Covid 19 Karnataka Update: ಕರ್ನಾಟಕದ 803 ಮಂದಿಗೆ ಕೊರೊನಾ ಸೋಂಕು, 17 ಸಾವು

ಪಾಸಿಟಿವಿಟಿ ಪ್ರಮಾಣ 0.80 ಇದ್ದರೆ, ಸೋಂಕಿನಿಂದ ಸಾವನ್ನಪ್ಪುವ ಪ್ರಮಾಣ ಶೇ 2.11 ಇದೆ. ರಾಜ್ಯದಲ್ಲಿ ಈವರೆಗೆ 29,61,735 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 29,07,548 ಮಂದಿ ಸಾವನ್ನಪ್ಪಿದ್ದಾರೆ

Covid 19 Karnataka Update: ಕರ್ನಾಟಕದ 803 ಮಂದಿಗೆ ಕೊರೊನಾ ಸೋಂಕು, 17 ಸಾವು
ಸಾಂಕೇತಿಕ ಚಿತ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 12, 2021 | 8:04 PM

ಬೆಂಗಳೂರು: ಕರ್ನಾಟಕದಲ್ಲಿ ಭಾನುವಾರ ಒಟ್ಟು 803 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, 802 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಒಟ್ಟು 17 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ 16,656 ಸಕ್ರಿಯ ಪ್ರಕರಣಗಳಿವೆ. ಈವರೆಗೆ ಒಟ್ಟು 37,504 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಪಾಸಿಟಿವಿಟಿ ಪ್ರಮಾಣ 0.80 ಇದ್ದರೆ, ಸೋಂಕಿನಿಂದ ಸಾವನ್ನಪ್ಪುವ ಪ್ರಮಾಣ ಶೇ 2.11 ಇದೆ. ರಾಜ್ಯದಲ್ಲಿ ಈವರೆಗೆ 29,61,735 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 29,07,548 ಮಂದಿ ಸಾವನ್ನಪ್ಪಿದ್ದಾರೆ.

ಬೆಂಗಳೂರು ನಗರದಲ್ಲಿ 255 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 107 ಜನರು ಚೇತರಿಸಿಕೊಂಡಿದ್ದಾರೆ. ನಗರದಲ್ಲಿ ಈವರೆಗೆ 12,41,425 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 12,18,000 ಮಂದಿ ಚೇತರಿಸಿಕೊಂಡಿದ್ದಾರೆ. ನಗರದಲ್ಲಿ ಪ್ರಸ್ತುತ 7371 ಸಕ್ರಿಯ ಪ್ರಕರಣಗಳಿದ್ದು, ಇಂದು ಆರು ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 16,053 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.

ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿ ಸಾವು? ಬಾಗಲಕೋಟೆ 1, ಬಳ್ಳಾರಿ 4, ಬೆಳಗಾವಿ 17, ಬೆಂಗಳೂರು ಗ್ರಾಮಾಂತರ 11, ಬೆಂಗಳೂರು ನಗರ 255, ಚಾಮರಾಜನಗರ 6, ಚಿಕ್ಕಬಳ್ಳಾಪುರ 2, ಚಿಕ್ಕಮಗಳೂರು 14, ಚಿತ್ರದುರ್ಗ 4, ದಕ್ಷಿಣ ಕನ್ನಡ 153, ದಾವಣಗೆರೆ, ಧಾರವಾಡ 9, ಹಾಸನ 30, ಹಾವೇರಿ 1, ಕಲಬುರಗಿ 2, ಕೊಡಗು 63, ಕೋಲಾರ 8, ಮಂಡ್ಯ 11, ಮೈಸೂರು 36, ರಾಯಚೂರು 2, ರಾಮನಗರ 1, ಶಿವಮೊಗ್ಗ 24, ತುಮಕೂರು 22, ಉಡುಪಿ 90, ಉತ್ತರ ಕನ್ನಡ 28.

ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿ ಸಾವು? ಬೆಂಗಳೂರು ನಗರ 6, ಬೆಳಗಾವಿ, ಮೈಸೂರು, ದಕ್ಷಿಣ ಕನ್ನಡ, ಹಾಸನ 2, ಉಡುಪಿ, ಉತ್ತರ ಕನ್ನಡ, ಕೊಡಗು 1.

