ಪ್ರಾಣಿ ಸಂಗ್ರಹಾಲಯದ 13 ಗೊರಿಲ್ಲಾಗಳಿಗೆ ಕೊರೊನಾ ಸೋಂಕು ಪತ್ತೆ

TV9 Digital Desk

| Edited By: Sushma Chakre

Updated on: Sep 12, 2021 | 8:35 PM

ಅಟ್ಲಾಂಟದ ಪ್ರಾಣಿ ಸಂಗ್ರಹಾಲಯದಲ್ಲಿ 13ಕ್ಕೂ ಹೆಚ್ಚು ಗೊರಿಲ್ಲಾಗಳಿಗೆ ಕೊವಿಡ್ ಪಾಸಿಟಿವ್ ಬಂದಿದೆ. 60 ವರ್ಷದ ಒಜ್ಜಿ ಸೇರಿದಂತೆ 13ಕ್ಕೂ ಹೆಚ್ಚು ಗೊರಿಲ್ಲಾಗಳು ಕೊರೊನಾ ಸೋಂಕಿಗೆ ತುತ್ತಾಗಿವೆ.

ಪ್ರಾಣಿ ಸಂಗ್ರಹಾಲಯದ 13 ಗೊರಿಲ್ಲಾಗಳಿಗೆ ಕೊರೊನಾ ಸೋಂಕು ಪತ್ತೆ
ಗೊರಿಲ್ಲಾ
Follow us

ವಿಶ್ವಾದ್ಯಂತ ಕೊರೊನಾ ಕೇಸುಗಳು ತಾರಕಕ್ಕೇರುತ್ತಿವೆ. ಇದೀಗ 3ನೇ ಅಲೆ ಆತಂಕ, ರೂಪಾಂತರಿ ಕೇಸುಗಳು ಕೂಡ ಹೆಚ್ಚಾಗಿವೆ. ಇದರ ನಡುವೆ ಪ್ರಾಣಿಗಳಲ್ಲೂ ಕೊವಿಡ್ ಸೋಂಕು ಹೆಚ್ಚಾಗಿದೆ. ಅಟ್ಲಾಂಟದ ಪ್ರಾಣಿ ಸಂಗ್ರಹಾಲಯದಲ್ಲಿ 13ಕ್ಕೂ ಹೆಚ್ಚು ಗೊರಿಲ್ಲಾಗಳಿಗೆ ಕೊವಿಡ್ ಪಾಸಿಟಿವ್ ಬಂದಿದೆ. 60 ವರ್ಷದ ಒಜ್ಜಿ ಸೇರಿದಂತೆ 13ಕ್ಕೂ ಹೆಚ್ಚು ಗೊರಿಲ್ಲಾಗಳು ಕೊರೊನಾ ಸೋಂಕಿಗೆ ತುತ್ತಾಗಿವೆ.

ಅಟ್ಲಾಂಟದ ಪ್ರಾಣಿ ಸಂಗ್ರಹಾಲಯದ ಸಿಬ್ಬಂದಿಗಳು ಗೊರಿಲ್ಲಾಗಳಿಗೆ ಊಟ ನೀಡಲು ಹೋದಾಗ ಅವು ಕೆಮ್ಮುತ್ತಾ, ಸೀನುತ್ತಾ ಇದ್ದುದನ್ನು ನೋಡಿದರು. ನೆಗಡಿಯಿಂದ ಪರದಾಡುತ್ತಿದ್ದ ಗೊರಿಲ್ಲಾಗಳು ಸರಿಯಾಗಿ ಆಹಾರವನ್ನು ಕೂಡ ತಿನ್ನುತ್ತಿರಲಿಲ್ಲ. ಇದರಿಂದ ಅನುಮಾನಗೊಂಡ ಸಿಬ್ಬಂದಿ ಗೊರಿಲ್ಲಾಗಳ ವೈದ್ಯಕೀಯ ವರದಿಯನ್ನು ಜಾರ್ಜಿಯ ವಿಶ್ವವಿದ್ಯಾಲಯಕ್ಕೆ ಪಶು ವೈದ್ಯಕೀಯ ಲ್ಯಾಬ್​ಗೆ ಕಳುಹಿಸಿದ್ದರು. ಆಗ ಆ ಗೊರಿಲ್ಲಾಗಳಿಗೆ ಕೊವಿಡ್ ಪಾಸಿಟಿವ್ ಇರುವುದು ಖಚಿತವಾಗಿತ್ತು.

