AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇರಳ: ಲವ್ ಜಿಹಾದ್ ಹೇಳಿಕೆಗಾಗಿ ಪ್ರಮುಖ ಬಿಷಪ್ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸಲು ಮುಸ್ಲಿಂ ಸಮನ್ವಯ ಸಮಿತಿ ಒತ್ತಾಯ

ಲವ್ ಜಿಹಾದ್'ನ ಭಾಗವಾಗಿ, ಮಹಿಳೆಯರು ಮತಾಂತರಗೊಳ್ಳುತ್ತಿದ್ದಾರೆ ಮತ್ತು ಕ್ಯಾಥೊಲಿಕ್ ಯುವಕರಿಂದ ಮಾದಕ ದ್ರವ್ಯಗಳ ಬಳಕೆ ಹೆಚ್ಚಾಗಿದೆ. ಮುಸ್ಲಿಮೇತರರು ಇಲ್ಲದಿರುವುದನ್ನು ನೋಡಲು ಮತ್ತು ಇದೆಲ್ಲದಕ್ಕೂ ಸಹಾಯ ಮಾಡಲು ಒಂದು ಗುಂಪು ಇದೆ ಎಲ್ಲರೂ ಜಾಗರೂಕರಾಗಿರಬೇಕು.

ಕೇರಳ: ಲವ್ ಜಿಹಾದ್ ಹೇಳಿಕೆಗಾಗಿ ಪ್ರಮುಖ ಬಿಷಪ್ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸಲು ಮುಸ್ಲಿಂ ಸಮನ್ವಯ ಸಮಿತಿ ಒತ್ತಾಯ
ಮಾರ್ ಜೋಸೆಫ್ ಕಲ್ಲರಂಙಾಟ್ (ಕೃಪೆ: ವಿಕಿಪೀಡಿಯಾ)
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Sep 10, 2021 | 6:11 PM

Share

ತಿರುವನಂತಪುರಂ: ಸಿರೋ ಮಲಬಾರ್ ಚರ್ಚ್ ಪಾಲಾ (Syro Malabar Church Pala) ಧರ್ಮಪ್ರಾಂತ್ಯದ ಬಿಷಪ್ ಮಾರ್ ಜೋಸೆಫ್ ಕಲ್ಲರಂಙಾಟ್ (Mar Joseph Kallarangatt) ಅವರು ಕೇರಳದ ಕ್ಯಾಥೊಲಿಕ್ ಹುಡುಗಿಯರು ಈಗ ‘ಪ್ರೀತಿ ಮತ್ತು ಮಾದಕ ಜಿಹಾದ್’ಗೆ (love and narcotic Jihad) ಬಲಿಯಾಗುತ್ತಿದ್ದಾರೆ ಎಂದು ಹೇಳಿದ ಒಂದು ದಿನದ ನಂತರ, ಕೋಟ್ಟಯಂನಲ್ಲಿರುವ ಮುಸ್ಲಿಂ ಸಮನ್ವಯ ಸಮಿತಿಯು ಅವರ ಹೇಳಿಕೆಗಳಿಗಾಗಿ ಜಾಮೀನು ರಹಿತ ಪ್ರಕರಣವನ್ನು ದಾಖಲಿಸುವಂತೆ ಕೋರಿ ಅರ್ಜಿ ಸಲ್ಲಿಸಿದೆ. ಶುಕ್ರವಾರ (10 ಸೆಪ್ಟೆಂಬರ್) ಕೋಟ್ಟಯಂನಲ್ಲಿ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಪದಾಧಿಕಾರಿಗಳು ಕೋಟ್ಟಯಂ ಪೋಲಿಸರಿಗೆ ಈ ಅರ್ಜಿಯನ್ನು ಸಲ್ಲಿಸಿರುವುದಾಗಿ ಹೇಳಿದ್ದು, ಒಂದೇ ಒಂದು ಸಂಸ್ಥೆಯು ರಾಜ್ಯದಲ್ಲಿ ಇಂತಹ ವಿಷಯ ಇದೆ ಎಂದು ಯಾವುದೇ ನಿರ್ಣಾಯಕ ಪುರಾವೆಗಳೊಂದಿಗೆ ಹೇಳಿಲ್ಲ. ಹಾಗಾಗಿ ಈ ಹೇಳಿಕೆ ಕೋಮುವಾದದಿಂದ ಕೂಡಿದೆ ಎಂದು ಹೇಳಿದೆ.

