ್ಲ ಅನ್ನೋದನ್ನು ಈ ವಿಡಿಯೋ ಪುಷ್ಠೀಕರಿಸುತ್ತದೆ. ಅವರಿಗೆ ತಮ್ಮ ಮತ್ತು ತನ್ಮನ ದೇಹದ ಬಗ್ಗೆ ಅತೀವ ಅಭಿಮಾನವಿದೆ. ಒಂದು ಮಗುವಿನ ತಾಯಿಯಾದರೂ ಅಂಗಸೌಷ್ಠವ ಕಾಪಾಡಿಕೊಂಡಿರುವ ಬಗ್ಗೆ ಪಡ್ಡೆಗಳು ಸೋಜಿಗ ವ್ಯಕ್ತಪಡಿಸುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:15 pm, Fri, 10 November 23