ಸರ್ಕಾರದ ಯೋಜನೆಗಳು ಜನರನ್ನು ತಲುಪಲು ಬ್ಯಾಂಕ್​ಗಳು ಡಿಜಿಟಲ್ ವ್ಯವಸ್ಥೆ ಬಳಸಿಕೊಳ್ಳಬೇಕು: ನಿರ್ಮಲಾ ಸೀತಾರಾಮನ್

ದೇಶದ ಎಲ್ಲ ನಾಗರಿಕರು ಬ್ಯಾಂಕ್ ಖಾತೆ ಹೊಂದಿರಬೇಕು. ರುಪೇ ಕಾರ್ಡ್​ಗಳ ಮೂಲಕ ಸುಲಭದಲ್ಲಿ ವಹಿವಾಟು ನಡೆಸಲು ಎಲ್ಲರಿಗೂ ಸಾಧ್ಯವಾಗಬೇಕು ಎಂದು ಅವರು ತಿಳಿಸಿದರು.

ಸರ್ಕಾರದ ಯೋಜನೆಗಳು ಜನರನ್ನು ತಲುಪಲು ಬ್ಯಾಂಕ್​ಗಳು ಡಿಜಿಟಲ್ ವ್ಯವಸ್ಥೆ ಬಳಸಿಕೊಳ್ಳಬೇಕು: ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್ (ಸಂಗ್ರಹ ಚಿತ್ರ)
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 12, 2021 | 10:10 PM

ಟ್ಯುಟಿಕೊರಿನ್: ಖಾಸಗಿ ವಲಯದಲ್ಲಿರುವ ಬ್ಯಾಂಕ್​ಗಳೂ ಸೇರಿದಂತೆ ಎಲ್ಲ ಬ್ಯಾಂಕ್​ಗಳೂ ಡಿಜಿಟಲ್ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ ಸರ್ಕಾರದ ಯೋಜನೆಗಳನ್ನು ಬಡವರು ಮತ್ತು ತಳವರ್ಗದ ಜನರಿಗೆ ಸುಲಭವಾಗಿ ತಲುಪಿಸಬೇಕು. ಆರ್ಥಿಕವಾಗಿ ಎಲ್ಲರನ್ನೂ ಒಳಗೊಳ್ಳುವ (ಫೈನಾನ್ಷಿಯಲ್ ಇನ್​ಕ್ಲುಷನ್) ಕಾರ್ಯಕ್ರಮದ ವ್ಯಾಪ್ತಿಯನ್ನು ವಿಸ್ತರಿಸಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಲಹೆ ಮಾಡಿದರು.

ತಮಿಳ್​ನಾಡು ಮರ್ಕಂಟೈಲ್ ಬ್ಯಾಂಕ್​ನ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದ ನಿರ್ಮಲಾ, ಬ್ಯಾಂಕಿಂಗ್ ವಲಯದ ಡಿಜಿಟಲ್ ಸಾಧ್ಯತೆಗಳು ಕೊವಿಡ್ ಸಮಯದಲ್ಲಿ ಉಪಯುಕ್ತ ಎನಿಸಿದವು. ಅಗತ್ಯ ಇರುವವರಿಗೆ ನೆರವು ನೀಡಲೆಂದು ಸರ್ಕಾರ ಘೋಷಿಸುತ್ತಿದ್ದ ಆರ್ಥಿಕ ಪರಿಹಾರ ನಿಧಿಯನ್ನು ವಿತರಿಸಲು ಡಿಜಿಟಲ್ ಸಾಧನಗಳು ಸಹಾಯಕ್ಕೆ ಬಂದವು. ಫಲಾನುಭವಿಗಳ ಪೂರ್ವಾಪರ ಪರಿಶೀಲನೆಗೂ ಡಿಜಿಟಲ್ ಸಾಧನಗಳು ನೆರವಾದವು ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬ್ಯಾಂಕಿಂಗ್ ವ್ಯವಸ್ಥೆಯ ಪ್ರಾಮುಖ್ಯತೆ ಅರಿವು ಚೆನ್ನಾಗಿದೆ. ಹೀಗಾಗಿಯೇ ಜನ್​ಧನ್ ಯೋಜನೆಯಡಿ ತೆರೆದ ಅಕೌಂಟ್​ಗಳಲ್ಲಿ ಶೂನ್ಯ ಠೇವಣಿಯಿದ್ದರೂ ಖಾತೆಗಳನ್ನು ಚಾಲ್ತಿಯಲ್ಲಿಡಬೇಕು ಎಂದು ಸಲಹೆ ಮಾಡಿದ್ದಾರೆ. ದೇಶದ ಎಲ್ಲ ನಾಗರಿಕರು ಬ್ಯಾಂಕ್ ಖಾತೆ ಹೊಂದಿರಬೇಕು. ರುಪೇ ಕಾರ್ಡ್​ಗಳ ಮೂಲಕ ಸುಲಭದಲ್ಲಿ ವಹಿವಾಟು ನಡೆಸಲು ಎಲ್ಲರಿಗೂ ಸಾಧ್ಯವಾಗಬೇಕು ಎಂದು ಅವರು ತಿಳಿಸಿದರು.

