Stretch Marks Removal: ಸ್ಟ್ರೆಚ್ ಮಾರ್ಕ್ಸ್ ಸಮಸ್ಯೆಗೆ ಶಾಶ್ವತ ಪರಿಹಾರ ಈ 4 ಮನೆಮದ್ದು

ಸಾಮಾನ್ಯವಾಗಿ ಗರ್ಭಾಧಾರಣೆಯ ನಂತರ ಹಾಗೂ ದೇಹದಲ್ಲಿನ ಹಠಾತ್  ಬದಲಾವಣೆಗಳಿಂದಾಗಿ  (ತೂಕ ಹೆಚ್ಚಾಗುವುದು ಅಥವಾ ತೂಕ ಇಳಿಕೆ) ಸ್ಟ್ರೆಚ್ ಮಾರ್ಕ್ ಕಲೆಗಳು ಕಾಣಿಸಿಕೊಳ್ಳುತ್ತವೆ. ದುಬಾರಿ ಉತ್ಪನ್ನಗಳ ಬದಲಾಗಿ ಕೆಲವೊಂದು ಮನೆಮದ್ದುಗಳ ನಿಯಮಿತ ಬಳಕೆಯಿಂದ ಈ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬಹುದು. 

Stretch Marks Removal: ಸ್ಟ್ರೆಚ್ ಮಾರ್ಕ್ಸ್ ಸಮಸ್ಯೆಗೆ ಶಾಶ್ವತ ಪರಿಹಾರ ಈ 4 ಮನೆಮದ್ದು
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 29, 2023 | 5:09 PM

ಸಾಮಾನ್ಯವಾಗಿ ಗರ್ಭಾಧಾರಣೆಯ ನಂತರ, ದೇಹ ತೂಕ ಹೆಚ್ಚಾದಾಗ ಅಥವಾ  ತೂಕ ಇಳಿಕೆಯ ನಂತರ ದೇಹದಲ್ಲಿ ಅನೇಕ ಬದಲಾವಣೆಗಳು ಗೋಚರಿಸುತ್ತವೆ. ಅವುಗಳಲ್ಲಿ ಒಂದು ಸ್ಟ್ರೆಚ್ ಮಾರ್ಕ್  (Stretch Marks) ಸಮಸ್ಯೆ. ಇದು ಸಾಮಾನ್ಯ  ಸಮಸ್ಯೆಯಾಗಿದ್ದರೂ ಸಹ ಕೆಲವೊಬ್ಬರಿಗೆ  ಇದು ಮುಜುಗರವನ್ನು ಉಂಟುಮಾಡಬಹುದು. ಅಲ್ಲದೆ ಈ ಒಂದು ಸಮಸ್ಯೆಯಿಂದ ಹೆಚ್ಚಿನವರಿಗೆ ಅವರ ಇಷ್ಟದ ಉಡುಪುಗಳನ್ನು ತೊಡಲು ಕಷ್ಟಸಾಧ್ಯವಾಗುತ್ತದೆ.  ಸ್ಟ್ರೆಚ್ ಮಾರ್ಕ್ಸ್ ಹೆಚ್ಚಾಗಿ ಹೊಟ್ಟೆ,  ಕೈಗಳು, ತೊಡೆ ಮತ್ತು ಸೊಂಟದ ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ.  ಈ ಸಮಸ್ಯೆಯನ್ನು ತೊಡೆದುಹಾಕಲು ಅನೇಕ ಮಹಿಳೆಯರು ವಿವಿಧ ರೀತಿಯ ದುಬಾರಿ ಉತ್ಪನ್ನಗಳನ್ನು ಬಳಸುತ್ತಾರೆ. ಇದರ ಬದಲಿಕೆ ಕೆಲವೊಂದು ಮನೆಮದ್ದುಗಳ ನಿಯಮಿತ ಬಳಕೆಯಿಂದ ಸ್ಟ್ರೆಚ್ ಮಾರ್ಕ್ಸ್ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಪಡೆದುಕೊಳ್ಳಬಹುದು.