ಕೊರೊನಾ ನಮ್ಮ ಕಣ್ಣು ತೆರೆಸಿದೆ: ಬಸವರಾಜ​​ ಬೊಮ್ಮಾಯಿ ಆರೋಗ್ಯದ ಮಹತ್ವ ಕೊವಿಡ್ ನಂತರ ಎಲ್ಲರಿಗೂ ಅರಿವಾಯಿತು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಆರೋಗ್ಯ ವ್ಯವಸ್ಥೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಕೊವಿಡ್ ಮೊದಲ ಹಾಗೂ ಎರಡನೇ ಅಲೆ ಎದುರಿಸಿದ್ದೇವೆ. ಮೊದಲನೇ ಅಲೆಯಲ್ಲಿ ಪರಿಸ್ಥಿತಿ ಹೇಗಿತ್ತು ಎಂದು ಗೊತ್ತಿದೆ. ಆಗ ಸೋಂಕಿತರನ್ನು ರಿಜಿಸ್ಟರ್ ಮಾಡೋದು ಗೊತ್ತಿರಲಿಲ್ಲ. ಆದರೆ ನಮ್ಮ ಆರೋಗ್ಯ ಸಿಬ್ಬಂದಿ ಹಗಲಿರುಳು ಶ್ರಮಿಸಿದರು. ಆರೋಗ್ಯ ವಿಚಾರವಾಗಿ ನಮ್ಮ ಸರ್ಕಾರದಿಂದ ವಿಶೇಷ ಕಾಳಜಿ ವಹಿಸಲಾಯಿತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನ್ನ ಪ್ರಕಾರ 108 ಌಂಬುಲೆನ್ಸ್​ ಇನ್ನೂ ಸುಧಾರಿಸಬೇಕಿದೆ. ಜಿಪಿಎಸ್, ಎಲ್ಲ ಪ್ರದೇಶಗಳನ್ನೂ ಸಂಪರ್ಕಿಸುವಂತಾಗಬೇಕು. ರಾಯಚೂರು, ಯಾದಗಿರಿ, ಕಲಬುರಗಿ ಕಡೆ ಅಪೌಷ್ಟಿಕತೆಯ ಸಮಸ್ಯೆಯಾಗಿದೆ ಎಂದು ತಿಳಿಸಿದರು.

(Karnataka Covid Numbers 803 Infected 17 Deaths due to Coronavirus on September 12)

ಇದನ್ನೂ ಓದಿ: Karnataka Coronavirus: ಕರ್ನಾಟಕದಲ್ಲಿ ಮುಂದಿನ ತಿಂಗಳು ಕೊವಿಡ್ ಮೂರನೇ ಅಲೆ ಶುರು; ತಾಂತ್ರಿಕ ಸಲಹಾ ಸಮಿತಿ ಎಚ್ಚರಿಕೆ

ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಮಹಿಳೆಗೆ ಕೂಲಿ ನೀಡಿ ಕೊರೊನಾ ಲಸಿಕೆ ಹಾಕಿಸಿದ ಅಧಿಕಾರಿಗಳು!