ಕೊವಿಡ್-19 ಪಿಡುಗು ದೇಶವ್ಯಾಪಿ ಹರಡಿಕೊಂಡಿದ್ದಾಗ ಸರ್ಕಾರವು ಮೂರು ಕಂತುಗಳಲ್ಲಿ ₹ 1500 ಕೋಟಿ ನೆರವು ಬಿಡುಗಡೆ ಮಾಡಿತ್ತು. ಬ್ಯಾಂಕಿಂಗ್ ಕ್ಷೇತ್ರಕ್ಕೆ ಡಿಜಿಟಲ್ ಆಯಾಮದ ಸ್ಪರ್ಶ ದೊರೆತ ನಂತರ ಸಾಕಷ್ಟು ಬದಲಾವಣೆಗಳು ಗೋಚರಿಸುತ್ತಿವೆ ಎಂದು ನುಡಿದರು.

ಬ್ಯಾಂಕಿಂಗ್ ಸೇವೆ ದೊರಕದ ಸ್ಥಳಗಳಲ್ಲಿ ಶಾಖೆಗಳನ್ನು ಆರಂಭಿಸಬೇಕು. ಜನರು ತಾವು ವಾಸಿಸುತ್ತಿರುವ ಸ್ಥಳಗಳಿಂದಲೇ ಬ್ಯಾಂಕ್ ಖಾತೆ ತೆರೆಯಲು, ಸೇವೆ ಪಡೆಯಲು ಸಾಕಷ್ಟು ಅವಕಾಶಗಳು ದೊರಕುತ್ತಿವೆ. ಟ್ಯುಟಿಕೊರಿನಲ್ಲಿದ್ದೇ ಸಣ್ಣ ಹಳ್ಳಿಗಳಲ್ಲಿರುವ ಜನರ ಬ್ಯಾಂಕಿಂಗ್ ಅಗತ್ಯಗಳನ್ನು ಪೂರೈಸಬಹುದಾಗಿದೆ ಎಂದು ಹೇಳಿದರು.

ಯಾವುದೇ ಬ್ಯಾಂಕ್​ನ ಭವಿಷ್ಯ ಅದು ಎಷ್ಟರಮಟ್ಟಿಗೆ ತಾಂತ್ರಿಕೆಯನ್ನು ಅಳವಡಿಸಿಕೊಂಡಿದೆ ಎಂಬುದನ್ನು ಅವಲಂಬಿಸಿದೆ. ಹಣಕಾಸು ಕ್ಷೇತ್ರದಲ್ಲಿ ತಂತ್ರಜ್ಞಾನ ದೊಡ್ಡಮಟ್ಟದಲ್ಲಿ ಬೆಳೆದಿದೆ. ಅದನ್ನು ಬಳಸಿಕೊಂಡು ನೀವು ದತ್ತಾಂಶಗಳನ್ನು ಸುಲಭವಾಗಿ ವಿಶ್ಲೇಷಿಸಬಹುದು. ಅದು ಆದಾಯ ತೆರಿಗೆ ಅಥವಾ ಜಿಎಸ್​ಟಿಗೆ ಸಂಬಂಧಿಸಿದ ವಿಚಾರವೇ ಆಗಿರಬಹುದು ಅಥವಾ ಇತರ ಕ್ಷೇತ್ರವೇ ಆಗಿರಬಹುದು. ದತ್ತಾಂಶಗಳ ಸ್ವಯಂ ವಿಶ್ಲೇಷಣೆಯಿಂದ ಹಲವು ಅನುಕೂಲಗಳಿವೆ ಎಂದು ಅಭಿಪ್ರಾಯಪಟ್ಟರು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಡಿಜಿಟಲ್ ತಂತ್ರಜ್ಞಾನದ ಬಳಕೆ ಇಂದು ಒಂದು ಆಯ್ಕೆಯಾಗಿ ಉಳಿದಿಲ್ಲ. ಗ್ರಾಹಕರ ಹಿತಕ್ಕಾಗಿ ಮತ್ತು ಬ್ಯಾಂಕ್​ಗಳ ಅಸ್ತಿತ್ವಕ್ಕಾಗಿ ಅದು ಅನಿವಾರ್ಯ ಎಂದು ಹೇಳಿದರು.