ಸ್ಟ್ರೆಚ್ ಮಾರ್ಕ್ಸ್ ಸಮಸ್ಯೆಯನ್ನು ಹೋಗಲಾಡಿಸಲು ಸಹಕಾರಿ ಈ ಕೆಲವು ಮನೆಮದ್ದುಗಳು:

ತೆಂಗಿನ ಎಣ್ಣೆ: ತ್ವಚೆ ಮತ್ತು ಕೂದಲ ಆರೈಕೆಗೆ ತೆಂಗಿನೆಣ್ಣೆಯು ಬಹಳ ಪ್ರಯೋಜನಕಾರಿಯಾಗಿದೆ. ಇದು ಅಗತ್ಯವಾದ ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿದ್ದು,  ಚರ್ಮವನ್ನು ತೇವಗೊಳಿಸಲು ಮತ್ತು ಪೋಷಿಸಲು ಸಹಕಾರಿಯಾಗಿದೆ.  ಹಾಗೂ  ತೆಂಗಿನೆಣ್ಣೆ ಸ್ಟ್ರೆಚ್ ಮಾರ್ಕ್ ಕಲೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಅದಕ್ಕಾಗಿ ಸ್ವಲ್ಪ ಪ್ರಮಾಣದಲ್ಲಿ ತೆಂಗಿನ ಎಣ್ಣೆಯನ್ನು ತೆಗೆದುಕೊಂಡು ಬಿಸಿ ಮಾಡಿ ಅದನ್ನು ಸ್ಟ್ರೆಚ್ ಮಾರ್ಕ್ ಇರುವ ಜಾಗಕ್ಕೆ ಹಚ್ಚಿ ಮಸಾಜ್ ಮಾಡಿ. ಇದಲ್ಲದೆ ಬಾದಾಮಿ ಎಣ್ಣೆ ಮತ್ತು ತೆಂಗಿನ ಎಣ್ಣೆಯನ್ನು ಸಮ ಪ್ರಮಾಣದಲ್ಲಿ ಬೆರೆಸಿ ಹಚ್ಚಬಹುದು.  ಇದರ ನಿಯಮಿತ ಬಳಕೆಯಿಂದ ದೇಹದಲ್ಲಿ ಕಾಣಿಸಿಕೊಳ್ಳುವ ಸ್ಟ್ರೆಚ್ ಮಾರ್ಕ್ಸ್ನ್ನು ಹೋಗಲಾಡಿಸಬಹುದು.

ಅಲೋವೆರಾ ಜೆಲ್:  ಅಲೋವೇರಾ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಣಾಮಕಾರಿ ಮನೆಮದ್ದಾಗಿದೆ. ಅಲೋವೆರಾ ಅನೇಕ  ಜೀವಸತ್ವ ಮತ್ತು ಖನಿಜಗಳಿಂದ ಸಮೃದ್ಧವಾಗಿದ್ದು, ಇದು ಚರ್ಮವನ್ನು ಪೋಷಿಸುವ ಗುಣವನ್ನು ಹೊಂದಿದೆ. ಅಲ್ಲದೆ ಇದು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದ್ದು, ಸ್ಟ್ರೆಚ್ ಮಾರ್ಕ್ಸ್ ಕಲೆಗಳನ್ನು ಹೋಗಲಾಡಿಸಲು ಪರಿಣಾಮಕಾರಿಯಾಗಿದೆ. ತಾಜಾ ಅಲೋವೆರಾ ಎಲೆಯನ್ನು ಕತ್ತರಿಸಿ ಅದರಿಂದ ಜೆಲ್ ಹೊರತೆಗೆದು  ಅದನ್ನು ಸ್ಟ್ರೆಚ್ ಮಾರ್ಕ್ ಕಲೆಗಳಿರುವ ಪ್ರದೇಶಕ್ಕೆ ಹಚ್ಚಿ 20 ರಿಂದ 30 ನಿಮಿಷಗಳ ಬಳಿಕ ತನ್ನೀರಿನಿಂದ ತೊಳೆಯಿರಿ. ಇದರ ನಿಯಮಿತ ಬಳಕೆಯಿಂದ  ಈ ಕಲೆಗಳು  ಕೆಲವೇ ದಿನಗಳಲ್ಲಿ ಕಣ್ಮರೆಯಾಗುತ್ತದೆ.

