ಕೇರಳದ ಬಿಷಪ್​​ನ ನಾರ್ಕೋಟಿಕ್ಸ್ ಜಿಹಾದ್ ಹೇಳಿಕೆ ವಿವಾದ: ಲವ್ ಜಿಹಾದ್ ಬಗ್ಗೆ ಕಾನೂನು ತರಲು ಕೇಂದ್ರಕ್ಕೆ ಬಿಜೆಪಿ ಒತ್ತಾಯ

TV9 Digital Desk

| Edited By: Rashmi Kallakatta

Updated on: Sep 12, 2021 | 7:50 PM

Kerala: ಕ್ರಿಶ್ಚಿಯನ್ ಹುಡುಗಿಯರು ಹೆಚ್ಚಾಗಿ ಕೇರಳದಲ್ಲಿ "ಪ್ರೀತಿ ಮತ್ತು ಮಾದಕವಸ್ತು ಜಿಹಾದ್" ಗೆ ಬಲಿಯಾಗುತ್ತಿದ್ದಾರೆ ಮತ್ತು ಎಲ್ಲಿ ಶಸ್ತ್ರಾಸ್ತ್ರಗಳನ್ನು ಬಳಸಲಾಗುವುದಿಲ್ಲವೋ ಅಲ್ಲಿ ಉಗ್ರರು ಇತರ ಧರ್ಮಗಳಿಗೆ ಸೇರಿದ ಯುವಕರನ್ನು ನಾಶಮಾಡಲು ಇಂತಹ ವಿಧಾನಗಳನ್ನು ಬಳಸುತ್ತಿದ್ದಾರೆ ಎಂದು ಹೇಳಿ ಬಿಷಪ್ ಕಲ್ಲರಂಙಾಟ್ ಗುರುವಾರ ವಿವಾದವನ್ನು ಹುಟ್ಟುಹಾಕಿದ್ದರು.

ಕೇರಳದ ಬಿಷಪ್​​ನ ನಾರ್ಕೋಟಿಕ್ಸ್ ಜಿಹಾದ್ ಹೇಳಿಕೆ ವಿವಾದ: ಲವ್ ಜಿಹಾದ್ ಬಗ್ಗೆ ಕಾನೂನು ತರಲು ಕೇಂದ್ರಕ್ಕೆ ಬಿಜೆಪಿ ಒತ್ತಾಯ
ಮಾರ್ ಜೋಸೆಫ್ ಕಲ್ಲರಂಙಾಟ್ (ಕೃಪೆ: ವಿಕಿಪೀಡಿಯಾ)

