ಅಂತಾರಾಷ್ಟ್ರೀಯ ವಿಮಾನಗಳ ಸಂಚಾರ ನಿರ್ಬಂಧ ಸೆಪ್ಟೆಂಬರ್ 30ರವರೆಗೆ ವಿಸ್ತರಣೆ
ಕಳೆದ ವರ್ಷ ಮಾರ್ಚ್ 23ರಿಂದಲೂ ಅಂತಾರಾಷ್ಟ್ರೀಯ ಪ್ರಯಾಣಿಕರ ವಿಮಾನಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ. ಈ ನಿರ್ಬಂಧ 2021ರ ಆಗಸ್ಟ್ 31ಕ್ಕೆ ಮುಗಿಯಬಹುದು ಎಂದು ಹೇಳಲಾಗಿತ್ತು.
ಅಂತಾರಾಷ್ಟ್ರೀಯ ವಿಮಾನ (International flight)ಗಳ ಹಾರಾಟದ ಮೇಲಿನ ನಿರ್ಬಂಧವನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಿ ಕೇಂದ್ರ ಸರ್ಕಾರ ಇಂದು ಆದೇಶ ಹೊರಡಿಸಿದೆ. ಅದರ ಅನ್ವಯ, ಸೆಪ್ಟೆಂಬರ್ 30ರವರೆಗೆ ಭಾರತದಿಂದ ಯಾವುದೇ ವಿಮಾನಗಳೂ ಬೇರೆ ರಾಷ್ಟ್ರಗಳಿಗೆ ಹಾರಾಟ ಮಾಡುವುದಿಲ್ಲ..ಹಾಗೇ, ಬೇರೆ ದೇಶಗಳ ವಿಮಾನಕ್ಕೂ ಭಾರತಕ್ಕೆ ಪ್ರವೇಶ ಇರುವುದಿಲ್ಲ. ಕೆಲವು ವಿಶೇಷ ವಿಮಾನಗಳನ್ನು ಹೊರತುಪಡಿಸಿದರೆ, ಉಳಿದಂತೆ ಕಳೆದ ವರ್ಷ ಮಾರ್ಚ್ 23ರಿಂದಲೂ ಅಂತಾರಾಷ್ಟ್ರೀಯ, ಪ್ರಯಾಣಿಕರ ವಿಮಾನಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ. ಈ ನಿರ್ಬಂಧ 2021ರ ಆಗಸ್ಟ್ 31ಕ್ಕೆ ಮುಗಿಯಬಹುದು ಎಂದು ಹೇಳಲಾಗಿತ್ತು. ಆದರೆ ಕೊವಿಡ್ 19 (Covid 19) ಪರಿಸ್ಥಿತಿ ಇನ್ನೂ ಹಾಗೇ ಇರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲಾಗಿದೆ.
ಈ ಬಗ್ಗೆ ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯ (DGCA) ಸುತ್ತೋಲೆ ಹೊರಡಿಸಿದೆ. ಅಂತಾರಾಷ್ಟ್ರೀಯ ಸರಕು ವಿಮಾನಗಳು ಮತ್ತು ಡಿಜಿಸಿಎಯಿಂದ ಅನುಮೋದನೆ ಪಡೆದ ವಿಶೇಷ ವಿಮಾನಗಳನ್ನು ಹೊರತುಪಡಿಸಿ, ಉಳಿದಂತೆ ಎಲ್ಲ ಅಂತಾರಾಷ್ಟ್ರೀಯ ಪ್ರಯಾಣಿಕರ ವಿಮಾನಗಳಿಗೂ ಸೆಪ್ಟೆಂಬರ್ 30ರವರೆಗೆ ನಿರ್ಬಂಧ ಇರುತ್ತದೆ ಎಂದು ಹೇಳಲಾಗಿದೆ.
ಭಾರತವು ಯುಎಸ್, ಯುಕೆ, ಯುಎಇ, ಮಾಲ್ಡೀವ್ಸ್, ನೆದರ್ಲ್ಯಾಂಡ್, ಫ್ರಾನ್ಸ್, ಜರ್ಮನಿ, ಕತಾರ್, ಭೂತಾನ್ ಸೇರಿ 28 ದೇಶಗಳೊಂದಿಗೆ ಏರ್ ಬಬಲ್ ಒಪ್ಪಂದ ಮಾಡಿಕೊಂಡಿದೆ. ಈ ಮೂಲಕ ಕೊವಿಡ್ 19 ಸಂದರ್ಭದಲ್ಲೂ ಈ ದೇಶಗಳ ಮಧ್ಯೆ ವಿಶೇಷ ವಿಮಾನ ಸಂಚಾರ ನಡೆಯಲಿದೆ. ಈ ವಿಶೇಷ ವಿಮಾನಗಳ ಮೂಲಕ ಪ್ರಯಾಣಿಕರನ್ನು ಸಾಗಿಸಲಾಗುತ್ತಿದೆ.
ಇದನ್ನೂ ಓದಿ: ಶಾರುಖ್ ಸ್ಟಾರ್ ಆಗಲು ಕಾರಣವೇ ಡ್ರಗ್ಸ್ ಕೇಸ್ ಆರೋಪಿ ಅರ್ಮಾನ್ ಕೊಹ್ಲಿ; ಇಲ್ಲಿದೆ ಪೂರ್ತಿ ಚರಿತ್ರೆ
ತ್ರಿವಳಿ ತಲಾಖ್ ಮೂಲಕ ವಿಚ್ಛೇದನ ಕೊಟ್ಟು, ಪತ್ನಿಯ ಅಶ್ಲೀಲ ವಿಡಿಯೋ ಬಿಡುಗಡೆ ಮಾಡಿದ ಪತಿ
Published On - 1:12 pm, Sun, 29 August 21