Mann ki Baat: ದೇಶದ ಯುವ ಜನರು ಬದಲಾಗುತ್ತಿದ್ದಾರೆ, ರಿಸ್ಕ್​ ತೆಗೆದುಕೊಳ್ಳಲು ಮುಂದಡಿ ಇಡುತ್ತಿದ್ದಾರೆ: ಪ್ರಧಾನಿ ಮೋದಿ

PM Narendra Modi: ಟೋಕಿಯೊ ಒಲಿಂಪಿಕ್ಸ್​​ನಲ್ಲಿ ಸಾಧನೆ ಮಾಡಿದವರನ್ನು ನರೇಂದ್ರ ಮೋದಿ ಮನ್​ ಕೀ ಬಾತ್​​ನಲ್ಲಿ ಹೊಗಳಿದರು. ಕಂಚಿನ ಪದಕ ಗೆದ್ದ ಭಾರತೀಯ ಹಾಕಿ ತಂಡದ ಸಾಧನೆಯನ್ನೂ ಉಲ್ಲೇಖಿಸಿದರು.

Mann ki Baat: ದೇಶದ ಯುವ ಜನರು ಬದಲಾಗುತ್ತಿದ್ದಾರೆ, ರಿಸ್ಕ್​ ತೆಗೆದುಕೊಳ್ಳಲು ಮುಂದಡಿ ಇಡುತ್ತಿದ್ದಾರೆ: ಪ್ರಧಾನಿ ಮೋದಿ
ನರೇಂದ್ರ ಮೋದಿ
Follow us
TV9 Web
| Updated By: Lakshmi Hegde

Updated on:Aug 29, 2021 | 12:23 PM

ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ಮನ್​ ಕೀ ಬಾತ್ (Mann ki Baat) ರೇಡಿಯೋ ಕಾರ್ಯಕ್ರಮದ 80ನೇ ಆವೃತ್ತಿಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದರು. ಇಂದಿನ ಯುವ ಪೀಳಿಗೆ ಸದಾ ಏನಾದರೂ ಹೊಸತನ್ನು ಮಾಡುವ ಉತ್ಸಾಹದಲ್ಲಿ ಇರುತ್ತದೆ.  ಯುವಜನರು ಜೀವನದಲ್ಲಿ ರಿಸ್ಕ್​ ತೆಗೆದು ಮುಂದೆ ಬರುತ್ತಿದ್ದಾರೆ.  ನೀವೀಗ ಯಾವುದೇ ಕುಟುಂಬಕ್ಕೆ ಹೋಗಿ, ಅಲ್ಲಿರುವ ಯುವಕ/ಯುವತಿಯರನ್ನು ಪ್ರಶ್ನಿಸಿ ನೋಡಿ, ಅವರೇನೋ ಹೊಸದನ್ನು ಮಾಡಲು ಬಯಸುತ್ತಿರುತ್ತಾರೆ. ತಮ್ಮ ಕುಟುಂಬದ ಸಂಪ್ರದಾಯಕ್ಕೂ ಮಿಗಿಲಾಗಿ ಏನನ್ನೋ ಹೊಸದನ್ನು ಸಾಧಿಸುವ ಹುಮ್ಮಸ್ಸು ಅವರಲ್ಲಿ ಕಾಣುತ್ತದೆ ಎಂದು ಹೇಳಿದರು. 