ಜಾತ್ಯತೀತ ರಾಜ್ಯದಲ್ಲಿ ಸಾಮರಸ್ಯವನ್ನು ತರಲು ಬಿಷಪ್ ಹೇಳಿಕೆ ಸಹಾಯ ಮಾಡುವುದಿಲ್ಲ ಎಂದು ಕಾಂಗ್ರೆಸ್ ಕಾರ್ಯಾಧ್ಯಕ್ಷ ಮತ್ತು ಹಿರಿಯ ಶಾಸಕ ಪಿ ಟಿ ಥಾಮಸ್ ಹೇಳಿದ್ದಾರೆ.  “ಈ ರೀತಿಯ ಹೇಳಿಕೆಗಳು ಅಪಾಯಕಾರಿ ಮತ್ತು ತಪ್ಪು ಸಂಕೇತಗಳನ್ನು ಕಳುಹಿಸುತ್ತವೆ. ಅಶಾಂತಿಯನ್ನು ಸೃಷ್ಟಿಸುವ ಇಂಧನವಾಗಿ ಕಾರ್ಯನಿರ್ವಹಿಸುವ ಯಾವುದನ್ನೂ ಯಾರೂ ಮಾಡಬಾರದು ಎಂದು ಥಾಮಸ್ ಹೇಳಿದರು.

ಪ್ರತಿಪಕ್ಷದ ನಾಯಕ ವಿ ಡಿ ಸತೀಸನ್ ಅವರು ಬಿಷಪ್ ಅವರ ಹೇಳಿಕೆಯು ಎಲ್ಲಾ ಹಂತದ ನಾಗರಿಕತೆಯನ್ನು ದಾಟಿದೆ ಎಂದಿದ್ದಾರೆ.

“ಈ ರೀತಿಯ ಹೇಳಿಕೆಗಳನ್ನು ತಪ್ಪಿಸಬೇಕು, ವಿಶೇಷವಾಗಿ ಧಾರ್ಮಿಕ ಮುಖಂಡರು. ಇದು ಕೇವಲ ತೊಂದರೆಯನ್ನು ಉಂಟು ಮಾಡಲು ಸಹಾಯ ಮಾಡುತ್ತದೆ. ಈ ಸಮಯದ ಅವಶ್ಯಕತೆಯೆಂದರೆ ಧಾರ್ಮಿಕ ಮುಖಂಡರು ಸಮಾಜದಲ್ಲಿನ ತೊಂದರೆಗಳನ್ನು ಎದುರಿಸಲು ಸಹಾಯ ಮಾಡುವವರಾಗಿರಬೇಕು. ಇದು ಇಲ್ಲಿಗೆ ಕೊನೆಗೊಳ್ಳಬೇಕು “ಎಂದು ಸತೀಶನ್ ಹೇಳಿದರು.

ಬಿಷಪ್ ಕೋಟ್ಟಾಯಂ ಜಿಲ್ಲೆಯ ಕುರುವಿಲಂಙಾಡ್  ಚರ್ಚ್ ನ ಕಾರ್ಯಕ್ರಮದಲ್ಲಿ ಮಾತನಾಡಿದ್ದು “ಎಲ್ಲೆಲ್ಲಿ ಶಸ್ತ್ರಾಸ್ತ್ರಗಳನ್ನು ಬಳಸಲಾಗುವುದಿಲ್ಲವೋ ಅಲ್ಲಿ ಮಾದಕದ್ರವ್ಯವನ್ನು ಬಳಸಲಾಗುತ್ತಿದೆ ಮತ್ತು ಇಲ್ಲಿಯೇ ಕ್ಯಾಥೊಲಿಕ್ ಹುಡುಗಿಯರು ಬಲಿಯಾಗುತ್ತಾರೆ. ಇದಕ್ಕೆ ಸಹಾಯ ಮಾಡಲು ಕೇರಳದಲ್ಲಿ ಒಂದು ಗುಂಪು ಕಾರ್ಯನಿರ್ವಹಿಸುತ್ತಿದೆ. ಇದನ್ನು ಅರ್ಥಮಾಡಿಕೊಳ್ಳಿ, ಇತರ ಧರ್ಮಗಳ ಮಹಿಳೆಯರು ಐಎಸ್ ಶಿಬಿರಗಳನ್ನು ಹೇಗೆ ತಲುಪಿದರು ಎಂಬುದನ್ನು ವಿಶ್ಲೇಷಿಸಬೇಕಾಗಿದೆ.