Follow us on

ತಿರುವನಂತಪುರಂ: ಕೇರಳದ ಕ್ಯಾಥೊಲಿಕ್ ಬಿಷಪ್ (Kerala Catholic bishop) “ನಾರ್ಕೋಟಿಕ್ಸ್ ಜಿಹಾದ್” (narcotics jihad) ಹೇಳಿಕೆ ರಾಜ್ಯದ ರಾಜಕೀಯ ಪಕ್ಷಗಳ ವಾಗ್ವಾದಕ್ಕೆ ಕಾರಣವಾಗಿದ್ದು ಇದೀಗ ರಾಷ್ಟ್ರೀಯ ಬಿಜೆಪಿ ಕೂಡಾ ಈ ಜಟಾಪಟಿಗೆ ದನಿಗೂಡಿಸಿದೆ. ಈ ಹೇಳಿಕೆಯು ರಾಜ್ಯದ ಕ್ರಿಶ್ಚಿಯನ್ ಸಮುದಾಯದ ಧ್ವನಿಯನ್ನು ಪ್ರತಿಧ್ವನಿಸಿದೆ. ಈ ವಿಷಯದಲ್ಲಿ ಕೇಂದ್ರ ಸರ್ಕಾರದ ಮಧ್ಯಸ್ಥಿಕೆ ವಹಿಸಬೇಕು “ನಾರ್ಕೋಟಿಕ್ಸ್ ಜಿಹಾದ್ ” ಮತ್ತು “ಲವ್ ಜಿಹಾದ್” ಅನ್ನು ಎದುರಿಸಲು ಕಾನೂನು ತರಲು ಬಿಜೆಪಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. “ಪವಿತ್ರ ಪೂಜೆಯ ಸಮಯದಲ್ಲಿ ಕೇರಳದ ಪಾಲಾದ ಬಿಷಪ್ ಜೋಸೆಫ್ ಕಲ್ಲರಂಗಟ್ ಅವರ ಹೇಳಿಕೆ ಕೇವಲ ಧರ್ಮಪ್ರಾಂತ್ಯಕ್ಕೆ ಎಚ್ಚರಿಕೆಯ ಗಂಟೆಯಲ್ಲ, ಲವ್ ಜಿಹಾದ್ ಮತ್ತು ನಾರ್ಕೋಟಿಕ್ಸ್ ಜಿಹಾದ್ ಆ ಸಮುದಾಯದ ಧ್ವನಿಯಾಗಿದೆ. ಲವ್ ಜಿಹಾದ್ ಮತ್ತು ಮಾದಕದ್ರವ್ಯ ಸೇವಿಸಿದವರ ಪ್ರಕರಣಗಳು ಹೆಚ್ಚುತ್ತಿವೆ ಎಂದು ಬಿಜೆಪಿ ವಕ್ತಾರ ಟಾಮ್ ವಡಕ್ಕನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತನಿಖಾ ಸಂಸ್ಥೆಗಳಿಂದ ಮಾಹಿತಿ ಸಿಕ್ಕಿದರೂ ಕೇರಳ ಸರ್ಕಾರವು ವಾಸ್ತವವನ್ನು ಅರಿತುಕೊಂಡಿಲ್ಲ ಎಂದು ವಡಕ್ಕನ್ ಆರೋಪಿಸಿದ್ದಾರೆ. ಬಿಷಪ್ ಕೌನ್ಸಿಲ್ ಈ ವಿವಾದವನ್ನು ಪ್ರಸ್ತಾಪಿಸಿದ್ದು, ವಿವಿಧ ಚರ್ಚುಗಳ ಭಕ್ತರು ಯುವತಿಯರಿಗೆ ಆಮಿಷವೊಡ್ಡಿದ್ದಾರೆ ಮತ್ತು ಅವರು “ಲವ್ ಜಿಹಾದ್”ಗೆ ಸಿಲುಕಿ “ನಂತರ ವಿದೇಶದ ಜೈಲು ಪಾಲಾಗುತ್ತಾರೆ”. ಇದನ್ನು “ಇದನ್ನು ಮಾನವ ಕಳ್ಳಸಾಗಣೆ ಎಂದು ಪರಿಗಣಿಸಬೇಕು ಎಂದಿದ್ದಾರೆ ವಡಕ್ಕನ್.

ವಿವಿಧ ಸಮುದಾಯಗಳಲ್ಲಿ ಹೆಚ್ಚುತ್ತಿರುವ ಮಾದಕ ವ್ಯಸನವು ಕುಟುಂಬಗಳೊಳಗಿನ ಶಾಂತಿಯ ಮೇಲೆ ಪರಿಣಾಮ ಬೀರಿದೆ ಮತ್ತು ವಿನಾಶಕಾರಿ ಮಟ್ಟದ ಸಾಮಾಜಿಕ-ಆರ್ಥಿಕ ಅಸ್ವಸ್ಥತೆಯನ್ನು ಸೃಷ್ಟಿಸಿದೆ “ಎಂದು ವಡಕ್ಕನ್ ಹೇಳಿದ್ದಾರೆ.

ಪಾಲಾ ಬಿಷಪ್ ಹೇಳಿಕೆಯು ರಾಜ್ಯದಲ್ಲಿ ವಿವಾದವನ್ನು ಹುಟ್ಟುಹಾಕಿದೆ ಮತ್ತು ಕ್ರಿಶ್ಚಿಯನ್ ಮತ್ತು ಮುಸ್ಲಿಂ ಸಮುದಾಯಗಳಿಂದ ಸಾರ್ವಜನಿ ಆಕ್ಷೇಪ ವ್ಯಕ್ತವಾಗಿದೆ. ಆಡಳಿತಾರೂಢ ಸಿಪಿಐ-ಎಂ ಮತ್ತು ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ಈ ಟೀಕೆಗಳ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದು, ಕೇರಳದಲ್ಲಿ ಬಿಜೆಪಿ ಬಿಷಪ್ ಅವರನ್ನು ಬೆಂಬಲಿಸಿದೆ.