ನಿಜಾಮನ ರಜಾಕರು ಮುಸಲ್ಮಾನರಲ್ಲ ಅಂತ ಪ್ರಿಯಾಂಕ್ ಹೇಳುತ್ತಾರೆ: ಯತ್ನಾಳ್
ನಿಜಾಮನ ರಜಾಕರು ಮುಸಲ್ಮಾನರಲ್ಲ ಅಂತ ಪ್ರಿಯಾಂಕ್ ಹೇಳುತ್ತಾರೆ: ಯತ್ನಾಳ್
‘ಸುಮ್ಮನಿರುವ ಮಗ ನಾನಲ್ಲ’: ಸಿಡಿದೆದ್ದ ಧನರಾಜ್; ಸಮಾಧಾನ ಮಾಡಿದ ಹನುಮ
‘ಸುಮ್ಮನಿರುವ ಮಗ ನಾನಲ್ಲ’: ಸಿಡಿದೆದ್ದ ಧನರಾಜ್; ಸಮಾಧಾನ ಮಾಡಿದ ಹನುಮ
ಜೆಡಿಎಸ್ ಕೇವಲ ಒಂದು ಕುಟುಂಬದ ಪಕ್ಷವಾಗಿ ಉಳಿದುಬಿಟ್ಟಿದೆ: ಯೋಗೇಶ್ವರ್
ಜೆಡಿಎಸ್ ಕೇವಲ ಒಂದು ಕುಟುಂಬದ ಪಕ್ಷವಾಗಿ ಉಳಿದುಬಿಟ್ಟಿದೆ: ಯೋಗೇಶ್ವರ್
ಪ್ರತಿ ಹುಟ್ಟುಹಬ್ಬಕ್ಕೆ ಇಬ್ರಾಹಿಂ ನನಗೆ ವಿಶ್ ಮಾಡುತ್ತಾರೆ: ಜಿಟಿ ದೇವೇಗೌಡ
ಪ್ರತಿ ಹುಟ್ಟುಹಬ್ಬಕ್ಕೆ ಇಬ್ರಾಹಿಂ ನನಗೆ ವಿಶ್ ಮಾಡುತ್ತಾರೆ: ಜಿಟಿ ದೇವೇಗೌಡ
ದೊಡ್ಮನೆಗೆ ಬರೋಕಿಂತ ಮುನ್ನ ಧರ್ಮ, ಅನುಷಾ ರೈ ನಡುವೆ ಬ್ರೇಕಪ್ ಆಗಿತ್ತಾ?
ದೊಡ್ಮನೆಗೆ ಬರೋಕಿಂತ ಮುನ್ನ ಧರ್ಮ, ಅನುಷಾ ರೈ ನಡುವೆ ಬ್ರೇಕಪ್ ಆಗಿತ್ತಾ?
ಯೋಗೇಶ್ವರ್ ಕೇವಲ ಅಭಿವೃದ್ಧಿ ಕೆಲಸಗಳನ್ನು ಉಲ್ಲೇಖಿಸಿ ಮತ ಕೇಳಿದರು: ಶಾಸಕ
ಯೋಗೇಶ್ವರ್ ಕೇವಲ ಅಭಿವೃದ್ಧಿ ಕೆಲಸಗಳನ್ನು ಉಲ್ಲೇಖಿಸಿ ಮತ ಕೇಳಿದರು: ಶಾಸಕ
ಸಿಎಂ ಇಬ್ರಾಹಿಂ ಮತ್ತು ಜಿಟಿ ದೇವೇಗೌಡ ನೊಂದಜೀವಿ ಮತ್ತು ಸಮಾನಮನಸ್ಕರು
ಸಿಎಂ ಇಬ್ರಾಹಿಂ ಮತ್ತು ಜಿಟಿ ದೇವೇಗೌಡ ನೊಂದಜೀವಿ ಮತ್ತು ಸಮಾನಮನಸ್ಕರು
‘ಯಾರೂ ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಂಗಿಲ್ಲ’: ಉಗ್ರಂ ಮಂಜು ಆಜ್ಞೆ
‘ಯಾರೂ ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಂಗಿಲ್ಲ’: ಉಗ್ರಂ ಮಂಜು ಆಜ್ಞೆ
ಕುಮಾರಸ್ವಾಮಿ ಹೇಳಿದ್ದರಲ್ಲಿ ತಪ್ಪಿಲ್ಲ, ಮುಸ್ಲಿಂ ಮತದಾರ ಕೈಬಿಟ್ಟ: ಅಶೋಕ
ಕುಮಾರಸ್ವಾಮಿ ಹೇಳಿದ್ದರಲ್ಲಿ ತಪ್ಪಿಲ್ಲ, ಮುಸ್ಲಿಂ ಮತದಾರ ಕೈಬಿಟ್ಟ: ಅಶೋಕ
ನಾನಿಲ್ಲದಿದ್ದರೂ ಕಾಂಗ್ರೆಸ್ ಅಸ್ತಿತ್ವಕ್ಕೆ ಯಾವುದೇ ತೊಂದರೆಯಿಲ್ಲ: ಡಿಕೆಶಿ
ನಾನಿಲ್ಲದಿದ್ದರೂ ಕಾಂಗ್ರೆಸ್ ಅಸ್ತಿತ್ವಕ್ಕೆ ಯಾವುದೇ ತೊಂದರೆಯಿಲ್ಲ: ಡಿಕೆಶಿ