Coronavirus cases in India: ದೇಶದಲ್ಲಿ 30,773 ಹೊಸ ಕೊವಿಡ್ ಪ್ರಕರಣ ಪತ್ತೆ, ಸಕ್ರಿಯ ಪ್ರಕರಣಗಳ ಸಂಖ್ಯೆ 3.32 ಲಕ್ಷಕ್ಕೆ ಇಳಿಕೆ

TV9 Digital Desk

| Edited By: Rashmi Kallakatta

Updated on: Sep 19, 2021 | 10:55 AM

Covid-19: ಇದೇ ಅವಧಿಯಲ್ಲಿ 309 ಹೊಸ ಸಾವು ಪ್ರಕರಣಗಳು  ಸಂಭವಿಸಿದ್ದು,ಸಾವಿನ ಸಂಖ್ಯೆ 4,44,838 ಕ್ಕೆ ಏರಿದೆ. ಸಕ್ರಿಯ ಪ್ರಕರಣಗಳು ಒಟ್ಟು ಸೋಂಕಿನ ಶೇಕಡಾ 0.99 ರಷ್ಟಿದ್ದು, ರಾಷ್ಟ್ರೀಯ ಕೊವಿಡ್ -19 ಚೇತರಿಕೆಯ ಪ್ರಮಾಣವು ಶೇಕಡಾ 97.68 ರಷ್ಟಿದೆ ಎಂದು ಸಚಿವಾಲಯ ತಿಳಿಸಿದೆ.

Coronavirus cases in India: ದೇಶದಲ್ಲಿ 30,773 ಹೊಸ ಕೊವಿಡ್ ಪ್ರಕರಣ ಪತ್ತೆ, ಸಕ್ರಿಯ ಪ್ರಕರಣಗಳ ಸಂಖ್ಯೆ 3.32 ಲಕ್ಷಕ್ಕೆ ಇಳಿಕೆ
ಪ್ರಾತಿನಿಧಿಕ ಚಿತ್ರ

Follow us on

ದೆಹಲಿ: ಒಂದೇ ದಿನದಲ್ಲಿ 30,773 ಜನರು ಕೊರೊನಾವೈರಸ್ (Coronavirus )  ಸೋಂಕಿಗೆ ಧನಾತ್ಮಕ ಪರೀಕ್ಷೆ ನಡೆಸಿದ್ದು, ಭಾರತದ ಒಟ್ಟು ಕೊವಿಡ್ -19 (Covid-19) ಪ್ರಕರಣಗಳ ಸಂಖ್ಯೆ 3.34 ಕೋಟಿ (3,34,48,163 )ಕ್ಕೆ ಏರಿಕೆಯಾಗಿದೆ ಸಕ್ರಿಯ ಪ್ರಕರಣಗಳು 3.32 ಲಕ್ಷಕ್ಕೆ ಇಳಿದಿದೆ. ಕೇರಳದಲ್ಲಿ 19,325 ಹೊಸ ಪ್ರಕರಣಗಳು ದಾಖಲಾಗಿದ್ದು, ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳು 1.81 ಲಕ್ಷಕ್ಕೆ ಇಳಿದಿದೆ. ಇದೇ ಅವಧಿಯಲ್ಲಿ 309 ಹೊಸ ಸಾವು ಪ್ರಕರಣಗಳು  ಸಂಭವಿಸಿದ್ದು,ಸಾವಿನ ಸಂಖ್ಯೆ 4,44,838 ಕ್ಕೆ ಏರಿದೆ. ಸಕ್ರಿಯ ಪ್ರಕರಣಗಳು ಒಟ್ಟು ಸೋಂಕಿನ ಶೇಕಡಾ 0.99 ರಷ್ಟಿದ್ದು, ರಾಷ್ಟ್ರೀಯ ಕೊವಿಡ್ -19 ಚೇತರಿಕೆಯ ಪ್ರಮಾಣವು ಶೇಕಡಾ 97.68 ರಷ್ಟಿದೆ ಎಂದು ಸಚಿವಾಲಯ ತಿಳಿಸಿದೆ. 24 ಗಂಟೆಗಳ ಅವಧಿಯಲ್ಲಿ ಸಕ್ರಿಯ ಕೊವಿಡ್ -19 ಪ್ರಕರಣದಲ್ಲಿ 8,481 ಪ್ರಕರಣಗಳ ಕಡಿತವನ್ನು ದಾಖಲಿಸಲಾಗಿದೆ.