ಮಾದಕದ್ರವ್ಯಕ್ಕೆ ಧಾರ್ಮಿಕ ಬಣ್ಣ ನೀಡುವ ಅಗತ್ಯವಿಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಮರ್ಥಿಸಿಕೊಂಡರೆ, ವಿರೋಧ ಪಕ್ಷದ ನಾಯಕ ವಿ ಡಿ ಸತೀಶನ್ ಅವರು ಸಂಘಪರಿವಾರವನ್ನು ಟೀಕಿಸಿದರು. ಇದು ಬಿಷಪ್ ಅವರ ಟೀಕೆಗಳಿಗೆ ಕೋಮು ಉದ್ವಿಗ್ನತೆಯನ್ನು ಉಂಟುಮಾಡಲು ಪ್ರಯತ್ನಿಸುತ್ತಿದೆ ಎಂದು ಸತೀಶನ್ ಆರೋಪಿಸಿದರು.

ಕೇಂದ್ರ ಸರ್ಕಾರಕ್ಕೆ ನನ್ನ ಮನವಿಯು ಅಂತಹ ಅಂಶಗಳನ್ನು ಕಾಯ್ದಿರಿಸಲು ಕೇಂದ್ರ ಶಾಸನವನ್ನು ತರಬೇಕು ಮತ್ತು ನಾರ್ಕೋಟಿಕ್ಸ್ ಜಿಹಾದ್ ಮತ್ತು ಲವ್ ಜಿಹಾದ್ ಅನ್ನು ಎದುರಿಸಲು ತ್ವರಿತ ನ್ಯಾಯಾಲಯಗಳನ್ನು ತರಬೇಕು ಎಂದು ವಡಕ್ಕನ್ ಹೇಳಿದರು.

ಕ್ರಿಶ್ಚಿಯನ್ ಹುಡುಗಿಯರು ಹೆಚ್ಚಾಗಿ ಕೇರಳದಲ್ಲಿ “ಪ್ರೀತಿ ಮತ್ತು ಮಾದಕವಸ್ತು ಜಿಹಾದ್” ಗೆ ಬಲಿಯಾಗುತ್ತಿದ್ದಾರೆ ಮತ್ತು ಎಲ್ಲಿ ಶಸ್ತ್ರಾಸ್ತ್ರಗಳನ್ನು ಬಳಸಲಾಗುವುದಿಲ್ಲವೋ ಅಲ್ಲಿ ಉಗ್ರರು ಇತರ ಧರ್ಮಗಳಿಗೆ ಸೇರಿದ ಯುವಕರನ್ನು ನಾಶಮಾಡಲು ಇಂತಹ ವಿಧಾನಗಳನ್ನು ಬಳಸುತ್ತಿದ್ದಾರೆ ಎಂದು ಹೇಳಿ ಬಿಷಪ್ ಕಲ್ಲರಂಙಾಟ್ ಗುರುವಾರ ವಿವಾದವನ್ನು ಹುಟ್ಟುಹಾಕಿದ್ದರು.

