ತಮಿಳುನಾಡಿನಲ್ಲಿ ತಮಿಳರಾ? ದ್ರಾವಿಡರಾ? ವಿಚಾರ ಸಂಕಿರಣ; Rise of Tamil Nationalism ಹ್ಯಾಷ್​ಟ್ಯಾಗ್ ಟ್ರೆಂಡ್ ಮಾಡಿದ ನೆಟ್ಟಿಗರು

ತಮಿಳುನಾಡಿನ ನಾಮ್ ತಮಿಳರ್ ಕಟ್ಚಿ (Naam Tamilar Katchi) ಪಕ್ಷ ಭಾನುವಾರ ತಮಿಳಾರಾ ? ದ್ರಾವಿಡರಾ? ಎಂಬ ರಾಜಕೀಯ ಸೆಮಿನಾರ್ ಆಯೋಜಿಸಿತ್ತು. 'ಸಂಗಮ್ ಅವಧಿಯಿಂದ ಇಂದಿನವರೆಗೆ .. ತಮಿಳರಾ? ದ್ರಾವಿಡರ ..? ಎಂಬ ವಿಷಯದಲ್ಲಿ  ನಾವು ತಮಿಳ್ ಪಕ್ಷದ ಪರವಾಗಿ...

ತಮಿಳುನಾಡಿನಲ್ಲಿ ತಮಿಳರಾ? ದ್ರಾವಿಡರಾ? ವಿಚಾರ ಸಂಕಿರಣ; Rise of Tamil Nationalism ಹ್ಯಾಷ್​ಟ್ಯಾಗ್ ಟ್ರೆಂಡ್ ಮಾಡಿದ ನೆಟ್ಟಿಗರು
ಟ್ವಿಟರ್ ಟ್ರೆಂಡ್

ಬೆಂಗಳೂರು: ಭಾನುವಾರ ಟ್ವಿಟರ್​​ನಲ್ಲಿ #Rise of Tamil Nationalism ಎಂಬ ಹ್ಯಾಷ್ ಟ್ಯಾಗ್ ಟ್ರೆಂಡ್ ಆಗಿದೆ. ತಮಿಳು ಭಾಷೆಯೇ ಅತೀ ಪುರಾತನವಾದುದು ಎಂದು ವಾದಿಸಿದ ನೆಟ್ಟಿಗರು ಒಂದೆಡೆಯಾದರೆ ಇನ್ನು ಕೆಲವರು ತಮಿಳರಾ? ದ್ರಾವಿಡರಾ? ಎಂಬ ವಿಚಾರ ಸಂಕಿರಣದ ಫೋಸ್ಟ್ ಶೇರ್ ಮಾಡಿ ತಮಿಳರೆಲ್ಲರೂ ಒಂದಾಗಬೇಕು ಎಂಬ ಕರೆ ನೀಡಿದ್ದಾರೆ.

ಏನಿದು ವಿಷಯ?
ತಮಿಳುನಾಡಿನ ನಾಮ್ ತಮಿಳರ್ ಕಟ್ಚಿ (Naam Tamilar Katchi) ಪಕ್ಷ ಭಾನುವಾರ ತಮಿಳಾರಾ ? ದ್ರಾವಿಡರಾ? ಎಂಬ ರಾಜಕೀಯ ಸೆಮಿನಾರ್ ಆಯೋಜಿಸಿತ್ತು. ‘ಸಂಗಮ್ ಅವಧಿಯಿಂದ ಇಂದಿನವರೆಗೆ .. ತಮಿಳರಾ? ದ್ರಾವಿಡರ ..? ಎಂಬ ವಿಷಯದಲ್ಲಿ  ನಾವು ತಮಿಳ್ ಪಕ್ಷದ ಪರವಾಗಿ ಜನಾಂಗೀಯ ವಿಮೋಚನೆಯ ರಾಜಕೀಯ ಸೆಮಿನಾರ್ ನಡೆಸುತ್ತಿದ್ದೇವೆ. ಇತಿಹಾಸದ ಉದ್ದಕ್ಕೂ ಪ್ರಪಂಚದ ಅತ್ಯಂತ ಹಳೆಯ ನಿವಾಸಿ ತಮಿಳು ರಾಷ್ಟ್ರೀಯ ಜನಾಂಗದ ವಿಶಿಷ್ಟ ಗುರುತುಗಳನ್ನು ತೊಡೆದುಹಾಕಲು ಮತ್ತು ರಾಷ್ಟ್ರೀಯ ಜನಾಂಗವನ್ನು ಅದರ ಹೊರಗೆ ತಮಿಳರು ಎಂದು ಅವಹೇಳನ ಮಾಡಲು ಪ್ರಯತ್ನಿಸಲಾಗಿದೆ. ನಿಜವಾದ ಇತಿಹಾಸ ಸಂಗಮ್ ಯುಗದಿಂದಲೂ ತಮಿಳರ ಸ್ಥಳೀಯ ಜನಾಂಗದ ಜನರು ಯಾರನ್ನು ಗುರುತಿಸಿದ್ದಾರೆ ಎಂಬೆಲ್ಲ ವಿಷಯದ ಬಗ್ಗೆ ಆ ಸಂಕಿರಣದಲ್ಲಿ ವಿಚಾರ ವಿನಿಮಯ ನಡೆಯಲಿದೆ ಎಂದು ಎನ್ ಟಿಕೆ ಪಕ್ಷ ಪ್ರಕಟಣೆಯಲ್ಲಿ ತಿಳಿಸಿತ್ತು.