ಇದನ್ನೂ ಓದಿ: ಗರ್ಭಧಾರಣೆ ಹೊರತಾಗಿಯೂ ದೇಹದಲ್ಲಿ ಸ್ಟ್ರೆಚ್ ಮಾರ್ಕ್ಸ್​ ಮೂಡಲು ಕಾರಣಗಳು ಇಲ್ಲಿವೆ

ಜೇನುತುಪ್ಪ ಮತ್ತು ನಿಂಬೆ ರಸ: ನಿಂಬೆ ರಸವು ವಿಟಮಿನ್ ಸಿ ಪೋಷಕಾಂಶಗಳಲ್ಲಿ ಸಮೃದ್ಧವಾಗಿದ್ದು, ಇದು ಚರ್ಮದಲ್ಲಿ ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಮತ್ತು ಜೇನು ತುಪ್ಪವು ತ್ವಚೆಗೆ  ತೇವಾಂಶವನ್ನು ಒದಗಿಸುವ ಮೂಲಕ  ಶುಷ್ಕತೆಯನ್ನು ಹೋಗಲಾಡಿಸುತ್ತದೆ.  ಇವೆರಡರ ಮಿಶ್ರಣ ಸ್ಟ್ರೆಚ್ ಮಾರ್ಕ್ ಕಲೆಗಳನ್ನು ಹೋಗಲಾಡಿಸಲು ಪರಿಣಾಮಕಾರಿ ಮನೆಮದ್ದಾಗಿದೆ. . ಸ್ವಲ್ಪ ನಿಂಬೆ ರಸದೊಂದಿಗೆ ಜೇನುತುಪ್ಪ ಬೆರೆಸಿ ಸ್ಟ್ರೆಚ್ ಮಾರ್ಕ್ ಇರುವ ಸ್ಥಳಕ್ಕೆ ಹಚ್ಚಿ 10 ರಿಂದ 15 ನಿಮಿಷಗಳ ಕಾಲ ಬಿಡಿ, ನಂತರ ಸ್ವಚ್ಛ ನೀರಿನಿಂದ ತೊಳೆಯಿರಿ. ಇದರ ನಿಯಮಿತ ಉಪಯೋಗದ ಮೂಲಕ ಸ್ಟ್ರೆಚ್ ಮಾರ್ಕ್ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ಮೊಟ್ಟೆ ಮತ್ತು ವಿಟಮಿನ್ ಇ ಕ್ಯಾಪ್ಸುಲ್: ಮೊಟ್ಟೆ ಮತ್ತು ವಿಟಮಿನ್ ಇ ಕ್ಯಾಪ್ಸುಲ್ ಮಿಶ್ರಣವು ಸ್ಟ್ರೆಚ್ ಮಾರ್ಕ್ಸ್ ಕಲೆಗಳನ್ನು ಹೋಗಲಾಡಿಸಲು ತುಂಬಾ ಪ್ರಯೋಜನಕಾರಿಯಾಗಿದೆ. ಪರಿಣಾಮಕಾರಿ ಮನೆಮದ್ದಾಗಿದೆ. ಮೊಟ್ಟೆಯ ಬಿಳಿ ಭಾಗದೊಂದಿಗೆ ವಿಟಮಿನ್ ಕ್ಯಾಪ್ಸುಲ್ ಮಿಶ್ರಣ ಮಾಡಿ ಅದನ್ನು ಸ್ಟ್ರೆಚ್ ಮಾರ್ಕ್ ಇರುವ ಪ್ರದೇಶಕ್ಕೆ ಹಚ್ಚುವುದರಿಂದ ಈ ಸಮಸ್ಯೆಯಿಂದ ಪರಿಹಾರವನ್ನು ಕಂಡುಕೊಳ್ಳಬಹುದು.

ಮತ್ತಷ್ಟು ಆರೋಗ್ಯ ಸಲಹೆಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