‘ನಮ್ಮ ದೇಶವನ್ನು ಸರ್ಕಾರಿ ತಾಲಿಬಾನ್ ಕಮಾಂಡರ್ಗಳು ಆಕ್ರಮಿಸಿಕೊಳ್ಳುತ್ತಿದ್ದಾರೆ‘-ರಾಕೇಶ್ ಟಿಕಾಯತ್
ನಿನ್ನೆ ಬಿಜೆಪಿ ಸಭೆಯನ್ನು, ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಆಗಮನವನ್ನು ವಿರೋಧಿಸಿ ಕರ್ನಾಲ್ ಹೆದ್ದಾರಿಗಳ ಮೇಲೆ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಈ ಗುಂಪಿನ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ ಪರಿಣಾಮ ಸುಮಾರು 10 ಮಂದಿ ಗಾಯಗೊಂಡಿದ್ದರು.
ದೆಹಲಿ: ನಿನ್ನೆ ಹರ್ಯಾಣ ಮುಖ್ಯಮಂತ್ರಿ ಬಿಜೆಪಿ ಕಾರ್ಯಕಾರಿಣಿ ಸಭೆ (BJP Meeting) ನಿಮಿತ್ತ ಕರ್ನಾಲ್ಗೆ ತೆರಳಿದ್ದಾಗ, ಅವರ ಭೇಟಿಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಪೊಲೀಸರು ಲಾಠಿ ಚಾರ್ಜ್ ( Police Lathi Charge) ಮಾಡಿದ್ದರು. ಇದರಲ್ಲಿ ಹಲವರು ಗಾಯಗೊಂಡಿದ್ದರು. ಇದೀಗ ಪೊಲೀಸರ ಲಾಠಿ ಚಾರ್ಜ್ ವಿರುದ್ಧ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ ರಾಕೇಶ್ ಟಿಕಾಯತ್ (Rakesh Tikait) ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಕೇಂದ್ರ ಸರ್ಕಾರ (Central Government)ಮತ್ತು ಹರ್ಯಾಣ ರಾಜ್ಯ ಸರ್ಕಾರ (Haryana Government)ಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಟಿಕಾಯತ್, ದೇಶವನ್ನು ಸರ್ಕಾರಿ ತಾಲಿಬಾನಿಗಳು ಆಕ್ರಮಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ದೇಶದಲ್ಲಿ ಸರ್ಕಾರಿ ತಾಲಿಬಾನ್ ಕಮಾಂಡರ್ಗಳು ಇದ್ದಾರೆ. ಆ ಕಮಾಂಡರ್ಗಳನ್ನು ಮೊದಲು ಗುರುತಿಸಬೇಕು. ಪ್ರತಿಭಟನಾಕಾರರ ತಲೆ ಒಡೆಯಿರಿ ಎಂದು ಹೇಳುವವರೂ ಕೂಡ ಅದೇ ಸರ್ಕಾರಿ ತಾಲಿಬಾನ್ನ ಕಮಾಂಡರ್ಗಳೇ ಆಗಿದ್ದಾರೆ ಎಂದು ಹೇಳಿದ್ದಾರೆ. ನಿನ್ನೆ ಲಾಠಿ ಚಾರ್ಜ್ ಆದ ಬೆನ್ನಲ್ಲೇ, ಕರ್ನಾಲ್ನ ಸಬ್ ಡಿವಿಜಿನಲ್ ಮ್ಯಾಜಿಸ್ಟ್ರೇಟ್ ಆಯುಶ್ ಸಿನ್ಹಾ ಅವರ ವಿಡಿಯೋವೊಂದು ವೈರಲ್ ಆಗಿತ್ತು. ಅವರು ಪೊಲೀಸರ ಬಳಿ, ಪ್ರತಿಭಟನಾಕಾರರ ತಲೆ ಒಡೆಯಿರಿ ಎಂದು ಹೇಳುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕೇಳುತ್ತಿತ್ತು. ಅದನ್ನೇ ಉಲ್ಲೇಖಿಸಿ, ರಾಕೇಶ್ ಟಿಕಾಯತ್ ಆಕ್ರೋಶ ಹೊರಹಾಕಿದ್ದಾರೆ.
ನಿನ್ನೆ ಬಿಜೆಪಿ ಸಭೆಯನ್ನು, ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಆಗಮನವನ್ನು ವಿರೋಧಿಸಿ ಕರ್ನಾಲ್ ಹೆದ್ದಾರಿಗಳ ಮೇಲೆ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಈ ಗುಂಪಿನ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ ಪರಿಣಾಮ ಸುಮಾರು 10 ಮಂದಿ ಗಾಯಗೊಂಡಿದ್ದರು. ಈ ಲಾಠಿ ಚಾರ್ಜ್ ವಿರುದ್ಧ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಸೇರಿ ಹಲವು ನಾಯಕರು ತಿರುಗಿಬಿದ್ದಿದ್ದಾರೆ. ಅಷ್ಟೇ ಅಲ್ಲ, ಪೊಲೀಸರ ಕ್ರಮ ವಿರೋಧಿಸಿ, ಇಡೀ ಹರ್ಯಾಣದ ಪ್ರತಿ ಟೋಲ್ ಪ್ಲಾಜಾ, ಹೆದ್ದಾರಿಗಳನ್ನೂ ರೈತರು ಬಂದ್ ಮಾಡಿದ್ದರು.
ಇದನ್ನೂ ಓದಿ: ನೀನು ಗಂಡಸಾಗಿರಬಹುದು, ಆದರೆ ನಿನಗಿಂತ ಹೆಚ್ಚು ಪ್ರಬುದ್ಧತೆ ನನಗಿದೆ; ಸಿಟ್ಟಾದ ವೈಷ್ಣವಿ
JioPhone Next: ಜಿಯೋ ಫೋನ್ ನೆಕ್ಸ್ಟ್ ಬುಕ್ಕಿಂಗ್ಗೆ ದಿನಾಂಕ ನಿಗದಿ: ಭಾರತದಲ್ಲಿ ಇದರ ಬೆಲೆ ಎಷ್ಟು?