ಭಾರತದಲ್ಲಿ ಇಂದು ಮತ್ತೆ 45 ಸಾವಿರ ದಾಟಿದ ಕೊರೊನಾ ಕೇಸ್​; ಮುಕ್ಕಾಲು ಭಾಗ ಕೇರಳದಲ್ಲೇ ಪತ್ತೆ

Covid 19: ಭಾರತದಲ್ಲಿ ಕೊರೊನಾ ಪ್ರಾರಂಭವಾಗಿದ್ದು 2020ರ ಮಾರ್ಚ್​ನಲ್ಲಿ. ನಂತರ ಆಗಸ್ಟ್​ 7ರಂದು20 ಲಕ್ಷ ದಾಟಿತ್ತು. ಆಗಸ್ಟ್​ 23ರಂದು ಸೋಂಕಿತರ ಸಂಖ್ಯೆ30 ಲಕ್ಷ ದಾಟಿತು.

ಭಾರತದಲ್ಲಿ ಇಂದು ಮತ್ತೆ 45 ಸಾವಿರ ದಾಟಿದ ಕೊರೊನಾ ಕೇಸ್​; ಮುಕ್ಕಾಲು ಭಾಗ ಕೇರಳದಲ್ಲೇ ಪತ್ತೆ
ಕೊರೊನಾ ತಪಾಸಣೆ ಚಿತ್ರ
Follow us
TV9 Web
| Updated By: Lakshmi Hegde

Updated on: Aug 29, 2021 | 11:05 AM

ದೇಶದಲ್ಲಿ ಕಳೆದ 24 ಗಂಟೆಯಲ್ಲಿ 45,083 ಕೊರೊನಾ ಕೇಸ್(Coronavirus)​ಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಈ ಮಧ್ಯೆ ಕೊರೊನಾ ಸೋಂಕಿನಿಂದ ಚೇತರಿಸಿಕೊಳ್ಳುವ ಪ್ರಮಾಣ ಶೇ.97.5ರಷ್ಟಿದೆ. ಹಾಗೇ, 24ಗಂಟೆಯಲ್ಲಿ 460 ಮಂದಿ ಸೋಂಕಿನಿಂದ ಮೃತಪಟ್ಟಿದ್ದು, 35,840 ಜನರು ಚೇತರಿಸಿಕೊಂಡು, ಡಿಸ್​ಚಾರ್ಜ್ ಆಗಿದ್ದಾರೆ.ಇದೀಗ ದೇಶದಲ್ಲಿ 3,68,558 ಕೊರೊನಾ ಸಕ್ರಿಯ ಪ್ರಕರಣಗಳು ಇವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.  

ಸದ್ಯ ದೇಶದಲ್ಲಿ ಕೇರಳದಲ್ಲಿ ಕೊರೊನಾ ಅತ್ಯಂತ ಹೆಚ್ಚಾಗಿ ಬಾಧಿಸುತ್ತಿದೆ. ಕಳೆದ 24ಗಂಟೆಯಲ್ಲಿ ಬರೋಬ್ಬರಿ 31,265 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 153 ಮಂದಿ ಮೃತಪಟ್ಟಿದ್ದಾರೆ. ದೇಶದಲ್ಲಿ ಪತ್ತೆಯಾದ ಒಟ್ಟೂ ಕೊರೊನಾ ಕೇಸ್​​ನಲ್ಲಿ ಮುಕ್ಕಾಲು ಭಾಗ ಕೇರಳದಲ್ಲೇ ಆಗಿದೆ. ಅಲ್ಲೀಗ ನೈಟ್​ ಕರ್ಫ್ಯೂ ಹೇರಲಾಗಿದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 6ಗಂಟೆಯವರೆಗೆ ಕಠಿಣ ಕರ್ಫ್ಯೂ ನಿಯಮಗಳು ಅನ್ವಯವಾಗುತ್ತವೆ.

ಭಾರತದಲ್ಲಿ ಕೊರೊನಾ ಪ್ರಾರಂಭವಾಗಿದ್ದು 2020ರ ಮಾರ್ಚ್​ನಲ್ಲಿ. ನಂತರ ಆಗಸ್ಟ್​ 7ರಂದು20 ಲಕ್ಷ ದಾಟಿತ್ತು. ಆಗಸ್ಟ್​ 23ರಂದು ಸೋಂಕಿತರ ಸಂಖ್ಯೆ30 ಲಕ್ಷ ದಾಟಿತು. ಸೆಪ್ಟೆಂಬರ್​ 5ಕ್ಕೆ 40 ಲಕ್ಷ, ಸೆಪ್ಟೆಂಬರ್​ 16ಕ್ಕೆ 50 ಲಕ್ಷ,  ಸೆ.28ಕ್ಕೆ 60 ಲಕ್ಷ, ಅಕ್ಟೋಬರ್​ 11ರಂದು 70 ಲಕ್ಷ ಕ್ರಾಸ್​ ಆಗಿತ್ತು. 2021ರ ಮೇ ತಿಂಗಳಲ್ಲಿ 2 ಕೋಟಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ ಜೂನ್​ 23ರಂದು ಮೂರು ಕೋಟಿಯನ್ನು ದಾಟಿದೆ.

ಇದನ್ನೂ ಓದಿ: 60 ವರ್ಷ ಕಾಂಗ್ರೆಸ್ ಪಕ್ಷ ರಾಜ್ಯಕ್ಕೆ ಅಷ್ಟೇ ಅಲ್ಲ, ಇಡೀ ದೇಶಕ್ಕೆ ಶಾಪವಾಗಿತ್ತು; ಕಾಂಗ್ರೆಸ್ ವಿರುದ್ಧ ಶ್ರೀರಾಮುಲು ವಾಗ್ದಾಳಿ

ಹಾಸನದಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕರ ಮೇಲೆ ಮಚ್ಚಿನಿಂದ ಹಲ್ಲೆ; ವಿಡಿಯೋ ವೈರಲ್