#Rise of Tamil Nationalism ಹ್ಯಾಷ್ ಟ್ಯಾಗ್ ಟ್ರೆಂಡ್
ಈ ವಿಚಾರ ಸಂಕಿರಣ ಆರಂಭವಾಗುತ್ತಿದ್ದಂತೆ ನೆಟ್ಟಿಗರು #Rise of Tamil Nationalism ಎಂಬ ಹ್ಯಾಷ್ ಟ್ಯಾಗ್ ನೊಂದಿಗೆ ತಮ್ಮ ಅಭಿಪ್ರಾಯಗಳನ್ನು ಟ್ವೀಟ್ ಮಾಡಿದ್ದಾರೆ . ಅವುಗಳಲ್ಲಿ ಕೆಲವು ಹೀಗಿವೆ

ಬ್ರಾಹ್ಮಣರು ಇತರ ಮೇಲ್ವರ್ಗ ಮತ್ತು ಮಧ್ಯಂತರ ಜಾತಿಗಳಿಗೆ ಮಾರ್ಗವನ್ನು ತೆರವುಗೊಳಿಸುವುದನ್ನು ವಿರೋಧಿಸುವುದರ ಮೇಲೆ ದ್ರಾವಿಡಂ ಹೆಚ್ಚು ಗಮನಹರಿಸಿದೆ ಅವರು ನಿಜವಾಗಿಯೂ ತುಳಿತಕ್ಕೊಳಗಾದ ಪಿಪಿಎಲ್ (ಕೆಳಜಾತಿ ಪಿಪಿಎಲ್) ಬಗ್ಗೆ ಕಾಳಜಿ ವಹಿಸಲಿಲ್ಲ ಮತ್ತು ಅವರೇ ಜಾತಿವಾದವನ್ನು ಜೀವಂತವಾಗಿಟ್ಟುಕೊಂಡು ಅವರನ್ನು ದಮನಿಸುವುದನ್ನು ಮುಂದುವರಿಸಿದರು ಎಂದು ರಜತ್ ಎಂಬ ಟ್ವೀಟಿಗರು ಟ್ವೀಟ್ ಮಾಡಿದ್ದಾರೆ.

ನಮಗೆ ನಮ್ಮದೇ ಗುರುತು ಇದೆ. ನಾವು ತಮಿಳರು. ದ್ರಾವಿಡ ಅಥವಾ ಭಾರತೀಯರ ಹೆಸರಿನಲ್ಲಿ ನಮ್ಮ ಮೇಲೆ ಹೇರಲಾದ ಯಾವುದೇ ರೀತಿಯ ಹುಸಿ ಗುರುತನ್ನು ನಾವು ತಿರಸ್ಕರಿಸುತ್ತೇವೆ ಎಂದು @ntk4tn ಎಂಬ ಟ್ವೀಟಿಗರು  ಹೇಳಿದ್ದಾರೆ.

ವಿಶ್ವಾದ್ಯಂತ ತಮಿಳು ಜನರ ಏಕತೆಗಾಗಿ. ನಮಗೆ ಎರಡು ವಸ್ತುಗಳು ಬೇಕು.ತಮಿಳು ರಾಷ್ಟ್ರೀಯತೆ ಪಕ್ಷ ಮಾತ್ರ ಯಾವುದೇ ತಾರತಮ್ಯ ಮತ್ತು ಭೂದೃಶ್ಯವಿಲ್ಲದೆ ತಮಿಳು ಜನರನ್ನು ಒಂದುಗೂಡಿಸುತ್ತದೆ. ನಾವು ಹಿಂದಿ ಪಕ್ಷಗಳು (ಬಿಜೆಪಿ ಮತ್ತು ಕಾಂಗ್ರೆಸ್) ಮತ್ತು ದ್ರಾವಿಡ ಪಕ್ಷಗಳನ್ನು (ಎಐಎಡಿಎಂಕೆ ಮತ್ತು ಡಿಎಂಕೆ) ಬಹಿಷ್ಕರಿಸಬೇಕು  ಎಂದು @PythonTamil ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: NEET Exam 2021ನೀಟ್ ಪರೀಕ್ಷೆಗೆ ಮುನ್ನ ಸೋಲಿನ ಭಯದಿಂದ ವಿದ್ಯಾರ್ಥಿ ಆತ್ಮಹತ್ಯೆ; ನೀಟ್​​ನಿಂದ ಶಾಶ್ವತ ವಿನಾಯಿತಿ ಕೋರಿ ಮಸೂದೆ ಮಂಡಿಸುವುದಾಗಿ ಹೇಳಿದ ಸ್ಟಾಲಿನ್

(Political Seminar on Tamil or Dravid in TamilNadu twitterati trends Rise Of Tamil Nationalism)

Read Full Article

Click on your DTH Provider to Add TV9 Kannada