ಹಾಗೇ, ಟೋಕಿಯೊ ಒಲಿಂಪಿಕ್ಸ್​​ನಲ್ಲಿ ಸಾಧನೆ ಮಾಡಿದವರನ್ನು ನರೇಂದ್ರ ಮೋದಿ ಮನ್​ ಕೀ ಬಾತ್​​ನಲ್ಲಿ ಹೊಗಳಿದರು. ಕಂಚಿನ ಪದಕ ಗೆದ್ದ ಭಾರತೀಯ ಹಾಕಿ ತಂಡದ ಸಾಧನೆಯನ್ನೂ ಉಲ್ಲೇಖಿಸಿದರು. ಪ್ರತಿ ಪದಕವೂ ವಿಶೇಷವೇ ಆಗಿದೆ. ಅದರಲ್ಲೂ 40 ವರ್ಷಗಳ ಬಳಿಕ, ಭಾರತೀಯ ಹಾಕಿ ತಂಡ ಪದಕ ಗೆದ್ದಾಗ ಇಡೀ ದೇಶ ಹರ್ಷದಿಂದ ಕುಣಿದಾಡಿತು. ಬಹುಶಃ ಮೇಜರ್​ ಧ್ಯಾನ್​ ಚಂದ್​ ಜೀ ತುಂಬ ಸಂತೋಷಪಟ್ಟಿರುತ್ತಾರೆ ಎಂದು ಹೇಳಿದರು.

ದೇಶದಲ್ಲಿ ಕೆಲವು ದಿನಗಳ ಹಿಂದೆ ಬಾಹ್ಯಾಕಾಶ ಕ್ಷೇತ್ರದ ಅವಕಾಶವನ್ನು ವಿಸ್ತರಿಸಲಾಯಿತು. ಅದನ್ನು ಯುವಜನರು ತುಂಬ ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಸ್ಟಾರ್ಟ್​ಅಪ್​ ಸಂಸ್ಕೃತಿಗೆ ಸಲೀಸಾಗಿ ಒಗ್ಗಿಕೊಳ್ಳುತ್ತಿದ್ದಾರೆ. ಸಣ್ಣ ನಗರಗಳಲ್ಲೂ ಸ್ಟಾರ್ಟ್ ಅಪ್​ ಸಂಸ್ಕೃತಿ ಶುರುವಾಗಿದ್ದು, ಇದು ಯುವಜನರ ಉಜ್ವಲ ಭವಿಷ್ಯಕ್ಕೆ ನಾಂದಿಯಾಗಲಿದೆ ಎಂದು ನರೇಂದ್ರ ಮೋದಿ ತಿಳಿಸಿದರು.

ಸ್ವಚ್ಛ ಭಾರತ್​ ಮರೆಯಬೇಡಿ ಇಂದಿನ ಮನ್​ ಕೀ ಬಾತ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಸ್ವಚ್ಛ ಭಾರತ್​ ಅಭಿಯಾನವನ್ನು ನೆನಪಿಸಿದರು. ಕೊವಿಡ್​ 19 ಸೋಂಕು ಇನ್ನೂ ಕಡಿಮೆಯಾಗಿಲ್ಲ. ಹೀಗಿರುವಾಗ ನೈರ್ಮಲ್ಯತೆ ನಮ್ಮ ಆಧ್ಯತೆ ಆಗಿರಬೇಕು ಎಂದು ಮೋದಿ ಹೇಳಿದರು. ಕಳೆದ ಕೆಲವು ವರ್ಷಗಳಿಂದಲೂ, ಭಾರತದ ಅತ್ಯಂತ ಸ್ವಚ್ಛ ನಗರ ಎಂಬ ಖ್ಯಾತಿಗೆ ಪಾತ್ರವಾಗಿರುವ ಇಂದೋರ್​​ನ್ನು ಉಲ್ಲೇಖಿಸಿದರು.

ಇದನ್ನೂ ಓದಿ: National Sports Day 2021: ಇಂದು ರಾಷ್ಟ್ರೀಯ ಕ್ರೀಡಾ ದಿನ: ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಬಗ್ಗೆ ನಿಮಗೆಷ್ಟು ಗೊತ್ತು?

Namma Metro: ಮೆಟ್ರೋ ವಿಸ್ತರಿತ ಮಾರ್ಗಕ್ಕೆ ಹಸಿರು ನಿಶಾನೆ; ಮಹಿಳಾ ಲೋಕೋಪೈಲಟ್​​ ಮೂಲಕ ನೂತನ ಮಾರ್ಗಕ್ಕೆ ಚಾಲನೆ

Published On - 11:30 am, Sun, 29 August 21

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