ತ್ರಿವಳಿ ತಲಾಖ್​ ಮೂಲಕ ವಿಚ್ಛೇದನ ಕೊಟ್ಟು, ಪತ್ನಿಯ ಅಶ್ಲೀಲ ವಿಡಿಯೋ ಬಿಡುಗಡೆ ಮಾಡಿದ ಪತಿ

ತ್ರಿವಳಿ ತಲಾಖ್​ ಮೂಲಕ ವಿಚ್ಛೇದನ ಕೊಟ್ಟು, ಪತ್ನಿಯ ಅಶ್ಲೀಲ ವಿಡಿಯೋ ಬಿಡುಗಡೆ ಮಾಡಿದ ಪತಿ
ಪ್ರಾತಿನಿಧಿಕ ಚಿತ್ರ

ನಾಲ್ಕು ವರ್ಷಗಳ ಹಿಂದೆ ಇವರಿಬ್ಬರಿಗೂ ಮದುವೆಯಾಗಿದ್ದ ಈ ಜೋಡಿ ಇದೀಗ ಬೇರಾಗಿದ್ದಷ್ಟೇ ಅಲ್ಲ, ಮಹಿಳೆ ಆತ್ಮಹತ್ಯೆಯನ್ನೂ ಮಾಡಿಕೊಂಡಿದ್ದಾರೆ. ಘಟನೆಯ ಸಂಪೂರ್ಣ ವಿವರವನ್ನು ಠಾಣಾಧಿಕಾರಿ ದೀಪಕ್​ ಚತುರ್ವೇದಿ ಬಿಚ್ಚಿಟ್ಟಿದ್ದಾರೆ.

TV9kannada Web Team

| Edited By: Lakshmi Hegde

Aug 29, 2021 | 12:55 PM

ತ್ರಿವಳಿ ತಲಾಖ್​ ಮೂಲಕ ಪತ್ನಿಗೆ ವಿಚ್ಛೇದನ(Triple Talaq) ನೀಡಿದ್ದ ವ್ಯಕ್ತಿಯೊಬ್ಬ..ನಂತರವೂ ಆಕೆಗೆ ಹಿಂಸೆ ನೀಡಿದ ಪರಿಣಾಮ ಆ ಮಹಿಳೆ ಇದೀಗ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉತ್ತರ ಪ್ರದೇಶದ ಕಿಶನ್​ಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರೂ, ಆರೋಪಿಯನ್ನು ಬಂಧಿಸಲು ಸಾಧ್ಯವಾಗಿಲ್ಲ.

ಸ್ಥಳೀಯ ಠಾಣಾಧಿಕಾರಿ ದೀಪಕ್​ ಚತುರ್ವೇದಿ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಇವರಿಬ್ಬರಿಗೂ ಮದುವೆಯಾಗಿತ್ತು. ದಂಪತಿಗೆ 18ತಿಂಗಳ ಗಂಡುಮಗು ಕೂಡ ಇದೆ. ಆದರೆ ಮೂರು ತಿಂಗಳ ಹಿಂದೆ ಆ ವ್ಯಕ್ತಿ ತ್ರಿವಳಿ ತಲಾಕ್​ ಮೂಲಕ ಪತ್ನಿಗೆ ಡಿವೋರ್ಸ್​ ನೀಡಿದ್ದ. ಅದಾದ ನಂತರ ಆಕೆ ಕಿಶನ್​ಪುರದಲ್ಲಿರುವ ತನ್ನ ತವರುಮನೆಗೆ ಹೋಗಿದ್ದಳು.

ಅದಾದ ಬಳಿಕ ಆಗಸ್ಟ್ 18ರಂದು ಆಕೆ ಪೊಲೀಸರಿಗೆ ದೂರು ನೀಡಿದ್ದಳು. ಪತಿ ತ್ರಿವಳಿ ತಲಾಕ್​ ಮೂಲಕ ವಿಚ್ಛೇದನ ನೀಡಿದ್ದಾನೆ. ಅಷ್ಟೇ ಅಲ್ಲ, ಈಗ ನನ್ನ ಮಗುವನ್ನು ಬಲವಂತವಾಗಿ ನನ್ನಿಂದ ಎಳೆದುಕೊಂಡು ಹೋಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಳು. ದೂರಿನ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಪ್ರಾರಂಭಿಸಿದ್ದರು. ಆದರೆ ಆ ಮಹಿಳೆಯರ ಪತಿ ಇಷ್ಟಕ್ಕೇ ಸುಮ್ಮನಿರದೆ ಸಾಮಾಜಿಕ ಜಾಲತಾಣಗಳಲ್ಲಿ ಆಕೆಯ ಅಶ್ಲೀಲ ವಿಡಿಯೋವೊಂದನ್ನು ವೈರಲ್ ಮಾಡಿದ್ದ. ಅದನ್ನು ನೋಡಿ ಮನನೊಂದ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸ್ ಅಧಿಕಾರಿ ದೀಪಕ್ ಹೇಳಿದ್ದಾರೆ.

ಇದನ್ನೂ ಓದಿ: ಬಾಲಿವುಡ್ ಅಥವಾ ಹಾಲಿವುಡ್- ನಿಮ್ಮ ಆಯ್ಕೆ ಯಾವುದು ಎಂಬ ಪ್ರಶ್ನೆಗೆ ಮುಖ ತಿರುಗಿಸಿಕೊಂಡು ನಡೆದ ಪ್ರಿಯಾಂಕ

ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ರೈತರ ಮನೆ ಬಾಗಿಲಿಗೆ ಬರುತ್ತೆ ಪಶು ಸಂಜೀವಿನಿ

Follow us on

Related Stories

Most Read Stories

Click on your DTH Provider to Add TV9 Kannada