Airlines: ದೇಶೀಯ ವಿಮಾನ ಯಾನ ಕೊವಿಡ್ ಪೂರ್ವದ ಶೇ 85ರ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸಲು ಅನುಮತಿ

ವಿಮಾನಯಾನ ಸಂಸ್ಥೆಗಳು ಇಲ್ಲಿಯ ತನಕ ಅನುಮತಿಸಲಾದ ಶೇಕಡಾ 72.5ರ ಬದಲಿಗೆ ಕೊವಿಡ್ ಪೂರ್ವದಲ್ಲಿ ಇದ್ದ ದೇಶೀಯ ವಿಮಾನಗಳ ಹಾರಾಟದ ಗರಿಷ್ಠ ಶೇಕಡಾ 85ರಷ್ಟಕ್ಕೆ ಕಾರ್ಯ ನಿರ್ವಹಿಸಬಹುದು ಎಂದು ನಾಗರಿಕ ವಿಮಾನಯಾನ ಸಚಿವಾಲಯ ಶನಿವಾರ ತಿಳಿಸಿದೆ. ಸಚಿವಾಲಯ ಆದೇಶದ ಪ್ರಕಾರ, ಆಗಸ್ಟ್ 12 ರಿಂದ ವಿಮಾನಯಾನ ಸಂಸ್ಥೆಗಳು ಕೊವಿಡ್​ ಪೂರ್ವದಲ್ಲಿದ್ದ ಶೇ 75ರಷ್ಟು ದೇಶೀಯ ವಿಮಾನಗಳು ಕಾರ್ಯ ನಿರ್ವಹಿಸುತ್ತಿವೆ. ಜುಲೈ 5 ಮತ್ತು ಆಗಸ್ಟ್ 12ರ ಮಧ್ಯೆ ಮಿತಿಯು ಶೇಕಡಾ 65 ರಷ್ಟಿತ್ತು. ಜೂನ್ 1 ಮತ್ತು ಜುಲೈ […]

Airlines: ದೇಶೀಯ ವಿಮಾನ ಯಾನ ಕೊವಿಡ್ ಪೂರ್ವದ ಶೇ 85ರ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸಲು ಅನುಮತಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:Sep 18, 2021 | 9:45 PM

ವಿಮಾನಯಾನ ಸಂಸ್ಥೆಗಳು ಇಲ್ಲಿಯ ತನಕ ಅನುಮತಿಸಲಾದ ಶೇಕಡಾ 72.5ರ ಬದಲಿಗೆ ಕೊವಿಡ್ ಪೂರ್ವದಲ್ಲಿ ಇದ್ದ ದೇಶೀಯ ವಿಮಾನಗಳ ಹಾರಾಟದ ಗರಿಷ್ಠ ಶೇಕಡಾ 85ರಷ್ಟಕ್ಕೆ ಕಾರ್ಯ ನಿರ್ವಹಿಸಬಹುದು ಎಂದು ನಾಗರಿಕ ವಿಮಾನಯಾನ ಸಚಿವಾಲಯ ಶನಿವಾರ ತಿಳಿಸಿದೆ. ಸಚಿವಾಲಯ ಆದೇಶದ ಪ್ರಕಾರ, ಆಗಸ್ಟ್ 12 ರಿಂದ ವಿಮಾನಯಾನ ಸಂಸ್ಥೆಗಳು ಕೊವಿಡ್​ ಪೂರ್ವದಲ್ಲಿದ್ದ ಶೇ 75ರಷ್ಟು ದೇಶೀಯ ವಿಮಾನಗಳು ಕಾರ್ಯ ನಿರ್ವಹಿಸುತ್ತಿವೆ. ಜುಲೈ 5 ಮತ್ತು ಆಗಸ್ಟ್ 12ರ ಮಧ್ಯೆ ಮಿತಿಯು ಶೇಕಡಾ 65 ರಷ್ಟಿತ್ತು. ಜೂನ್ 1 ಮತ್ತು ಜುಲೈ 5ರ ಮಧ್ಯೆ ಈ ಮಿತಿಯು ಶೇಕಡಾ 50ರಷ್ಟಿತ್ತು.

ಸಚಿವಾಲಯವು ಶನಿವಾರ ಹೊಸ ಆದೇಶವನ್ನು ಹೊರಡಿಸಿದ್ದು, ಇದರಲ್ಲಿ ಆಗಸ್ಟ್ 12ರ ಆದೇಶವನ್ನು ಮಾರ್ಪಡಿಸಲಾಗಿದ್ದು, “ಶೇ 72.5ರ ಸಾಮರ್ಥ್ಯವನ್ನು ಶೇ 85ರ ಸಾಮರ್ಥ್ಯ ಎಂದು ಓದಬಹುದು” ಎಂದು ಹೇಳಿದೆ. ಶನಿವಾರದ ಆದೇಶವು ಶೇಕಡಾ 72.5ರ ಮಿತಿಯು “ಮುಂದಿನ ಆದೇಶದವರೆಗೆ” ಜಾರಿಯಲ್ಲಿರುತ್ತದೆ ಎಂಬುದನ್ನು ಗಮನಿಸಬೇಕು.

ಎರಡು ತಿಂಗಳ ವಿರಾಮದ ನಂತರ ಕಳೆದ ವರ್ಷ ಮೇ 25ರಂದು ಸರ್ಕಾರವು ನಿಗದಿತ ವೇಳಾಪಟ್ಟಿಯ ದೇಶೀಯ ವಿಮಾನಯಾನವನ್ನು ಪುನರಾರಂಭಿಸಿದಾಗ, ಸಚಿವಾಲಯವು ವಿಮಾನ ಯಾನ ಸಂಸ್ಥೆಗಳಿಗೆ ಕೊವಿಡ್ ಪೂರ್ವದ ದೇಶೀಯ ಸೇವೆಗಳ ಶೇಕಡಾ 33 ಕ್ಕಿಂತ ಹೆಚ್ಚಿಲ್ಲದಂತೆ ಕಾರ್ಯನಿರ್ವಹಿಸಲು ಅವಕಾಶ ನೀಡಿತು. ಡಿಸೆಂಬರ್ ವೇಳೆಗೆ ಮಿತಿಯನ್ನು ಕ್ರಮೇಣ ಶೇ 80ಕ್ಕೆ ಹೆಚ್ಚಿಸಲಾಯಿತು. ಆ ಶೇ 80ರ ಪ್ರಯಾಣ ದರ ಮಿತಿಯು ಜೂನ್ 1ರ ವರೆಗೆ ಜಾರಿಯಲ್ಲಿತ್ತು.

ಮೇ 28ರಂದು ಮಿತಿಯನ್ನು ಜೂನ್ 1ರಿಂದ ಅನ್ವಯ ಆಗುವಂತೆ ಶೇ 80 ರಿಂದ ಶೇ 50ಕ್ಕೆ ಇಳಿಸುವ ತೀರ್ಮಾನವನ್ನು ತೆಗೆದುಕೊಳ್ಳಲಾಯಿತು. “ದೇಶಾದ್ಯಂತ ಸಕ್ರಿಯ ಕೊವಿಡ್ -19 ಪ್ರಕರಣಗಳ ಸಂಖ್ಯೆಯಲ್ಲಿನ ಹಠಾತ್ ಏರಿಕೆ, ಪ್ರಯಾಣಿಕರ ದಟ್ಟಣೆಯಲ್ಲಿ ಇಳಿಕೆ ಮತ್ತು ಪ್ರಯಾಣಿಕರ ಹೊರೆ (ಆಕ್ಯುಪೆನ್ಸಿ ದರ) ಇತ್ಯಾದಿ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಈ ತೀರ್ಮಾನ ಕೈಗೊಳ್ಳಲಾಯಿತು,” ಎಂದು ಸಚಿವಾಲಯ ಹೇಳಿತ್ತು.

ಇದನ್ನೂ ಓದಿ: ಅಂತಾರಾಷ್ಟ್ರೀಯ ವಿಮಾನಗಳ ಸಂಚಾರ ನಿರ್ಬಂಧ ಸೆಪ್ಟೆಂಬರ್​ 30ರವರೆಗೆ ವಿಸ್ತರಣೆ

(Civil Aviation Ministry Allowed Domestic Airlines To Operate With 85 Percent Of Pre Covid Level)

Published On - 9:44 pm, Sat, 18 September 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