Punjab Politics ಸಿಖ್ ನಾಯಕರೇ ಪಂಜಾಬ್ ಸಿಎಂ ಆಗಬೇಕು; ಮುಖ್ಯಮಂತ್ರಿ ಪ್ರಸ್ತಾಪ ತಿರಸ್ಕರಿಸಿದ ಅಂಬಿಕಾ ಸೋನಿ

| Updated By: ರಶ್ಮಿ ಕಲ್ಲಕಟ್ಟ

Updated on: Sep 19, 2021 | 12:34 PM

Ambika Soni: ಸಿಖ್ ಸಮುದಾಯದವರು ಮುಖ್ಯಮಂತ್ರಿಯಾದೇ ಇದ್ದರೆ "ಸಂಕೀರ್ಣ ಪರಿಣಾಮಗಳನ್ನು" ಬೀರುತ್ತದೆ ಎಂದು ಸೋನಿ ಸಭೆಯಲ್ಲಿ ಹೇಳಿರುವುದಾಗಿ ಹೆಸರು ಹೇಳಲಿಚ್ಛಿಸದ ವ್ಯಕ್ತಿಯೊಬ್ಬರು ಹೇಳಿದ್ದಾರೆ.

Punjab Politics ಸಿಖ್ ನಾಯಕರೇ ಪಂಜಾಬ್ ಸಿಎಂ ಆಗಬೇಕು; ಮುಖ್ಯಮಂತ್ರಿ ಪ್ರಸ್ತಾಪ ತಿರಸ್ಕರಿಸಿದ ಅಂಬಿಕಾ ಸೋನಿ
ಅಂಬಿಕಾ ಸೋನಿ
Follow us on

ದೆಹಲಿ: ಕ್ಯಾಪ್ಟನ್ ಅಮರಿಂದರ್ ಸಿಂಗ್ ರಾಜೀನಾಮೆ ನೀಡಿದ ಒಂದು ದಿನದ ನಂತರ ಪಂಜಾಬ್‌ನ ಮುಂದಿನ ಮುಖ್ಯಮಂತ್ರಿಯಾಗುವ ಪ್ರಸ್ತಾಪವನ್ನು ಕಾಂಗ್ರೆಸ್ ನಾಯಕಿ ಅಂಬಿಕಾ ಸೋನಿ ತಿರಸ್ಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸೋನಿ ತನ್ನ ಪಕ್ಷದ ಸಹೋದ್ಯೋಗಿ ರಾಹುಲ್ ಗಾಂಧಿಯವರೊಂದಿಗೆ ತಡರಾತ್ರಿಯ ಸಭೆಯಲ್ಲಿ ಈ ಪ್ರಸ್ತಾಪ ನಿರಾಕರಿಸಿದರು ಎಂದು ಮೂಲಗಳು ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ. ಸಿಖ್ ಸಮುದಾಯದವರು ಮುಖ್ಯಮಂತ್ರಿಯಾದೇ ಇದ್ದರೆ “ಸಂಕೀರ್ಣ ಪರಿಣಾಮಗಳನ್ನು” ಬೀರುತ್ತದೆ ಎಂದು ಸೋನಿ ಸಭೆಯಲ್ಲಿ ಹೇಳಿರುವುದಾಗಿ ಹೆಸರು ಹೇಳಲಿಚ್ಛಿಸದ ವ್ಯಕ್ತಿಯೊಬ್ಬರು ಹೇಳಿದ್ದಾರೆ.

ಪಂಜಾಬ್‌ನ ಕಾಂಗ್ರೆಸ್‌ನ ಮೂವರು ರಾಜಕೀಯ ವೀಕ್ಷಕರು ಈ ವಿಷಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಪಡೆಯಲು ಪ್ರತಿ ಶಾಸಕರನ್ನು ಭೇಟಿ ಮಾಡುತ್ತಿದ್ದಾರೆ ಮತ್ತು ಮುಂದಿನ ಮುಖ್ಯಮಂತ್ರಿ ಯಾರು ಎಂಬ ನಿರ್ಧಾರಕ್ಕಾಗಿ ಮೂವರು ಪಕ್ಷದ ಹೈಕಮಾಂಡ್‌ಗೆ ವರದಿ ಸಲ್ಲಿಸಲಿದ್ದಾರೆ.

ಈ ವಿಷಯವನ್ನು ಸರಿಯಾಗಿ ನಿರ್ವಹಿಸದೇ ಇರುವುದಕ್ಕೆ ಪಕ್ಷದ ಅನೇಕರು ಅಸಮಾಧಾನಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪಂಜಾಬ್‌ನಲ್ಲಿ ವಿಧಾನಸಭಾ ಚುನಾವಣೆಗೆ ತಿಂಗಳುಗಳಷ್ಟೇ ಬಾಕಿ ಇರುವಾಗ ಅಮರಿಂದರ್ ಸಿಂಗ್ ರಾಜೀನಾಮೆ ನೀಡಿದ್ದು ಹೊಸದಾಗಿ ಅಧಿಕಾರ ವಹಿಸುವ ಮುಖ್ಯಮಂತ್ರಿಗೆ ಸಾಕಷ್ಟು ಜವಾಬ್ದಾರಿಗಳಿವೆ. “ನಿನ್ನೆ ಹರೀಶ್ ರಾವತ್ ಮತ್ತು ಅಜಯ್ ಮಾಕೆನ್ ಅವರೊಂದಿಗೆ ಶಾಸಕರ ಸಭೆ ನಡೆಸಲಾಗಿದೆ. ಈ ವಿಷಯದಲ್ಲಿ ಸೋನಿಯಾ ಗಾಂಧಿಯವರ ತೀರ್ಮಾನವೇ ಅಂತಿಮ ಎಂದು ನಿರ್ಣಯವನ್ನು ಅಂಗೀಕರಿಸಲಾಗಿದೆ. ಇಂದು ನಿಮಗೆ ಅವರ ನಿರ್ಧಾರ ಏನೆಂದು ತಿಳಿಯುತ್ತದೆ ” ಎಂದು ಪಂಜಾಬ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಪವನ್ ಗೋಯೆಲ್ ಹೇಳಿದರು.

ಮಾಜಿ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಸುನಿಲ್ ಜಖರ್, ಪಕ್ಷದ ರಾಜ್ಯ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಮತ್ತು ಸಚಿವ ಸುಖಜಿಂದರ್ ಸಿಂಗ್ ರಾಂಧವ – ಮುಖ್ಯಮಂತ್ರಿಹುದ್ದೆಗೆ ಸಂಭಾವ್ಯ ಹೆಸರುಗಳಾಗಿವೆ ಟ್ರಿಪ್ಟ್ ರಾಜಿಂದರ್ ಸಿಂಗ್ ಬಾಜ್ವಾ ಮತ್ತು ಕಾಂಗ್ರೆಸ್ ಸಂಸದ ಪರ್ತಪ್ ಸಿಂಗ್ ಬಾಜ್ವಾ ಕೂಡ ಮುಖ್ಯಮಂತ್ರಿ ಆಕಾಂಕ್ಷಿಗಳಾಗಿದ್ದಾರೆ.

ನವಜೋತ್ ಸಿದ್ದು ಅವರನ್ನು ಉತ್ತರಾಧಿಕಾರಿಯಾಗಿ ಸ್ವೀಕರಿಸುವುದನ್ನು ಅಮರಿಂದರ್ ಸಿಂಗ್ ತಳ್ಳಿಹಾಕಿದ್ದು ನಿರ್ಧಾರವನ್ನು ಕಾಂಗ್ರೆಸ್ ಗೆ ಬಿಟ್ಟಿದ್ದಾರೆ. “ನವಜೋತ್ ಸಿಂಗ್ ಸಿಧು ಒಬ್ಬ ಅಸಮರ್ಥ ವ್ಯಕ್ತಿ. ಅವನು ನನ್ನ ಸರ್ಕಾರದಲ್ಲಿ ಸಂಪೂರ್ಣ ದುರಂತವಾಗಿದ್ದನು. ನಾನು ಅವನಿಗೆ ನೀಡಿದ ಒಂದು ಸಚಿವಾಲಯವನ್ನು ನಡೆಸಲು ಸಾಧ್ಯವಾಗಲಿಲ್ಲ. ಅವನು ಏಳು ತಿಂಗಳ ಕಾಲ ಕಡತಗಳನ್ನು ತೆರವುಗೊಳಿಸಲಿಲ್ಲ” ಎಂದು ಶನಿವಾರ ಎನ್‌ಡಿಟಿವಿ ಜತೆ ಮಾತನಾಡಿದ ಅಮರಿಂದರ್ ಹೇಳಿದ್ದಾರೆ.

ಇದನ್ನೂ ಓದಿ:Punjab CM: ಅಮರೀಂದರ್ ಸಿಂಗ್ ರಾಜೀನಾಮೆ ಹಿನ್ನೆಲೆ; ಪಂಜಾಬ್ ನೂತನ ಸಿಎಂ ರೇಸ್​ನಲ್ಲಿದ್ದಾರೆ ಈ ಕಾಂಗ್ರೆಸ್ ನಾಯಕರು 

ಇದನ್ನೂ ಓದಿ:Punjab Politics: ಇಂದು ಪಂಜಾಬ್​ನಲ್ಲಿ ಮಹತ್ವದ ಕಾಂಗ್ರೆಸ್ ಸಭೆ; ಸಂಜೆಯೊಳಗೆ ನೂತನ ಸಿಎಂ ಘೋಷಣೆ ಸಾಧ್ಯತೆ

(Ambika Soni has turned down an offer to become Punjab’s next CM says Chief Minister Must Be Sikh Leader)

Published On - 12:34 pm, Sun, 19 September 21