ಒಂದು ಹೇಳಿಕೆಯಲ್ಲಿ, ಕೇರಳ ಕ್ಯಾಥೊಲಿಕ್ ಬಿಷಪ್ಸ್ ಕೌನ್ಸಿಲ್ (KCBC) ಶನಿವಾರ ಬಿಷಪ್ ಮಾತುಗಳು ಯಾವುದೇ ಸಮುದಾಯವನ್ನು ಗುರಿಯಾಗಿರಿಸಿಕೊಂಡಿಲ್ಲ ಮತ್ತು ಅವರು ಸಮುದಾಯದ ಕಾಳಜಿಯನ್ನು ಅವರು ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದಾರೆ. ಇದನ್ನು ವಿವಾದಾತ್ಮಕವಾಗಿಸಬಾರದು ಮತ್ತು ಬದಲಾಗಿ ಗಂಭೀರತೆಯಿಂದ ಚರ್ಚಿಸಬೇಕು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ದಕ್ಷಿಣ ರಾಜ್ಯದಲ್ಲಿ ತನ್ನ ಚುನಾವಣಾ ನೆಲೆಯನ್ನು ವಿಸ್ತರಿಸಲು ರಾಜ್ಯದ ಜನಸಂಖ್ಯೆಯ ಶೇಕಡ 19 ರಷ್ಟಿರುವ ಕ್ರಿಶ್ಚಿಯನ್ ಸಮುದಾಯವನ್ನು ಓಲೈಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಜೂನ್ ನಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಮೈತ್ರಿ ಮಾಡಿಕೊಳ್ಳುವಲ್ಲಿ “ಕಠಿಣ ನಿಲುವು” ತೊರೆಯುವಂತೆ ಬಿಜೆಪಿ ನಾಯಕರಿಗೆ ಸಲಹೆ ನೀಡಿದ್ದರು . ರಾಜ್ಯದಲ್ಲಿ ಕ್ರಿಶ್ಚಿಯನ್ ಸಮುದಾಯವನ್ನು ಗೆಲ್ಲಲು ಬಿಜೆಪಿ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು. ಬಿಜೆಪಿಯೊಂದಿಗೆ ಕೈಜೋಡಿಸುವಲ್ಲಿ ಏನಾದರೂ ಪ್ರಮುಖ ಸಮಸ್ಯೆಗಳಿವೆಯೇ ಎಂದು ಅರಿಯಲು ಪ್ರಧಾನಮಂತ್ರಿಯವರು ಈ ವರ್ಷದ ಆರಂಭದಲ್ಲಿ ರಾಜ್ಯದ ಚರ್ಚ್ ನಾಯಕರೊಂದಿಗೆ ಸಭೆಗಳನ್ನು ನಡೆಸಿದ್ದರು.

ಪಕ್ಷವು ಆಪಾದಿತ “ಲವ್-ಜಿಹಾದ್”-ಬಲಪಂಥೀಯ ಕಾರ್ಯಕರ್ತರು ಮುಸ್ಲಿಮರ ಆಪಾದಿತ ಅಭಿಯಾನವನ್ನು ಉಲ್ಲೇಖಿಸಲು ಬಳಸಿದ ಪದವಾಗಿದ್ದು, ಹಿಂದೂ ಹುಡುಗಿಯರನ್ನು ಪ್ರೇಮದ ಸೋಗಿನಲ್ಲಿ ಮತಾಂತರ ಮಾಡಲು ಒತ್ತಾಯಿಸಿರುವುದಾಗಿ ಹೇಳಿದ್ದರು. ಕೆಲವು ಚರ್ಚ್ ನಂತರ ಕ್ರಿಶ್ಚಿಯನ್ ಪ್ರಾಬಲ್ಯದ ಪ್ರದೇಶಗಳಲ್ಲಿ ನಾಯಕರು ಅದರ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದರು. ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಪ್ರಣಾಳಿಕೆಯು ‘ಲವ್ ಜಿಹಾದ್’ ಇಲ್ಲವಾಗಿಸುವವ ವಿಶೇಷ ಕಾನೂನಿನ ಭರವಸೆ ನೀಡಿತ್ತು.

ಬಿಷಪ್‌ಗೆ ತಮ್ಮ ಬೆಂಬಲವನ್ನು ವಿಸ್ತರಿಸುತ್ತಾ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ವಿ ಮುರಳೀಧರನ್ ಅವರು ಬಿಷಪ್ ಕೇರಳದಲ್ಲಿ ಸಮುದಾಯದ ಕಾಳಜಿಯನ್ನು ಎತ್ತಿದ್ದಾರೆ ಮತ್ತು ಅವರ ಮೇಲೆ ದಾಳಿ ಮಾಡುವ ಮೂಲಕ ಅವರನ್ನು ಸುಮ್ಮನಿರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೇರಳ: ಲವ್ ಜಿಹಾದ್ ಹೇಳಿಕೆಗಾಗಿ ಪ್ರಮುಖ ಬಿಷಪ್ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸಲು ಮುಸ್ಲಿಂ ಸಮನ್ವಯ ಸಮಿತಿ ಒತ್ತಾಯ

(Kerala Catholic bishop’s claim of narcotics jihad BJP wants Centre to bring law against narco-terrorism and love jihad)

ತಾಜಾ ಸುದ್ದಿ

Related Stories

Click on your DTH Provider to Add TV9 Kannada