ಗೊರಿಲ್ಲಾಗಳಿಗೆ ಕೊರೊನಾವೈರಸ್ ತಗುಲಿದೆ. ಅವುಗಳನ್ನು ಬಹಳ ಎಚ್ಚರದಿಂದ ನೋಡಿಕೊಳ್ಳಬೇಕು. 20 ಗೊರಿಲ್ಲಾಗಳಿಗೆ ಸುಮಾರು 13 ಗೊರಿಲ್ಲಾಗಳಿಗೆ ಕೊರೊನಾ ಬಂದಿದೆ ಎಂದು ಲ್ಯಾಬ್ ವರದಿ ನೀಡಿದೆ. ಪ್ರಾಣಿ ಸಂಗ್ರಹಾಲಯದ ಸಿಬ್ಬಂದಿಗೆ ಮಾಸ್ಕ್, ಗ್ಲೌಸ್ ಧರಿಸುವುದು ಕಡ್ಡಾಯವಾಗಿದೆ. ಹಾಗೇ, ಕೊವಿಡ್ ಲಸಿಕೆ ಎರಡೂ ಡೋಸ್ ಪಡೆದ ಸಿಬ್ಬಂದಿಗೆ ಮಾತ್ರ ಒಳಗೆ ಹೋಗಲು ಅನುಮತಿ ನೀಡಲಾಗಿದೆ.

ಕರ್ನಾಟಕದಲ್ಲಿ ಅಕ್ಟೋಬರ್​- ನವೆಂಬರ್ ತಿಂಗಳಲ್ಲಿ ಕೊರೊನಾ ಮೂರನೇ ಅಲೆ ವಿಪರೀತವಾಗಲಿದೆ ಎಂದು ತಿಳಿಸಿರುವ ತಾಂತ್ರಿ ಸಲಹಾ ಸಮಿತಿ ಕರ್ನಾಟಕದಲ್ಲಿ ಕೊವಿಡ್ ನಿಯಮಾವಳಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದೆ. ಒಂದುವೇಳೆ ರಾಜ್ಯದಲ್ಲಿ ಕೊರೊನಾ ಮಾರ್ಗಸೂಚಿಗಳನ್ನು ಸರಿಯಾಗಿ ಜಾರಿಗೆ ತರದಿದ್ದರೆ ಮುಂದೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಕೆ ನೀಡಿದೆ. ಈ ತಿಂಗಳಿನಿಂದ ಸಾಲು-ಸಾಲು ಹಬ್ಬಗಳು ಇರುವುದರಿಂದ ಕೊರೊನಾ ಮಾರ್ಗಸೂಚಿಗಳನ್ನು ಕಠಿಣಗೊಳಿಸದಿದ್ದರೆ ಮುಂದಿನ ತಿಂಗಳ ವೇಳೆಗೆ ಕೊರೊನಾ ಕೇಸುಗಳು ಮತ್ತೆ ಹೆಚ್ಚಾಗಲಿದೆ ಎಂದು ಟಿಎಸಿ ಹೇಳಿದೆ.

ಇದನ್ನೂ ಓದಿ: Covid 19 Karnataka Update: ಕರ್ನಾಟಕದ 803 ಮಂದಿಗೆ ಕೊರೊನಾ ಸೋಂಕು, 17 ಸಾವು

Karnataka Coronavirus: ಕರ್ನಾಟಕದಲ್ಲಿ ಮುಂದಿನ ತಿಂಗಳು ಕೊವಿಡ್ ಮೂರನೇ ಅಲೆ ಶುರು; ತಾಂತ್ರಿಕ ಸಲಹಾ ಸಮಿತಿ ಎಚ್ಚರಿಕೆ

(Coronavirus Updates At least 13 gorillas test Covid-19 positive at Atlanta zoo)

ತಾಜಾ ಸುದ್ದಿ

Related Stories

Click on your DTH Provider to Add TV9 Kannada