ಶನಿವಾರದಂದು 15,59,895 ಪರೀಕ್ಷೆಗಳನ್ನು ನಡೆಸಲಾಗಿದ್ದು, ಇದುವರೆಗೆ ದೇಶದಲ್ಲಿ ಕೊವಿಡ್ -19 ಪತ್ತೆಗಾಗಿ ನಡೆಸಲಾದ ಒಟ್ಟು   55,23,40,168 ಮಾದರಿ ಪರೀಕ್ಷೆ  ನಡೆದಿದ್ದು , ದೈನಂದಿನ ಧನಾತ್ಮಕ ದರವು 1.97 ಶೇಕಡಾ ದಾಖಲಾಗಿದೆ. ಕಳೆದ 20 ದಿನಗಳಿಂದ ಇದು ಶೇಕಡಾ ಮೂರಕ್ಕಿಂತ ಕಡಿಮೆ ಇದೆ. ಸಾಪ್ತಾಹಿಕ ಧನಾತ್ಮಕ ದರವು 2.04 ಶೇಕಡಾ ದಾಖಲಾಗಿದೆ. ಕಳೆದ 86 ದಿನಗಳಿಂದ ಇದು ಶೇಕಡಾ ಮೂರು ಕ್ಕಿಂತ ಕಡಿಮೆ ಇದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಕಾಯಿಲೆಯಿಂದ ಚೇತರಿಸಿಕೊಂಡವರ ಸಂಖ್ಯೆ 3,26,71,167 ಕ್ಕೆ ಏರಿದೆ, ಪ್ರಕರಣದ ಸಾವಿನ ಪ್ರಮಾಣವು 1.33 ಶೇಕಡಾ ದಾಖಲಾಗಿದೆ. ಸಚಿವಾಲಯದ ಪ್ರಕಾರ ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದ ಅಡಿಯಲ್ಲಿ ಇದುವರೆಗೆ ದೇಶದಲ್ಲಿ ನೀಡಲಾದ ಒಟ್ಟು ಪ್ರಮಾಣಗಳು 80.43 ಕೋಟಿ ಮೀರಿದೆ.

ಯುಎಇಯಲ್ಲಿ 14 ನೇ ಆವೃತ್ತಿಯ ಐಪಿಎಲ್‌ ವೀಕ್ಷಿಸಲು ಯುಎಇಗೆ ಭೇಟಿ ನೀಡುವ ಅಭಿಮಾನಿಗಳು ಕೊವಿಡ್ -19 ಸಾಂಕ್ರಾಮಿಕವನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ವಿಧಿಸಿರುವ ಕೆಲವು ಮಾರ್ಗಸೂಚಿಗಳನ್ನು ಅನುಸರಿಸಬೇಕು. ಹೊಸ ನಿಯಮಾವಳಿಗಳ ಪ್ರಕಾರ ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂಗೆ ಹೋಗುವ ಅಭಿಮಾನಿಗಳಿಗೆ ಆರ್‌ಟಿ-ಪಿಸಿಆರ್ ನೆಗೆಟಿವ್ ಪರೀಕ್ಷಾ ಫಲಿತಾಂಶದ ಅಗತ್ಯವಿರುವುದಿಲ್ಲ, ಆದರೆ ಡಬಲ್ ವ್ಯಾಕ್ಸಿನೇಷನ್ ಪ್ರೂಫ್ ಅಗತ್ಯವಿದೆ.

ಏತನ್ಮಧ್ಯೆ ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ,ಪ್ರವೇಶಕ್ಕೆ ಕನಿಷ್ಠ ವಯಸ್ಸು 16 ಆಗಿರಬೇಕು. ವ್ಯಾಕ್ಸಿನೇಷನ್ ವರದಿಯ ಜೊತೆಗೆ ವೀಕ್ಷಕರು 48 ಗಂಟೆಗಳಿಗಿಂತ ಮುಂಚಿತವಾಗಿ ತೆಗೆದುಕೊಂಡಿರುವ ಆರ್‌ಟಿ-ಪಿಸಿಆರ್ ನೆಗೆಟಿವ್ ವರದಿ ಹೊಂದಿರಬೇಕು .

