ಕೇರಳದಲ್ಲಿ ನ. 1ರಿಂದ ಪ್ರಾಥಮಿಕ, ಎಸ್ಎಸ್ಎಲ್ಸಿ, ಪಿಯುಸಿ ತರಗತಿಗಳು ಪುನರಾರಂಭ
ಕೇರಳದಲ್ಲಿ 1 ರಿಂದ 7ನೇ ತರಗತಿಯವರೆಗಿನ (ಪ್ರಾಥಮಿಕ ವಿಭಾಗ) ಮತ್ತು 10 ಹಾಗೂ 12ನೇ ತರಗತಿಗಳು ನವೆಂಬರ್ 1ರಂದು ಆರಂಭವಾಗಲಿದ್ದು, ಇತರ ತರಗತಿಗಳು ನವೆಂಬರ್ 15ರಂದು ಆರಂಭವಾಗುತ್ತವೆ.
ತಿರುವನಂತಪುರಂ: ಕೇರಳದಲ್ಲಿ ನವೆಂಬರ್ 1ರಿಂದ ಶಾಲೆಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಇಲ್ಲಿಯವರೆಗೆ ಆನ್ಲೈನ್ ಕ್ಲಾಸ್ಗಳು ಮಾತ್ರ ನಡೆಯುತ್ತಿದ್ದವು. ನ. 1ರಿಂದ ರೆಗ್ಯುಲರ್ ಕ್ಲಾಸ್ಗಳನ್ನು ತೆರೆಯಲು ನಿರ್ಧಾರ ಮಾಡಿರುವುದಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಸಿಎಂ ಪಿಣರಾಯಿ ವಿಜಯನ್ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಕೋವಿಡ್ ಪರಿಶೀಲನಾ ಸಭೆಯಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿದೆ. 1 ರಿಂದ 7ನೇ ತರಗತಿಯವರೆಗಿನ (ಪ್ರಾಥಮಿಕ ವಿಭಾಗ) ಮತ್ತು 10 ಹಾಗೂ 12ನೇ ತರಗತಿಗಳು ನವೆಂಬರ್ 1ರಂದು ಆರಂಭವಾಗಲಿದ್ದು, ಇತರ ತರಗತಿಗಳು ನವೆಂಬರ್ 15ರಂದು ಆರಂಭವಾಗುತ್ತವೆ.
ನಿನ್ನೆ ಶೈಕ್ಷಣಿಕ ತಜ್ಞರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಪಿಣರಾಯಿ ವಿಜಯನ್ ಈ ಬಗ್ಗೆ ನಿರ್ಧಾರ ತೆಗೆದುಕೊಂಡಿರುವುದಾಗಿ ಘೋಷಿಸಿದ್ದಾರೆ. ಪ್ರಾಥಮಿಕ ತರಗತಿಗಳನ್ನು ಮೊದಲು ಪುನರಾರಂಭಿಸಬೇಕು ಎಂಬುದು ಆರೋಗ್ಯ ತಜ್ಞರ ಅಭಿಪ್ರಾಯವಾಗಿತ್ತು. ಆದರೆ, 10 ಮತ್ತು 12 ನೇ ತರಗತಿಗಳನ್ನು ಮೊದಲು ಆರಂಭಿಸಬೇಕಾಗಿದೆ. ಆ ವಿದ್ಯಾರ್ಥಿಗಳು ಮುಂದಿನ ವರ್ಷ ಬೋರ್ಡ್ ಪರೀಕ್ಷೆಗೆ ಹಾಜರಾಗಬೇಕಾಗಿದೆ ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.
ಕೇರಳದಲ್ಲಿ ಕೊರೊನಾ ಕೇಸುಗಳು ಹೆಚ್ಚುತ್ತಲೇ ಇದ್ದು, ನಿಫಾ ಪ್ರಕರಣಗಳು ಕೂಡ ಹೆಚ್ಚಾಗಿವೆ. ಇದರಿಂದ ಕೇರಳದ ಗಡಿಗಳಲ್ಲಿ ಕಟ್ಟುನಿಟ್ಟಿನ ಎಚ್ಚರ ವಹಿಸಲಾಗಿದೆ.
ಇದನ್ನೂ ಓದಿ: ಕೇರಳದ ಬಿಷಪ್ನ ನಾರ್ಕೋಟಿಕ್ಸ್ ಜಿಹಾದ್ ಹೇಳಿಕೆ ವಿವಾದ: ಲವ್ ಜಿಹಾದ್ ಬಗ್ಗೆ ಕಾನೂನು ತರಲು ಕೇಂದ್ರಕ್ಕೆ ಬಿಜೆಪಿ ಒತ್ತಾಯ
Punjab Politics: ಇಂದು ಪಂಜಾಬ್ನಲ್ಲಿ ಮಹತ್ವದ ಕಾಂಗ್ರೆಸ್ ಸಭೆ; ಸಂಜೆಯೊಳಗೆ ನೂತನ ಸಿಎಂ ಘೋಷಣೆ ಸಾಧ್ಯತೆ
(Kerala schools to reopen for Classes 1 to 7 10 and 12 from November 1 amid of Nipah and Covid Scare)