ತಮಿಳ್​ನಾಡು ಮರ್ಕಂಟೈಲ್ ಬ್ಯಾಂಕ್​ನ ಮಹಿಳಾ ಗ್ರಾಹಕರೊಬ್ಬರಿಗೆ ‘ಪಿಎಂ ಸ್ವನಿಧಿ ಯೋಜನೆ’ಯಡಿ ಆರ್ಥಿಕ ಸಹಾಯಧನದ ಚೆಕ್ ವಿತರಿಸಿ ಮಾತನಾಡಿದ ಅವರು, ಇಡ್ಲಿ ವ್ಯಾಪಾರ ಮಾಡುವ ಮಹಿಳೆಯೊಬ್ಬರಿಗೆ ಇಂದು ಆರ್ಥಿಕ ನೆರವು ಬಿಡುಗಡೆ ಮಾಡಲು ನಿಮಗೆ ಸಾಧ್ಯವಾಗಿದೆ. ಇದಕ್ಕೆ ಮುಖ್ಯ ಕಾರಣ ಪ್ರಧಾನ ಮಂತ್ರಿ ಜನ್​ಧನ್ ಯೋಜನೆ ಒಂದು ವೇಳೆ ಆ ಯೋಜನೆಯೇ ಲಭ್ಯವಿಲ್ಲ ಎಂದಾಗಿದ್ದರೆ ನೀವು ಆ ಮಹಿಳೆಗೆ ಹಣಕಾಸಿನ ನೆರವು ವಿತರಿಸಲು ಸಾಧ್ಯವೇ ಆಗುತ್ತಿರಲಿಲ್ಲ ಎಂದು ವಿಶ್ಲೇಷಿಸಿದರು.

ತಮಿಳ್​ನಾಡು ಮರ್ಕಂಟೈಲ್ ಬ್ಯಾಂಕ್​ನ ಶೇ 74ರಷ್ಟು ವಹಿವಾಟು ಆದ್ಯತಾ ವಲಯದಿಂದಲೇ (ಕೃಷಿ) ಬರುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಬ್ಯಾಂಕ್​ನ ಶಾಖೆಗಳು ಹೆಚ್ಚಾಗಿ ಹರಡಿಕೊಂಡಿರುವುದು ಇದಕ್ಕೆ ಕಾರಣ. ಕೊವಿಡ್ 19 ವ್ಯಾಪಕವಾಗಿ ಹರಡಿದ್ದಾಗ ಕೇಂದ್ರ ಸರ್ಕಾರವು ತುರ್ತು ಸಾಲ ಖಾತರಿ ಯೋಜನೆ ಮಾಡುವ ಮೂಲಕ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳ ನೆರವಿಗೆ ಧಾವಿಸಿತ್ತು ಎಂದು ನಿರ್ಮಲಾ ಸೀತಾರಾಮನ್ ನೆನಪಿಸಿಕೊಂಡರು.

(Banks should adopt digitisation to ensure govt schemes reach needy says finance minister Nirmala Sitharaman)

ಇದನ್ನೂ ಓದಿ: ಕಾಂಗ್ರೆಸ್ ದೇಶದ ಸಂಪನ್ಮೂಲಗಳನ್ನು ಮಾರಿ ಕಿಕ್ ಬ್ಯಾಕ್ ಪಡೆದಿತ್ತು: ನಿರ್ಮಲಾ ಸೀತಾರಾಮನ್

ಇದನ್ನೂ ಓದಿ: ಕರ್ನಾಟಕಕ್ಕೆ ಸಿಗಬೇಕಿದ್ದ 5 ಸಾವಿರ ಕೋಟಿಗೆ ನಾನು ಅಡ್ಡಿ ಆಗಲಿಲ್ಲ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟನೆ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್