ಸೆಪ್ಟೆಂಬರ್‌ನಲ್ಲಿ ಮುಂಬೈಯಲ್ಲಿ ಕೊವಿಡ್ ಪ್ರಕರಣಗಳಲ್ಲಿ ಶೇ 50ಹೆಚ್ಚಳವನ್ನು ಕಂಡಿದೆ ಆದರೆ ಸಾವುಗಳು ಶೇ38 ರಷ್ಟು ಕಡಿಮೆಯಾಗಿದೆ. ಆಗಸ್ಟ್‌ನಲ್ಲಿ ದಾಖಲಾದ ಪ್ರಕರಣಗಳಿಗೆ ಹೋಲಿಸಿದರೆ ಮಹಾರಾಷ್ಟ್ರದಲ್ಲಿ ಸೆಪ್ಟೆಂಬರ್ ಮೊದಲಾರ್ಧದಲ್ಲಿ ಪ್ರಕರಣಗಳು ಕಡಿಮೆಯಾಗಿದ್ದರೂ, ಮುಂಬೈ ವಿರುದ್ಧವಾದ ಪ್ರವೃತ್ತಿಯನ್ನು ಕಂಡಿದೆ. ಆಗಸ್ಟ್‌ನಲ್ಲಿ ದಾಖಲಾದ ಪ್ರಕರಣಗಳಿಗೆ ಹೋಲಿಸಿದರೆ ಸೆಪ್ಟೆಂಬರ್‌ನ ಮೊದಲ 17 ದಿನಗಳಲ್ಲಿ ವರದಿಯಾದ ಪ್ರಕರಣಗಳ ಸಂಖ್ಯೆಯಲ್ಲಿ ನಗರವು ಶೇ 50 ನಷ್ಟು ಏರಿಕೆಯಾಗಿದೆ.

ಗೋವಾ ಕ್ಯಾಸಿನೊಗಳು ನಾಳೆಯಿಂದ ಆರಂಭವಾಗಲಿದ್ದು, ಕೊವಿಡ್ -19 ಧನಾತ್ಮಕ ದರ ಇಳಿಕೆಯಾಗಿದೆ. ಗೋವಾ ಸರ್ಕಾರವು ಶನಿವಾರದಂದು ಕ್ಯಾಸಿನೊಗಳು ಕಟ್ಟುನಿಟ್ಟಾದ ಕೊವಿಡ್ -19 ಪ್ರೋಟೋಕಾಲ್‌ಗಳನ್ನು ಪಾಲಿಸುವ ಷರತ್ತಿನ ಮೇಲೆ ಸೋಮವಾರದಿಂದ ಕಾರ್ಯಾಚರಣೆಯನ್ನು ಪುನರಾರಂಭಿಸುವುದಾಗಿ ಹೇಳಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅಧ್ಯಕ್ಷತೆಯಲ್ಲಿ ನಡೆದ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ

ಕೇರಳದಲ್ಲಿ ದೈನಂದಿನ ಹೊಸ ಪ್ರಕರಣಗಳು ನಿಧಾನವಾಗಿ ಕಡಿಮೆಯಾಗುತ್ತಿದ್ದರೂ, ಕೇರಳ ಈಗ ಎರಡನೇ ತರಂಗದಲ್ಲಿ ಮೂರನೇ ಬಾರಿ ಹೆಚ್ಚಿನ ಪ್ರಕರಣಗಳನ್ನು ದಾಖಲಿಸುತ್ತಿದೆ. ಪ್ರತಿಯೊಬ್ಬರೂ ಲಸಿಕೆ ಹಾಕುವವರೆಗೆ ಮತ್ತು ಸೋಂಕು ತಗುಲುವವರೆಗೂ ರಾಜ್ಯವು ದೀರ್ಘಕಾಲದವರೆಗೆ ಪ್ರಸ್ಥಭೂಮಿಯಲ್ಲಿದೆ ಎಂದು ತಜ್ಞರು ಹೇಳಿದ್ದಾರೆ. ಜೂನ್ 26 ಮತ್ತು ಜುಲೈ 24 ರ ನಡುವೆ, ವಾರದಲ್ಲಿ ದಿನಕ್ಕೆ ಸರಾಸರಿ ಹೊಸ ಪ್ರಕರಣಗಳು 11,000 ಮತ್ತು 15,000 ನಡುವೆ ಪ್ರಕರಣಗಳು ದಾಖಲಾಗಿವೆ.

ಇದನ್ನೂ ಓದಿ:Airlines: ದೇಶೀಯ ವಿಮಾನ ಯಾನ ಕೊವಿಡ್ ಪೂರ್ವದ ಶೇ 85ರ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸಲು ಅನುಮತಿ

ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada