AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಲೆಯಲ್ಲಿ ವಿದ್ಯಾರ್ಥಿನಿಯ ಕೆನ್ನೆ ಕಚ್ಚಿದ ಮುಖ್ಯ ಶಿಕ್ಷಕ; ಹಿಗ್ಗಾಮುಗ್ಗಾ ಥಳಿಸಿದ ಸ್ಥಳೀಯರು

Bihar: ಗಲಾಟೆಯನ್ನು ನಿಯಂತ್ರಿಸಲು ಪೊಲೀಸರು ತುಂಬ ಪ್ರಯತ್ನ ಮಾಡಬೇಕಾಯಿತು. ನಂತರವಷ್ಟೇ ಪೊಲೀಸರು ಆರೋಪಿಯನ್ನು ಜನರಿಂದ ರಕ್ಷಿಸಿ ಸ್ಟೇಶನ್​ಗೆ ಕರೆದುಕೊಂಡು ಹೋದರು.

ಶಾಲೆಯಲ್ಲಿ ವಿದ್ಯಾರ್ಥಿನಿಯ ಕೆನ್ನೆ ಕಚ್ಚಿದ ಮುಖ್ಯ ಶಿಕ್ಷಕ; ಹಿಗ್ಗಾಮುಗ್ಗಾ ಥಳಿಸಿದ ಸ್ಥಳೀಯರು
ಸಾಂಕೇತಿಕ ಚಿತ್ರ
TV9 Web
| Edited By: |

Updated on:Sep 19, 2021 | 12:45 PM

Share

ಕಟಿಹಾರ್​: ವಿದ್ಯಾರ್ಥಿನಿಯೊಬ್ಬಳ ಜತೆ ಅನುಚಿತವಾಗಿ ವರ್ತಿಸಿದ ಶಾಲಾ ಮುಖ್ಯಶಿಕ್ಷಕನಿಗೆ ಸ್ಥಳೀಯರೆಲ್ಲ ಸೇರಿ ಸಿಕ್ಕಾಪಟೆ ಹೊಡೆದಿದ್ದಾರೆ. ಅಷ್ಟೇ ಅಲ್ಲ ಪೊಲೀಸರು ಆ ಶಿಕ್ಷಕನನ್ನು ಬಂಧಿಸಿದ್ದು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.  ಈ ಘಟನೆ ನಡೆದದ್ದು ಬಿಹಾರದ ಕಟಿಹಾರ ಜಿಲ್ಲೆಯ ಸೇಮಾಪುರ ಎಂಬಲ್ಲಿರುವ ಪಿಪ್ರಿ ಬಹಿಯಾರ್​ ಎಂಬ ಪ್ರಾಥಮಿಕ ಶಾಲೆಯಲ್ಲಿ. ಇಲ್ಲಿ 4ನೇ ತರಗತಿಯಲ್ಲಿ ಓದುತ್ತಿದ್ದ 12ವರ್ಷದ ಬಾಲಕಿಗೆ ಮುಖ್ಯಶಿಕ್ಷಕ ಕೆನ್ನೆಯ ಮೇಲೆ ಕಚ್ಚಿದ್ದ.

ಮುಖ್ಯ ಶಿಕ್ಷಕ ಕಚ್ಚಿದ್ದರಿಂದ ಬಾಲಕಿ ದೊಡ್ಡದಾಗಿ ಅಳಲು ಶುರು ಮಾಡಿದ್ದಳು. ಬಾಲಕಿಯ ಅಳುವಿನ ಶಬ್ದ ಕೇಳಿ ಅಲ್ಲೇ ಅಕ್ಕ-ಪಕ್ಕ ಇದ್ದವರೆಲ್ಲ ಓಡಿಬಂದಿದ್ದಾರೆ. ಜನರನ್ನು ನೋಡುತ್ತಿದ್ದಂತೆ  ಶಾಲೆಯ ಒಂದು ಕೋಣೆಗೆ ಹೋಗಿ ಲಾಕ್​ ಮಾಡಿಕೊಂಡಿದ್ದ. ಆದರೆ ಸ್ಥಳೀಯ ಜನರು ಅವನನ್ನು ಬಿಡಲಿಲ್ಲ. ಪೊಲೀಸರಿಗೆ ಕರೆ ಮಾಡಿ, ತಾವೆಲ್ಲ ಶಾಲೆಯ ಹೊರಗೇ ಸುತ್ತುವರಿದು ನಿಂತಿದ್ದರು. ಪೊಲೀಸರು ಬಂದು ಮುಖ್ಯಶಿಕ್ಷಕನನ್ನು ಹೊರಗೆ ಕರೆದುತರುತ್ತಿದ್ದಂತೆ ಆತನ ಮೇಲೆ ಜನರು ದಾಳಿ ಮಾಡಿದ್ದಾರೆ. ಕೋಲು, ಬಡಿಗೆಗಳಿಂದ ಪೊಲೀಸರ ಎದುರೇ ಹೊಡೆದಿದ್ದಾರೆ.

ಗಲಾಟೆಯನ್ನು ನಿಯಂತ್ರಿಸಲು ಪೊಲೀಸರು ತುಂಬ ಪ್ರಯತ್ನ ಮಾಡಬೇಕಾಯಿತು. ನಂತರವಷ್ಟೇ ಪೊಲೀಸರು ಆರೋಪಿಯನ್ನು ಜನರಿಂದ ರಕ್ಷಿಸಿ ಸ್ಟೇಶನ್​ಗೆ ಕರೆದುಕೊಂಡು ಹೋದರು. ಮುಖ್ಯಶಿಕ್ಷಕನಿಗೆ ಸ್ಥಳೀಯರು ಹೊಡೆಯುತ್ತಿರುವ ಫೋಟೋ, ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್​ ಆಗಿವೆ.  ಈ ವ್ಯಕ್ತಿ ಹುಡುಗಿಯರ ಮೇಲೆ ದೌರ್ಜನ್ಯ ನಡೆಸಿದ್ದು ಇದೇ ಮೊದಲಲ್ಲ ಎಂದು ಹಳ್ಳಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂಓದಿ: ಬೆಂಗಳೂರು: ಗುಂಡಿ ತೆಗೆದು ಕಾಟಾಚಾರಕ್ಕೆ ಬ್ಯಾರಿಕೇಡ್ ಅಳವಡಿಕೆ; ನೈಟ್ ಶಿಫ್ಟ್ ಮುಗಿಸಿಬರುತ್ತಿದ್ದ ಮೆಕ್ಯಾನಿಕ್ ಗುಂಡಿಗೆ ಬಿದ್ದು ಸಾವು

ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಕಾರ್; ದಂಪತಿ ಸ್ಥಳದಲ್ಲೇ ದುರ್ಮರಣ, ಮಕ್ಕಳು ಪಾರು

Published On - 12:43 pm, Sun, 19 September 21

Follow Us
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