ಲವ್ ಜಿಹಾದ್’ನ ಭಾಗವಾಗಿ, ಮಹಿಳೆಯರು ಮತಾಂತರಗೊಳ್ಳುತ್ತಿದ್ದಾರೆ ಮತ್ತು ಕ್ಯಾಥೊಲಿಕ್ ಯುವಕರಿಂದ ಮಾದಕ ದ್ರವ್ಯಗಳ ಬಳಕೆ ಹೆಚ್ಚಾಗಿದೆ. ಮುಸ್ಲಿಮೇತರರು ಇಲ್ಲದಿರುವುದನ್ನು ನೋಡಲು ಮತ್ತು ಇದೆಲ್ಲದಕ್ಕೂ ಸಹಾಯ ಮಾಡಲು ಒಂದು ಗುಂಪು ಇದೆ ಎಲ್ಲರೂ ಜಾಗರೂಕರಾಗಿರಬೇಕು.

ಕೇರಳದಲ್ಲಿ ‘ಲವ್ ಜಿಹಾದ್’ ಅಸ್ತಿತ್ವದಲ್ಲಿದೆ ಎಂಬುದನ್ನು ನಿರಾಕರಿಸುವ ಯಾವುದೇ ಪ್ರಯತ್ನವು ವಾಸ್ತವದ ಬಗ್ಗೆ ಜಾಣಕುರುಡು ಆಗಿದ್ದು ಪಟ್ಟಭದ್ರ ಹಿತಾಸಕ್ತಿಗಳು ಇದನ್ನು ಮಾಡುತ್ತಿದ್ದಾರೆ. “ಮುಸ್ಲಿಂ ಚಿಂತನೆಗಳನ್ನು ಬಲವಂತವಾಗಿ ತರಲು ಒಂದು ಯೋಜನೆ ನಡೆಯುತ್ತಿದೆ ಮತ್ತು ಎಲ್ಲಾ ಕ್ಯಾಥೊಲಿಕರು ಇದರ ಬಗ್ಗೆ ಜಾಗರೂಕರಾಗಿರಬೇಕು ಮತ್ತು ಕಲ್ಲರಂಙಾಟ್ ಹೇಳಿದ್ದರು.

ಕೇರಳ ಸರ್ಕಾರವು 2016 ರಲ್ಲಿ ವಿವಿಧ ಕೇಂದ್ರ ಸಂಸ್ಥೆಗಳಾದ ಐಬಿ, ಎನ್ಐಎ ಮತ್ತು ರಾ ಅವರನ್ನು ಸಂಪರ್ಕಿಸಿದ ನಂತರ ಕೇರಳದಿಂದ ಐಎಸ್ ಸೇರುವ ಸುದ್ದಿಯು ಹೊರಹೊಮ್ಮಿತು.19 ರಾಜ್ಯದಿಂದ ಕಾಣೆಯಾದ 19 ಜನರ ಬಗ್ಗೆ ವರದಿಗಳ ಸತ್ಯಾಸತ್ಯತೆಯ ಬಗ್ಗೆ, ಮತ್ತು ಅವರು ನಂಬಿರುವ ಕೆಲವು ಸಂಬಂಧಿಕರ ಪ್ರಕಾರ ಐಎಸ್ ಸೇರಿದರು.

ಈ 19 ರಲ್ಲಿ 10 ಪುರುಷರು, ಆರು ಮಹಿಳೆಯರು ಮತ್ತು ಮೂವರು ಮಕ್ಕಳು ಸೇರಿದ್ದಾರೆ ಮತ್ತು ಅವರಲ್ಲಿ ಹೆಚ್ಚಿನವರು ಕಾಸರಗೋಡು ಮತ್ತು ಕೆಲವರು ಪಾಲಕ್ಕಾಡ್ ಜಿಲ್ಲೆಗಳಿಂದ ಬಂದಿದ್ದಾರೆ ಮತ್ತು ಕ್ರಿಶ್ಚಿಯನ್ ಮತ್ತು ಹಿಂದೂ ಮತಾಂತರಗೊಂಡವರಾಗಿದ್ದಾರೆ.

ಇದನ್ನೂ ಓದಿ: ಓದಿನ ಹುಚ್ಚು ಹಿಡಿಸಲೆಂದೇ ಈ ರಸ್ತೆಗಳ ಬದಿಯಲ್ಲಿದೆ ಉಚಿತ ಪುಸ್ತಕದ ಬಾಕ್ಸ್​; ಕೇರಳದಲ್ಲಿದೆ ಪುಸ್ತಕ ಗ್ರಾಮ!

(Kerala Muslim Coordination Committee Kottayam Demands non-bailable case Against Mar Joseph Kallarangatt for love and narcotic Jihad Statement)

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!